Harshal Patel: ಪಟಿದಾರ್ ಅಲ್ಲ: ಆರ್​ಸಿಬಿಯ ಈ ಆಟಗಾರನಿಗೆ 15 ಕೋಟಿ ಕೊಡಬೇಕು ಎಂದ ಸೆಹ್ವಾಗ್

| Updated By: Vinay Bhat

Updated on: May 27, 2022 | 1:50 PM

RR vs RCB, Qualifier 2: ಹರ್ಷಲ್ ಪಟೇಲ್ ಹಲವು ಪಂದ್ಯಗಳಲ್ಲಿ ತಂಡಕ್ಕೆ ಸೋಲನ್ನು ತಪ್ಪಿಸಿದ್ದಾರೆ. 10.75 ಕೋಟಿ ರೂ. ಕೂಡ ಅವರಿಗೆ ಕಡಿಮೆ. ಅವರಿಗೆ ಕನಿಷ್ಠ 14-15 ಕೋಟಿ ರೂ. ಸಂಭಾವನೆ ಸಿಗಬೇಕಿತ್ತು ಎಂದು ವಿಮರೇಂದ್ರ ಸೆಹ್ವಾಗ್‌ ಹೇಳಿದ್ದಾರೆ.

Harshal Patel: ಪಟಿದಾರ್ ಅಲ್ಲ: ಆರ್​ಸಿಬಿಯ ಈ ಆಟಗಾರನಿಗೆ 15 ಕೋಟಿ ಕೊಡಬೇಕು ಎಂದ ಸೆಹ್ವಾಗ್
RCB and Virender Sehwag
Follow us on

ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಇಂದು ಮತ್ತೊಂದು ಅಗ್ನಿ ಪರೀಕ್ಷೆಗೆ ಇಳಿಯುತ್ತಿದೆ. ಅಹ್ಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್ ಮೈದಾನ ಕ್ವಾಲಿಫೈಯರ್-2 (Qualifier 2) ಕದನಕ್ಕೆ ಸಾಕ್ಷಿಯಾಗಲಿದೆ. ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ಹಾಗೂ ಫಾಫ್ ಡುಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RR vs RCB) ತಂಡ ಮುಖಾಮುಖಿ ಆಗಲಿದೆ. ಇಲ್ಲಿ ಗೆದ್ದ ತಂಡ ಫೈನಲ್​ಗೆ ಪ್ರವೇಶ ಪಡೆಯಲಿದ್ದು ಗುಜರಾತ್ ಟೈಟಾನ್ಸ್ ತಂಡದ ವಿರುದ್ಧ ಪ್ರಶಸ್ತಿಗಾಗಿ ಹೋರಾಟ ನಡೆಸಲಿದೆ. ಇದುವರೆಗೆ ಒಂದು ಬಾರಿಯೂ ಕಪ್ ಗೆಲ್ಲದ ಆರ್​ಸಿಬಿ ಮೇಲೆ ಬೆಟ್ಟದಷ್ಟು ನಿರೀಕ್ಷೆಯಿದೆ. ಲಖನೌ ಸೂಪರ್ ಜೇಂಟ್ಸ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಆರ್​ಸಿಬಿ 14 ರನ್​ಗಳಿಂದ ಗೆದ್ದು ಎಲಿಮಿನೇಟರ್-2 ಗೆ ಪ್ರವೇಶ ಪಡೆದಿತ್ತು. ಇಲ್ಲಿ ಲಖನೌ ಗೆಲುವಿನ ಸನಿಹದಲ್ಲಿತ್ತು. ಆದರೆ, ಎದುರಾಳಿ ಹೆಚ್ಚು ರನ್ ಗಳಿಸದಂತೆ ಕಡಿವಾಣ ಹಾಕಿದ್ದು ಹರ್ಷಲ್ ಪಟೇಲ್ (Harshal Patel).

ಲಖನೌ ವಿರುದ್ಧ ಹರ್ಷಲ್ ಪಟೇಲ್ 18ನೇ ಓವರ್‌ನ ಮೊದಲ ಎಸೆತದಲ್ಲಿ ವೈಡ್ ಮಾಡಿದರು, ನಂತರದಲ್ಲಿ ವೈಡ್ ಪ್ಲಸ್ ಐದು ರನ್‌ ನೀಡಿದರು. ಇದರೊಂದಿಗೆ ಲಖನೌ ಗೆಲುವಿಗೆ 18 ಎಸೆತಗಳಲ್ಲಿ 35 ಬೇಕಾಯಿತು. ಕ್ರೀಸ್‌ನಲ್ಲಿ ಮಾರ್ಕಸ್ ಸ್ಟೋಯ್ನಿಸ್ ಮತ್ತು ಲಕ್ನೋ ನಾಯಕ ಕೆಎಲ್ ರಾಹುಲ್ ಇದ್ದರು.  ಅಂತಹ ಬೃಹತ್ ಹಿಟ್ಟರ್‌ಗಳೊಂದಿಗೆ ಈ ಟಾರ್ಗೆಟ್ ದೊಡ್ಡ ವಿಷಯವಾಗಿರಲಿಲ್ಲ. ಆದರೆ ಹರ್ಷಲ್ ಪಟೇಲ್ ಮ್ಯಾಜಿಕ್ ಮಾಡಿದರು. ಮೂರನೇ ಎಸೆತದಲ್ಲಿ ಮಾರ್ಕಸ್ ಅರ್ಧ ಭಾಗದಲ್ಲಿ ಸಿಕ್ಸರ್ ಹೊಡೆಯಲು ಪ್ರಯತ್ನಿಸಿದರು. ಆದರೆ ರಜತ್ ಪಾಟಿದಾರ್ ಬೌಂಡರಿಯಲ್ಲಿ ಅದ್ಭುತ ಕ್ಯಾಚ್ ಹಿಡಿದ ನಂತರ ಸ್ಟೊಯ್ನಿಸ್ ಪೆವಿಲಿಯನ್ ಸೇರಿದರು. ನಂತರ ಅವರು 3 ಎಸೆತಗಳಲ್ಲಿ ಕೇವಲ ಎರಡು ರನ್ ನೀಡಿದರು.

Women’s T20 Challenge: ಮಹಿಳೆಯರ ಟಿ20 ಚಾಲೆಂಜ್: ಪಂದ್ಯ ಸೋತರೂ ಫೈನಲ್​ಗೆ ಲಗ್ಗೆಯಿಟ್ಟ ವೆಲಾಸಿಟಿ

ಇದನ್ನೂ ಓದಿ
Jos Buttler: ಶಾಕಿಂಗ್: ಜೋಸ್ ಬಟ್ಲರ್ ನನ್ನ ಎರಡನೇ ಗಂಡ ಎಂದ ಸ್ಟಾರ್ ಆಟಗಾರನ ಪತ್ನಿ
RR vs RCB: ಕ್ವಾಲಿಫೈಯರ್-2 ಮುನ್ನ ಆರ್​ಸಿಬಿ ತಂಡದಲ್ಲಾಗುತ್ತಾ ಮೂರು ಮೇಜರ್ ಸರ್ಜರಿ
RR vs RCB: ಇಂದು ಆರ್​ಸಿಬಿ ಗೆದ್ದರೆ ಫೈನಲ್​ಗೆ ಎಂಟ್ರಿ: ಫಾಫ್ ಪಡೆಯ ಮೇಲೆ ಬೆಟ್ಟದಷ್ಟು ನಿರೀಕ್ಷೆ
RR vs RCB Predicted Playing XI: ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ XI

ನಾಲ್ಕು-ಓವರ್‌ಗಳ ಕೋಟಾದಲ್ಲಿ 1/25 ಪ್ರದರ್ಶನದೊಂದಿಗೆ ಮಿಂಚಿದರು. ಎಲಿಮಿನೇಟರ್‌ನಲ್ಲಿ ಹರ್ಷಲ್ ಪಟೇಲ್ ಅವರ ಅತ್ಯುತ್ತಮ ಪ್ರದರ್ಶನದ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಸಂತಸ ವ್ಯಕ್ತಪಡಿಸಿದ್ದಾರೆ. ಅವರ ರೇಂಜ್ 10 ಕೋಟಿ ಅಲ್ಲ, 14-15 ಕೋಟಿ ರೂ. ಎಂದಿದ್ದಾರೆ.

“ಸಿಕ್ಕ 10 ಕೋಟಿ ರೂ. ಗಳ ಭಾರಿ ಬೆಲೆಗೆ ನ್ಯಾಯ ಒದಗಿಸಿರುವ ರಾಹುಲ್‌ ತೆವಾಟಿಯಾ ಗುಜರಾತ್‌ ಟೈಟನ್ಸ್‌ ತಂಡಕ್ಕೆ ಪಂದ್ಯಗಳನ್ನು ಗೆದ್ದು ಕೊಟ್ಟಿದ್ದಾರೆ ಎಂದು ನಾವು ಮಾತನಾಡುತ್ತೇವೆ. ಆದರೆ, ಹರ್ಷಲ್‌ ಪಟೇಲ್‌ ಅವರಿಗೆ ಸಿಕ್ಕಿರುವ ಬೆಲೆ ಕಡಿಮೆ. ಏಕೆಂದರೆ ಬೆಂಗಳೂರು ತಂಡದ ಪರ ಅವರು ಅದ್ಭುತವಾಗಿ ಬೌಲಿಂಗ್‌ ಮಾಡಿದ್ದಾರೆ. ಹಲವು ಪಂದ್ಯಗಳಲ್ಲಿ ತಂಡಕ್ಕೆ ಸೋಲನ್ನು ತಪ್ಪಿಸಿದ್ದಾರೆ. 10.75 ಕೋಟಿ ರೂ. ಕೂಡ ಅವರಿಗೆ ಕಡಿಮೆ. ಅವರಿಗೆ ಕನಿಷ್ಠ 14-15 ಕೋಟಿ ರೂ. ಸಂಭಾವನೆ ಸಿಗಬೇಕಿತ್ತು,” ಎಂದು ಕ್ರಿಕ್‌ಬಝ್‌ ಕಾರ್ಯಕ್ರಮದಲ್ಲಿ ಸೆಹ್ವಾಗ್‌ ಹೇಳಿದ್ದಾರೆ.

“ಹರ್ಷಲ್‌ ಹೆಚ್ಚು ಸ್ಲಾಗ್‌ ಓವರ್‌ಗಳನ್ನು ಎಸೆಯುತ್ತಿದ್ದಾರೆ. ಅಲ್ಲಿ ವಿಕೆಟ್‌ಗಳನ್ನು ಕೂಡ ಪಡೆದ ತಂಡಕ್ಕೆ ಪಂದ್ಯಗಳನ್ನು ಗೆದ್ದು ಕೊಡುತ್ತಿದ್ದಾರೆ. ಪಂದ್ಯದ ಆರಂಭದಲ್ಲಿಯೂ ಕೂಡ ಬೌಲಿಂಗ್ ಮಾಡುವ ಮೂಲಕ ಖಂಡಿತವಾಗಿಯೂ ರನ್ ಅನ್ನು ತಡೆಯುತ್ತಾರೆ. ಹೀಗಾಗಿ ಈತ ಆರ್‌ಸಿಬಿಗೆ ನಿಜಕ್ಕೂ ಬೋನಸ್,” ಎಂದು ಸೆಹ್ವಾಗ್‌ ಅಭಿಪ್ರಾಯ ಪಟ್ಟಿದ್ದಾರೆ.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 1:43 pm, Fri, 27 May 22