6 ಐಸಿಸಿ ನಾಕೌಟ್ ಪಂದ್ಯ, 5 ಅರ್ಧಶತಕ, 390 ರನ್..! ಕಿಂಗ್ ಕೊಹ್ಲಿಗೆ ಸರಿಸಾಟಿ ಯಾರು?
Virat Kohli's Masterclass: ವಿರಾಟ್ ಕೊಹ್ಲಿ ಅವರು ಆಸ್ಟ್ರೇಲಿಯಾ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್‌ನಲ್ಲಿ ಅದ್ಭುತವಾದ 84 ರನ್‌ಗಳ ಇನ್ನಿಂಗ್ಸ್ ಆಡಿದರು. ಇದು ಅವರ 73ನೇ ಅರ್ಧಶತಕ ಮತ್ತು ರನ್ ಚೇಸ್‌ನಲ್ಲಿ 41ನೇ ಅರ್ಧಶತಕ. ಕಳೆದ 6 ಐಸಿಸಿ ನಾಕೌಟ್ ಪಂದ್ಯಗಳಲ್ಲಿ 390 ರನ್ ಗಳಿಸಿ ಅವರು ನಿರ್ಣಾಯಕ ಪಂದ್ಯಗಳಲ್ಲಿ ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ

ಮತ್ತೊಂದು ದೊಡ್ಡ ಪಂದ್ಯ, ವಿರಾಟ್ ಕೊಹ್ಲಿ ಬ್ಯಾಟ್‌ನಿಂದ ಮತ್ತೊಂದು ದೊಡ್ಡ ಇನ್ನಿಂಗ್ಸ್. ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಬಾರಿಸದಿದ್ದರೂ, ಅವರ ಈ ಇನ್ನಿಂಗ್ಸ್ ಯಾವ ಶತಕಕ್ಕೂ ಕಡಿಮೆ ಇರಲಿಲ್ಲ. ಅದರಲ್ಲೂ ಐಸಿಸಿ ಟೂರ್ನಿಗಳೆಂದರೆ ವಿಭಿನ್ನವಾದ ತಂತ್ರಗಳೊಂದಿಗೆ ಕಣಕ್ಕಿಳಿಯುವ ಆಸ್ಟ್ರೇಲಿಯಾವನ್ನು ಎದುರಿಸುವುದು ಅಷ್ಟು ಸುಲಭದ ಮಾತಲ್ಲ. ಇದಕ್ಕೆ ಉದಾಹರಣೆಯಾಗಿ 2023 ರ ಏಕದಿನ ವಿಶ್ವಕಪ್ ನಮ್ಮ ಕಣ್ಣ ಮುಂದಿದೆ. ಇದೀಗ ನಡೆದ 2025 ರ ಚಾಂಪಿಯನ್ಸ್ ಟ್ರೋಫಿಯಲ್ಲೂ ಆಸ್ಟ್ರೇಲಿಯಾದ ಸ್ವಭಾವ ಇದೇ ರೀತಿಯದ್ದಾಗಿತ್ತು. ಆದರೆ ಈ ಬಾರಿ ವಿರಾಟ್ ಆಸೀಸ್ ಗೆಲುವಿನ ಹಾದಿಗೆ ಅಡ್ಡ ಗೋಡೆಯಾಗಿ ನಿಂತು ಕಾಂಗರೂಗಳ ಗರ್ವಹರಣ ಮಾಡಿದರು.
84 ರನ್ ಚಚ್ಚಿದ ಕೊಹ್ಲಿ
ಆಸ್ಟ್ರೇಲಿಯಾ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಬಿಗ್ ಇನ್ನಿಂಗ್ಸ್ ಆಡುವ ಮೂಲಕ ವಿರಾಟ್ ಕೊಹ್ಲಿ, ಐಸಿಸಿ ನಾಕೌಟ್ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಪ್ರವೃತ್ತಿಯನ್ನು ಇಲ್ಲಿಯೂ ಮುಂದುವರೆಸಿದರು. ನಿರ್ಣಾಯಕ ಪಂದ್ಯದಲ್ಲಿ ಕೊಹ್ಲಿ 84 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಇದು ಏಕದಿನ ಕ್ರಿಕೆಟ್‌ನಲ್ಲಿ ಅವರ 73 ನೇ ಅರ್ಧಶತಕವಾಗಿದೆ. ರನ್ ಚೇಸಿಂಗ್‌ನಲ್ಲಿ ವಿರಾಟ್ ಕೊಹ್ಲಿ ಬ್ಯಾಟ್‌ನಿಂದ ಇದು 41 ನೇ ಅರ್ಧಶತಕವಾಗಿದೆ. ಅಲ್ಲದೆ ಆಸ್ಟ್ರೇಲಿಯಾ ವಿರುದ್ಧದ ರನ್ ಚೇಸ್‌ನಲ್ಲಿ ಇದು ಅವರ 7ನೇ ಅರ್ಧಶತಕವಾಗಿದೆ.
For his 84(98) and guiding #TeamIndia in the chase, Virat Kohli is the Player of the Match 👏 👏
Scorecard ▶️ https://t.co/HYAJl7biEo#INDvAUS | #ChampionsTrophy | @imVkohli pic.twitter.com/Xt2GAKVIPs
— BCCI (@BCCI) March 4, 2025
6 ನಾಕೌಟ್ ಪಂದ್ಯಗಳಲ್ಲಿ 390 ರನ್
ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ವಿರಾಟ್ ಗಳಿಸಿದ 84 ರನ್‌ಗಳು ಕಳೆದ 6 ಐಸಿಸಿ ನಾಕೌಟ್ ಪಂದ್ಯಗಳಲ್ಲಿ ಅವರ ಬ್ಯಾಟ್‌ನಿಂದ ಬಂದ 5ನೇ ಅರ್ಧಶತಕವಾಗಿದೆ. ಕಳೆದ 6 ಐಸಿಸಿ ನಾಕೌಟ್ ಪಂದ್ಯಗಳಲ್ಲಿ ವಿರಾಟ್ ಕ್ರಮವಾಗಿ 51*, 76, 9, 54, 117 ಮತ್ತು 50 ರನ್ ಗಳಿಸಿದ್ದಾರೆ. ಅಂದರೆ ಅವರು ಆಡಿದ 6 ನಾಕೌಟ್ ಪಂದ್ಯಗಳಲ್ಲಿ ಸುಮಾರು 72 ಸರಾಸರಿಯಲ್ಲಿ 390 ರನ್ ಗಳಿಸಿದ್ದಾರೆ. ನಿರ್ಣಾಯಕ ಪಂದ್ಯಗಳಲ್ಲಿ ಅವರು ಎಷ್ಟು ಉತ್ತಮ ಆಟಗಾರ ಎಂಬುದನ್ನು ಮತ್ತೊಮ್ಮೆ ಸಾಭೀತುಪಡಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ