AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Photo: ಮೊಹಮ್ಮದ್ ಶಮಿ ಪತ್ನಿಯ ಮಾದಕ ನೋಟದ ಹಾಟ್ ಫೋಟೋ ವೈರಲ್

Hasin Jahan: ಹಸೀನಾ ಅವರು ಇನ್​ಸ್ಟಾಗ್ರಾಂನಲ್ಲಿ ಒಂದು ಲಕ್ಷಕ್ಕೂ ಅಧಿಕ ಹಿಂಬಾಲಕರನ್ನು ಹೊಂದಿದ್ದಾರೆ. ಆಗಾಗ ತಮ್ಮ ಬೋಲ್ಡ್​ ಫೋಟೋಗಳನ್ನು ಹಸಿನ್​ ಅಪ್​ಲೋಡ್​ ಮಾಡುತ್ತಿರುತ್ತಾರೆ

Viral Photo: ಮೊಹಮ್ಮದ್ ಶಮಿ ಪತ್ನಿಯ ಮಾದಕ ನೋಟದ ಹಾಟ್ ಫೋಟೋ ವೈರಲ್
Mohammed Shami and Hasin Jahan
TV9 Web
| Updated By: Vinay Bhat|

Updated on: Aug 22, 2021 | 11:14 AM

Share

ಭಾರತ ಕ್ರಿಕೆಟ್ ತಂಡದ ಪ್ರಮುಖ ವೇಗಿ ಮೊಹಮ್ಮದ್ ಶಮಿ (Mohammed Shami) ಅವರ ಪತ್ನಿ ಹಸೀನಾ ಜಹಾಂ (Hasin Jahan) ಅವರ ಫೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ತಮ್ಮ ಮಾದಕ ಫೋಟೋಗಳನ್ನು ಶೇರ್​ ಮಾಡಿಕೊಳ್ಳುವ ಹಸೀನಾ ಇದೀಗ ಇನ್​ಸ್ಟಾಗ್ರಾಂನಲ್ಲಿ ಬೋಲ್ಡ್​ ಫೋಟೋ ಹರಿಬಿಡುವ ಮೂಲಕ ನೆಟ್ಟಿಗರ ಹುಬ್ಬೇರಿಸಿದ್ದಾರೆ. ಹೊಸ ಫೋಟೋ ಶೂಟ್​ನಲ್ಲಿ ಮಿಂಚಿರುವ ಶಮಿ ಪತ್ನಿ ಹಸೀನಾ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

ಪ್ರಸ್ತುತ ಅಪ್​ಲೋಡ್​ ಮಾಡಿರುವ ಫೋಟೋದಲ್ಲಿ ಹಸೀನಾ ತುಂಬಾ ಹಾಟ್​ ಆ್ಯಂಡ್​ ಬ್ಯೂಟಿಫುಲ್​ ಆಗಿ ಕಾಣಿಸುತ್ತಿದ್ದಾರೆ. ಫೋಟೋದಲ್ಲಿ ರಗಡ್​ ಜಿನ್ಸ್​ ಮತ್ತು ಕಪ್ಪು ಬಣ್ಣ ಟಾಪ್​ ಧರಿಸಿರುವ ಹಸೀನಾ ​ ನೇರವಾಗಿ ಕ್ಯಾಮರಾ ಕಡೆ ನೋಡುತ್ತಾ ಪೋಸ್​​ ನೀಡಿದ್ದಾರೆ.

ಹಸೀನಾ ಅವರು ಇನ್​ಸ್ಟಾಗ್ರಾಂನಲ್ಲಿ ಒಂದು ಲಕ್ಷಕ್ಕೂ ಅಧಿಕ ಹಿಂಬಾಲಕರನ್ನು ಹೊಂದಿದ್ದಾರೆ. ಆಗಾಗ ತಮ್ಮ ಬೋಲ್ಡ್​ ಫೋಟೋಗಳನ್ನು ಹಸಿನ್​ ಅಪ್​ಲೋಡ್​ ಮಾಡುತ್ತಿರುತ್ತಾರೆ. ಅನೇಕರು ಇವರ​ ಬ್ಯೂಟಿಗೆ ಫಿದಾ ಆಗಿ ಅವರನ್ನು ಪ್ರಶಂಸಿಸಿದರೆ, ಇನ್ನು ಕೆಲವರು ಅವರನ್ನು ಟ್ರೋಲ್​ ಮಾಡುತ್ತಾರೆ.

ಮೊಹಮ್ಮದ್​ ಶಮಿ ಅವರನ್ನು ಮದುವೆ ಆಗಿರುವ ಹಸೀನಾ​, ಮನಸ್ತಾಪಗಳಿಂದಾಗಿ ಇಬ್ಬರು ಪರಸ್ಪರ ಬೇರೆಯಾಗಿ ಬದುಕು ಸಾಗಿಸುತ್ತಿದ್ದಾರೆ. ಈ ಹಿಂದೆ ಹಸೀನಾ ತನ್ನ ಗಂಡನ ವಿರುದ್ಧ ಫಿಕ್ಸಿಂಗ್ ಹಾಗೂ ಬೇರೆ ಯುವತಿಯರ ಜೊತೆ ಅಕ್ರಮ ಸಂಬಂಧ ಇದೆ ಎಂಬ ಆರೋಪವೆಸಗಿದ್ದರು. ಈ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.

ಕಳೆದ ವರ್ಷ ಶಮಿ ವಿರುದ್ಧ ಪತ್ನಿ ಸಾಕಷ್ಟು ಆರೋಪ ಮಾಡಿದ್ದರು. ಜೊತೆಗೆ ಶಮಿಗೆ ಬೇರೆ ಬೇರೆ ಯುವತಿರ ಜತೆ ಸಂಬಂಧ ಇರುವುದಾಗಿಯೂ ಆರೋಪ ಮಾಡಿದ್ದರು. ಶಮಿ ಕುಟುಂಬಸ್ಥರ ವಿರುದ್ಧ ಕೌಟುಂಬಿಕ ದೌರ್ಜನ್ಯದ ದೂರನ್ನು ದಾಖಲಿಸಿದ್ದರು. ಆದರೆ ಕೋರ್ಟ್‌ನಲ್ಲಿ ಸಾಬೀತು ಮಾಡಲು ಹಸಿನಾಗೆ ಸಾಧ್ಯವಾಗಿರಲಿಲ್ಲ. ಆದರೆ, ಈವರೆಗೂ ಇಬ್ಬರು ಡಿವೋರ್ಸ್​ ತೆಗೆದುಕೊಂಡಿಲ್ಲ ಎಂಬುದು ವಿಶೇಷ.

IPL 2021: ಸಿಲಿಕಾನ್ ಸಿಟಿಗೆ ಕಾಲಿಟ್ಟ ಆರ್​ಸಿಬಿ ಆಟಗಾರರು: ಆಗಸ್ಟ್ 29ಕ್ಕೆ ದುಬೈಗೆ ಪ್ರಯಾಣ

India vs England: ಮೂರನೇ ಟೆಸ್ಟ್​ಗೆ ಟೀಮ್ ಇಂಡಿಯಾದಲ್ಲಿ ಈ ಒಂದು ಬದಲಾವಣೆ ಖಚಿತ!

(Indian Cricketer Mohammed Shami wife Hasin Jahan Hot photo viral)