Cricket: ದುರಂತ.. ಬ್ರೈನ್ ಟ್ಯೂಮರ್‌ನಿಂದಾಗಿ ಒಂದೇ ದಿನ ಇಬ್ಬರು ಬಾಂಗ್ಲಾ ಕ್ರಿಕೆಟಿಗರ ಸಾವು

Cricket: ಬಾಂಗ್ಲಾದೇಶದ ಮೊದಲ ಏಕದಿನ ತಂಡದ ಸದಸ್ಯರಾಗಿದ್ದ ಸಮಿಯುರ್ ರೆಹಮಾನ್ (69) ಅವರು ಬ್ರೈನ್ ಟ್ಯೂಮರ್‌ನಿಂದಾಗಿ ಢಾಕಾ ನಗರದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇದೇ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಎಡಗೈ ಸ್ಪಿನ್ನರ್ ಮೊಶರಫ್ ಹೊಸೈನ್ ರುಬೆಲ್ (40) ಕೂಡ ಸಾವನ್ನಪ್ಪಿದ್ದಾರೆ.

Cricket: ದುರಂತ.. ಬ್ರೈನ್ ಟ್ಯೂಮರ್‌ನಿಂದಾಗಿ ಒಂದೇ ದಿನ ಇಬ್ಬರು ಬಾಂಗ್ಲಾ ಕ್ರಿಕೆಟಿಗರ ಸಾವು
ಬಾಂಗ್ಲಾ ಕ್ರಿಕೆಟಿಗರು
Follow us
TV9 Web
| Updated By: ಪೃಥ್ವಿಶಂಕರ

Updated on: Apr 20, 2022 | 3:29 PM

ಬಾಂಗ್ಲಾದೇಶ ಕ್ರಿಕೆಟ್‌ (Bangladesh Cricket)ನಲ್ಲಿ ದುರಂತ ಸಂಭವಿಸಿದೆ. ಬ್ರೈನ್ ಟ್ಯೂಮರ್‌ನಿಂದಾಗಿ ಇಬ್ಬರು ಮಾಜಿ ಆಟಗಾರರು ಮಂಗಳವಾರ (ಏಪ್ರಿಲ್ 19) ಸಾವನ್ನಪ್ಪಿದ್ದಾರೆ. ಬಾಂಗ್ಲಾದೇಶದ ಮೊದಲ ಏಕದಿನ ತಂಡದ ಸದಸ್ಯರಾಗಿದ್ದ ಸಮಿಯುರ್ ರೆಹಮಾನ್ (69) ಅವರು ಬ್ರೈನ್ ಟ್ಯೂಮರ್‌ನಿಂದಾಗಿ ಢಾಕಾ ನಗರದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇದೇ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಎಡಗೈ ಸ್ಪಿನ್ನರ್ ಮೊಶರಫ್ ಹೊಸೈನ್ ರುಬೆಲ್ (40) ಕೂಡ ಸಾವನ್ನಪ್ಪಿದ್ದಾರೆ. ಒಂದೇ ದಿನ ಇಬ್ಬರು ಮಾಜಿ ಕ್ರಿಕೆಟಿಗರ ನಿಧನಕ್ಕೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ತೀವ್ರ ಸಂತಾಪ ವ್ಯಕ್ತಪಡಿಸಿದೆ. ಜೊತೆಗೆ ಅವರ ಕುಟುಂಬದವರಿಗೆ ತೀವ್ರ ಸಂತಾಪ ಸೂಚಿಸಿದೆ.

ಸಮಿಯುರ್ ರೆಹಮಾನ್.. ಬಾಂಗ್ಲಾದೇಶ ಪರ ಎರಡು ಪಂದ್ಯಗಳನ್ನು ಆಡಿದ್ದಾರೆ. ರಾಷ್ಟ್ರೀಯ ತಂಡದ ಹೊರತಾಗಿ, ರೆಹಮಾನ್ ಸ್ಥಳೀಯ ತಂಡಗಳಾದ ಢಾಕಾ ಪ್ರೀಮಿಯರ್ ಲೀಗ್ ಮತ್ತು ಬಾಂಗ್ಲಾದೇಶ ಬಿಮಾನ್‌ಗಳನ್ನು ಪ್ರತಿನಿಧಿಸಿದ್ದಾರೆ. ಅವರು ಕ್ರಿಕೆಟ್‌ನಿಂದ ನಿವೃತ್ತರಾದ ನಂತರ ಕೆಲವು ವರ್ಷಗಳ ಕಾಲ ಅಂಪೈರ್ ಆಗಿಯೂ ಸೇವೆ ಸಲ್ಲಿಸಿದರು. ಮುಷರಫ್ ಹುಸೇನ್ ಬಗ್ಗೆ ಹೇಳುವುದಾದರೆ, ಅವರು 2008-16ರ ನಡುವೆ ಬಾಂಗ್ಲಾದೇಶ ರಾಷ್ಟ್ರೀಯ ತಂಡಕ್ಕಾಗಿ ಐದು ODIಗಳನ್ನು ಆಡಿದ್ದಾರೆ. ಇದರಲ್ಲಿ ಒಟ್ಟು 4 ವಿಕೆಟ್ ಪಡೆದರು. ಜೊತೆಗೆ ದೇಶಿಯ ಕ್ರಿಕೆಟ್‌ನಲ್ಲೂ ಮಿಂಚಿ, ಒಟ್ಟು 572 ವಿಕೆಟ್ ಪಡೆದು ಸ್ಟಾರ್ ಸ್ಪಿನ್ನರ್ ಎನಿಸಿಕೊಂಡರು. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಮತ್ತು ಆಟಗಾರರು ಕೂಡ ಇಬ್ಬರಿಗೆ ಗೌರವ ಸಲ್ಲಿಸಿದ್ದಾರೆ. ದೇಶಾದ್ಯಂತ ಹಲವಾರು ಕ್ರಿಕೆಟ್ ಪಂದ್ಯಗಳ ಮೊದಲು ಅವರು ಎರಡು ನಿಮಿಷಗಳ ಮೌನಾಚರಣೆ ಆಚರಿಸಿದರು.

ಇದನ್ನೂ ಓದಿ:KGF Chapter 2: ರಾಕಿ ಸಾಮ್ರಾಜ್ಯ ವೀಕ್ಷಿಸುತ್ತಿರುವ ಬೆಂಗಳೂರು ಬಾಯ್ಸ್; ಆರ್​ಸಿಬಿ ತಂಡಕ್ಕೆ ‘ಕೆಜಿಎಫ್ ಚಾಪ್ಟರ್ 2’ ವಿಶೇಷ ಪ್ರದರ್ಶನ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್