Virat Kohli: ಆಸ್ಟ್ರೇಲಿಯಾ ಫ್ಯಾನ್ಸ್ಗೆ ಮುಟ್ಟಿ ನೋಡಿಕೊಳ್ಳುವಂತಹ ಉತ್ತರ ನೀಡಿದ ವಿರಾಟ್ ಕೊಹ್ಲಿ
India vs Australia: ಸಿಡ್ನಿ ಮೈದಾನದಲ್ಲಿ ಟೀಮ್ ಇಂಡಿಯಾ ಬೌಲರ್ಗಳನ್ನು ಕೆಣಕಿದ ಆಸ್ಟ್ರೇಲಿಯಾ ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ ಸ್ಯಾಂಡ್ ಪೇಪರ್ ಇಲ್ಲ ಎನ್ನುವ ಮೂಲಕ ಖಡಕ್ ಉತ್ತರ ಕೊಟ್ಟಿದ್ದಾರೆ. ಅದು ಕೂಡ ಸ್ಟೀವ್ ಸ್ಮಿತ್ ಅವರ ವಿಕೆಟ್ ಸಿಗುತ್ತಿದ್ದಂತೆ ಎಂಬುದು ವಿಶೇಷ. ಇದೀಗ ವಿರಾಟ್ ಕೊಹ್ಲಿ ಸ್ಯಾಂಡ್ ಪೇಪರ್ ತಿರುಗೇಟು ವೈರಲ್ ಆಗಿದ್ದು, ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಣ 5ನೇ ಟೆಸ್ಟ್ ಪಂದ್ಯವು ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಸ್ಯಾಮ್ ಕೊನ್ಸ್ಟಾಸ್ ಹಾಗೂ ಜಸ್ಪ್ರೀತ್ ಬುಮ್ರಾ ನಡುವಣ ಜಗಳದೊಂದಿಗೆ ಶುರುವಾದ ಈ ಜಿದ್ದಾಜಿದ್ದು, ವಿರಾಟ್ ಕೊಹ್ಲಿ ಹಾಗೂ ಆಸ್ಟ್ರೇಲಿಯಾ ಫ್ಯಾನ್ಸ್ ನಡುವಣ ಕಿರಿಕ್ನೊಂದಿಗೆ ಕೊನೆಗೊಂಡಿರುವುದು ವಿಶೇಷ. ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆದ ಈ ಪಂದ್ಯದ 3ನೇ ದಿನದಾಟದಲ್ಲಿ ಆಸ್ಟ್ರೇಲಿಯಾ ಅಭಿಮಾನಿಗಳು ಗೆಲುವನ್ನು ಖಚಿತಪಡಿಸಿಕೊಂಡಿದ್ದರು. ಹೀಗಾಗಿಯೇ ಟೀಮ್ ಇಂಡಿಯಾವನ್ನು ಕೆಣಕುವ ಕಾಯಕಕ್ಕೆ ಕೈ ಹಾಕಿದ್ದರು. ಅದರಲ್ಲೂ ಸ್ಟೀವ್ ಸ್ಮಿತ್ ಬ್ಯಾಟಿಂಗ್ ಮಾಡುತ್ತಿದ್ದಾಗ, ಆಸ್ಟ್ರೇಲಿಯನ್ನರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.
ಇತ್ತ ವಿಕೆಟ್ ಕಬಳಿಸಲು ಟೀಮ್ ಇಂಡಿಯಾ ಬೌಲರ್ಗಳು ಪರದಾಡುತ್ತಿದ್ದರು. ಈ ವೇಳೆ ಮೂದಲಿಕೆಯ ಮೂಲಕ ಆಸ್ಟ್ರೇಲಿಯಾ ಅಭಿಮಾನಿಗಳು ಭಾರತೀಯ ಬೌಲರ್ಗಳನ್ನು ಕೆಣಕುವ ಕಾಯಕಕ್ಕೆ ಕೈ ಹಾಕಿದ್ದರು. ಇದರಿಂದ ವಿರಾಟ್ ಕೊಹ್ಲಿ ಸಿಟ್ಟುಗೊಂಡಿದ್ದರು.
ಇದರ ನಡುವೆ ಸ್ಟೀವ್ ಸ್ಮಿತ್ ವಿಕೆಟ್ ಸಿಗುತ್ತಿದ್ದಂತೆ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ಅಭಿಮಾನಿಗಳಿಗೆ ಮುಟ್ಟಿ ನೋಡಿಕೊಳ್ಳುವಂತಹ ಉತ್ತರ ನೀಡಿದ್ದಾರೆ. ಅದು ಕೂಡ ನಮ್ಮ ಬಳಿ ಸ್ಯಾಂಡ್ ಪೇಪರ್ ಇಲ್ಲ ಎನ್ನುವ ಮೂಲಕ ಎಂಬುದು ವಿಶೇಷ.
2018 ರಲ್ಲಿ ಆಸ್ಟ್ರೇಲಿಯಾ-ಸೌತ್ ಆಫ್ರಿಕಾ ಟೆಸ್ಟ್ ಸರಣಿಯಲ್ಲಿ, ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಮತ್ತು ಕ್ಯಾಮರೂನ್ ಬ್ಯಾಂಕ್ರಾಫ್ಟ್ ಸ್ಯಾಂಡ್ ಪೇಪರ್ ಬಳಸಿ ಚೆಂಡನ್ನು ವಿರೂಪಗೊಳಿಸಿದ್ದರು. ಈ ಮೂಲಕ ಸೌತ್ ಆಫ್ರಿಕಾ ಬ್ಯಾಟರ್ಗಳನ್ನು ಔಟ್ ಮಾಡಲು ಪ್ಲ್ಯಾನ್ ರೂಪಿಸಿದ್ದರು. ಈ ಕಳ್ಳಾಟ ಬೆಳಕಿಗೆ ಬರುತ್ತಿದ್ದಂತೆ ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್‌ರನ್ನು ಕ್ರಿಕೆಟ್ ಆಸ್ಟ್ರೇಲಿಯಾ ಒಂದು ವರ್ಷ ನಿಷೇಧಿಸಿತು.’
ಅಲ್ಲದೆ ಈ ಬಾರಿ ಜಸ್ಪ್ರೀತ್ ಬುಮ್ರಾ ಸ್ಯಾಂಡ್ ಪೇಪರ್ ಬಳಸಿ ಯಶಸ್ವಿಯಾಗಿದ್ದಾರೆ ಎಂದು ಆಸ್ಟ್ರೇಲಿಯಾ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಆರೋಪಿಸಿದ್ದರು. ಇವೆಲ್ಲದಕ್ಕೂ ವಿರಾಟ್ ಕೊಹ್ಲಿ ತನ್ನದೇ ಶೈಲಿಯಲ್ಲಿ ಉತ್ತರ ನೀಡಿದ್ದಾರೆ.
ಸ್ಟೀವ್ ಸ್ಮಿತ್ ವಿಕೆಟ್ ಸಿಗುತ್ತಿದ್ದಂತೆ ಆಸ್ಟ್ರೇಲಿಯಾ ಆಟಗಾರರ ಕಳ್ಳಾಟವನ್ನು ಪರೋಕ್ಷವಾಗಿ ಪ್ರಸ್ತಾಪಿಸಿ ವಿರಾಟ್ ಕೊಹ್ಲಿ ನನ್ನ ಜೇಬಿನಲ್ಲಿ ಸ್ಯಾಂಡ್ ಪೇಪರ್ ಇಲ್ಲ ಎಂದು ಆಸ್ಟ್ರೇಲಿಯಾ ಅಭಿಮಾನಿಗಳಿಗೆ ತಿರುಗೇಟು ನೀಡಿದ್ದಾರೆ. ಈ ಮೂಲಕ ನಾವು ಯಾವುದೇ ಕಳ್ಳಾಟವಾಡದೇ ವಿಕೆಟ್ ಪಡೆದಿದ್ದೇವೆ ಎಂದು ಮುಟ್ಟಿ ನೋಡಿಕೊಳ್ಳುವಂತಹ ಉತ್ತರ ನೀಡಿದ್ದಾರೆ. ಇದೀಗ ವಿರಾಟ್ ಕೊಹ್ಲಿಯ ಈ ವಿಡಿಯೋ ವೈರಲ್ ಆಗಿದ್ದು, ಅಭಿಮಾನಿಗಳಿಂದ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
ವಿರಾಟ್ ಕೊಹ್ಲಿಯ ಸ್ಯಾಂಡ್ ಪೇಪರ್ ವಿಡಿಯೋ
Virat Kohli Shows Empty Pockets Indicating No Sandpaper With Him#ViratKohli𓃵 #INDvsAUSTest #KingKohli #ViratKohli pic.twitter.com/9xczapgmgU
— Zsports (@_Zsports) January 5, 2025
ಕಿಂಗ್ ಕೊಹ್ಲಿಯ ವೈರಲ್ ವಿಡಿಯೋ
“What is that about?”#AUSvIND pic.twitter.com/HwNZXhKW1S
— cricket.com.au (@cricketcomau) January 5, 2025
ಗೆದ್ದು ಬೀಗಿದ ಆಸ್ಟ್ರೇಲಿಯಾ
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ 295 ರನ್ಗಳಿಂದ ಗೆದ್ದರೆ, ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ 10 ವಿಕೆಟ್ಗಳ ಜಯ ಸಾಧಿಸಿತು. ಇನ್ನು ಮೂರನೇ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತ್ತು. ಹಾಗೆಯೇ ನಾಲ್ಕನೇ ಪಂದ್ಯವನ್ನು ಆಸ್ಟ್ರೇಲಿಯಾ 184 ರನ್ಗಳಿಂದ ಗೆದ್ದುಕೊಂಡಿತ್ತು.
ಇದನ್ನೂ ಓದಿ: ಬುಮ್ರಾ ಇಲ್ಲದೆ ಕಣಕ್ಕಿಳಿದ ಭಾರತ: ಇತಿಹಾಸ ಸೃಷ್ಟಿಸಿದ ಆಸ್ಟ್ರೇಲಿಯಾ
ಇದೀಗ ಸಿಡ್ನಿಯಲ್ಲಿ ನಡೆದ ಐದನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು 6 ವಿಕೆಟ್ಗಳ ಜಯ ಸಾಧಿಸಿದೆ. ಈ ಮೂಲಕ 10 ವರ್ಷಗಳ ಬಳಿಕ 3-1 ಅಂತರದಿಂದ ಸರಣಿ ಗೆದ್ದುಕೊಂಡಿದೆ.
Published On - 9:24 am, Sun, 5 January 25