ಇಂಗ್ಲೆಂಡ್ ವಿರುದ್ಧದ ಅಂತಿಮ ಐದನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಲೀಸೆಸ್ಟರ್ಷೈರ್ ಕೌಂಟಿ ತಂಡದ (Leicestershire vs India) ವಿರುದ್ಧ ಭಾರತ ಆಡಿದ ಅಭ್ಯಾಸ ಪಂದ್ಯ ಡ್ರಾನಲ್ಲಿ ಅಂತ್ಯಕಂಡಿದೆ. ನಾಲ್ಕು ದಿನಗಳ ವಾರ್ಮ್-ಅಪ್ ಮ್ಯಾಚ್ನಲ್ಲಿ ವಿರಾಟ್ ಕೊಹ್ಲಿ (Virat Kohli) ಹಾಗೂ ರಿಷಭ್ ಪಂತ್ (Risbah Pant) ಮಿಂಚಿನ ಪ್ರದರ್ಶನ ನೀಡಿದರು. ಟೀಮ್ ಇಂಡಿಯಾ ನೀಡಿದ್ದ 367 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ್ದ ಎದುರಾಳಿ ತಂಡವು ಕೊನೆಯ ದಿನದಾಟದ ಮುಕ್ತಾಯಕ್ಕೆ 66 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 219 ರನ್ ಗಳಿಸಿತು. ಲೀಸೆಸ್ಟರ್ಷೈರ್ ಪರ ಎರಡನೇ ಇನ್ನಿಂಗ್ಸ್ನಲ್ಲಿ ಶುಭ್ಮನ್ ಗಿಲ್ (Shubman Gill) ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು.
ಈ ಅಭ್ಯಾಸ ಪಂದ್ಯದ ಮೊದಲ ದಿನದ ಮೊದಲ ಇನ್ನಿಂಗ್ಸ್ನಲ್ಲಿ ಭಾರತ 60.2 ಓವರ್ನಲ್ಲಿ 8 ವಿಕೆಟ್ ನಷ್ಟಕ್ಕೆ 246 ರನ್ ಕಲೆಹಾಕಿ ಡಿಕ್ಲೇರ್ ಘೀಷಿಸಿತು. ಭರತ್ 111 ಎಸೆತಗಳಲ್ಲಿ 8 ಫೋರ್, 1 ಸಿಕ್ಸರ್ನೊಂದಿಗೆ ಅಜೇಯ 70 ರನ್ ಗಳಿಸಿದರು. ಬಳಿಕ ಲೀಸೆಸ್ಟರ್ಷೈರ್ ತನ್ನ ಮೊದಲ ಇನಿಂಗ್ಸ್‌ನಲ್ಲಿ ಭಾರತೀಯ ಬೌಲರ್‌ಗಳ ಎದುರು ರನ್ ಹೆಕ್ಕಲು ಪರದಾಟ ನಡೆಸಿತು. ರಿಷಭ್ ಪಂತ್ 76 ರನ್ ಸಿಡಿಸಿದ್ದನ್ನು ಬಿಟ್ಟರೆ, ಲೂಯಿಸ್ ಕಿಂಬರ್ (31) ಮತ್ತು ರಿಷಿ ಪಟೇಲ್ (34) ಕೊಂಚ ಪ್ರತಿರೋಧವೊಡ್ಡಿದರು. ಭಾರತ ಪರ ಮೊಹಮ್ಮದ್ ಶಮಿ 12 ಓವರ್‌ಗಳಲ್ಲಿ 42 ರನ್ ಕೊಟ್ಟು 3 ವಿಕೆಟ್ ಪಡೆದರು. ಮೊಹಮ್ಮದ್ ಸಿರಾಜ್ 26ಕ್ಕೆ 2 ವಿಕೆಟ್ ಪಡೆದರೆ, ಶಾರ್ದುಲ್ ಠಾಕೂರ್ ಮತ್ತು ರವೀಂದ್ರ ಜಡೇಜಾ ಒಂದು ವಿಕೆಟ್ ಪಡೆದರು.
IND vs IRE: ಕೋಚ್ ಲಕ್ಷ್ಮಣ್ ಮಾಡಿದ ಮಾಸ್ಟರ್ ಪ್ಲಾನ್ಗೆ ಮಕಾಡೆ ಮಲಗಿದ ಐರ್ಲೆಂಡ್: ಏನದು ಗೊತ್ತೇ?
ಎರಡನೇ ದಿನದಾಟದ ಅಂತ್ಯಕ್ಕೆ ಭಾರತ ಎರಡನೇ ಇನ್ನಿಂಗ್ಸ್ನಲ್ಲಿ 1 ವಿಕೆಟ್ ಕಳೆದುಕೊಂಡು 80 ರನ್ ಗಳಿಸಿತ್ತು. 3ನೇ ದಿನದಾಟ ಆರಂಭಿಸಿದ ಭಾರತ ಪರ ಶ್ರೀಕರ್ ಭರತ್ (43) ಹಾಗೂ ಹನುಮಾ ವಿಹಾರಿ (20) ಬೇಗನೆ ಔಟಾದರು. ನಂತರ ಅಯ್ಯರ್ 89 ಎಸೆತಗಳಲ್ಲಿ 62 ರನ್ ಗಳಿಸಿದರು. ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ವಿರಾಟ್ 98 ಎಸೆತಗಳಲ್ಲಿ 67 ರನ್ ಗಳಿಸಿದರು. ಐದು ಬೌಂಡರಿ ಮತ್ತು ಎರಡು ಸಿಕ್ಸರ್ ಬಾರಿಸಿದರು. ಅವರು ಜಸ್‌ಪ್ರೀತ್ ಬೂಮ್ರಾ ಬೌಲಿಂಗ್‌ನಲ್ಲಿ ಔಟಾದರು. ದಿನದಾಟದ ಅಂತ್ಯಕ್ಕೆ ಭಾರತ ಒಟ್ಟು 366 ರನ್‌ಗಳ ಮುನ್ನಡೆ ಸಾಧಿಸಿತು. ರವೀಂದ್ರ ಜಡೇಜ (ಬ್ಯಾಟಿಂಗ್ 56) ಮತ್ತು ಮೊಹಮ್ಮದ್ ಸಿರಾಜ್ (ಬ್ಯಾಟಿಂಗ್ 1) ಕ್ರೀಸ್‌ನಲ್ಲಿದ್ದಾರೆ.
ಅಂತಿಮ ದಿನ ಬ್ಯಾಟಿಂಗ್ ಮುಂದುವರೆಸದ ಭಾರತ ಡಿಕ್ಲೇರ್ ಘೋಷಿಸಿ 367 ರನ್‌ಗಳ ಗುರಿ ನೀಡಿತು. ಎರಡನೇ ಇನ್ನಿಂಗ್ಸ್ನಲ್ಲಿ ಲೀಸೆಸ್ಟರ್ಷೈರ್ ಪರ ಕಣಕ್ಕಿಳಿದ ಶುಭ್ಮನ್ ಗಿಲ್ 77 ಎಸೆತಗಳಲ್ಲಿ 62 ರನ್ ಗಳಿಸಿ ಮಿಂಚಿದರು. ಲೂಯಿಸ್ ಕಿಂಬಲ್ 86 ಎಸೆತಗಳಲ್ಲಿ ಅಜೇಯ 58 ರನ್ ಗಳಿಸಿದರು. ಅಂತಿಮವಾಗಿ ದಿನದ ಮುಕ್ತಾಯಕ್ಕೆ ಲೀಸೆಸ್ಟರ್ಷೈರ್ 4 ವಿಕೆಟ್ ನಷ್ಟಕ್ಕೆ 219 ರನ್ ಗಳಿಸಿದ ಪರಿಣಾಮ ಪಂದ್ಯ ಡ್ರಾ ಎಂದು ಘೋಷಿಸಲಾಯಿತು. ಭಾರತ ಹಾಗೂ ಇಂಗ್ಲೆಂಡ್ ನಡುವಣ ಅಂತಿಮ ಐದನೇ ಟೆಸ್ಟ್ ಪಂದ್ಯ ಜುಲೈ 1 ರಿಂದ ಆರಂಭವಾಗಲಿದೆ.
Umran Malik: ಭಾರತದ ಪರ ಆಡಿದ ಜಮ್ಮು-ಕಾಶ್ಮೀರದ 2ನೇ ಆಟಗಾರ ಉಮ್ರಾನ್ ಮಲಿಕ್: ಹಾಗಿದ್ರೆ ಮೊದಲಿಗ ಯಾರು?