Virat Kohli: ವಿರಾಟ್ ಕೊಹ್ಲಿ ರಾಜೀನಾಮೆ ಪತ್ರದಲ್ಲೇನಿದೆ?

| Updated By: ಝಾಹಿರ್ ಯೂಸುಫ್

Updated on: Jan 15, 2022 | 8:18 PM

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಏಕಾಏಕಿ ಟಿ20 ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದ ಕೊಹ್ಲಿ, ಈ ಬಾರಿ ಕೂಡ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಸುದೀರ್ಘ ಹೇಳಿಕೆಯ ಪೋಸ್ಟ್ ಮಾಡುವ ಮೂಲಕ ಟೆಸ್ಟ್ ನಾಯಕತ್ವದಿಂದ ಕೆಳಗಿದಿದ್ದಾರೆ.

Virat Kohli: ವಿರಾಟ್ ಕೊಹ್ಲಿ ರಾಜೀನಾಮೆ ಪತ್ರದಲ್ಲೇನಿದೆ?
Virat Kohli
Follow us on

ಭಾರತ ಕ್ರಿಕೆಟ್ ತಂಡದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಯುಗ ಅಂತ್ಯವಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ 1-2 ಅಂತರದ ಸೋಲಿನ ಬೆನ್ನಲ್ಲೇ ಕೊಹ್ಲಿ ಟೆಸ್ಟ್ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಇದರೊಂದಿಗೆ ಕೊಹ್ಲಿ ಭಾರತ ತಂಡದ ಎಲ್ಲಾ ಮೂರು ಮಾದರಿಗಳ ನಾಯಕತ್ವದಿಂದ ಹೊರಗುಳಿದಿದ್ದಾರೆ. ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡ ಸತತವಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ನಂಬರ್ ಒನ್ ಸ್ಥಾನವನ್ನು ಗಳಿಸಿದೆ. ಇದಾಗ್ಯೂ ಜನವರಿ 15, ಶನಿವಾರದಂದು ಟ್ವಿಟ್ಟರ್‌ನಲ್ಲಿ ಕೊಹ್ಲಿ ದೀರ್ಘ ಪತ್ರದ ಮೂಲಕ ನಾಯಕತ್ವದ ರಾಜೀನಾಮೆಯನ್ನು ಘೋಷಿಸಿದ್ದರು.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಏಕಾಏಕಿ ಟಿ20 ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದ ಕೊಹ್ಲಿ, ಈ ಬಾರಿ ಕೂಡ ತಮ್ಮ ಖಾತೆಯಲ್ಲಿ ಸುದೀರ್ಘ ಹೇಳಿಕೆಯ ಪೋಸ್ಟ್ ಮಾಡುವ ಮೂಲಕ ಟೆಸ್ಟ್ ನಾಯಕತ್ವದಿಂದ ಕೆಳಗಿದಿದ್ದಾರೆ. ಕೊಹ್ಲಿ ತಮ್ಮ ಹೇಳಿಕೆಯಲ್ಲಿ, “ಕಳೆದ 7 ವರ್ಷಗಳಿಂದ, ಕಠಿಣ ಪರಿಶ್ರಮ, ಹೋರಾಟ ಮತ್ತು ಪ್ರತಿದಿನ ಹೋರಾಟದ ಮೂಲಕ ನಾವು ತಂಡವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಲು ಕೆಲಸ ಮಾಡಿದ್ದೇವೆ. ನಾನು ನನ್ನ ಕೆಲಸವನ್ನು ಅತ್ಯಂತ ಪ್ರಾಮಾಣಿಕತೆಯಿಂದ ಮಾಡಿದ್ದೇನೆ ಮತ್ತು ಯಾವುದನ್ನೂ ಕಳೆದುಕೊಳ್ಳಲಿಲ್ಲ. ಇದಾಗ್ಯೂ ಎಲ್ಲದಕ್ಕೂ ಒಂದು ಅಂತ್ಯ ಬರುತ್ತದೆ. ಈಗ ಭಾರತದ ಟೆಸ್ಟ್ ನಾಯಕನಾಗಿ ಕೆಳಗಿಳಿಯುವ ಸಮಯ ನನ್ನದು.

“ಈ ಪ್ರಯಾಣದಲ್ಲಿ ಏರಿಳಿತಗಳಿವೆ, ಆದರೆ ಎಂದಿಗೂ ಪ್ರಯತ್ನ ಅಥವಾ ನಂಬಿಕೆಯ ಕೊರತೆ ಇರಲಿಲ್ಲ. ನಾನು ಮಾಡುವ ಪ್ರತಿಯೊಂದರಲ್ಲೂ 120 ಪ್ರತಿಶತವನ್ನು ನೀಡುವುದನ್ನು ನಾನು ಯಾವಾಗಲೂ ನಂಬುತ್ತೇನೆ. ನಾನು ಅದನ್ನು ಮಾಡಲು ಸಾಧ್ಯವಾಗದಿದ್ದರೆ, ಅದು ಸರಿಯಲ್ಲ ಎಂದು ನನಗೆ ತಿಳಿದಿದೆ. ನನ್ನ ತಂಡದೊಂದಿಗೆ ನಾನು ಅಪ್ರಾಮಾಣಿಕನಾಗಿರಲು ಸಾಧ್ಯವಿಲ್ಲ.

ಇಷ್ಟು ದಿನ ನನ್ನ ದೇಶವನ್ನು ಮುನ್ನಡೆಸಲು ಅವಕಾಶ ನೀಡಿದ ಬಿಸಿಸಿಐಗೆ ನಾನು ಧನ್ಯವಾದ ಹೇಳುತ್ತೇನೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಮೊದಲ ದಿನದಿಂದಲೇ ಈ ತಂಡಕ್ಕಾಗಿ ನನ್ನ ದೃಷ್ಟಿಕೋನವನ್ನು ಅಳವಡಿಸಿಕೊಂಡ ನನ್ನ ಸಹ ಆಟಗಾರರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಏಕೆಂದರೆ ಅವರು ಯಾವುದೇ ಸಂದರ್ಭದಲ್ಲೂ ಬಿಟ್ಟುಕೊಡಲಿಲ್ಲ. ನೀವು ಈ ಪ್ರಯಾಣವನ್ನು ಬಹಳ ಸ್ಮರಣೀಯ ಮತ್ತು ಸುಂದರಗೊಳಿಸಿದ್ದೀರಿ.

“ಈ ಪ್ರಯಾಣದಲ್ಲಿ ತಂಡದ ಇಂಜಿನ್‌ಗಳಾಗಿದ್ದ ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ನಮ್ಮನ್ನು ಮೇಲಕ್ಕೆ ತಲುಪಿಸಿದ ರವಿ ಭಾಯ್ (ಮಾಜಿ ಕೋಚ್ ರವಿ ಶಾಸ್ತ್ರಿ) ಮತ್ತು ಅವರ ತಂಡಕ್ಕೂ ಧನ್ಯವಾದ. ಈ ಸಾಧನೆಯಲ್ಲಿ ಗಿ ನೀವೆಲ್ಲರೂ ಪ್ರಮುಖ ಪಾತ್ರ ವಹಿಸಿದ್ದೀರಿ ಎಂದು ಕೊಹ್ಲಿ ಧನ್ಯವಾದ ಅರ್ಪಿಸಿದ್ದಾರೆ. ಇದೇ ವೇಳೆ ಭಾರತದ ಮಾಜಿ ನಾಯಕ ಎಂಎಸ್ ಧೋನಿ ಕುರಿತು ಮಾತನಾಡಿದ ಕೊಹ್ಲಿ, “ಅಂತಿಮವಾಗಿ, ನಾಯಕನಾಗಿ ನನ್ನನ್ನು ನಂಬಿದ ಮತ್ತು ಭಾರತೀಯ ಕ್ರಿಕೆಟ್ ಅನ್ನು ಮುನ್ನಡೆಸಬಲ್ಲ ವ್ಯಕ್ತಿಯನ್ನು ನನ್ನಲ್ಲಿ ಕಂಡ ಎಂಎಸ್ ಧೋನಿಗೆ ದೊಡ್ಡ ಧನ್ಯವಾದಗಳು ಎಂದು ಪತ್ರದಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಅಫ್ಘಾನಿಸ್ತಾನದಿಂದ ಐರ್ಲೆಂಡ್‌ಗೆ: 8 ಸಾವಿರ ಕಿ.ಮೀ ನಡೆದು ಕ್ರಿಕೆಟ್​ಗೆ ಎಂಟ್ರಿ ಕೊಟ್ಟ ಯುವ ಬೌಲರ್..!

ಇದನ್ನೂ ಓದಿ:  ಈ ಫೋಟೋದಲ್ಲಿರುವ ಇಬ್ಬರು ಸ್ಟಾರ್ ಆಟಗಾರರನ್ನು ಗುರುತಿಸಬಲ್ಲಿರಾ?

ಇದನ್ನೂ ಓದಿ: IPL 2022 Mega Auction: ಐಪಿಎಲ್ ಮೆಗಾ ಹರಾಜು ಡೇಟ್ ಫಿಕ್ಸ್..!

ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!

(Virat Kohli resigns from captaincy of Indian Test Team, Read Full statement of Former Indian Captain)