Rohit Sharma: ಮೈದಾನದಲ್ಲೇ ರೋಹಿತ್ ಶರ್ಮಾ ಬಳಿ ಕ್ಷಮೆ ಕೇಳಿದ ವಿರಾಟ್ ಕೊಹ್ಲಿ: ಯಾಕೆ?, ವಿಡಿಯೋ ನೋಡಿ

India vs Australia 1st Test: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್​ನ ಎರಡನೇ ದಿನದ 48ನೇ ಓವರ್​ನ ನೇಥನ್ ಲ್ಯಾನ್ ಬೌಲಿಂಗ್​ನಲ್ಲಿ ವಿರಾಟ್ ಕೊಹ್ಲಿ ಮಿಡ್ ವಿಕೆಟ್ ಕಡೆ ಹೊಡೆದು ಓಡಲು ಮುಂದಾದರು. ನಾನ್​ ಸ್ಟ್ರೈಕರ್​ನಲ್ಲಿದ್ದ ರೋಹಿತ್ ಶರ್ಮಾಗೆ ಓಡಿ ಬರುವಂತೆ ಕೊಹ್ಲಿ ಕರೆ ನೀಡಿದರು. ಆಗ ಏನಾಯಿತು ನೋಡಿ.

Rohit Sharma: ಮೈದಾನದಲ್ಲೇ ರೋಹಿತ್ ಶರ್ಮಾ ಬಳಿ ಕ್ಷಮೆ ಕೇಳಿದ ವಿರಾಟ್ ಕೊಹ್ಲಿ: ಯಾಕೆ?, ವಿಡಿಯೋ ನೋಡಿ
Rohit Sharma and Virat Kohli
Follow us
Vinay Bhat
|

Updated on:Feb 11, 2023 | 8:31 AM

ಬಾರ್ಡರ್- ಗವಾಸ್ಕರ್ ಟ್ರೋಫಿಯ ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ನಡುವಣ ಮೊದಲ ಟೆಸ್ಟ್ ಪಂದ್ಯ ಕುತೂಹಲ ಘಟ್ಟದತ್ತ ಸಾಗುತ್ತಿದೆ. ಎರಡು ದಿನಗಳ ಆಟ ಮುಕ್ತಾಯಗೊಂಡಿದ್ದು ಮೇಲ್ನೋಟಕ್ಕೆ ಟೀಮ್ ಇಂಡಿಯಾ ಮೇಲುಗೈ ಸಾಧಿಸಿದಂತಿದೆ. ರವೀಂದ್ರ ಜಡೇಜಾ ಹಾಗೂ ಅಕ್ಷರ್ ಪಟೇಲ್ ಆಸೀಸ್ ಬೌಲಿಂಗ್ ಪಡೆಯನ್ನು ಎಚ್ಚರಿಕೆಯಿಂದ ಎದುರಿಸುತ್ತ ಕ್ರೀಸ್​ನಲ್ಲಿದ್ದಾರೆ. ದ್ವಿತೀಯ ದಿನದಾಟದ ಅಂತ್ಯಕ್ಕೆ ಭಾರತ 7 ವಿಕೆಟ್ ಕಳೆದುಕೊಂಡು 321 ರನ್ ಕಲೆಹಾಕಿ 144 ರನ್​ಗಳ ಮುನ್ನಡೆಯಲ್ಲಿದೆ. ನಾಯಕ ರೋಹಿತ್ ಶರ್ಮಾ (Rohit Sharma) ಶತಕ ತಂಡದ ಮೊತ್ತ ಹೆಚ್ಚಲು ಸಹಾಯ ಮಾಡಿತು. ಆದರೆ, ಇದಕ್ಕೂ ಮುನ್ನ ಹಿಟ್​ಮ್ಯಾನ್ ಔಟ್ ಆಗುವುದರಿಂದ ಸ್ವಲ್ಪದರಲ್ಲೇ ಪಾರಾದರು. ಇದಕ್ಕೆ ಕಾರಣವಾಗಿದ್ದು ವಿರಾಟ್ ಕೊಹ್ಲಿ (Virat Kohli).

48ನೇ ಓವರ್​ನ ನೇಥನ್ ಲ್ಯಾನ್ ಬೌಲಿಂಗ್​ನಲ್ಲಿ ವಿರಾಟ್ ಕೊಹ್ಲಿ ಮಿಡ್ ವಿಕೆಟ್ ಕಡೆ ಹೊಡೆದು ಓಡಲು ಮುಂದಾದರು. ನಾನ್​ ಸ್ಟ್ರೈಕರ್​ನಲ್ಲಿದ್ದ ರೋಹಿತ್ ಶರ್ಮಾಗೆ ಓಡಿ ಬರುವಂತೆ ಕೊಹ್ಲಿ ಕರೆ ನೀಡಿದರು. ಆದರೆ, ಚೆಂಡು ದೂರ ತೆರಳದೆ ಅಲ್ಲೆ ಇದ್ದ ಫೀಲ್ಡರ್ ಕೈಗೆ ಸೇರಿತು. ಒಂದು ರನ್ ಕಲೆಹಾಕಲೂ ಅಲ್ಲಿ ಸಮಯವಿರಲಿಲ್ಲ. ಅತ್ತ ಕೊಹ್ಲಿ ಮಾತಿನಂತೆ ರೋಹಿತ್ ಅರ್ಧದ ವರೆಗೆ ಓಡಿ ಬಂದರು. ಚೆಂಡು ಅಲ್ಲೆ ಸರ್ಕಲ್​ನಲ್ಲಿ ಇದ್ದಿರುವುದನ್ನು ಗಮನಿಸಿದ ಕೊಹ್ಲಿ ತಕ್ಷಣ ತನ್ನ ನಿರ್ಧಾರವನ್ನು ಬದಲಾಯಿಸಿ ನೋ ಎಂಬ ಕರೆ ಕೊಟ್ಟರು. ವಿಕೆಟ್ ಬಿಟ್ಟು ರನ್​ಗೆಂದು ಅರ್ಧ ದಾರಿಯ ವರೆಗೆ ಬಂದಿದ್ದ ರೋಹಿತ್ ಕೂಡಲೇ ಹಿಂತಿರುಗಿ ನಾನ್​ ಸ್ಟ್ರೈಕರ್ ಕಡೆ ತಿರುಗಿ ಓಡಿದರು.

ಇದನ್ನೂ ಓದಿ
Image
IND vs AUS 1st Test: ಕುತೂಹಲದತ್ತ ಇಂಡೋ-ಆಸೀಸ್ ಪ್ರಥಮ ಟೆಸ್ಟ್: ಮೂರನೇ ದಿನದಾಟದತ್ತ ಎಲ್ಲರ ಚಿತ್ತ
Image
IND vs AUS: ಚೀಟರ್ ಎಂದ ಆಸೀಸ್ ಮೀಡಿಯಾಗಳಿಗೆ ಬ್ಯಾಟ್​ನಿಂದಲೇ ಉತ್ತರಿಸಿ, ವಿಶ್ವ ದಾಖಲೆ ಮುರಿದ ಜಡೇಜಾ!
Image
IND vs AUS: ಚೊಚ್ಚಲ ಪಂದ್ಯವನ್ನಾಡುವ ಬೌಲರೆಂದರೆ ಕೊಹ್ಲಿಗೆ ಭಯ! ಇದು ಅಂಕಿ- ಅಂಶ ಹೇಳಿದ ಸತ್ಯ
Image
IND vs AUS: ಮತ್ತೆ ಸ್ಪಿನ್ನರ್ ಎದುರು ಮಂಕಾದ ಕೊಹ್ಲಿ; ಮುಂದುವರೆದ ವಿರಾಟ್ ಟೆಸ್ಟ್ ಶತಕದ ಬರ

Jasprit Bumrah: ಮೊದಲ ಟೆಸ್ಟ್ ನಡುವೆ ಟೀಮ್ ಇಂಡಿಯಾಕ್ಕೆ ದೊಡ್ಡ ಶಾಕ್: ಆಸೀಸ್ ವಿರುದ್ಧದ ಟೆಸ್ಟ್ ಸರಣಿಯಿಂದ ಜಸ್​ಪ್ರೀತ್ ಬುಮ್ರಾ ಔಟ್

ರೋಹಿತ್ ಶರ್ಮಾ ಡೈವ್ ಬಿದ್ದು ಕೂದಲೆಳೆಯ ಅಂತರದಿಂದ ರನೌಟ್​ನಿಂದ ಪಾರಾದರು. ತಪ್ಪು ಸಂಪೂರ್ಣವಾಗಿ ವಿರಾಟ್ ಮೇಲಿತ್ತು. ರನ್ ಗಳಿಸುವ ಅವಕಾಶ ಇಲ್ಲದಿದ್ದರೂ ಓಡಿ ಬರುವಂತೆ ರೋಹಿತ್​ಗೆ ಕರೆ ನೀಡಿದ್ದು ಕೊಹ್ಲಿಯ ತಪ್ಪಾಗಿತ್ತು. ಇದನ್ನು ಅರಿತ ಕೊಹ್ಲಿ ತಕ್ಷಣವೇ ರೋಹಿತ್ ಬಳಿ ಕೈಸನ್ನೆ ಮೂಲಕ ಕ್ಷಮೆ ಕೇಳಿಕೊಂಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇಲ್ಲಿದೆ ನೋಡಿ ಆ ವಿಡಿಯೋ.

ಭಾರತ-ಆಸ್ಟ್ರೇಲಿಯಾ ಪ್ರಥಮ ಟೆಸ್ಟ್​ನ ಇಂದಿನ ಮೂರನೇ ದಿನದಾಟ ಸಾಕಷ್ಟು ಕುತೂಹಲ ಕೆರಳಿಸಿದೆ. ಕಾಂಗರೂ ಪಡೆಯನ್ನು 177 ರನ್​ಗೆ ಆಲೌಟ್ ಮಾಡಿ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಟೀಮ್ ಇಂಡಿಯಾ ಉತ್ತಮ ಮುನ್ನಡೆಯತ್ತ ದಾಪುಗಾಲಿಡುತ್ತಿದೆ. ಎರಡನೇ ದಿನದಾಟದಲ್ಲಿ ಭಾರತ ಪರ ಅಶ್ವಿನ್ 62 ಎಸೆತಗಳಲ್ಲಿ 23 ರನ್ ಗಳಿಸಿ ಔಟಾದರು. ಪೂಜಾರ (7), ವಿರಾಟ್ ಕೊಹ್ಲಿ 12, ಸೂರ್ಯಕುಮಾರ್ ಯಾದವ್ (8) ಬೇಗನೆ ಔಟಾದರು. 6ನೇ ವಿಕೆಟ್​ಗೆ ವೀಂದ್ರ ಜಡೇಜಾ- ರೋಹಿತ್ ಜೊತೆಯಾಗಿ ತಂಡದ ಮೊತ್ತವನ್ನು 200ರ ಗಡಿ ದಾಡಿಸಿದರು. 61 ರನ್​ಗಳ ಕಾಣಿಕೆ ನೀಡಿದರು.

ರೋಹಿತ್ 120 ರನ್ ಗಳಿಸಿ ಔಟಾದರೆ ಬಂದ ಬೆನ್ನಲ್ಲೇ ಶ್ರೀಕರ್ ಭರತ್ (8) ಮೋಡಿ ಮಾಡಲು ವಿಫಲರಾದರು. ಈ ವೇಳೆ ಜಡೇಜಾ ಜೊತೆಯಾದ ಅಕ್ಷರ್ ಪಟೇಲ್ ಆಸೀಸ್ ಬೌಲರ್​ಗಳನ್ನು ಧೈರ್ಯದಿಂದ ಎದುರಿಸಿ ಭರ್ಜರಿ ಆಟ ಪ್ರದರ್ಶಿಸಿದರು. ಜಡೇಜಾ 66 ರನ್ ಗಳಿಸಿ ಹಾಗೂ ಅಕ್ಷರ್ ಪಟೇಲ್ 52 ಬಾರಿಸಿ ಕ್ರೀಸ್​ನಲ್ಲಿದ್ದಾರೆ. ಭಾರತ 114 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 321 ರನ್ ಕಲೆಹಾಕಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:31 am, Sat, 11 February 23

ಜಿಟಿಟಿ ಹೇಳಿದ ಧಮ್ ಮಾತಿಗೆ ಬಿಜೆಪಿ ನಾಯಕ ರವಿ ಪ್ರತಿಕ್ರಿಯೆ ನೀಡಲಿಲ್ಲ
ಜಿಟಿಟಿ ಹೇಳಿದ ಧಮ್ ಮಾತಿಗೆ ಬಿಜೆಪಿ ನಾಯಕ ರವಿ ಪ್ರತಿಕ್ರಿಯೆ ನೀಡಲಿಲ್ಲ
ಬಿಗ್​ಬಾಸ್ ಮನೆಯಲ್ಲಿ ರಾಜಿ ಸಂಧಾನ, ದೂರಾದವರು ಒಂದಾದರೇ?
ಬಿಗ್​ಬಾಸ್ ಮನೆಯಲ್ಲಿ ರಾಜಿ ಸಂಧಾನ, ದೂರಾದವರು ಒಂದಾದರೇ?
ಮಡಿದವರು ಶಿಗ್ಗಾವಿ ಕ್ಷೇತ್ರದ ಸವಣೂರು ತಾಲ್ಲೂಕಿನ ತರಕಾರಿ ವ್ಯಾಪಾರಸ್ಥರು
ಮಡಿದವರು ಶಿಗ್ಗಾವಿ ಕ್ಷೇತ್ರದ ಸವಣೂರು ತಾಲ್ಲೂಕಿನ ತರಕಾರಿ ವ್ಯಾಪಾರಸ್ಥರು
ಬಾಗಲಕೋಟೆಯಲ್ಲಿ ಎದೆ ಝಲ್​ ಎನಿಸುವ ಟ್ಯ್ರಾಕ್ಟರ್​ ರೇಸ್​: ವಿಡಿಯೋ ನೋಡಿ
ಬಾಗಲಕೋಟೆಯಲ್ಲಿ ಎದೆ ಝಲ್​ ಎನಿಸುವ ಟ್ಯ್ರಾಕ್ಟರ್​ ರೇಸ್​: ವಿಡಿಯೋ ನೋಡಿ
ಬೇರೆ ಪಕ್ಷಗಳ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿಲ್ಲ: ಜಿಟಿ ದೇವೇಗೌಡ
ಬೇರೆ ಪಕ್ಷಗಳ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿಲ್ಲ: ಜಿಟಿ ದೇವೇಗೌಡ
ಶಿಲೆಸಿಕ್ಕ ಜಮೀನಲ್ಲಿ ಭವ್ಯ ರಾಮಮಂದಿರ ನಿರ್ಮಿಸಲು ಸ್ಥಳೀಯರ ಆಗ್ರಹ
ಶಿಲೆಸಿಕ್ಕ ಜಮೀನಲ್ಲಿ ಭವ್ಯ ರಾಮಮಂದಿರ ನಿರ್ಮಿಸಲು ಸ್ಥಳೀಯರ ಆಗ್ರಹ
ಮೇಲ್ಸೇತುವೆಯಲ್ಲಿ ಚಲಿಸುತ್ತಿದ್ದಾಗ ರೈಲಿನಿಂದ ಕೆಳಗೆ ಜಿಗಿದ ವ್ಯಕ್ತಿ
ಮೇಲ್ಸೇತುವೆಯಲ್ಲಿ ಚಲಿಸುತ್ತಿದ್ದಾಗ ರೈಲಿನಿಂದ ಕೆಳಗೆ ಜಿಗಿದ ವ್ಯಕ್ತಿ
ಮೈಕ್ರೋ ಫೈನಾನ್ಸ್​ಗಳ ಅಟ್ಟಹಾಸಕ್ಕೆ ಕಡಿವಾಣ ಹಾಕುತ್ತೇವೆ: ಪರಮೇಶ್ವರ್
ಮೈಕ್ರೋ ಫೈನಾನ್ಸ್​ಗಳ ಅಟ್ಟಹಾಸಕ್ಕೆ ಕಡಿವಾಣ ಹಾಕುತ್ತೇವೆ: ಪರಮೇಶ್ವರ್
ಕಳೆದ ತಿಂಗಳು ಕೂಡ ಆಚರಿಸಲಾಗಿತ್ತು ಕಲಬುರಗಿ ಬಂದ್
ಕಳೆದ ತಿಂಗಳು ಕೂಡ ಆಚರಿಸಲಾಗಿತ್ತು ಕಲಬುರಗಿ ಬಂದ್
ದೊಡ್ಮನೆಯಲ್ಲಿ ‘ಮಜಾ ಟಾಕೀಸ್’ ತಂಡದ ಎಂಟ್ರಿ; ಎಲ್ಲಾ ಜಾಲಿ ಜಾಲಿ
ದೊಡ್ಮನೆಯಲ್ಲಿ ‘ಮಜಾ ಟಾಕೀಸ್’ ತಂಡದ ಎಂಟ್ರಿ; ಎಲ್ಲಾ ಜಾಲಿ ಜಾಲಿ