ಟಿ20 ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಸೋತಿದೆ. ಒಂದೂ ವಿಕೆಟ್ ಕಳೆದುಕೊಳ್ಳದೆ ಭಾರತ ನೀಡಿದ್ದ 152 ರನ್ಗಳ ಗುರಿಯನ್ನು ಪಾಕ್ ಸುಲಭವಾಗಿ ತಲುಪಿದೆ. ಈ ಮೂಲಕ ಹೊಸ ದಾಖಲೆ ಬರೆದಿದೆ. ಇನ್ನು, ಭಾರತ ಸೋತ ಬೆನ್ನಲ್ಲೇ ಪಾಕಿಸ್ತಾನದಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ. ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಹೀನಾಯವಾಗಿ ಹೀಯಾಳಿಸುವ ಕೆಲಸ ನಡೆದಿದೆ. ಕೀಳು ಮಟ್ಟದಲ್ಲಿ ಚಿತ್ರಗಳನ್ನು ಎಡಿಟ್ ಮಾಡಿ ಪೋಸ್ಟ್ ಮಾಡಲಾಗುತ್ತಿದೆ ಇದಕ್ಕೆ ಭಾರತೀಯರು ಕಠಿಣವಾಗಿಯೇ ತಿರುಗೇಟು ನೀಡಿದ್ದಾರೆ.
29 ವರ್ಷಗಳಿಂದ ಐಸಿಸಿ ವಿಶ್ವಕಪ್ ಟೂರ್ನಿಗಳಲ್ಲಿ ಪಾಕಿಸ್ತಾನ ಎದುರು ಟೀಂ ಇಂಡಿಯಾ ಸೋತಿರಲಿಲ್ಲ. ಆದರೆ, ಈ ಬಾರಿ ಟೀಂ ಇಂಡಿಯಾ ಸೋಲು ಕಂಡಿದೆ. ಬಾಬರ್ ಆಜಮ್ ಹಾಗೂ ಮೊಹಮ್ಮದ್ ರಿಝ್ವಾನ್ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಪಾಕಿಸ್ತಾನ ಸೂಪರ್-12ರ ಮೊದಲ ಪಂದ್ಯದಲ್ಲಿ 10 ವಿಕೆಟ್ಗಳ ಅಂತರದ ಐತಿಹಾಸಿಕ ಗೆಲುವು ಸಾಧಿಸಿದೆ. ಈ ಮೂಲಕ ಟೂರ್ನಿಯಲ್ಲಿ ಮೊದಲು ಗೆಲುವು ಕಂಡಿದೆ.
ಭಾರತ ಗೆದ್ದ ಬೆನ್ನಲ್ಲೇ ಪಾಕಿಸ್ತಾನಿಗರು ಟ್ವಿಟರ್ನಲ್ಲಿ ಟೀಂ ಇಂಡಿಯಾ ನಾಯಕ ಕೊಹ್ಲಿಯನ್ನು ಟೀಕಿಸುತ್ತಿದ್ದಾರೆ. ನಾನಾ ರೀತಿಯ ಟ್ವೀಟ್ಗಳನ್ನು ಮಾಡಲಾಗುತ್ತಿದೆ. ಇದಕ್ಕೆ ಭಾರತೀಯರು ಕೂಡ ತಿರುಗೇಟು ನೀಡುವ ಕೆಲಸ ಮಾಡಿದ್ದಾರೆ.
Alhamdulilah Pakistan Win
By The Grace Of Allah#PAKvIND#PakistanZindabad#PakVsInd#Pakistan#Pak_vs_India#BabarAzam#ShaheenAfridi#GreenShirtsWillWin pic.twitter.com/Vax5u19uNQ— J.ALI (@jalioffiXials) October 25, 2021
Situation is same #Pakistan #BabarRizwan pic.twitter.com/encYE5Dqal
— Saad Ullah (@SaadUll31802452) October 25, 2021
Upcoming inshallah…?? #PakvsIndia #PAKvIND #Pakistan pic.twitter.com/dEirGXEDic
— biya shah…. (@biya17shah) October 24, 2021
Kitne admi thy ?
“2”#pakistan pic.twitter.com/Pe1ZWJBHBS— @hanan™️ (@Hanan_hun_yawr) October 24, 2021
ಇದನ್ನೂ ಓದಿ: IND vs PAK Highlights, T20 World Cup 2021: ಭಾರತದ ಬ್ಯಾಟಿಂಗ್ ವೈಫಲ್ಯ; ಪಾಕ್ಗೆ 10 ವಿಕೆಟ್ ಜಯ
India vs Pakistan: ಸೋಲಿನೊಂದಿಗೆ ಟಿ20 ವಿಶ್ವಕಪ್ ಯಾತ್ರೆ ಆರಂಭಿಸಿದ ಭಾರತ: ಮುಂದಿದೆ ಇನ್ನಷ್ಟು ಕಠಿಣ ಹಾದಿ
Published On - 8:16 am, Mon, 25 October 21