India vs Bangladesh Women: ಭಾರತೀಯ ಬೌಲಿಂಗ್ ದಾಳಿಗೆ ಬಾಂಗ್ಲಾ ಉಡೀಸ್: ಮಿಥಾಲಿ ಪಡೆಯ ಸೆಮೀಸ್ ಹಾದಿ ಜೀವಂತ

ಭಾರತೀಯ ಬೌಲಿಂಗ್ ದಾಳಿಗೆ ತರಗೆಲೆಯಂತೆ ಉರುಳಿದ ಬಾಂಗ್ಲಾ ಬ್ಯಾಟರ್​​ಗಳು ಕೇವಲ 119 ರನ್​ಗಳಿಗೆ ಆಲೌಟ್ ಆಗುವ ಮೂಲಕ ಭಾರತ ಮಹಿಳಾ ತಂಡ (Indian Women's Cricket Team) ಬರೋಬ್ಬರಿ 110 ರನ್​ಗಳ ಭರ್ಜರಿ ಜಯ ಸಾಧಿಸಿದೆ.

India vs Bangladesh Women: ಭಾರತೀಯ ಬೌಲಿಂಗ್ ದಾಳಿಗೆ ಬಾಂಗ್ಲಾ ಉಡೀಸ್: ಮಿಥಾಲಿ ಪಡೆಯ ಸೆಮೀಸ್ ಹಾದಿ ಜೀವಂತ
India vs Bangladesh Women
Follow us
TV9 Web
| Updated By: Vinay Bhat

Updated on: Mar 22, 2022 | 1:46 PM

12ನೇ ಆವೃತ್ತಿಯ ಐಸಿಸಿ ಮಹಿಳಾ ಏಕದಿನ ವಿಶ್ವಕಪ್​ನಲ್ಲಿ (Womens World Cup 2022) ಭಾರತ ಮಹಿಳಾ ತಂಡ ಸೆಮಿ ಫೈನಲ್ ಹಾದಿಯನ್ನು ಜೀವಂತವಾಗಿರಿಸಿದೆ. ಹ್ಯಾಮಿಲ್ಟನ್‌ನ ಸೆಡ್ಡಾನ್ ಪಾರ್ಕ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಮಿಥಾಲಿ (Mithali Raj) ಪಡೆ ಅಮೋಘ ಗೆಲುವು ಕಂಡಿದೆ. ಭಾರತೀಯ ಬೌಲಿಂಗ್ ದಾಳಿಗೆ ತರಗೆಲೆಯಂತೆ ಉರುಳಿದ ಬಾಂಗ್ಲಾ ಬ್ಯಾಟರ್​​ಗಳು ಕೇವಲ 119 ರನ್​ಗಳಿಗೆ ಆಲೌಟ್ ಆಗುವ ಮೂಲಕ ಭಾರತ ಮಹಿಳಾ ತಂಡ (Indian Women’s Cricket Team) ಬರೋಬ್ಬರಿ 110 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತ ಆಡಿರುವ ಆರು ಪಂದ್ಯಗಳಲ್ಲಿ ತಲಾ ಮೂರರಲ್ಲಿ ಸೋಲು-ಗೆಲುವು ಕಂಡು ಅಂಕಪಟ್ಟಿಯಲ್ಲಿ 6 ಅಂಕದೊಂದಿಗೆ ಮೂರನೇ ಸ್ಥಾನಕ್ಕೇರಿ ಸೆಮೀಸ್ ಕನಸು ಜೀವಂತವಾಗಿ ಉಳಿಸಿಕೊಂಡಿದೆ.

ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಶುರುಮಾಡಿರುವ ಭಾರತ ಭರ್ಜರಿ ಆರಂಭ ಪಡೆದುಕೊಂಡಿತು. ಓಪನರ್​ಗಳಾದ ಸ್ಮೃತಿ ಮಂದಾನ ಹಾಗೂ ಶಫಾಲಿ ವರ್ಮಾ 74 ರನ್​ಗಳ ಜೊತೆಯಾಟ ಆಡಿದರು. ಬಿರುಸಿನ ಆಟದ ಮೊರೆ ಹೋದ ಶಫಾಲಿ 42 ಎಸೆತಗಳಲ್ಲಿ 6 ಫೋರ್, 1 ಸಿಕ್ಸರ್​ನೊಂದಿಗೆ 42 ರನ್ ಗಳಿಸಿದರೆ, ಇದರ ಬೆನ್ನಲ್ಲೇ 30 ರನ್​ಗಳಿಸಿದ್ದ ಸ್ಮೃತಿ ಮಂದಾನ ಔಟಾದರು. ಇದೇ ಹೊತ್ತಿಗೆ ಬಂದ ಬೆನ್ನಲ್ಲೇ ಮೊದಲ ಎಸೆತದಲ್ಲಿ ನಾಯಕಿ ಮಿಥಾಲಿ ರಾಜ್ ಔಟಾಗಿದ್ದು ತಂಡಕ್ಕೆ ಹೊಡೆತ ಬಿದ್ದಿತು. 73 ರನ್​ಗೆ ಒಂದೂ ವಿಕೆಟ್ ಕಳೆದುಕೊಳ್ಳದ ಭಾರತ 74 ರನ್ ಆಗುವ ಹೊತ್ತಿಗೆ 3 ಪ್ರಮುಖ ವಿಕೆಟ್ ಕೈಚೆಲ್ಲಿತು.

ನಂತರ ಜೊತೆಯಾದ ಯಸ್ತಿಕಾ ಭಾಟಿಯಾ ಹಾಗೂ ಹರ್ಮನ್​ಪ್ರೀತ್ ಕೌರ್ ಕೂಡ ದೊಡ್ಡ ಜೊತೆಯಾಟ ಆಡಲು ಸಾಧ್ಯವಾಗಿಲ್ಲ. ಹರ್ಮನ್ 33 ಎಸೆತಗಳಲ್ಲಿ 14 ರನ್​ಗೆ ಔಟಾದರು. ರಿಚ್ಚಾ ಘೋಷ್ ಜೊತೆಗೂಡಿ ಯಸ್ತಿಕಾ 54 ರನ್​ಗಳ ಜೊತೆಯಾಟ ಆಡಿದ್ದು ತಂಡದ ಮೊತ್ತ 150ರ ಗಡಿ ದಾಟಿತು. ರಿಚ್ಚಾ 36 ಎಸೆತಗಳಲ್ಲಿ 26 ರನ್​ಗೆ ನಿರ್ಗಮಿಸಿದರೆ, ಯಸ್ತಿಕಾ 80 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಇನ್ನಿಂಗ್ಸ್ ಮುಗಿಸಿದರು.

ಕೊನೇ ಹಂತದಲ್ಲಿ ತಂಡಕ್ಕೆ ಪೂಜಾ ವಸ್ತ್ರಾಕರ್ ಹಾಗೂ ಸ್ನೇಹ್ ರಾಣ ಆಸರೆಯಾದರು. ತಂಡದ ಮೊತ್ತವನ್ನು 200ರ ಗಡಿದಾಟಿಸಲು ಇವರು ಪ್ರಮುಖ ಪಾತ್ರವಹಿಸಿದರು. ಸ್ನೇಹ್ 23 ಎಸೆತಗಳಲ್ಲಿ 27 ರನ್​ಗೆ ಕೊನೇಯ ಓವರ್​ನಲ್ಲಿ ಔಟಾದರೆ ಪೂಜಾ 33 ಎಸೆತಗಳಲ್ಲಿ 30 ರನ್ ಬಾರಿಸಿ ಅಜೇಯರಾಗಿ ಉಳಿದರು. ಭಾರತ ಅಂತಿಮವಾಗಿ 50 ಓವರ್​​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 229 ರನ್ ಗಳಿಸಿತು. ಬಾಂಗ್ಲಾ ಪರರಿತು ಮೋನಿ 3 ಹಾಗೂ ನಹಿದಾ ಅಖ್ತರ್ 2 ವಿಕೆಟ್ ಕಿತ್ತು ಮಿಂಚಿದರು.

230 ರನ್​ಗಳ ಸಾಧಾರಣ ಟಾರ್ಗೆಟ್ ಬೆನ್ನಟ್ಟಿದ ಬಾಂಗ್ಲಾದೇಶ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಾಗಿತು. 50 ರನ್​ಗೂ ಮೊದಲೇ ಪ್ರಮುಖ 5 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತು. ಈ ಅವಕಾಶವನ್ನು ಅತ್ಯುತ್ತಮವಾಗಿ ಉಯೋಗಿಸಿಕೊಂಡ ಸ್ನೇಹ್ ರಾಣ ಬಾಂಗ್ಲಾ ಬ್ಯಾಟರ್​ಗಳನ್ನು ಪೆವಿಲಿಯನ್​ಗೆ ಅಟ್ಟಿದರು. ಬಾಂಗ್ಲಾದೇಶ ಪರ ಸಲ್ಮಾ ಖತುನ್ 32 ರನ್ ಗಳಿಸಿದ್ದೇ ಹೆಚ್ಚು. ಅಂತಿಮವಾಗಿ 40.3 ಓವರ್​ಗೆ 119 ರನ್ ಗಳಿಸಿ ಆಲೌಟ್ ಆಯಿತು. ಭಾರತ ಪರ ಸ್ನೇಹ್ ರಾಣ 4 ವಿಕೆಟ್ ಕಿತ್ತು ಮಿಂಚಿದರೆ, ಪೂಜಾ ವಸ್ತ್ರಾಕರ್ ಹಾಗೂ ಜೂಲನ್ ಗೋಸ್ವಾಮಿ ತಲಾ 2 ವಿಕೆಟ್ ಪಡೆದರು.

Shreyas Iyer: ಅಯ್ಯರ್​ಗೆ ತಲೆನೋವಾದ ಪ್ಲೇಯಿಂಗ್ XI: ಮೊದಲ ಪಂದ್ಯಕ್ಕೆ ತಂಡದಲ್ಲಿಲ್ಲ ಸ್ಟಾರ್ ಪ್ಲೇಯರ್ಸ್

RCB: ಶಾಕಿಂಗ್: ಆರ್​ಸಿಬಿ ತಂಡ ಸೇರಿದ ಒಂದೇ ಒಂದು ಪಂದ್ಯವನ್ನಾಡದ 18 ವರ್ಷದ ಆಟಗಾರ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್