Virat Kohli: 4,6 ಮತ್ತು ಔಟ್: ಮೈ ಜುಮ್ ಎನಿಸುವ ಕೊಹ್ಲಿಯ ಎರಡು ಅದ್ಭುತ ಶಾಟ್ಗೆ ಫ್ಯಾನ್ಸ್ ಫಿದಾ
IND vs ENG 3rd T20I: ಇಂಗ್ಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಔಟಾಗುವುದಕ್ಕೂ ಮುನ್ನ ವಿರಾಟ್ ಕೊಹ್ಲಿ ಹೊಡೆದ ಶಾಟ್ ಮಾತ್ರ ಮನಮೋಹಕವಾಗಿತ್ತು. ಒಂದು ಕ್ಷಣ ಅಭಿಮಾನಿಗಳೆಲ್ಲರು ಹಳೆಯ ಕೊಹ್ಲಿ ಕಮ್ಬ್ಯಾಕ್ ಮಾಡಿದರು ಎಂದೇ ನಂಬಿದ್ದರು.

ನ್ಯಾಟಿಂಗ್ಹ್ಯಾಮ್ನ ಟ್ರೆಂಟ್ ಬ್ರಿಡ್ಜ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಅಂತಿಮ ಮೂರನೇ ಟಿ20 ಪಂದ್ಯದಲ್ಲಿ ಭಾರತ (England vs India) ಸೋಲು ಕಂಡಿದೆ. ಆಂಗ್ಲರು ನೀಡಿದ್ದ ಬೆಟ್ಟದಂತಹ ಟಾರ್ಗೆಟ್ ಬೆನ್ನಟ್ಟಲು ವಿಫಲವಾದ ಟೀಮ್ ಇಂಡಿಯಾ (Team India) ಸರಣಿ ಕ್ಲೀನ್ಸ್ವೀಪ್ ಮಾಡುವಲ್ಲಿ ಎಡವಿತು. ಸೂರ್ಯಕುಮಾರ್ ಯಾದವ್ ಆಕರ್ಷಕ ಶತಕ ಸಿಡಿಸಿ ತಂಡದ ಗೆಲುವಿನ ಆಸೆ ಚುಗುರಿಸಿದರೂ ಅಂತಿಮ ಹಂತದಲ್ಲಿ ಮಾಡಿದ ಕೆಲ ಎಡವಟ್ಟಿನಿಂದ ಸೋಲಿಗೆ ಗುರಿಯಾಗಬೇಕಾಯಿತು. ಇದರ ನಡುವೆ ವಿರಾಟ್ ಕೊಹ್ಲಿ (Virat Kohli) ದೊಡ್ಡ ರನ್ ಕಲೆಹಾಕಲು ಎಡವುತ್ತಿರುವುದು ಈ ಪಂದ್ಯದಲ್ಲೂ ಮುಂದುವರೆದಿದೆ. ಮೂರನೇ ಟಿ20 ಪಂದ್ಯದಲ್ಲೂ ಕೊಹ್ಲಿ ಕ್ರೀಸ್ಗೆ ಬಂದ ಕೂಡಲೇ ಅಬ್ಬರಿಸಿ ಭರವಸೆ ಮೂಡಿಸಿದರೂ ಅದನ್ನು ಮುಂದುವರೆಸಲು ಸಾಧ್ಯವಾಗಲಿಲ್ಲ. ಆಡಿದ 6 ಎಸೆತಗಳಲ್ಲಿ 1 ಫೋರ್, 1 ಸಿಕ್ಸರ್ ಸಿಡಿಸಿ 11 ರನ್ ಬಾರಿಸಿ ಔಟಾದರು.
ಆದರೆ, ಔಟಾಗುವುದಕ್ಕೂ ಮುನ್ನ ಕಿಂಗ್ ಕೊಹ್ಲಿ ಹೊಡೆದ ಶಾಟ್ ಮಾತ್ರ ಮನಮೋಹಕವಾಗಿತ್ತು. ಒಂದು ಕ್ಷಣ ಅಭಿಮಾನಿಗಳೆಲ್ಲರು ಹಳೆಯ ಕೊಹ್ಲಿ ಕಮ್ಬ್ಯಾಕ್ ಮಾಡಿದರು ಎಂದೇ ನಂಬಿದ್ದರು. ಡೇವಿಡ್ ವಿಲ್ಲೆ ಬೌಲಿಂಗ್ನಲ್ಲಿ ಓವರ್ ಮಿಡ್ ವಿಕೆಟ್ ಮೂಲಕ ಬೌಂಡರಿ ಬಾರಿಸಿದರೆ ನಂತರದ ಎಸೆತದಲ್ಲಿ ಅಮೋಘ ಸಿಕ್ಸ್ ಸಿಡಿಸಿದರು. ಆದರೆ, ಮುಂದಿನ ಎಸೆತದಲ್ಲಿ ಗ್ಯಾಪ್ ಮೂಲಕ ಮತ್ತೊಂದು ಬೌಂಡರಿ ಬಾರಿಸಲು ಹೋಗಿ ಸರಿಯಾದ ಟೈಮ್ ಆಗದ ಕಾರಣ ಜೇಸನ್ ರಾಯಲ್ಗೆ ಕ್ಯಾಚಿತ್ತು ನಿರ್ಗಮಿಸಿದರು. ಈ ಮೂಲಕ ಕೊಹ್ಲಿಯ ಬ್ಯಾಟಿಂಗ್ ವೈಫಲ್ಯ ಈ ಬಾರಿ ಕೂಡ ಮುಂದುವರೆಯಿತು.
Wimbledon 2022: ಸತತ ನಾಲ್ಕನೇ ಬಾರಿಗೆ ಚಾಂಪಿಯನ್; 21 ನೇ ಗ್ರ್ಯಾಂಡ್ ಸ್ಲಾಮ್ ಗೆದ್ದ ನೊವಾಕ್ ಜೊಕೊವಿಕ್..!
MASSIVE wicket! ?
Scorecard/clips: https://t.co/AlPm6qHnwj
??????? #ENGvIND ?? | @david_willey pic.twitter.com/mXjiMb9ai8
— England Cricket (@englandcricket) July 10, 2022
ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ಉತ್ತಮ ಆರಂಭ ಪಡೆದುಕೊಂಡಿಲ್ಲ, ಆದರೂ ಮಧ್ಯಮ ಕ್ರಮಾಂಕದ ಬ್ಯಾಟರ್ಗಳು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ನಾಯಕ ಜೋಸ್ ಬಟ್ಲರ್ 9 ಎಸೆತಗಳಲ್ಲಿ 18 ರನ್ ಗಳಿಸಿ ಆವೇಶ್ ಖಾನ್ ಬೌಲಿಂಗ್ನಲ್ಲಿ ಬೌಲ್ಡ್ ಆದರು. ಜೇಸನ್ ರಾಯ್ ಕೂಡ ಹೆಚ್ಚುಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. 26 ಎಸೆತಗಳಲ್ಲಿ 27 ರನ್ ಬಾರಿಸಿ ನಿರ್ಗಮಿಸಿದರು. ಫಿಲಿಪ್ ಸಾಲ್ಟ್ (8) ಹರ್ಷಲ್ ಪಟೇಲ್ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆದರು.
ಈ ಸಂದರ್ಭ ಜೊತೆಯಾದ ಡೇವಿಡ್ ಮಲನ್ ಹಾಗೂ ಲಿಯಾಮ್ ಲಿವಿಂಗ್ಸ್ಟೋನ್ ಭರ್ಜರಿ ಜೊತೆಯಾಟ ಆಡಿದರು. ಭಾರತೀಯ ಬೌಲರ್ಗಳನ್ನು ಕಾಡಿದ ಈ ಜೋಡಿ ಸ್ಫೋಟಕ ಬ್ಯಾಟಿಂಗ್ ನಡೆಸಿತು. ಮಲನ್ ಕೇವಲ 39 ಎಸೆತಗಳಲ್ಲಿ 6 ಫೋರ್, 5 ಸಿಕ್ಸರ್ ಸಿಡಿಸಿ 77 ರನ್ ಚಚ್ಚಿದರೆ, ಲಿಯಾಮ್ 29 ಎಸೆತಗಳಲ್ಲಿ 4 ಸಿಕ್ಸರ್ ಬಾರಿಸಿ ಅಜೇಯ 42 ರನ್ ಕಲೆಹಾಕಿದರು. ಪರಿಣಾಮ ಇಂಗ್ಲೆಂಡ್ 20 ಓವರ್ನಲ್ಲಿ 7 ವಿಕೆಟ್ ನಷ್ಟಕ್ಕೆ 215 ರನ್ ಗಳಿಸಿತು. ಭಾರತ ಪರ ರವಿ ಬಿಷ್ಟೋಯ್ ಹಾಗೂ ಹರ್ಷಲ್ ಪಟೇಲ್ ತಲಾ 2 ವಿಕೆಟ್ ಕಿತ್ತರೆ, ಆವೇಶ್ ಖಾನ್ ಹಾಗೂ ಉಮ್ರಾನ್ ಮಲಿಕ್ ತಲಾ 1 ವಿಕೆಟ್ ಪಡೆದರು.
ಬೆಟ್ಟದಂತಹ ಟಾರ್ಗೆಟ್ ಬೆನ್ನಟ್ಟಿದ ಭಾರತ 50ಕ್ಕೂ ಮುನ್ನವೇ ಮುಖ್ಯ 3 ವಿಕೆಟ್ ಕಳೆದುಕೊಂಡಿತು. ರಿಷಭ್ ಪಂತ್ 1 ರನ್ಗೆ ಬ್ಯಾಟ್ ಕೆಳಗಿಟ್ಟರೆ, ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯ ಆಟ 11 ರನ್ಗೆ ಅಂತ್ಯವಾಯಿತು. ಆದರೆ, ಈ ಸಂದರ್ಭ ಒಂದಾದ ಸೂರ್ಯಕುಮಾರ್ ಯಾದವ್ ಹಾಗೂ ಶ್ರೇಯಸ್ ಅಯ್ಯರ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಅದರಲ್ಲೂ ಸೂರ್ಯ ಸ್ಫೋಟಕ ಬ್ಯಾಟಿಂಗ್ ನಡೆಸಿದರೆ ಇವರಿಗೆ ಅಯ್ಯರ್ ಅತ್ಯುತ್ತಮ ಜೊತೆಯಾಟ ಆಡಿದರು.
ಸೂರ್ಯ ಹಾಗೂ ಅಯ್ಯರ್ 4ನೇ ವಿಕೆಟ್ಗೆ ಬರೋಬ್ಬರಿ 119 ರನ್ಗಳ ಜೊತೆಯಾಟ ಆಡಿದರು. ಇದರಲ್ಲಿ ಅಯ್ಯರ್ ಪಾಲು 23 ಎಸೆತಗಳಲ್ಲಿ 28 ರನ್ ಅಷ್ಟೆ. ಆದರೆ, ಶ್ರೇಯಸ್ ನಿರ್ಗಮನದ ಬಳಿಕ ಬಂದ ದಿನೇಶ್ ಕಾರ್ತಿಕ್ (6) ಹಾಗೂ ರವೀಂದ್ರ ಜಡೇಜಾ (7) ಬೇಗನೆ ಔಟಾದ ಪರಿಣಾಮ ಸೋಲಿನ ಸುಳಿಗೆ ಸಿಲುಕಿತು. ಆದರೂ ಸೂರ್ಯಕುಮಾರ್ ಶತಕ ಸಿಡಿಸಿ ಏಕಾಂಗಿ ಹೋರಾಟ ನಡೆಸುತ್ತಲೇ ಇದ್ದರು. ಆದರೆ, ಇದು ಫಲ ಸಿಗಲಿಲ್ಲ. ಸೂರ್ಯ 55 ಎಸೆತಗಳಲ್ಲಿ 14 ಫೋರ್, 6 ಸಿಕ್ಸರ್ ಸಿಡಿಸಿ 117 ರನ್ಗೆ ಔಟಾಗುವ ಮೂಲಕ ಭಾರತದ ಸೋಲು ಖಚಿತವಾಯಿತು. ಟೀಮ್ ಇಂಡಿಯಾ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 198 ರನ್ ಗಳಿಸಲಷ್ಟೇ ಶಕ್ತವಾಯಿತು. ಇಂಗ್ಲೆಂಡ್ 17 ರನ್ಗಳ ಗೆಲುವು ಸಾಧಿಸಿತು.
Published On - 8:31 am, Mon, 11 July 22




