Jos Buttler: ಶಾಕಿಂಗ್: ಜೋಸ್ ಬಟ್ಲರ್ ನನ್ನ ಎರಡನೇ ಗಂಡ ಎಂದ ಸ್ಟಾರ್ ಆಟಗಾರನ ಪತ್ನಿ

TV9 Digital Desk

| Edited By: Vinay Bhat

Updated on: May 27, 2022 | 10:43 AM

RR vs RCB Qualifier 2: ಜೋಸ್ ಬಟ್ಲರ್ ಪ್ರತಿ ಬಾರಿ ಬೌಂಡರಿ ಬಾರಿಸುತ್ತಿದ್ದಂತೆ ಕ್ಯಾಮೆರಾ ಪ್ರೇಕ್ಷಕ ಗ್ಯಾಲರಿ ಕಡೆ ಹೋಗುತ್ತಿತ್ತು. ಇಲ್ಲಿ ಯುಜ್ವೇಂದ್ರ ಚಹಲ್ ಪತ್ನಿ ಧನಶ್ರೀ ಜೊತೆ ಕೂತಿದ್ದ ವಿದೇಶಿ ಮಹಿಳೆ ಸಂಭ್ರಮಾಚರಣೆ ಮಾಡುತ್ತಿರುವುದು ಕಾಣಿಸುತ್ತಿತ್ತು. ಇವರನ್ನು ಎಲ್ಲರೂ ಬಟ್ಲರ್ ಪತ್ನಿ ಎಂದೇ ನಂಬಿದ್ದಾರೆ.

Jos Buttler: ಶಾಕಿಂಗ್: ಜೋಸ್ ಬಟ್ಲರ್ ನನ್ನ ಎರಡನೇ ಗಂಡ ಎಂದ ಸ್ಟಾರ್ ಆಟಗಾರನ ಪತ್ನಿ
Lara and Jos Buttler IPL 2022

ಸದ್ಯ ಸಾಗುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಆವೃತ್ತಿಯಲ್ಲಿ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡ ಬೊಂಬಾಟ್ ಪ್ರದರ್ಶನ ತೋರಿ ಕ್ವಾಲಿಫೈಯರ್​-2 ಆಡಲು ಸಜ್ಜಾಗುತ್ತಿದೆ. ಮೊದಲ ಕ್ವಾಲಿಫೈಯರ್​ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಸೋಲು ಕಂಡ ಪರಿಣಾಮ ಇದೀಗ ಎರಡನೇ ಕ್ವಾಲಿಫೈಯರ್​ನಲ್ಲಿ ಇಂದು ರಾಯಲ್ ಚಾಲೆಂಜರ್ಸ್​ ಬೆಂಗಳೂರು (RR vs RCB) ತಂಡವನ್ನು ಎದುರಿಸಲಿದೆ. ಆರ್ ಆರ್ ತಂಡದ ಪ್ರಮುಖ ಬ್ಯಾಟಿಂಗ್ ಅಸ್ತ್ರ ಇಂಗ್ಲೆಂಡ್​ನ ಜೋಸ್ ಬಟ್ಲರ್ (Jos Buttler). ರಾಜಸ್ಥಾನ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಇವರು ಐಪಿಎಲ್ 2022ರ ಆರೆಂಜ್ ಕ್ಯಾಪ್ ಹೋಲ್ಡರ್ ಕೂಡ ಹೌದು. ಆಡಿದ 15 ಪಂದ್ಯಗಳಲ್ಲಿ 3 ಶತಕ ಹಾಗೂ 4 ಅರ್ಧಶತಕದೊಂದಿಗೆ ಬರೋಬ್ಬರಿ 718 ರನ್ ಕಲೆಹಾಕಿದ್ದಾರೆ. ಇವರ ವಿಕೆಟ್ ಪಡೆದರೆ ಅರ್ಧ ಪಂದ್ಯ ಗೆದ್ದಂತೆ ಎಂಬ ಮಟ್ಟಿಗೆ ಐಪಿಎಲ್ 2022 ರಲ್ಲಿ ಇಂಪ್ಯಾಕ್ಟ್ ಮಾಡಿದ್ದಾರೆ.

ಜೋಸ್ ಬಟ್ಲರ್ ಪ್ರತಿ ಬಾರಿ ಬೌಂಡರಿ ಬಾರಿಸುತ್ತಿದ್ದಂತೆ ಕ್ಯಾಮೆರಾ ಪ್ರೇಕ್ಷಕ ಗ್ಯಾಲರಿ ಕಡೆ ಹೋಗುತ್ತಿತ್ತು. ಇಲ್ಲಿ ಯುಜ್ವೇಂದ್ರ ಚಹಲ್ ಪತ್ನಿ ಧನಶ್ರೀ ಜೊತೆ ಕೂತಿದ್ದ ವಿದೇಶಿ ಮಹಿಳೆ ಸಂಭ್ರಮಾಚರಣೆ ಮಾಡುತ್ತಿರುವುದು ಕಾಣಿಸುತ್ತಿತ್ತು. ಇವರನ್ನು ಎಲ್ಲರೂ ಬಟ್ಲರ್ ಪತ್ನಿ ಎಂದೇ ನಂಬಿದ್ದಾರೆ. ಆದರೆ, ಇವರು ಬಟ್ಲರ್ ಪತ್ನಿ ಅಲ್ಲ, ರಾಜಸ್ಥಾನ್ ಪರವೇ ಆಡುತ್ತಿರುವ ದಕ್ಷಿಣ ಆಫ್ರಿಕಾ ಕ್ರಿಕೆಟಿಗ ರಾಸ್ಸೀ ವಂಡರ್ ಡಸ್ಸನ್ ಪತ್ನಿ ಲಾರ. ಹೀಗಿರುವಾಗ ಇವರು ನೀಡಿರುದವ ಒಂದು ಹೇಳಿಕೆ ಇದೀಗ ವೈರಲ್ ಆಗಿದೆ.

RR vs RCB: ಕ್ವಾಲಿಫೈಯರ್-2 ಮುನ್ನ ಆರ್​ಸಿಬಿ ತಂಡದಲ್ಲಾಗುತ್ತಾ ಮೂರು ಮೇಜರ್ ಸರ್ಜರಿ

ಇದನ್ನೂ ಓದಿ

ವಂಡರ್ ಡಸ್ಸನ್ ಐಪಿಎಲ್ 2022 ರಲ್ಲಿ ಆರ್ ಆರ್​ ಹೆಚ್ಚಿನ ಪಂದ್ಯಗಳನ್ನು ಆಡಿಲ್ಲ. ಕಣಕ್ಕಿಳಿದ ಮೂರು ಪಂದ್ಯಗಳಲ್ಲಿ ಕೇವಲ 22 ರನ್ ಗಳಿಸಿದ್ದಾರಷ್ಟೆ. ಆದರೂ ಇವರ ಪತ್ನಿ ಲಾರ, ಚಹಲ್ ಪತ್ನಿ ಧನಶ್ರೀ ವರ್ಮಾ ಹಾಗೂ ಅಶ್ವಿನ್ ಪತ್ನಿ ಪ್ರೀತಿ ಅಶ್ವಿನ್ ಜೊತೆಗೆ ಪ್ರತಿಬಾರಿ ಪಂದ್ಯ ವೀಕ್ಷಿಸಲು ಮೈದಾನದಲ್ಲಿ ಇರುತ್ತಾರೆ. ಅತ್ತ ಬಟ್ಲರ್ ಅರ್ಧಶತಕ, ಫೋರ್, ಸಿಕ್ಸ್ ಬಾರಿಸಿದಂತೆ ಲಾರ ಸಂಭ್ರಮಿಸುತ್ತಿರುವುದು ಅನೇಕ ಬಾರಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದರಿಂದಲೇ ಅವರನ್ನು ಬಟ್ಲರ್ ಪತ್ನಿ ಎಂದು ಎಲ್ಲರೂ ಅಂದುಕೊಂಡಿದ್ದಾರೆ.

ಈ ಬಗ್ಗೆ ಮಾತನಾಡಿದ ಲಾರ ತಮಾಷೆಯಾಗಿ, “ನಾನು ಈಗ ಜೋಸ್ ಬಟ್ಲರ್ ಅವರನ್ನು ನನ್ನ ಎರಡನೇ ಪತಿಯಾಗಿ ಅಡಾಪ್ಟ್ ಮಾಡಿದ್ದೇನೆ. ಬಟ್ಲರ್ ಪತ್ನಿಯ ಹೆಸರು ಲೂಯಿಸ್. ನಾನು ಈಗ ಲೂಯಿಸ್ ಆಗಿದ್ದೇನೆ. ನಾನು ಅವಳನ್ನು ಇದುರೆಗೆ ಭೇಟಿ ಮಾಡಿಲ್ಲ,” ಎಂದು ನಗುತ್ತಾ ಹೇಳಿದ್ದಾರೆ. “ಜನರೆಲ್ಲ ನನ್ನನ್ನು ಬಟ್ಲರ್ ಹೆಂಡತಿ ಎಂದು ಗ್ರಹಿಸಿದ್ದಾರೆ. ಇದಕ್ಕೆ ಕಾರಣ ಕ್ಯಾಮೆರಾ ನನ್ನ ಕಡೆ ತಿರುಗಿರುವುದು. ಬಟ್ಲರ್ ಶತಕ ಸಿಡಿಸಿದಾಗ ನಾನು ಸಂಭ್ರಮಿಸಿದ ರೀತಿ ಇದಕ್ಕೆ ಕಾರಣ ಆಗಿರುಬಹುದು. ವಂಡರ್ ಡಸ್ಸನ್ ಹೆಚ್ಚಿನ ಪಂದ್ಯಗಳನ್ನು ಆಡಿಲ್ಲ. ಅವರು ಆಡಿದ್ದರೆ ಇದೇರೀತಿ ಸಂಭ್ರಮ ಪಡುತ್ತಿದ್ದೆ. ಹೀಗಿದ್ದರೂ ನಾನು ಈ ಕ್ಷಣವನ್ನು ಎಂಜಾಯ್ ಮಾಡುತ್ತಿದ್ದೇನೆ,” ಎಂದು ಹೇಳಿದ್ದಾರೆ.

ಇದೀಗ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಅಂತಿಮ ಹಂತದತ್ತ ಸಾಗುತ್ತಿದೆ. ಇಂದು ಸೆಮಿಫೈನಲ್ ಮಾದರಿಯ ಕ್ವಾಲಿಫೈಯರ್-2 ಪಂದ್ಯ ನಡೆಯಲಿದ್ದು, ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಎನಿಸಿಕೊಂಡಿರುವ ನರೇಂದ್ರ ಮೋದಿ ಕ್ರಿಕೆಟ್ ಮೈದಾನ ಸಜ್ಜಾಗುತ್ತಿದೆ. ಇದರಲ್ಲಿ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ಹಾಗೂ ಫಾಫ್ ಡುಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಖಾಮುಖಿ ಆಗಲಿದೆ. ಇಲ್ಲಿ ಗೆದ್ದ ತಂಡ ಫೈನಲ್​ಗೆ ಪ್ರವೇಶ ಪಡೆಯಲಿದ್ದು ಗುಜರಾತ್ ಟೈಟಾನ್ಸ್ ತಂಡದ ವಿರುದ್ಧ ಪ್ರಶಸ್ತಿಗಾಗಿ ಹೋರಾಟ ನಡೆಸಲಿದೆ. ಇದುವರೆಗೆ ಒಂದು ಬಾರಿಯೂ ಕಪ್ ಗೆಲ್ಲದ ಆರ್​ಸಿಬಿ ಮೇಲೆ ಬೆಟ್ಟದಷ್ಟು ನಿರೀಕ್ಷೆಯಿದೆ. ಇತ್ತ ರಾಜಸ್ಥಾನ್ ಕೂಡ ಫೈನಲ್​ಗೆ ಪ್ರವೇಶ ಪಡೆಯಲು ರಣತಂತ್ರ ರೂಪಿಸುತ್ತಿದೆ.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada