Hardik Pandya: ಗುಜರಾತ್ ನಾಯಕನನ್ನು ಬೌಲಿಂಗ್ ಮಾಡದಂತೆ ತಡೆದು ನಿಲ್ಲಿಸಿದ ವಿರಾಟ್ ಕೊಹ್ಲಿ: ವಿಡಿಯೋ ನೋಡಿ

| Updated By: Vinay Bhat

Updated on: May 20, 2022 | 1:03 PM

Glenn Maxwell: ಒತ್ತಡಕ್ಕೆ ಸಿಲುಕಿಕೊಂಡ ಹಾರ್ದಿಕ್ ಪಾಂಡ್ಯ ಅತ್ತ ಗ್ಲೆನ್ ಮ್ಯಾಕ್ಸ್​ವೆಲ್ ಕ್ರೀಸ್​ನಲ್ಲಿ ತಯಾರಾಗುವ ಮುನ್ನವೇ ಮುಂದಿನ ಎಸೆತ ಹಾಕಲು ಓಡಿಕೊಂಡು ಬಂದರು. ಇನ್ನೇನು ಚೆಂಡು ಕೈಯಿಂದ ರಿಲೀಸ್ ಆಗಬೇಕು ಎನ್ನುವಷ್ಟರಲ್ಲಿ ವಿರಾಟ್ ಕೊಹ್ಲಿ ಅವರನ್ನು ತಡೆದು ನಿಲ್ಲಿಸಿದರು.

Hardik Pandya: ಗುಜರಾತ್ ನಾಯಕನನ್ನು ಬೌಲಿಂಗ್ ಮಾಡದಂತೆ ತಡೆದು ನಿಲ್ಲಿಸಿದ ವಿರಾಟ್ ಕೊಹ್ಲಿ: ವಿಡಿಯೋ ನೋಡಿ
Hardik Pandya and Virat Kohli
Follow us on

ಐಪಿಎಲ್ 2022 ರಲ್ಲಿ (IPL 2022) ಪ್ಲೇ ಆಫ್​ಗೆ ಕ್ವಾಲಿಫೈ ಆದ ಮೊದಲ ತಂಡ ಗುಜರಾತ್ ಟೈಟಾನ್ಸ್. ಚೇಸಿಂಗ್​ನಲ್ಲಿ ಅತ್ಯಂತ ಬಲಿಷ್ಠವಾಗಿರುವ ಹಾರ್ದಿಕ್ ಪಡೆ ಮೊದಲು ಬ್ಯಾಟಿಂಗ್ ಮಾಡಿದ ಪಂದ್ಯದಲ್ಲಿ ಸೋತಿದ್ದೇ ಹೆಚ್ಚು. ಇದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲೂ ಮುಂದುವರೆಯಿತು. ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಆರ್​ಸಿಬಿ ಜಿಟಿ (RCB vs GT) ತಂಡದ ಬೌಲರ್​​ಗಳನ್ನು ಅಟ್ಟಾಡಿಸಿ 8 ವಿಕೆಟ್​ಗಳ ಅಮೋಘ ಗೆಲುವು ಕಂಡಿತು. ಜೊತೆಗೆ ಪ್ಲೇ ಆಫ್ ರೇಸ್​ನಲ್ಲಿ ಇನ್ನೂ ಇದೆ ಎಂಬ ಸಂದೇಶ ರವಾನಿಸಿದೆ. ಮೊದಲು ಬ್ಯಾಟ್ ಮಾಡಿದ ಗುಜರಾತ್ 5 ವಿಕೆಟ್‌ಗೆ 168 ರನ್ ಪೇರಿಸಿತು. ಪ್ರತಿಯಾಗಿ ಆರ್‌ಸಿಬಿ 18.4 ಓವರ್‌ಗಳಲ್ಲಿ 2 ವಿಕೆಟ್‌ಗೆ 170 ರನ್‌ ಗಳಿಸಿ ಗೆಲುವಿನ ನಗೆ ಬೀರಿತು. ಬೆಂಗಳೂರು ತಂಡ ಚೇಸಿಂಗ್ ಮಾಡುವಾಗ ವಿಶೇಷ ಘಟನೆಯೊಂದು ನಡೆಯಿತು. ಹಾರ್ದಿಕ್ ಪಾಂಡ್ಯ (Hardik Pandya) ಬೌಲಿಂಗ್ ಮಾಡಲೆಂದು ಓಡಿ ಬಂದಾಗ ಕೊಹ್ಲಿ ಅವರನ್ನು ತಡೆದು ನಿಲ್ಲಿಸಿದರು.

ಹೌದು, 169 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಆರ್​ಸಿಬಿ ಅಂತಿಮ ಹಂತದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿತು. ಅದರಲ್ಲೂ ಗ್ಲೆನ್ ಮ್ಯಾಕ್ಸ್​ವೆಲ್ ಬಂದ ಮೇಲೆ ಹೊಡಿಬಡಿ ಆಟವಾಡಿದರು. ಈ ಸಂದರ್ಭ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡಲು ಬಂದರು. ಈ ಓವರ್​ನಲ್ಲಿ ಮ್ಯಾಕ್ಸಿ ಭರ್ಜರಿ ರನ್ ಕಲೆಹಾಕಿದರು. ಇದರಿಂದ ಒತ್ತಡಕ್ಕೆ ಸಿಲುಕಿಕೊಂಡ ಪಾಂಡ್ಯ ಅತ್ತ ಮ್ಯಾಕ್ಸ್​ವೆಲ್ ಕ್ರೀಸ್​ನಲ್ಲಿ ತಯಾರಾಗುವ ಮುನ್ನವೇ ಮುಂದಿನ ಎಸೆತ ಹಾಕಲು ಓಡಿಕೊಂಡು ಬಂದರು. ಇನ್ನೇನು ಚೆಂಡು ಕೈಯಿಂದ ರಿಲೀಸ್ ಆಗಬೇಕು ಎನ್ನುವಷ್ಟರಲ್ಲಿ ವಿರಾಟ್ ಕೊಹ್ಲಿ ಅವರನ್ನು ತಡೆದು ನಿಲ್ಲಿಸಿದರು. ಹಾಗೂ ಮ್ಯಾಕ್ಸಿ ಇನ್ನೂ ತಯಾರಾಗಿಲ್ಲ ಎಂಬ ಸೂಚನೆ ನೀಡಿದರು.

ಇದನ್ನೂ ಓದಿ
Virat Kohli: ಪಂದ್ಯಶ್ರೇಷ್ಠ ಸ್ವೀಕರಿಸುವ ವೇಳೆ ವಿರಾಟ್ ಕೊಹ್ಲಿಯಿಂದ ಅಚ್ಚರಿ ಹೇಳಿಕೆ: ಏನಂದ್ರು ಕೇಳಿ
Matthew Wade: ಇದರಲ್ಲಿ ಆರ್​ಸಿಬಿ ತಪ್ಪೇನಿದೆ?: ಔಟಾದ ಸಿಟ್ಟಲ್ಲಿ ಬ್ಯಾಟ್, ಹೆಲ್ಮೆಟ್ ಬಿಸಾಕಿದ ಮ್ಯಾಥ್ಯೂ ವೇಡ್
Nikhat Zareen: ವಿಶ್ವ ಮಹಿಳಾ ಬಾಕ್ಸಿಂಗ್​ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತದ ನಿಖತ್ ಜರೀನ್
Musa Yamak Death: ಸ್ಪರ್ಧೆ ಜಾರಿಯಲ್ಲಿರುವಾಗಲೇ ಎದುರಾಳಿಯ ಪ್ರಹಾರಕ್ಕೆ ಕುಸಿದು ಪ್ರಾಣ ಬಿಟ್ಟ ಬಾಕ್ಸರ್ ಸೋಲರಿಯದ ಸರದಾರನಾಗಿದ್ದರು!

 

ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಗುಜರಾತ್‌ ಪರ ಆರಂಭಿಕನಾಗಿ ಕಣಕ್ಕಿಳಿದ ಶುಭ್ಮನ್‌ ಗಿಲ್‌(1) ಬಹುಬೇಗನೆ ಔಟಾದರು. ವೃದ್ಧಿಮಾನ್‌ ಸಾಹ(31) ಉಪಯುಕ್ತ ರನ್‌ಗಳಿಸಿ ಹೊರ ನಡೆದರೆ, ಮ್ಯಾಥ್ಯೂ ವೇಡ್‌(16) ಹೆಚ್ಚು ರನ್‌ ಕಲೆಹಾಕುವಲ್ಲಿ ಎಡವಿದರು. ಈ ಹಂತದಲ್ಲಿ ಜೊತೆಯಾದ ನಾಯಕ ಹಾರ್ದಿಕ್‌ ಪಾಂಡ್ಯ 62*(47) ಹಾಗೂ ಡೇವಿಡ್‌ ಮಿಲ್ಲರ್‌ 34(25) 4ನೇ ವಿಕೆಟ್‌ಗೆ 61(47) ರನ್‌ಗಳಿಸಿ ತಂಡಕ್ಕೆ ಆಸರೆಯಾದರು. ಮಿಲ್ಲರ್‌ ಔಟಾದ ನಂತರವು ಜವಾಬ್ದಾರಿಯ ಆಟವಾಡಿದ ಹಾರ್ದಿಕ್‌ ಅರ್ಧಶತಕ ಸಿಡಿಸಿದರು. ಕೊನೇಯಲ್ಲಿ ರಶೀದ್‌ ಖಾನ್‌ 19*(6) ಬಿರುಸಿನ ಬ್ಯಾಟಿಂಗ್‌ ಪ್ರದರ್ಶಿಸಿದರು. ಜಿಟಿ ತಂಡ 20 ಓವರ್ ಗಳಲ್ಲಿ 5 ವಿಕೆಟ್ ಗೆ 168 ರನ್ ಗಳಿಸಿತು.

Faf du Plessis: ಫಾಪ್ ಡುಪ್ಲೆಸಿಸ್ ಪಂದ್ಯ ಮುಗಿದ ಬಳಿಕ ವಿರಾಟ್ ಕೊಹ್ಲಿ ಬಗ್ಗೆ ಏನು ಹೇಳಿದ್ರು ಗೊತ್ತೇ?

ಟಾರ್ಗೆಟ್‌ ಬೆನ್ನತ್ತಿದ ಆರ್‌ಸಿಬಿ ಭರ್ಜರಿ ಆರಂಭ ಪಡೆಯಿತು. ಓಪನರ್‌ಗಳಾಗಿ ಬಂದ ಫಾಫ್‌ ಡುಪ್ಲೆಸಿಸ್ ಹಾಗೂ ವಿರಾಟ್‌ ಕೊಹ್ಲಿಅದ್ಭುತ ಬ್ಯಾಟಿಂಗ್‌ ಪ್ರದರ್ಶಿಸಿದರು. ಮೊದಲ ವಿಕೆಟ್‌ಗೆ 115 ರನ್‌ಗಳ ಜೊತೆಯಾಟವಾಡಿದರು. ಡುಪ್ಲೆಸಿಸ್ 44 ರನ್‌ಗಳಿಸಿ ವಿಕೆಟ್‌ ಒಪ್ಪಿಸಿದರೆ ಈ ಸೀಸನ್‌ನಲ್ಲಿ ಫಾರ್ಮ್‌ ಕೊರತೆ ಎದುರಿಸುತ್ತಿದ್ದ ಕೊಹ್ಲಿ, 73 ರನ್‌ (54 ಬಾಲ್‌, 8 ಬೌಂಡರಿ, 2 ಸಿಕ್ಸ್‌) ಸಿಡಿಸಿ ತಂಡದ ಗೆಲುವಿನ ಹೀರೋ ಆಗಿ ಮಿಂಚಿದರು. ಗ್ಲೆನ್‌ ಮ್ಯಾಕ್ಸ್‌ವೆಲ್‌ 40* ರನ್‌ (18 ಬಾಲ್‌, 5 ಬೌಂಡರಿ, 2 ಸಿಕ್ಸ್‌) ಸ್ಪೋಟಕ ಆಟವಾಡಿದರು. ಆರ್​​ಸಿಬಿ 18.4 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 1:03 pm, Fri, 20 May 22