Virat Kohli: ಏಷ್ಯಾಕಪ್​ಗೆ ಭರ್ಜರಿ ತಯಾರಿ: ವೇಟ್​ಲಿಫ್ಟರ್​ಗಳ ಹುಬ್ಬೇರುವಂತೆ ಮಾಡಿದ ವಿರಾಟ್ ಕೊಹ್ಲಿ ಕಸರತ್ತು

| Updated By: Vinay Bhat

Updated on: Aug 18, 2022 | 10:00 AM

Asia Cup 2022: ಏಷ್ಯಾಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಮೇಲೆ ಸಾಕಷ್ಟು ನಂಬಿಕೆಯಿಡಲಾಗಿದೆ. ಇದಕ್ಕಾಗಿ ಕೊಹ್ಲಿ ಕೂಡ ಈಗಾಗಲೇ ಭರ್ಜರಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ.

Virat Kohli: ಏಷ್ಯಾಕಪ್​ಗೆ ಭರ್ಜರಿ ತಯಾರಿ: ವೇಟ್​ಲಿಫ್ಟರ್​ಗಳ ಹುಬ್ಬೇರುವಂತೆ ಮಾಡಿದ ವಿರಾಟ್ ಕೊಹ್ಲಿ ಕಸರತ್ತು
Virat Kohli
Follow us on

ಬಹುನಿರೀಕ್ಷಿತ ಏಷ್ಯಾಕಪ್ 2022 ಟೂರ್ನಿ (Asia Cup 2022) ಆರಂಭಕ್ಕೆ ದಿನಗಣನೆ ಶುರುವಾಗಿದೆ. ಅನೇಕ ಕಾರಣಗಳಿಂದ ಈ ಬಾರಿಯ ಏಷ್ಯಾಕಪ್ ಸಾಕಷ್ಟು ರೋಚಕತೆ ಸೃಷ್ಟಿಸಿದೆ. ಭಾರತ ಹಾಗೂ ಪಾಕಿಸ್ತಾನ (India vs Pakistan) ನಡುವಣ ಪಂದ್ಯ ಒಂದುಕಡೆಯಾದರೆ, ಸತತ ವೈಫಲ್ಯದಿಂದ ಬಳಲುತ್ತಿರುವ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಅವರಿಗೆ ಈ ಟೂರ್ನಿ ಮಹತ್ವದ್ದಾಗಿದೆ. ಭಾರತ ತಂಡ ಆಗಸ್ಟ್‌ 28ರಂದು ನಡೆಯಲಿರುವ ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧದ ಪಂದ್ಯದ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಈ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಮೇಲೆ ಸಾಕಷ್ಟು ನಂಬಿಕೆಯಿಡಲಾಗಿದೆ. ಇದಕ್ಕಾಗಿ ಕೊಹ್ಲಿ ಕೂಡ ಈಗಾಗಲೇ ಭರ್ಜರಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ.

ವಿರಾಟ್ ಕೊಹ್ಲಿ ಜಿಮ್​​​ ಹಾಗೂ ಒಳಾಂಗಣ ಕ್ರೀಡಾಂಗಣದಲ್ಲಿ ಬೆವರು ಸುರಿಸುತ್ತಿದ್ದಾರೆ. ವೇಟ್‌ಲಿಫ್ಟಿಂಗ್ ಕೌಶಲ್ಯ ಪ್ರದರ್ಶಿಸಿ ಇನ್ನಷ್ಟು ಫಿಟ್ ಆಗುತ್ತಿದ್ದಾರೆ. ವೇಟ್‌ಲಿಫ್ಟಿಂಗ್ ಮಾಡುತ್ತಿರುವ ವಿಡಿಯೋವನ್ನು ಕೊಹ್ಲಿ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಕಂಡು ವೇಟ್​ಲಿಫ್ಟರ್​ಗಳೇ ದಂಗಾಗಿ ಹೋಗಿದ್ದಾರೆ. ತಮ್ಮ ಹಳೆಯ ಖದರ್​ಗೆ ಮರಳುವ ಆತ್ಮವಿಶ್ವಾಸದಲ್ಲಿರುವ ಕೊಹ್ಲಿ ಎರಡು ವಾರ ಮುಂಚಿತವಾಗೇ ಸಮರಾಭ್ಯಾಸ ಆರಂಭಿಸಿರುವುದು ಭಾರತಕ್ಕೂ ಶುಭ ಸೂಚಕವಾಗಿದೆ.

ಇದನ್ನೂ ಓದಿ
ZIM vs IND: ಮೊದಲ ಏಕದಿನಕ್ಕೆ ಟೀಮ್ ಇಂಡಿಯಾ ಭರ್ಜರಿ ಪ್ರ್ಯಾಕ್ಟೀಸ್: ಫೋಟೋ
IND vs ZIM: ಇಂದು ಭಾರತ- ಜಂಬಾಬ್ವೆ ಮೊದಲ ಏಕದಿನ: ಟೀಮ್ ಇಂಡಿಯಾ ಪ್ಲೇಯಿಂಗ್ XI ಹೇಗಿರಲಿದೆ?
ದ್ರಾವಿಡ್ ಬೆಸ್ಟ್ ಕೋಚ್! ರವಿಶಾಸ್ತ್ರಿಗೆ ವೈಫಲ್ಯವನ್ನು ಸಹಿಸಿಕೊಳ್ಳಲಾಗುವುದಿಲ್ಲ: ದಿನೇಶ್ ಕಾರ್ತಿಕ್ ಸ್ಫೋಟಕ ಹೇಳಿಕೆ
ಕೋಟಿ ಕೋಟಿ ನಷ್ಟ ಕಟ್ಟಿಟ್ಟ ಬುತ್ತಿ! ಪಾಕಿಸ್ತಾನಕ್ಕೆ ತಲೆನೋವಾದ ಐಸಿಸಿಯ ಹೊಸ ವೇಳಾಪಟ್ಟಿ

 

ಆಗಸ್ಟ್​ 27ರಿಂದ ಯುಎಇನಲ್ಲಿ ಏಷ್ಯಾಕಪ್ ಟೂರ್ನಿ ಆರಂಭಗೊಳ್ಳಲಿದೆ. ಆಗಸ್ಟ್​ 28ರಂದು ಉದ್ಘಾಟನಾ ಪಂದ್ಯದಲ್ಲಿ ಭಾರತ ಸಾಂಪ್ರದಾಯಿಕ ಎದುರಾಳಿ ಪಾಕ್​ ವಿರುದ್ಧ ಸೆಣಸಾಟ ನಡೆಸಲಿದೆ. ಪಾಕಿಸ್ತಾನ ವಿರುದ್ಧದ ಪಂದ್ಯದ ಮೂಲಕ ಕೊಹ್ಲಿ​​ 100ನೇ ಟಿ20 ಅಂತರರಾಷ್ಟ್ರೀಯ ಪಂದ್ಯ ಆಡಿರುವ ಸಾಧನೆ ಮಾಡುವರು. ಜೊತೆಗೆ ಈ ರೆಕಾರ್ಡ್ ನಿರ್ಮಿಸುವ ಎರಡನೇ ಭಾರತೀಯ ಆಟಗಾರನಾಗಲಿದ್ದಾರೆ.

ಇನ್ನು ಏಷ್ಯಾಕಪ್​​​​​ ಏಕದಿನ ಟೂರ್ನಿಯಲ್ಲಿ ಕೊಹ್ಲಿ ಪ್ರದರ್ಶನ ಅದ್ಭುತವಾಗಿದೆ. 10 ಪಂದ್ಯಗಳಲ್ಲಿ 61.30ರ ಸರಾಸರಿಯಲ್ಲಿ 613 ರನ್​ ಸಿಡಿಸಿದ್ದಾರೆ. 3 ಶತಕ, 1 ಅರ್ಧಶತಕ ಬಾರಿಸಿದ್ದಾರೆ. ಏಷ್ಯಾಕಪ್​​ T20ಯಲ್ಲಿ ಆಡಿದ್ದು ಕಡಿಮೆ ಪಂದ್ಯಗಳಾದರೂ, ಭರ್ಜರಿ ಸರಾಸರಿ ಹೊಂದಿದ್ದಾರೆ. ಕೊಹ್ಲಿ 4 ಪಂದ್ಯಗಳಲ್ಲಿ ಬ್ಯಾಟ್​ ಬೀಸಿದ್ದು, 76.50ರ ಸರಾಸರಿಯಲ್ಲಿ 153 ರನ್​​ ಕಲೆ ಹಾಕಿದ್ದಾರೆ. ಅಜೇಯ 56 ರನ್,​ ಕೊಹ್ಲಿಯ ಬೆಸ್ಟ್​ ಸ್ಕೋರ್​ ಆಗಿದೆ.

ಏಷ್ಯಾಕಪ್‌ಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜುವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್.

Published On - 10:00 am, Thu, 18 August 22