Wanindu Hasaranga: ಆರ್​ಸಿಬಿ ತಂಡ ಸೇರಿದ ತಕ್ಷಣ ವನಿಂದು ಹಸರಂಗ ನೀಡಿದ ಪ್ರತಿಕ್ರಿಯೆ ನೋಡಿ

| Updated By: Vinay Bhat

Updated on: Aug 22, 2021 | 7:13 AM

RCB: ಆರ್​ಸಿಬಿ ಫ್ರಾಂಚೈಸಿ ತನ್ನನ್ನು ಆಯ್ಕೆ ಮಾಡಿರುವ ವಿಷಯ ತಿಳಿಯುತ್ತಿದ್ದ ಲಂಕಾ ಆಲ್‌ರೌಂಡರ್‌ ವಾನಿಂದ ಹಸರಂಗ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಖುಷಿ ಹಂಚಿಕೊಂಡಿದ್ದಾರೆ

Wanindu Hasaranga: ಆರ್​ಸಿಬಿ ತಂಡ ಸೇರಿದ ತಕ್ಷಣ ವನಿಂದು ಹಸರಂಗ ನೀಡಿದ ಪ್ರತಿಕ್ರಿಯೆ ನೋಡಿ
ಆದರೀಗ ಶ್ರೀಲಂಕಾ ಕ್ರಿಕೆಟ್ ಮಂಡಳಿ ವನಿಂದು ಹಸರಂಗ ಹಾಗೂ ದುಷ್ಮಂತ ಚಮೀರಾಗೆ ಎನ್​ಒಸಿ ನೀಡಿದೆ. ಅದರಂತೆ ಈ ಇಬ್ಬರು ಕ್ರಿಕೆಟಿಗರಿಗೆ ಐಪಿಎಲ್​ನಲ್ಲಿ ಭಾಗವಹಿಸಲು ಗ್ರೀನ್ ಸಿಗ್ನಲ್ ಸಿಕ್ಕಂತಾಗಿದೆ. ಇದರೊಂದಿಗೆ ಯುಎಇನಲ್ಲಿ ನಡೆಯಲಿರುವ ಐಪಿಎಲ್​ನ ದ್ವಿತಿಯಾರ್ಧಲ್ಲಿ ಆರ್​ಸಿಬಿ ಪರ ಹಸರಂಗ ಹಾಗೂ ಚಮೀರಾ ಕಾಣಿಸಿಕೊಳ್ಳುವುದು ಖಚಿತವಾಗಿದೆ.
Follow us on

ಇಂಡಿಯನ್ ಪ್ರೀಮಿಯರ್ ಲೀಗ್ (IPL) 14ನೇ ಆವೃತ್ತಿಯ ಎರಡನೇ ಚರಣ ಆರಂಭಕ್ಕೆ ಇನ್ನೇನು ಕೆಲವು ದಿನಗಳಷ್ಟೇ ಬಾಕಿಯಿದೆ. ಹೀಗಿರುವಾಗ ಕೆಲ ತಂಡಗಳಲ್ಲಿ ಮಹತ್ತರ ಬದಲಾವಣೆಗಳು ಆಗುತ್ತಿವೆ. ಶನಿವಾರ ಆರ್​ಸಿಬಿ (RCB) ತಂಡದಲ್ಲಿ ಸಾಕಷ್ಟು ಅಚ್ಚರಿಯ ಬೆಳವಣೆಗೆ ನಡೆದವು. ನ್ಯೂಜಿಲೆಂಡ್ ತಂಡದ ಮಾಜಿ ಆಟಗಾರ ಮೈಕ್ ಹೆಸ್ಸನ್, ಐಪಿಎಲ್ 2021 ಭಾಗ-2ರಲ್ಲಿ ಆರ್‌ಸಿಬಿ ತಂಡದ ಮುಖ್ಯಕೋಚ್ ಆಗಿ ಕಾರ್ಯನಿರ್ವಹಿಸುವ ಸುದ್ದಿ ಹೊರಬಿತ್ತು. ಆಡಂ ಜಂಪಾ ಬದಲಿಗೆ ಶ್ರೀಲಂಕಾದ ಲೆಗ್ ಸ್ಪಿನ್ನರ್ ವನಿಂದು ಹಸರಂಗ (Wanindu Hasaranga) ತಂಡದಲ್ಲಿ ಪ್ರಮುಖ ಹೊಸ ಆಟಗಾರನಾಗಿ ಸೇರಿಸಿಕೊಳ್ಳಲಾಗಿದೆ.

ಆರ್​ಸಿಬಿ ಫ್ರಾಂಚೈಸಿ ತನ್ನನ್ನು ಆಯ್ಕೆ ಮಾಡಿರುವ ವಿಷಯ ತಿಳಿಯುತ್ತಿದ್ದ ಲಂಕಾ ಆಲ್‌ರೌಂಡರ್‌ ವಾನಿಂದ ಹಸರಂಗ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಖುಷಿ ಹಂಚಿಕೊಂಡಿದ್ದಾರೆ. “ಇಷ್ಟರ ವರೆಗೆ ಮನೆಯಲ್ಲಿ ಕುಳಿತು ಆರ್‌ಸಿಬಿ ಪಂದ್ಯಗಳನ್ನು ವೀಕ್ಷಿಸುತ್ತಿದ್ದೆ. ಇದೀಗ ಅದೇ ತಂಡದ ಭಾಗವಾಗುತ್ತಿರುವುದಕ್ಕೆ ಹೆಮ್ಮೆ ಅನಿಸುತ್ತಿದೆ. ಆರ್‌ಸಿಬಿ ಪರ ಆಡಲು ತುಂಬಾ ಉತ್ಸುಕನಾಗಿದ್ದೇನೆ ಹಾಗೂ ರೋಮಾಂಚನಗೊಂಡಿದ್ದೇನೆ,” ಎಂದು ಹೇಳಿದ್ದಾರೆ.

ವಾನಿಂದು ಹಸರಂಗ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಯ್ಕೆಯಾಗಿರುವುದಕ್ಕೆ ಶ್ರೀಲಂಕಾ ತಂಡದ ಮಾಜಿ ಆಲ್‌ರೌಂಡರ್‌ ಇಸುರು ಉದಾನ ಕೂಡ ಸಂತಸ ವ್ಯಕ್ತಪಡಿಸಿದ್ದು, “ಉತ್ತಮ ಅರ್ಹತೆ. ಚೆನ್ನಾಗಿ ಆಡಿ, ಸೂಪರ್!” ಎಂದು ಹಸರಂಗ ಪೋಸ್ಟ್‌ಗೆ ಕಾಮೆಂಟ್‌ ಮಾಡಿದ್ದಾರೆ.

ವಾನಿಂದು ಹಸರಂಗ ಅವರನ್ನು ತಂಡಕ್ಕೆ ಸೇರಿಸಿಕೊಂಡ ಬಗ್ಗೆ ಮಾತನಾಡಿದ ನೂತನ ಕೋಚ್‌ ಮೈಕ್‌ ಹೇಸನ್‌, “ಆಡಂ ಝಾಂಪ ಅವರ ಸ್ಥಾನಕ್ಕೆ ವಾನಿಂದು ಹಸರಂಗ ಅವರನ್ನು ಆಯ್ಕೆ ಮಾಡಿದ್ದೇವೆ. ಮುಷ್ಠಿ ಸ್ಪಿನ್‌ ಜೊತೆಗೆ ವಾನಿಂದು, ಬ್ಯಾಟಿಂಗ್‌ನಲ್ಲಿಯೂ ತಂಡಕ್ಕೆ ಉತ್ತಮ ಸಂಯೋಜನೆಯನ್ನು ತಂದುಕೊಡಬಲ್ಲರು. ಹಾಗಾಗಿ, ಅವರನ್ನು ಕರೆದುಕೊಂಡಿರುವುದಕ್ಕೆ ನಮಗೆ ಖುಷಿಯಾಗಿದೆ,” ಎಂದಿದ್ದಾರೆ.

ಲೆಗ್ ಸ್ಪಿನ್ನರ್ ವನಿಂದು ಹಸರಂಗ ಕಳೆದ ತಿಂಗಳು ಶ್ರೀಲಂಕಾದಲ್ಲಿ ನಡೆದ ಭಾರತ ವಿರುದ್ಧದ ನಿಗದಿತ ಓವರ್‌ಗಳ ಸರಣಿಯಲ್ಲಿ ಉತ್ತಮ ನಿರ್ವಹಣೆ ತೋರಿದ್ದರು. ಮೂರು ಟಿ-20 ಪಂದ್ಯಗಳಿಂದ 7 ವಿಕೆಟ್ ಕಬಳಿಸಿದ್ದರು. ಆರ್‌ಸಿಬಿಗೆ ಹೆಚ್ಚುವರಿ ಲೆಗ್ ಸ್ಪಿನ್ನರ್ ಅವಶ್ಯತೆ ಇದ್ದ ಹಿನ್ನೆಲೆಯಲ್ಲಿ ಹಸರಂಗಗೆ ಮಣೆಹಾಕಿದೆ.

ವನಿಂದು ಹಸರಂಗ ಜೊತೆ ದುಷ್ಮಂತ ಚಮೀರ ಮತ್ತು ಟಿಮ್ ಡೇವಿಡ್ ಈ ಮೂವರು ಆಟಗಾರರನ್ನು ಹೊಸದಾಗಿ ತಂಡಕ್ಕೆ ಸೇರಿಸಿಕೊಂಡಿದೆ. ಮುಂದುವರಿಯಲಿರುವ ಐಪಿಎಲ್ ಟೂರ್ನಿಗೆ ತಂಡದಲ್ಲಿದ್ದ ಕೆಲ ಆಟಗಾರರು ಅಲಭ್ಯರಾದ ಕಾರಣ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆ ಆಟಗಾರನ ಸ್ಥಾನಕ್ಕೆ ಈ ಮೂವರು ಆಟಗಾರರನ್ನು ಆಯ್ಕೆ ಮಾಡಿಕೊಂಡಿದೆ.

Tokyo Paralympics: ಒಲಿಂಪಿಕ್ಸ್ ಆಯ್ತು.. ಈಗ ಪ್ಯಾರಾಲಿಂಪಿಕ್ಸ್​ ಮೇಲು ಕೊರೊನಾ ವಕ್ರದೃಷ್ಟಿ! ಇಬ್ಬರು ಸಿಬ್ಬಂದಿಗೆ ಕೊರೊನಾ

ವಿಶ್ವ ಅಂಡರ್-20 ಅಥ್ಲೆಟಿಕ್ಸ್​​​ನಲ್ಲಿ ಸತತವಾಗಿ ಎರಡು ವಿಶ್ವ ದಾಖಲೆ ಸ್ಥಾಪಿಸಿ 110 ಮೀ ಹರ್ಡಲ್ಸ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಜೋಯಾ

(Wanindu Hasaranga Reacts After Joining Royal Challengers Bangalore RCB Team For IPL 2021 UAE)