IPL 2022: 29 ತಿಂಗಳಲ್ಲಿ 100 ಪಂದ್ಯಗಳನ್ನಾಡಿದ ಕಿಂಗ್ ಕೊಹ್ಲಿ! ಆದರೆ ಇನ್ನೂ ತೀರಿಲ್ಲ ಶತಕಗಳ ಬರ

Virat Kohli: ಐಪಿಎಲ್ 2022 ರಲ್ಲಿ ವಿರಾಟ್ ಕೊಹ್ಲಿ ಅವರ ಬ್ಯಾಟ್ ಇಲ್ಲಿಯವರೆಗೆ ಮೌನವಾಗಿದೆ. ಅವರು ಏಳು ಪಂದ್ಯಗಳಲ್ಲಿ 48 ರನ್‌ಗಳ ಗರಿಷ್ಠ ಸ್ಕೋರ್‌ನೊಂದಿಗೆ ಒಟ್ಟು 119 ರನ್ ಗಳಿಸಿದ್ದಾರೆ. ಅವರ ರನ್ನಿಂಗ್ ಸರಾಸರಿ 19.83. ಅವರ ಸ್ಟ್ರೈಕ್ ರೇಟ್ ಕೂಡ 120ರ ಆಸುಪಾಸಿನಲ್ಲಿದೆ.

IPL 2022: 29 ತಿಂಗಳಲ್ಲಿ 100 ಪಂದ್ಯಗಳನ್ನಾಡಿದ ಕಿಂಗ್ ಕೊಹ್ಲಿ! ಆದರೆ ಇನ್ನೂ ತೀರಿಲ್ಲ ಶತಕಗಳ ಬರ
ಕೊಹ್ಲಿ
Follow us
| Updated By: ಪೃಥ್ವಿಶಂಕರ

Updated on: Apr 20, 2022 | 4:32 PM

ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ( Virat Kohli) ಪ್ರಸ್ತುತ ತಮ್ಮ ವೃತ್ತಿಜೀವನದ ಅತ್ಯಂತ ಕೆಟ್ಟ ದಿನಗಳನ್ನು ಎದುರಿಸುತ್ತಿದ್ದಾರೆ. ಐಪಿಎಲ್ 2022 ರಲ್ಲಿ ( IPL 2022 ), ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (LSG vs RCB IPL 2022) ವಿರುದ್ಧದ ಪಂದ್ಯದಲ್ಲಿ ಅವರ ಬ್ಯಾಟ್ ಸದ್ದು ಮಾಡಲಿಲ್ಲ. ಮೊದಲ ಎಸೆತದಲ್ಲೇ ಖಾತೆ ತೆರೆಯದೆ ವಿರಾಟ್ ಔಟಾದರು. ಇದರೊಂದಿಗೆ ಶತಕ ಸಿಡಿಸದೆ ಅವರ ಪಂದ್ಯಗಳ ಶತಕ ಪೂರೈಸಿದ್ದಾರೆ. ವಿರಾಟ್ ಕೊಹ್ಲಿ 2019 ರ ನವೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ನಲ್ಲಿ ಕೊನೆಯ ಬಾರಿ ಶತಕ ಬಾರಿಸಿದ್ದರು. ಅಂದಿನಿಂದ ಅವರು ಬ್ಯಾಟ್​ನಿಂದ ಶತಕ ಬಂದಿಲ್ಲ. ಅಂದರೆ, 29 ತಿಂಗಳಿಂದ ಅವರ ಶತಕದ ಬರ ಇಂಗಿಲ್ಲ. ಈ ಅವಧಿಯಲ್ಲಿ ವಿರಾಟ್ ಕೊಹ್ಲಿ 17 ಟೆಸ್ಟ್, 21 ಏಕದಿನ, 25 ಟಿ20 ಮತ್ತು 37 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ.

ಲಕ್ನೋ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿಯನ್ನು ದುಷ್ಮಂತ ಚಮೀರಾ ಔಟ್ ಮಾಡಿದ್ದರು. ಕೊಹ್ಲಿ ಆಡಿದ ಮೊದಲ ಎಸೆತವನ್ನೇ ಫಿಲ್ಡರ್ ತಲೆಯ ಮೇಲೆ ಆಡಲು ಪ್ರಯತ್ನಿಸಿದರು. ಆದರೆ ಚೆಂಡು ಬ್ಯಾಟ್‌ನ ಅಂಚನ್ನು ತಾಗಿ ಪಾಯಿಂಟ್ ಫೀಲ್ಡರ್ ಕೈಗೆ ಹೋಯಿತ್ತು. ಇದರೊಂದಿಗೆ, ಐದು ವರ್ಷಗಳ ನಂತರ, ಐಪಿಎಲ್​ನಲ್ಲಿ ಕೊಹ್ಲಿ ಮೊದಲ ಎಸೆತದಲ್ಲಿ ಅಂದರೆ ಗೋಲ್ಡನ್ ಡಕ್‌ನಲ್ಲಿ ಖಾತೆ ತೆರೆಯದೆ ಔಟಾದರು. ಐಪಿಎಲ್ 2022 ರಲ್ಲಿ ವಿರಾಟ್ ಕೊಹ್ಲಿ ಅವರ ಬ್ಯಾಟ್ ಇಲ್ಲಿಯವರೆಗೆ ಮೌನವಾಗಿದೆ. ಅವರು ಏಳು ಪಂದ್ಯಗಳಲ್ಲಿ 48 ರನ್‌ಗಳ ಗರಿಷ್ಠ ಸ್ಕೋರ್‌ನೊಂದಿಗೆ ಒಟ್ಟು 119 ರನ್ ಗಳಿಸಿದ್ದಾರೆ. ಅವರ ರನ್ನಿಂಗ್ ಸರಾಸರಿ 19.83. ಅವರ ಸ್ಟ್ರೈಕ್ ರೇಟ್ ಕೂಡ 120ರ ಆಸುಪಾಸಿನಲ್ಲಿದೆ.

ನಾಯಕತ್ವದಿಂದ ಕೆಳಗಿಳಿದ ನಂತರವೂ ರನ್ ಗಳಿಸುತ್ತಿಲ್ಲ ವಿರಾಟ್ ಕೊಹ್ಲಿ ನಾಯಕತ್ವದ ಭಾರವನ್ನು ತೆಗೆದುಹಾಕುವ ಮೂಲಕ ರನ್ ಗಳಿಸುವುದು ಸುಲಭ ಎಂದು ಈ ಮೊದಲು ಹೇಳಲಾಗುತ್ತಿತ್ತು. ಆದರೆ ಇಲ್ಲಿಯವರೆಗೆ ಹಾಗೆ ಕಾಣುತ್ತಿಲ್ಲ. ನಾಯಕತ್ವ ತೊರೆದರೂ ಅವರು ರನ್ ಗಳಿಸುತ್ತಿಲ್ಲ. ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ವಿರಾಟ್ ಕೊಹ್ಲಿ. ಅವರು 214 ಪಂದ್ಯಗಳಲ್ಲಿ ಐದು ಶತಕ ಮತ್ತು 42 ಅರ್ಧ ಶತಕಗಳೊಂದಿಗೆ 6402 ರನ್ ಗಳಿಸಿದ್ದಾರೆ.

ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಬಗ್ಗೆ ಹೇಳುವುದಾದರೆ, ಅವರು ಏಳನೇ ಸ್ಥಾನದಲ್ಲಿದ್ದಾರೆ. ಟೆಸ್ಟ್, ಏಕದಿನ ಹಾಗೂ ಟಿ20ಯಲ್ಲಿ ಒಟ್ಟು 23,650 ರನ್ ಗಳಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಈ ವಿಷಯದಲ್ಲಿ ಮುಂಚೂಣಿಯಲ್ಲಿದ್ದಾರೆ, ಅವರ ಹೆಸರು 34357 ರನ್ ಗಳಿಸಿದ್ದಾರೆ. ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 70 ಶತಕಗಳನ್ನು ಬಾರಿಸಿದ್ದಾರೆ.

ಇದನ್ನೂ ಓದಿ:Cricket: ದುರಂತ.. ಬ್ರೈನ್ ಟ್ಯೂಮರ್‌ನಿಂದಾಗಿ ಒಂದೇ ದಿನ ಇಬ್ಬರು ಬಾಂಗ್ಲಾ ಕ್ರಿಕೆಟಿಗರ ಸಾವು

ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್