World Cup 2025: ಮಳೆ ಪೀಡಿತ ಪಂದ್ಯದಲ್ಲಿ ಟಾಸ್ ಗೆದ್ದ ಆಫ್ರಿಕಾ; ಭಾರತ ತಂಡದಲ್ಲಿ 1 ಬದಲಾವಣೆ
India vs South Africa: 2025ರ ಮಹಿಳಾ ವಿಶ್ವಕಪ್‌ನಲ್ಲಿ ಭಾರತ vs ದಕ್ಷಿಣ ಆಫ್ರಿಕಾ ತಂಡಗಳು ವಿಶಾಖಪಟ್ಟಣಂನಲ್ಲಿ ಸೆಮಿಫೈನಲ್ ನಿರ್ಣಾಯಕ ಪಂದ್ಯದಲ್ಲಿ ಮುಖಾಮುಖಿಯಾಗಿವೆ. ಮಳೆ ಕಾರಣದಿಂದ ತಡವಾಗಿ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಅನಾರೋಗ್ಯದ ಕಾರಣದಿಂದ ಹೊರಗುಳಿದಿದ್ದ ಅಮನ್‌ಜೋತ್ ಕೌರ್ ಭಾರತ ತಂಡಕ್ಕೆ ಮರಳಿದ್ದು, ರೇಣುಕಾ ಸಿಂಗ್ ಹೊರಗುಳಿದಿದ್ದಾರೆ. ಉಭಯ ತಂಡಗಳಿಗೆ ಈ ಗೆಲುವು ಮಹತ್ವದ್ದಾಗಿದೆ.

2025 ರ ಮಹಿಳಾ ವಿಶ್ವಕಪ್‌ನಲ್ಲಿ (Women’s World Cup 2025) ಆತಿಥೇಯ ಭಾರತ ತಂಡ ಇದೀಗ ತನ್ನ ಮೂರನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ (India vs South Africa) ತಂಡವನ್ನು ಎದುರಿಸುತ್ತಿದೆ. ಈ ಪಂದ್ಯವು ವಿಶಾಖಪಟ್ಟಣಂನಲ್ಲಿರುವ ACA VDCA ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಇದು ಪಂದ್ಯಾವಳಿಯಲ್ಲಿ ಉಭಯ ತಂಡಗಳ ನಡುವಿನ ಮೂರನೇ ಪಂದ್ಯವಾಗಿದ್ದು, ಭಾರತ ತನ್ನ ಹಿಂದಿನ ಎರಡೂ ಪಂದ್ಯಗಳನ್ನು ಗೆದ್ದಿದೆ. ಮತ್ತೊಂದೆಡೆ, ದಕ್ಷಿಣ ಆಫ್ರಿಕಾ ತನ್ನ ಕೊನೆಯ ಎರಡು ಪಂದ್ಯಗಳಲ್ಲಿ ಒಂದನ್ನು ಗೆದ್ದಿದ್ದು, ಒಂದನ್ನು ಸೋತಿದೆ. ಇದೀಗ ಸೆಮಿಫೈನಲ್ ದೃಷ್ಟಿಯಿಂದ ಎರಡೂ ತಂಡಗಳಿಗೆ ಈ ಪಂದ್ಯದ ಗೆಲುವು ಅತ್ಯವಶ್ಯಕವಾಗಿದೆ.
ಟಾಸ್ ಗೆದ್ದ ಆಫ್ರಿಕಾ ಬೌಲಿಂಗ್ ಆಯ್ಕೆ
ನಿರೀಕ್ಷೆಯಂತೆಯೇ ವಿಶಾಖಪಟ್ಟಣಂನಲ್ಲಿ ಮಳೆ ಎಡೆಬಿಡದೆ ಸುರಿಯುತ್ತಿದೆ. ಹೀಗಾಗಿ ಪಂದ್ಯವನ್ನು 1 ಗಂಟೆ ತಡವಾಗಿ ಆರಂಭಿಸಬೇಕಾಯಿತು. ಇನ್ನು ಈ ಮಳೆ ಪೀಡಿತ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಈ ಪಂದ್ಯಕ್ಕಾಗಿ ಭಾರತ ತನ್ನ ಆಡುವ XI ರ ಬಳಗದಲ್ಲಿ ಒಂದು ಬದಲಾವಣೆ ಮಾಡಿದೆ. ಅನಾರೋಗ್ಯದ ಕಾರಣ ಹಿಂದಿನ ಪಂದ್ಯವನ್ನು ತಪ್ಪಿಸಿಕೊಂಡಿದ್ದ ಅಮನ್‌ಜೋತ್ ಕೌರ್ ಇದೀಗ ತಂಡವನ್ನು ಸೇರಿಕೊಂಡಿದ್ದು, ಕಳೆದ ಪಂದ್ಯದಲ್ಲಿ ಅವರ ಬದಲು ಆಡಿದ್ದ ರೇಣುಕಾ ಸಿಂಗ್ ತಂಡದಿಂದ ಹೊರಬಿದಿದ್ದಾರೆ.
🚨 Toss 🚨#TeamIndia have been put in to bat first 👍
Updates ▶️ https://t.co/G5LkyPu4gX#WomenInBlue | #CWC25 | #INDvSA pic.twitter.com/yTf8bbyGCG
— BCCI Women (@BCCIWomen) October 9, 2025
ಎರಡೂ ತಂಡುಗಳು
ಭಾರತ ತಂಡ: ಪ್ರತೀಕಾ ರಾವಲ್, ಸ್ಮೃತಿ ಮಂಧಾನ, ಹರ್ಲೀನ್ ಡಿಯೋಲ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಜೆಮಿಮಾ ರಾಡ್ರಿಗಸ್, ರಿಚಾ ಘೋಷ್ (ವಿಕೆಟ್ ಕೀಪರ್), ಅಮನ್ಜೋತ್ ಕೌರ್, ಸ್ನೇಹ ರಾಣಾ, ಕ್ರಾಂತಿ ಗೌಡ್, ಶ್ರೀ ಚರಣಿ.
ದಕ್ಷಿಣ ಆಫ್ರಿಕಾ ತಂಡ: ಲಾರಾ ವೊಲ್ವಾರ್ಡ್ಟ್ (ನಾಯಕಿ), ತಜ್ಮಿನ್ ಬ್ರಿಟ್ಸ್, ಸುನೆ ಲೂಸ್, ಮಾರಿಜಾನ್ನೆ ಕಪ್, ಅನ್ನೆಕೆ ಬಾಷ್, ಸಿನಾಲೊ ಜಫ್ತಾ (ವಿಕೆಟ್ ಕೀಪರ್), ಕ್ಲೋಯ್ ಟ್ರಿಯಾನ್, ನಡಿನ್ ಡಿ ಕ್ಲರ್ಕ್, ಅಯಾಬೊಂಗಾ ಖಾಕಾ, ತುಮಿ ಸೆಖುಖುನೆ, ನಾನ್‌ಕುಲುಲೆಕೊ ಮ್ಲಾಬಾ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:48 pm, Thu, 9 October 25
