Shubman Gill: ಗಿಲ್ ಶತಕ ಸಿಡಿಸಿದ ಸಂದರ್ಭ ಡಗೌಟ್ನಲ್ಲಿದ್ದ ವಿರಾಟ್ ಕೊಹ್ಲಿ ಏನು ಮಾಡಿದ್ರು ನೋಡಿ
Virat Kohli, IND vs AUS 4th Test: 235 ಎಸೆತಗಳಲ್ಲಿ ಎದುರಿಸಿದ ಗಿಲ್ 12 ಫೋರ್ ಹಾಗೂ 1 ಸಿಕ್ಸರ್ನೊಂದಿಗೆ 128 ರನ್ ಕಲೆಹಾಕಿದರು. ಒತ್ತಡದ ನಡುವೆ ತಂಡಕ್ಕೆ ನೆರವಾಗಿ ಸೆಂಚುರಿ ಸಿಡಿಸಿದಾಗ ವಿರಾಟ್ ಕೊಹ್ಲಿ ಏನು ಮಾಡಿದರು ನೋಡಿ.
ಅಹ್ಮದಾಬಾದ್ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ನಡುವಣ ನಾಲ್ಕನೇ ಟೆಸ್ಟ್ ಪಂದ್ಯ ಕುತೂಹಲ ಘಟ್ಟದತ್ತ ತಲುಪುತ್ತಿದೆ. ಮೊದಲ ಇನ್ನಿಂಗ್ಸ್ನಲ್ಲಿ ಕಾಂಗರೂ ಪಡೆ ನೀಡಿರುವ 480 ರನ್ಗಳ ಗುರಿ ಬೆನ್ನಟ್ಟಿರುವ ಟೀಮ್ ಇಂಡಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿದೆ. ಓಪನರ್ ಶುಭ್ಮನ್ ಗಿಲ್ (Shubman Gill) ಟೆಸ್ಟ್ ಕ್ರಿಕೆಟ್ನಲ್ಲಿ ಎರಡನೇ ಶತಕ ಸಿಡಿಸಿ ಸಂಭ್ರಮಿಸಿದರು. 235 ಎಸೆತಗಳಲ್ಲಿ ಎದುರಿಸಿದ ಗಿಲ್ 12 ಫೋರ್ ಹಾಗೂ 1 ಸಿಕ್ಸರ್ನೊಂದಿಗೆ 128 ರನ್ ಕಲೆಹಾಕಿದರು. ರೋಹಿತ್ ಶರ್ಮಾ, ಚೇತೇಶ್ವರ್ ಪೂಜಾರ ಹಾಗೂ ವಿರಾಟ್ ಕೊಹ್ಲಿ (Virat Kohli) ಜೊತೆ ಸೇರಿ ಅರ್ಧಶತಕದ ಜೊತೆಯಾಟ ಆಡಿದರು. ಒತ್ತಡದ ನಡುವೆ ತಂಡಕ್ಕೆ ನೆರವಾಗಿ ಸೆಂಚುರಿ ಸಿಡಿಸಿದಾಗ ವಿರಾಟ್ ಕೊಹ್ಲಿ ಏನು ಮಾಡಿದರು ನೋಡಿ.
ಬೊಂಬಾಟ್ ಫಾರ್ಮ್‌ನಲ್ಲಿದ್ದರೂ ಕೂಡ ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಬೆಂಚ್ ಕಾದಿದ್ದ ಶುಭ್ಮನ್ ಗಿಲ್, ಮೂರನೇ ಪಂದ್ಯದಲ್ಲಿ ಕೆ.ಎಲ್ ರಾಹುಲ್ ಬದಲು ಸ್ಥಾನ ಪಡೆದುಕೊಂಡರು. ಆದರೆ, ಇಲ್ಲಿ ಕ್ರಮವಾಗಿ 21 ಹಾಗೂ 5 ರನ್ ಗಳಿಸಿ ನಿರಾಸೆ ಮೂಡಿಸಿದ್ದರು. ಆದರೆ, ಇದೀಗ ನಾಲ್ಕನೇ ಟೆಸ್ಟ್ನಲ್ಲಿ ಶತಕ ಸಿಡಿಸಿ ಪುನಃ ಫಾರ್ಮ್ಗೆ ಮರಳಿದ್ದಾರೆ. 194 ಎಸೆತಗಳಲ್ಲಿ 10 ಬೌಂಡರಿ ಹಾಗೂ ಒಂದು ಸಿಕ್ಸರ್ ಮೂಲಕ ಗಿಲ್ ತಮ್ಮ ಶತಕ ಪೂರೈಸಿದರು. ಇತ್ತ ಗಿಲ್ ಫೋರ್ ಬಾರಿಸಿ ಶತಕ ಸಿಡಿಸಿ ಹೆಲ್ಮೆಟ್ ತೆಗೆದು ಬ್ಯಾಟ್ ಎತ್ತಿದ ತಕ್ಷಣ ಅತ್ತ ಡಗೌಟ್ನಲ್ಲಿ ಪ್ಯಾಡ್ ಕಟ್ಟಿ ಕೂತಿದ್ದ ಕೊಹ್ಲಿ ಎದ್ದು ನಿಂತು ನಗುತ್ತಾ ಚಪ್ಪಾಳೆ ತಟ್ಟಿ ವಿಶೇಷವಾಗಿ ಸಂಭ್ರಮಿಸಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
GG vs DC, WPL 2023: ಶಫಾಲಿ ಸಿಡಿಲಬ್ಬರ: ಡೆಲ್ಲಿ ಕ್ಯಾಪಿಟಲ್ಸ್ಗೆ ಭರ್ಜರಿ ಜಯ
— cricket fan (@cricketfanvideo) March 11, 2023
ಅಹಮದಾಬಾದ್‌ನ ಈ ಮೈದಾನದಲ್ಲಿ 39 ದಿನಗಳಲ್ಲಿ ಇದು ಗಿಲ್ ಅವರ ಎರಡನೇ ಶತಕವಾಗಿದೆ. ಕಳೆದ ತಿಂಗಳು ಇದೇ ಮೈದಾನದಲ್ಲಿ ನ್ಯೂಜಿಲೆಂಡ್ ವಿರುದ್ಧದ ಟಿ20ಯಲ್ಲಿ ಗಿಲ್ ಶತಕ ಸಿಡಿಸಿದ್ದರು. ಗಿಲ್ ಕೇವಲ ಮೂರೇ ತಿಂಗಳಲ್ಲಿ 5 ಶತಕ ಸಿಡಿಸುವ ಮೂಲಕ ಗಮನ ಸೆಳೆದಿದ್ದಾರೆ. ಅಲ್ಲದೆ ಏಕೈಕ ವರ್ಷದಲ್ಲಿ ಎಲ್ಲ ಸ್ವರೂಪದಲ್ಲೂ ಶತಕ ಸಿಡಿಸಿದ ಭಾರತದ ನಾಲ್ಕನೇ ಹಾಗೂ ವಿಶ್ವದ 10ನೇ ಬ್ಯಾಟ್ಸ್‌ಮನ್ ಎಂಬ ವಿಶೇಷ ದಾಖಲೆಗೆ ಗಿಲ್ ಭಾಜನರಾಗಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಕಳೆದ ಏಕದಿನ ಸರಣಿಯಲ್ಲಿ ದ್ವಿಶತಕ (208) ಸಿಡಿಸಿದ್ದ ಗಿಲ್, ಟಿ20 ಸರಣಿಯಲ್ಲಿ ಇದೇ ತಂಡದ ವಿರುದ್ಧ 126 ರನ್ ಚಚ್ಚಿದ್ದರು. ಆಸ್ಟ್ರೇಲಿಯಾ ವಿರುದ್ಧ ಸದ್ಯ ಜರುಗುತ್ತಿರುವ 4ನೇ ಟೆಸ್ಟ್ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಸಂಯೋಜಿಸಿ 128 ರನ್ ಬಾರಿಸುವ ಮೂಲಕ ಒಂದೇ ವರ್ಷದಲ್ಲಿ ಎಲ್ಲ ಸ್ವರೂಪದಲ್ಲಿ ಶತಕ ಗಳಿಸಿ ಮಿಂಚಿದ್ದಾರೆ.
ಉತ್ತಮ ಮೊತ್ತದತ್ತ ಭಾರತ:
ಎರಡನೇ ದಿನದಾಟದ ಅಂತ್ಯಕ್ಕೆ ಭಾರತ ವಿಕೆಟ್ ನಷ್ಟವಿಲ್ಲದೆ 36 ರನ್ ಗಳಿಸಿತ್ತು. ಮೂರನೇ ದಿನ ಬ್ಯಾಟಿಂಗ್ ಆರಂಭಿಸಿದ ರೋಹಿತ್-ಗಿಲ್ 74 ರನ್ಗಳ ಜೊತೆಯಾಟ ಆಡಿದರು. ಹಿಟ್ಮ್ಯಾನ್ 35 ರನ್ ಗಳಿಸಿ ಔಟಾದರು. ರೋಹಿತ್ ವಿಕೆಟ್ ನಂತರ ಬಂದ ಚೇತೇಶ್ವರ ಪೂಜಾರ ಗಿಲ್ ಜೊತೆ ಸೇರಿ ಅದ್ಭುತ ರನ್ ಕಲೆಹಾಕಿದರು. ಇವರ ಕಡೆಯಿಂದ 113 ರನ್ಗಳ ಜೊತೆಯಾಟ ಮೂಡಿಬಂತು. ಪೂಜಾರ 42 ರನ್ ಕಲೆಹಾಕಿದರು. ನಂತರ ಕೊಹ್ಲಿ ಹಾಗೂ ಗಿಲ್ ಕಡೆಯಿಂದಲೂ ಉತ್ತಮ ಆಟ ಮೂಡಿಬಂತು. ಶುಭ್ಮನ್ ಟೆಸ್ಟ್ ಕ್ರಿಕೆಟ್ನಲ್ಲಿ ಎರಡನೇ ಶತಕ ಸಿಡಿಸಿ ಔಟಾದರು. ಗಿಲ್ ನಂತರ ಬಡ್ತಿ ಪಡೆದು ರವೀಂದ್ರ ಜಡೇಜಾ ವಿರಾಟ್ ಕೊಹ್ಲಿ ಜೊತೆಗೂಡಿ ಇನ್ನಿಂಗ್ಸ್ ಕಟ್ಟಲು ಹೊರಟರು. ಮೂರನೇ ದಿನದಾಟದ ಅಂತ್ಯಕ್ಕೆ ಭಾರತ 3 ವಿಕೆಟ್ ನಷ್ಟಕ್ಕೆ 289 ರನ್ ಗಳಿಸಿತ್ತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ