ವಿರಾಟ್ ಕೊಹ್ಲಿ ಕೋಡಂಗಿ… ಅವನ ಅಭಿಮಾನಿಗಳು ಅದಕ್ಕಿಂತ ದೊಡ್ಡ ಕೋಡಂಗಿಗಳು!

Virat Kohli vs Rahul Vaidya: ರಾಹುಲ್ ವೈದ್ಯ ಬಾಲಿವುಡ್​ನ ಯಶಸ್ವಿ ಹಿನ್ನೆಲೆ ಗಾಯಕ. ಹಾಗೆಯೇ ಟಿವಿ ರಿಯಾಲಿಟಿ ಶೋನಲ್ಲೂ ಕಾಣಿಸಿಕೊಂಡಿದ್ದರು. ಹಿಂದಿಯ ಬಿಗ್ ಬಾಸ್ 14 ಮತ್ತು ಖತ್ರೋಂ ಕೆ ಖಿಲಾಡಿ 11 ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಮೂಲಕ ಅವರು ಮನರಂಜನಾ ಉದ್ಯಮದಲ್ಲಿ ಛಾಪು ಮೂಡಿಸಿದ್ದರು. ಇದೀಗ ವಿರಾಟ್ ಕೊಹ್ಲಿಯನ್ನು ಟೀಕಿಸುವ ಮೂಲಕ ಸುದ್ದಿಯಾಗಿದ್ದಾರೆ.

ವಿರಾಟ್ ಕೊಹ್ಲಿ ಕೋಡಂಗಿ... ಅವನ ಅಭಿಮಾನಿಗಳು ಅದಕ್ಕಿಂತ ದೊಡ್ಡ ಕೋಡಂಗಿಗಳು!
Virat Kohli - Rahul Vaidya

Updated on: May 07, 2025 | 7:54 AM

ವಿರಾಟ್ ಕೊಹ್ಲಿ ಕೋಡಂಗಿ… ಅವನ ಅಭಿಮಾನಿಗಳು ಅದಕ್ಕಿಂತ ದೊಡ್ಡ ಕೋಡಂಗಿಗಳು… ಹೀಗೆ ಅಂದಿದ್ದು ಮತ್ಯಾರೂ ಅಲ್ಲ, ಬಾಲಿವುಡ್ ಗಾಯಕ ರಾಹುಲ್ ವೈದ್ಯ (Rahul Vaidya). ಇತ್ತೀಚೆಗಷ್ಟೇ ವಿರಾಟ್ ಕೊಹ್ಲಿ (Virat Kohli) ಬಾಲಿವುಡ್ ನಟಿ ಅವನೀತ್ ಕೌರ್ ಅವರ ಬೋಲ್ಡ್​ ಫೋಟೋವೊಂದಕ್ಕೆ ಲೈಕ್ ಮಾಡಿ ಸುದ್ದಿಯಾಗಿದ್ದರು. ಈ ಲೈಕ್​ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದಂತೆ, ಆ ಬಗ್ಗೆ ಕೊಹ್ಲಿ ಸ್ಪಷ್ಟನೆಯನ್ನೂ ಸಹ ನೀಡಿದ್ದರು.

ನನ್ನ ಫೀಡ್ ಅನ್ನು ತೆರವುಗೊಳಿಸುವಾಗ, ಅಲ್ಗಾರಿದಮ್ ತಪ್ಪಿನಿಂದಾಗಿ ಅವನೀತ್ ಕೌರ್ ಅವರ ಫೋಟೋಗೆ ಲೈಕ್ ಒತ್ತಿರಬಹುದು. ಇದರ ಹಿಂದೆ ಯಾವುದೇ ಉದ್ದೇಶವಿರಲಿಲ್ಲ. ಯಾವುದೇ ಅನಗತ್ಯ ಊಹೆಗಳನ್ನು ಮಾಡದಂತೆ ನಾನು ವಿನಂತಿಸುತ್ತೇನೆ ಎಂದು ವಿರಾಟ್ ಕೊಹ್ಲಿ ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದರು.

ಇದನ್ನೂ ಓದಿ
ಬೋಲ್ಡ್ ಫೋಟೋಗೆ ಬೌಲ್ಡ್ ಆಗಿ ಸ್ಪಷ್ಟನೆ ನೀಡಿದ ವಿರಾಟ್ ಕೊಹ್ಲಿ
IPL 2025: ಪ್ಲೇಆಫ್​ ಆಡಲಿರುವ 4 ತಂಡಗಳನ್ನು ಹೆಸರಿಸಿದ ಅಂಬಾಟಿ ರಾಯುಡು
IPL 2025: ಕರುಣ್ ನಾಯರ್ ಡಕೌಟ್: ಈ ಬಾರಿ ಮುಂಬೈ ಇಂಡಿಯನ್ಸ್ ಚಾಂಪಿಯನ್ಸ್?
IPL ನಲ್ಲಿ ಬದಲಾವಣೆ: ರೌಂಡ್ ರಾಬಿನ್ ಸ್ವರೂಪ, ಒಂದು ತಂಡಕ್ಕೆ 18 ಪಂದ್ಯ

ಹೀಗೆ ಬೋಲ್ಡ್ ಫೋಟೋಗೆ ಲೈಕ್ ಒತ್ತಿ ಇನ್​ಸ್ಟಾಗ್ರಾಮ್ ಅಲ್ಗಾರಿದಮ್​ ಅನ್ನು ದೂಷಿಸಿದ ವಿರಾಟ್ ಕೊಹ್ಲಿಯ ನಡೆಯನ್ನು ಗಾಯಕ ರಾಹುಲ್ ವೈದ್ಯ ಸೋಷಿಯಲ್ ಮೀಡಿಯಾದಲ್ಲಿ ವಿಮರ್ಶಿಸಿದ್ದರು.

ಇದಾದ ಬಳಿಕ ವಿರಾಟ್ ಕೊಹ್ಲಿ ನನ್ನನ್ನು ಇನ್​ಸ್ಟಾಗ್ರಾಮ್​ನಲ್ಲಿ ಬ್ಲಾಕ್ ಮಾಡಿದ್ದಾರೆ. ಅದು ಕೂಡ ಇನ್‌ಸ್ಟಾಗ್ರಾಮ್‌ನಲ್ಲಿನ ಪ್ರಾಬ್ಲಮ್ ಎಂದು ನಾನು ಭಾವಿಸುತ್ತೇನೆ ಎಂದು ರಾಹುಲ್ ವೈದ್ಯ ವ್ಯಂಗ್ಯವಾಡಿದ್ದರು.

ವಿರಾಟ್ ಕೊಹ್ಲಿ ನನ್ನನ್ನು ಬ್ಲಾಕ್ ಮಾಡಿರಲ್ಲ. ಬದಲಾಗಿ ಇನ್​ಸ್ಟಾಗ್ರಾಮ್​ನ ಅಲ್ಗಾರಿದಮ್ ಕೊಹ್ಲಿಗೆ ಹೇಳಿರುತ್ತದೆ, ನಿನ್ನ ಪರವಾಗಿ ನಾನು ರಾಹುಲ್ ವೈದ್ಯನನ್ನು ಬ್ಲಾಕ್ ಮಾಡುತ್ತೇನೆ ಎಂದು. ಹೀಗಾಗಿ ಕೊಹ್ಲಿಯ ಖಾತೆ ನನ್ನನ್ನು ಬ್ಲಾಕ್ ಮಾಡಿರಬಹುದು ಎಂದು ರಾಹುಲ್ ವೈದ್ಯ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಿದ್ದರು.

ರಾಹುಲ್ ವೈದ್ಯನ ಈ ಪೋಸ್ಟ್​ಗಳ ಬೆನ್ನಲ್ಲೇ ಅವರ ವಿರುದ್ಧ ವಿರಾಟ್ ಕೊಹ್ಲಿ ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಅವರನ್ನು ಹಾಗೂ ಅವರ ಕುಟುಂಬಸ್ಥರನ್ನು ನಿಂದಿಸುತ್ತಾ ನಾನಾ ಕಾಮೆಂಟ್​ಗಳನ್ನು ಹಾಕುತ್ತಿದ್ದಾರೆ.

ಈ ಬಗ್ಗೆ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಹಂಚಿಕೊಂಡಿರುವ ರಾಹುಲ್ ವೈದ್ಯ,  ವಿರಾಟ್ ಕೊಹ್ಲಿಯ ಅಭಿಮಾನಿಗಳು ತಮ್ಮ ಪತ್ನಿ ದಿಶಾ ಪರ್ಮಾರ್ ಮತ್ತು ಸಹೋದರಿಯನ್ನು ನಿಂದಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಈಗ ನೀವು ನನ್ನನ್ನು ನಿಂದಿಸುತ್ತಿದ್ದೀರಿ ಅದು ಸರಿ. ಆದರೆ ನೀವು ನನ್ನ ಹೆಂಡತಿಯನ್ನು ಹಾಗೂ ಸಹೋದರಿಯನ್ನು ನಿಂದಿಸುತ್ತಿದ್ದೀರಿ.. ಅವರಿಗೆ ಇದಕ್ಕೂ ಯಾವುದೇ ಸಂಬಂಧವಿಲ್ಲ! ಹಾಗಾಗಿ ನಾನು ಹೇಳಿದ್ದು ಸರಿ. ವಿರಾಟ್ ಕೊಹ್ಲಿಯ ಅಭಿಮಾನಿಗಳು ವಿರಾಟ್‌ಗಿಂತ ದೊಡ್ಡ ಜೋಕರ್‌ಗಳು! ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಗಾಯಕ ರಾಹುಲ್ ವೈದ್ಯ ಇನ್​ಸ್ಟಾಗ್ರಾಮ್ ಪೋಸ್ಟ್:

ಒಟ್ಟಿನಲ್ಲಿ ವಿರಾಟ್ ಕೊಹ್ಲಿಯ ಒಂದು ಲೈಕ್ ಬಗ್ಗೆ ವ್ಯಂಗ್ಯವಾಡಿ ಇದೀಗ ರಾಹುಲ್ ವೈದ್ಯ ಕಿಂಗ್ ಕೊಹ್ಲಿಯ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದರ ನಡುವೆ ಕೊಹ್ಲಿ ಹಾಗೂ ಅವರ ಅಭಿಮಾನಿಗಳನ್ನು ಕೋಡಂಗಿ ಎನ್ನುವ ಮೂಲಕ ಉರಿಯೋ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಿದ್ದಾರೆ.

 

 

Published On - 7:54 am, Wed, 7 May 25