India vs England: ಮೂರನೇ ಟೆಸ್ಟ್ಗೆ ಟೀಮ್ ಇಂಡಿಯಾದಲ್ಲಿ ಈ ಒಂದು ಬದಲಾವಣೆ ಖಚಿತ!
R Ashwin: ಇಂಗ್ಲೆಂಡ್ ವಾತಾವರಣದಲ್ಲಿ ಓರ್ವ ಸ್ಪಿನ್ ಬೌಲರ್ ತಂಡದಲ್ಲಿದ್ದರೆ ಸಾಕು ಎಂಬ ಕಾರಣಕ್ಕೆ ಮೊದಲೆರಡು ಟೆಸ್ಟ್ ಪಂದ್ಯದಿಂದ ರವಿಚಂದ್ರನ್ ಅಶ್ವಿನ್ ಅವರನ್ನು ಹೊರಗಿಟ್ಟು ಬ್ಯಾಟಿಂಗ್ನಲ್ಲೂ ಕೊಡುಗೆ ನೀಡುವ ರವೀಂದ್ರ ಜಡೇಜಾಗೆ ಆಡುವ ಅವಕಾಶವನ್ನು ನೀಡಲಾಗಿತ್ತು.
ಕ್ರಿಕೆಟ್ ರಂಗದ ಘಟಾನುಘಟಿಗಳ ತಂಡ ಭಾರತ- ಇಂಗ್ಲೆಂಡ್ (India vs England) ನಡುವಣ ಮೂರನೇ ಟೆಸ್ಟ್ ಪಂದ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಐದು ಪಂದ್ಯಗಳ ಟೆಸ್ಟ್ನಲ್ಲಿ 1-0 ಮುನ್ನಡೆ ಸಾಧಿಸಿರುವ ಟೀಮ್ ಇಂಡಿಯಾ (Team India) ಆಂಗ್ಲರ ನಾಡಿನಲ್ಲಿ ಸರಣಿ ಗೆಲ್ಲುವ ನೆಚ್ಚಿನ ತಂಡವಾಗಿ ಹೊರಮೊಹಮ್ಮಿದೆ. ಆಗಸ್ಟ್ 25 ಬುಧವಾರದಿಂದ ಲೀಡ್ಸ್ನಲ್ಲಿ ಬಹುನಿರೀಕ್ಷಿತ ಮೂರನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಈ ಪಂದ್ಯಕ್ಕೆ ಕೊಹ್ಲಿ ಪಡೆಯಲ್ಲಿ ಪ್ರಮುಖ ಬದಲಾವಣೆ ನಿರೀಕ್ಷಿಸಲಾಗಿದೆ.
ಎರಡನೇ ಟೆಸ್ಟ್ ಪಂದ್ಯದ ಕೊನೇ ಕ್ಷಣದಲ್ಲಿ ಅವಕಾಶ ಕೈತಪ್ಪಿದ್ದ ರವಿಚಂದ್ರನ್ ಅಶ್ವಿನ್ ಮೂರನೇ ಪಂದ್ಯದಲ್ಲಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ರವೀಂದ್ರ ಜಡೇಜಾ ಆಡಿದ ಎರಡೂ ಟೆಸ್ಟ್ನಲ್ಲಿ ಒಂದೇ ಒಂದು ವಿಕೆಟ್ ಪಡೆದಿಲ್ಲ. ಇದು ಅಶ್ವಿನ್ಗೆ ಬಹುದೊಡ್ಡ ಪ್ಲಸ್ ಪಾಯಿಂಟ್ ಆಗಿದೆ.
ಮೊದಲ ಟೆಸ್ಟ್ನಲ್ಲಿ 16 ಓವರ್ ಬೌಲಿಂಗ್ ಮಾಡಿದ್ದ ಜಡ್ಡು 3.30 ರನ್ರೇಟ್ ನೀಡಿದ ಒಂದು ವಿಕೆಟ್ ಕೂಡ ಪಡೆದಿರಲಿಲ್ಲ. ಎರಡನೇ ಟೆಸ್ಟ್ನಲ್ಲೂ 28 ಓವರ್ ಬೌಲಿಂಗ್ ಮಾಡಿ 48 ರನ್ ನೀಡಿದರೂ ವಿಕೆಟ್ ಕೀಳಲು ಯಶಸ್ವಿಯಾಗಿಲ್ಲ. ಬ್ಯಾಟಿಂಗ್ನಲ್ಲಿ ಸಾಮರ್ಥ್ಯ ಹೊಂದಿರುವ ಜಡೇಜಾ ಈ ಬಾರಿ ಬೌಲಿಂಗ್ನಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ.
ಇಂಗ್ಲೆಂಡ್ ವಾತಾವರಣದಲ್ಲಿ ಓರ್ವ ಸ್ಪಿನ್ ಬೌಲರ್ ತಂಡದಲ್ಲಿದ್ದರೆ ಸಾಕು ಎಂಬ ಕಾರಣಕ್ಕೆ ಮೊದಲೆರಡು ಟೆಸ್ಟ್ ಪಂದ್ಯದಿಂದ ರವಿಚಂದ್ರನ್ ಅಶ್ವಿನ್ ಅವರನ್ನು ಹೊರಗಿಟ್ಟು ಬ್ಯಾಟಿಂಗ್ನಲ್ಲೂ ಕೊಡುಗೆ ನೀಡುವ ರವೀಂದ್ರ ಜಡೇಜಾಗೆ ಆಡುವ ಅವಕಾಶವನ್ನು ನೀಡಲಾಗಿತ್ತು. ಆದರೆ ಇದೀಗ ಇದೀಗ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ರವೀಂದ್ರ ಜಡೇಜಾರನ್ನು ತಂಡದಿಂದ ಹೊರಗಿಟ್ಟು ರವಿಚಂದ್ರನ್ ಅಶ್ವಿನ್ ಅವರಿಗೆ ಆಡುವ ಅವಕಾಶವನ್ನು ನೀಡುವ ಸಾಧ್ಯತೆಗಳು ಹೆಚ್ಚಿವೆ.
ಅಲ್ಲದೆ ಅಶ್ವಿನ್ ಅವರನ್ನು ಮೊದಲೆರಡು ಪಂದ್ಯಗಳಲ್ಲಿ ತಂಡಕ್ಕೆ ಸೇರಿಸಿಕೊಳ್ಳದೇ ಕೈಬಿಟ್ಟಿದ್ದರ ಕುರಿತು ಭಾರತದ ಕ್ರೀಡಾಭಿಮಾನಿಗಳು ಮಾತ್ರವಲ್ಲದೆ ಹಲವಾರು ಕ್ರೀಡಾ ಪಂಡಿತರು ಮತ್ತು ಮಾಜಿ ಆಟಗಾರರಿಂದಲೂ ಮಾತುಗಳು ಕೇಳಿಬಂದಿದ್ದವು. ಜೊತೆಗೆ ಸ್ವತಃ ಅಶ್ವಿನ್ ಅವರೇ ಬೇಸರ ಹೊರಹಾಕಿದ್ದರು.
“ಎಲ್ಲಾ ಸರಿ ಹೋಗಿದ್ದರೆ ನಾನು ಎರಡನೇ ಟೆಸ್ಟ್ ಪಂದ್ಯವಾಡಬೇಕಿತ್ತು. ಆದರೆ ಕೊನೆ ಗಳಿಗೆಯಲ್ಲಿ ಅದು ಕೈ ತಪ್ಪಿಹೋಯ್ತು. ಇದಕ್ಕೆ ಕಾರಣ ಮಳೆ ಎಂದು ಅಶ್ವಿನ್ ಹೇಳಿದರು. ಎರಡನೇ ಟೆಸ್ಟ್ ಆಡುವ ಕೆಲವೇ ಕ್ಷಣಗಳ ಮೊದಲು ಬಿಸಿಲಿತ್ತು. ಆಗ ಒಣಗಾಳಿಯಿದೆ. ಈವತ್ತು ನೀವು ಆಡುತ್ತೀರಿ ಎಂದು ನನಗೆ ಹೇಳಿದ್ದರು. ನಾನು ಇನ್ನೇನು ಸಿದ್ಧರಾಗಬೇಕು ಎನ್ನುವಾಗ ಮಳೆ ಬಂತು. ಎಲ್ಲವೂ ಉಲ್ಟಾ ಆಯ್ತು. ಮಳೆಯಿಂದಾಗಿ ನನ್ನ ಅವಕಾಶ ಹೋಯಿತು ಎಂದು ಹೇಳಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ ನಡುವೆ ನಾಟಿಂಗ್ಹ್ಯಾಮ್ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆದ ಮೊದಲನೇ ಟೆಸ್ಟ್ ಪಂದ್ಯ ಮಳೆಯ ಆಗಮನದಿಂದಾಗಿ ಯಾವುದೇ ಫಲಿತಾಂಶವಿಲ್ಲದೇ ನೀರಸ ಡ್ರಾನಲ್ಲಿ ಅಂತ್ಯಗೊಂಡಿತು. ನಂತರ ಕ್ರಿಕೆಟ್ ಕಾಶಿ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 151 ರನ್‌ಗಳ ಭರ್ಜರಿ ಗೆಲುವನ್ನು ಸಾಧಿಸಿತು. ಸದ್ಯ ಆಗಸ್ಟ್ 25ರಂದು ಲೀಡ್ಸ್ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಮೂರನೇ ಟೆಸ್ಟ್ ಪಂದ್ಯಕ್ಕೆ ಉಭಯ ತಂಡಗಳು ಅಭ್ಯಾಸದಲ್ಲಿ ನಿರತವಾಗಿದೆ.
The Hundred Final: ಚೊಚ್ಚಲ ದಿ ಹಂಡ್ರೆಡ್ ಸೀಸನ್ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಸೌಥರ್ನ್ ಬ್ರೇವ್ ತಂಡ
Wanindu Hasaranga: ಆರ್ಸಿಬಿ ತಂಡ ಸೇರಿದ ತಕ್ಷಣ ವನಿಂದು ಹಸರಂಗ ನೀಡಿದ ಪ್ರತಿಕ್ರಿಯೆ ನೋಡಿ
(India Playing XI 3rd Test R Ashwin likely to make a comeback replacing Ravindra Jadeja )