Viral Video: ಜಸ್ಟ್ ಮಿಸ್..ಐಪಿಎಲ್ನಲ್ಲಿ ತಪ್ಪಿದ ದೊಡ್ಡ ಅನಾಹುತ..!
IPL 2022: ರಾಜಸ್ಥಾನ್ ರಾಯಲ್ಸ್‌ನ ಮುಂದಿನ ಪಂದ್ಯವನ್ನು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಏಪ್ರಿಲ್ 10 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಆಡಲಿದೆ.
ಐಪಿಎಲ್ ವಿಶ್ವ ಪ್ರಸಿದ್ಧ ಲೀಗ್ ಎಂಬುದರಲ್ಲಿ ಅನುಮಾನವೇ ಇಲ್ಲ. ಅತ್ಯುತ್ತಮ ಆಟಗಾರರು ಈ ಲೀಗ್ನಲ್ಲಿ ಭಾಗವಹಿಸುತ್ತಿರುವುದರಿಂದ ಉತ್ತಮ ಕ್ರಿಕೆಟ್ ಅನ್ನು ಎದುರು ನೋಡಬಹುದು. ಅನುಭವಿ ಆಟಗಾರರೇ ಹೆಚ್ಚು ಕಾಣಿಸಿಕೊಳ್ಳುತ್ತಿರುವ ಕಾರಣ ಕಳೆದ 14 ಸೀಸನ್ಗಳಲ್ಲಿ ಅಂತಹ ಯಾವುದೇ ಅನಾಹುತಗಳು ಕೂಡ ಕಂಡುಬಂದಿಲ್ಲ. ಆದರೆ ಈ ಬಾರಿ ಅಂತಹದೊಂದು ಅವಘಡ ಸಂಭವಿಸುವ ಸಾಧ್ಯತೆಯಿತ್ತು. ಅದೃಷ್ಟವಶಾತ್ ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರ ಜಿಮ್ಮಿ ನೀಶಮ್ ಅವರ ಸಮಯಪ್ರಜ್ಞೆಯಿಂದ ಅನಾಹುತ ತಪ್ಪಿದೆ.
ಟಿ20 ಕ್ರಿಕೆಟ್‌ನಲ್ಲಿ ಬೌಲಿಂಗ್ಗಳು ಎಷ್ಟು ಅಪಾಯಕಾರಿಯೋ ಬ್ಯಾಟರ್‌ಗಳು ಕೂಡ ಬಾರಿಸುವ ಹೊಡೆತಗಳು ಕೂಡ ಡೇಂಜರಸ್ ಆಗಿರುತ್ತದೆ. ಹೀಗಾಗಿ ಪ್ರತಿ ಕ್ಷಣಗಳಲ್ಲೂ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಹೀಗೆ ರಾಜಸ್ಥಾನ್ ರಾಯಲ್ಸ್ ತಂಡದ ಅಭ್ಯಾಸದ ವೇಳೆ ಜಿಮ್ಮಿ ನೀಶಮ್ ಎಚ್ಚರಿಕೆವಹಿಸಿದ ಪರಿಣಾಮ ಬಚಾವಾಗಿದ್ದಾರೆ.
ನೆಟ್ಸ್ನಲ್ಲಿ ಯುವ ಆಟಗಾರ ರಿಯಾನ್ ಪರಾಗ್ಗೆ ಜಿಮ್ಮಿ ನೀಶಮ್ ಬೌಲಿಂಗ್ ಮಾಡುತ್ತಿದ್ದರು. ಈ ವೇಳೆ ಪರಾಗ್ ಬಾರಿಸಿದ ಶಾಟ್ ಜಿಮ್ಮಿ ನೀಶಮ್ ಮುಖಕ್ಕೆ ನೇರವಾಗಿ ಬಂದಿತ್ತು. ತಕ್ಷಣ ತಲೆ ಸರಿಸಿದ ಪರಿಣಾಮ ಜಿಮ್ಮಿ ನೀಶಮ್ ದೊಡ್ಡ ಅವಘಡವನ್ನು ತಪ್ಪಿಸಿಕೊಂಡರು. ಈ ಅಪಾಯಕಾರಿ ವಿಡಿಯೋಯನ್ನು ಜಿಮ್ಮಿ ನೀಶಮ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.
ಅಲ್ಲದೆ “ನಾನು ಈ ಮೂಲಕ ನೆಟ್ಸ್ನಲ್ಲಿ ರಿಯಾನ್ ಪರಾಗ್ಗೆ ಬೌಲಿಂಗ್ ಮಾಡುವುದರಿಂದ ನಿವೃತ್ತಿಯನ್ನು ಘೋಷಿಸಲು ಬಯಸುತ್ತೇನೆ… ” ಎಂದು ಜಿಮ್ಮಿ ನೀಶಮ್ ಬರೆದುಕೊಂಡಿದ್ದಾರೆ. ಒಟ್ಟಿನಲ್ಲಿ ಜಿಮ್ಮಿ ನೀಶಮ್ ಅವರ ಸಮಯಪ್ರಜ್ಞೆಯಿಂದ ಐಪಿಎಲ್ನಲ್ಲಿ ದೊಡ್ಡ ಅನಾಹುತವೊಂದು ತಪ್ಪಿದೆ.
— Prabhat Sharma (@PrabS619) April 9, 2022
ರಾಜಸ್ಥಾನ್ ರಾಯಲ್ಸ್‌ನ ಮುಂದಿನ ಪಂದ್ಯವನ್ನು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಏಪ್ರಿಲ್ 10 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಆಡಲಿದೆ. RR ಮೂರು ಪಂದ್ಯಗಳಲ್ಲಿ ಎರಡನ್ನು ಗೆದ್ದುಕೊಂಡಿದೆ. ಆದರೆ ಈ ಮೂರು ಪಂದ್ಯಗಳಲ್ಲಿ ಜಿಮ್ಮಿ ನೀಶಮ್ಗೆ ಅವಕಾಶ ಸಿಕ್ಕಿಲ್ಲ. ಹೀಗಾಗಿ ಮುಂದಿನ ಪಂದ್ಯದಲ್ಲಿ ನೀಶಮ್ ಕಣಕ್ಕಿಳಿಯಲಿದ್ದಾರಾ ಕಾದು ನೋಡಬೇಕಿದೆ.
ಇದನ್ನೂ ಓದಿ: ಐಪಿಎಲ್ನಲ್ಲಿ ಅತೀ ವೇಗವಾಗಿ ಅರ್ಧಶತಕ ಬಾರಿಸಿದ 10 ಬ್ಯಾಟರ್‌ಗಳು ಯಾರು ಗೊತ್ತಾ?