
ಟೀಮ್ ಇಂಡಿಯಾದ ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಹಾಗೂ ಪತ್ನಿ ಆರತಿ ಅಹ್ಲಾವತ್ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿಯೊಂದು ಈ ಹಿಂದೊಮ್ಮೆ ಹರಿದಾಡಿತ್ತು. ಈ ಸುದ್ದಿ ಬೆನ್ನಲ್ಲೇ ಇಬ್ಬರು ಪತ್ಯೇಕವಾಗಿ ವಾಸಿಸುತ್ತಿರುವ ವಿಚಾರ ಕೂಡ ಬಹಿರಂಗವಾಗಿತ್ತು. ಅಲ್ಲದೆ ಸೆಹ್ವಾಗ್ ವೈವಾಹಿಕ ಜೀವನಕ್ಕೆ ಇತಿಶ್ರೀ ಹಾಡಲು ನಿರ್ಧರಿಸಿದ್ದಾರೆ ಎಂಬ ಸುದ್ದಿಗಳು ಕೂಡ ಕೇಳಿ ಬಂದಿದ್ದವು. ಆದರೆ ಇದಕ್ಕೇನು ಕಾರಣ ಎಂಬುದು ಮಾತ್ರ ಬಹಿರಂಗವಾಗಿರಲಿಲ್ಲ.
ಇದೀಗ ವೀರೇಂದ್ರ ಸೆಹ್ವಾಗ್ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಲು ಬಿಸಿಸಿಐನ ನೂತನ ಅಧ್ಯಕ್ಷ ಮಿಥುನ್ ಮನ್ಹಾಸ್ ಕಾರಣ ಎನ್ನಲಾಗುತ್ತಿದೆ. ಮಿಥುನ್ ಮನ್ಹಾಸ್ ಹಾಗೂ ಸೆಹ್ವಾಗ್ ಪತ್ನಿ ಆರತಿ ಅಹ್ಲಾವತ್ ನಡುವೆ ಆಫೇರ್ ಇದ್ದು, ಇದೇ ಕಾರಣದಿಂದಾಗಿ ಸೆಹ್ವಾಗ್ ಮಡದಿಯಿಂದ ದೂರವಾಗಿದ್ದಾರೆ ಎಂಬ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಈ ಸುದ್ದಿಗಳು ಹರಿದಾಡುವ ಮುನ್ನವೇ ಸೋಷಿಯಲ್ ಮೀಡಿಯಾದಲ್ಲಿ ಖ್ಯಾತ ಪತ್ರಕರ್ತರೊಬ್ಬರು, ಕ್ರಿಕೆಟಿಗರಾದ ಮುರಳಿ ವಿಜಯ್ ಮತ್ತು ದಿನೇಶ್ ಕಾರ್ತಿಕ್ ಅವರ 2009 ರ ವಿವಾದವನ್ನು ಉಲ್ಲೇಖಿಸಿ, ಇದೇ ರೀತಿಯ ಪರಿಸ್ಥಿತಿ ಮತ್ತೆ ಸಂಭವಿಸಬಹುದು ಎಂಬ ಸುಳಿವು ನೀಡಿದ್ದರು.
ಈ ಪೋಸ್ಟ್ ವೈರಲ್ ಆದ ಬೆನ್ನಲ್ಲೇ ಆರತಿ ಅಹ್ಲಾವತ್ ಹಾಗೂ ಮಿಥುನ್ ಮನ್ಹಾಸ್ ಜೊತೆಗಿರುವ ಫೋಟೋಗಳು ಸಮಾಜಿಕ ಜಾಲತಾಣಗಳಲ್ಲಿ ಹರಿದಾಡಲಾರಂಭಿಸಿದೆ. ಅಲ್ಲದೆ ಇಬ್ಬರು ಡೇಟಿಂಗ್ ಮಾಡುತ್ತಿದ್ದು, ಇದೇ ಕಾರಣದಿಂದಾಗಿ ಸೆಹ್ವಾಗ್ ಪತ್ನಿಯಿಂದ ದೂರವಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಅತ್ತ ಮುರಳಿ ವಿಜಯ್ ಹಾಗೂ ದಿನೇಶ್ ಕಾರ್ತಿಕ್ ಒಂದು ಕಾಲದ ಸ್ನೇಹಿತರು. ಆದರೆ ತನ್ನ ಮಾಜಿ ಪತ್ನಿ ಜೊತೆ ಮುರಳಿ ವಿಜಯ್ಗೆ ಅಕ್ರಮ ಸಂಬಂಧ ಹೊಂದಿರುವ ವಿಚಾರ ಗೊತ್ತಾಗುತ್ತಿದ್ದಂತೆ ಡಿಕೆ ಮೊದಲ ಪತ್ನಿಗೆ ಡಿವೋರ್ಸ್ ನೀಡಿದ್ದರು. ಇದೇ ವಿಚಾರವನ್ನು ಪರೋಕ್ಷವಾಗಿ ಪ್ರಸ್ತಾಪಿಸಿ ಖ್ಯಾತ ಪತ್ರಕರ್ತರೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು.
ಈ ಪೋಸ್ಟ್ ಬೆನ್ನಲ್ಲೇ ಸೆಹ್ವಾಗ್ ಹಾಗೂ ಆರತಿ ವಿಚಾರ ಮುನ್ನಲೆಗೆ ಬಂದಿದೆ. ಅದರಲ್ಲೂ ವೀರೇಂದ್ರ ಸೆಹ್ವಾಗ್ ಹಾಗೂ ಮಿಥುನ್ ಮನ್ಹಾಸ್ ಸ್ನೇಹಿತರು. ಅಷ್ಟೇ ಅಲ್ಲದೆ ಇಬ್ಬರು ದೆಹಲಿ ಪರ ಜೊತೆಯಾಗಿ ಆಡಿದ್ದರು. ಇದೀಗ ಮಿಥುನ್ ಮನ್ಹಾಸ್ ಜೊತೆ ಆರತಿ ಅಹ್ಲಾವತ್ ಹೆಸರು ತಳುಕು ಹಾಕಿಕೊಂಡಿದೆ.
ಇದರ ಬೆನ್ನಲ್ಲೇ ಬಿಸಿಸಿಐ ಅಧ್ಯಕ್ಷರಾದ ಮಿಥುನ್ ಮನ್ಹಾಸ್ ತನ್ನ ಸ್ನೇಹಿತನಾಗಿದ್ದ ವೀರೇಂದ್ರ ಸೆಹ್ವಾಗ್ಗೆ ನಂಬಿಕೆ ದ್ರೋಹ ಎಸೆಗಿದ್ರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಪ್ರಶ್ನೆಗಳ ನಡುವೆ ಸೆಹ್ವಾಗ್ ಪತ್ನಿ ಜೊತೆಗಿನ ಮಿಥುನ್ ಮನ್ಹಾಸ್ ಅವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವುದು ಕೂಡ ಹೊಸ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
ಇದನ್ನೂ ಓದಿ: ಅಭಿಷೇಕ್ ಅಬ್ಬರಕ್ಕೆ ವಿರಾಟ್ ಕೊಹ್ಲಿಯ ಸಾರ್ವಕಾಲಿಕ ರ‍್ಯಾಂಕಿಂಗ್ ಷೇಕ್ ಷೇಕ್
ಒಟ್ಟಿನಲ್ಲಿ 21 ವರ್ಷಗಳ ಕಾಲ ಜೊತೆಯಾಗಿ ಬಾಳಿದ್ದ ವೀರೇಂದ್ರ ಸೆಹ್ವಾಗ್ ಹಾಗೂ ಆರತಿ ಅಹ್ಲಾವತ್ ಸದ್ಯ ಪತ್ಯೇಕವಾಗಿ ವಾಸಿಸುತ್ತಿದ್ದು, ಶೀಘ್ರದಲ್ಲೇ ಇಬ್ಬರು ವೈವಾಹಿಕ ಜೀವನಕ್ಕೆ ಇತಿಶ್ರೀ ಹಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ನಡುವೆ ಬಿಸಿಸಿಐ ಅಧ್ಯಕ್ಷ ಮಿಥುನ್ ಮನ್ಹಾಸ್ ಹೆಸರು ಕೂಡ ಕೇಳಿ ಬಂದಿರುವುದು ಹೊಸ ಚರ್ಚೆಗೆ ಕಾರಣವಾಗಿದೆ.
Published On - 12:30 pm, Thu, 9 October 25