ಐನೂರು ಪಂದ್ಯಗಳ ಬಳಿಕ ಯಾರು ನಂಬರ್ ಒನ್?
ಟೀಮ್ ಇಂಡಿಯಾ ಪರ 500 ಪಂದ್ಯಗಳನ್ನಾಡಿರುವುದು ಕೇವಲ ಐವರು ಆಟಗಾರರು ಮಾತ್ರ. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವುದು ಸಚಿನ್ ತೆಂಡೂಲ್ಕರ್. ಆ ಬಳಿಕ ಈ ಸಾಧನೆ ಮಾಡಿದ ಆಟಗಾರರೆಂದರೆ ರಾಹುಲ್ ದ್ರಾವಿಡ್, ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ.

ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 500 ಪಂದ್ಯಗಳನ್ನು ಪೂರೈಸಿದ್ದಾರೆ. ಈ ಮೂಲಕ ಇಂಟರ್ನ್ಯಾಷನಲ್ ಕ್ರಿಕೆಟ್‌ನಲ್ಲಿ ಐನೂರು ಪಂದ್ಯಗಳನ್ನಾಡಿದ ವಿಶ್ವದ 11ನೇ ಆಟಗಾರ ಎನಿಸಿಕೊಂಡಿದ್ದಾರೆ. ಅಲ್ಲದೆ ಈ ಸಾಧನೆ ಮಾಡಿದ ಐದನೇ ಭಾರತೀಯ ಎಂಬ ಹೆಗ್ಗಳಿಕೆಯನ್ನು ಸಹ ತಮ್ಮದಾಗಿಸಿಕೊಂಡಿದ್ದಾರೆ.
ಈ ಸಾಧನೆಯ ಹೊರತಾಗಿಯೂ ಐನೂರು ಪಂದ್ಯಗಳ ಬಳಿಕ ರೋಹಿತ್ ಶರ್ಮಾ ಅಗ್ರಸ್ಥಾನಕ್ಕೇರಿಲ್ಲ. ಅಂದರೆ ಐನೂರು ಮ್ಯಾಚ್ ಗಳ ಬಳಿಕ ಅತ್ಯಧಿಕ ರನ್ ಗಳಿಸಿದ, ಶತಕ ಬಾರಿಸಿದ ಬ್ಯಾಟರ್ ಗಳ ಪಟ್ಟಿಯಲ್ಲಿ ಹಿಟ್ ಮ್ಯಾನ್ ಮೊದಲ ಸ್ಥಾನದಲ್ಲಿಲ್ಲ. ಹಾಗಿದ್ರೆ 500 ಪಂದ್ಯಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ರನ್ಗಳಿಸಿದ ಬ್ಯಾಟರ್ ಹಾಗೂ ಅತ್ಯಧಿಕ ಸೆಂಚುರಿ ಸಿಡಿಸಿದ ಬ್ಯಾಟರ್ ಯಾರೆಂದು ನೋಡುವುದಾದರೆ….
500 ಪಂದ್ಯಗಳ ಬಳಿಕ ಅತಿ ಹೆಚ್ಚು ರನ್ ಕಲೆಹಾಕಿದ ಬ್ಯಾಟರ್ಗಳ ಪಟ್ಟಿ:
- 25582 – ವಿರಾಟ್ ಕೊಹ್ಲಿ
- 25035 – ರಿಕಿ ಪಾಂಟಿಂಗ್
- 24874 – ಸಚಿನ್ ತೆಂಡೂಲ್ಕರ್
- 24779 – ಜಾಕ್ಸ್ ಕಾಲಿಸ್
- 23607 – ರಾಹುಲ್ ದ್ರಾವಿಡ್
- 22592 – ಕುಮಾರ ಸಂಗಕ್ಕಾರ
- 20320 – ಮಹೇಲ ಜಯವರ್ಧನೆ
- 19708 – ರೋಹಿತ್ ಶರ್ಮಾ
- 18839 – ಸನತ್ ಜಯಸೂರ್ಯ
- 16330 – ಎಂಎಸ್ ಧೋನಿ
- 10899 – ಶಾಹಿದ್ ಅಫ್ರಿದಿ
500 ಪಂದ್ಯಗಳ ಬಳಿಕ ಅತಿ ಹೆಚ್ಚು ಶತಕ ಸಿಡಿಸಿದ ಬ್ಯಾಟರ್ಗಳ ಪಟ್ಟಿ:
- 76 – ವಿರಾಟ್ ಕೊಹ್ಲಿ
- 75 – ಸಚಿನ್ ತೆಂಡೂಲ್ಕರ್ 68 – ರಿಕಿ ಪಾಂಟಿಂಗ್
- 60 – ಜಾಕ್ಸ್ ಕಾಲಿಸ್
- 49 – ರೋಹಿತ್ ಶರ್ಮಾ
- 47 – ಕುಮಾರ ಸಂಗಕ್ಕಾರ
- 47 – ರಾಹುಲ್ ದ್ರಾವಿಡ್
- 44 – ಮಹೇಲ ಜಯವರ್ಧನೆ
- 39 – ಸನತ್ ಜಯಸೂರ್ಯ
- 16 – ಮಹೇಂದ್ರ ಸಿಂಗ್ ಧೋನಿ
- 11 – ಶಾಹಿದ್ ಅಫ್ರಿದಿ
500 ಪಂದ್ಯಗಳ ಬಳಿಕ ಅತಿ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರರ ಪಟ್ಟಿ:
- 63 – ವಿರಾಟ್ ಕೊಹ್ಲಿ
- 62 – ಸಚಿನ್ ತೆಂಡೂಲ್ಕರ್
- 57 – ಜಾಕ್ಸ್ ಕಾಲಿಸ್
- 51 – ಸನತ್ ಜಯಸೂರ್ಯ
- 47 – ರಿಕಿ ಪಾಂಟಿಂಗ್
- 44 – ರೋಹಿತ್ ಶರ್ಮಾ
- 41 – ಶಾಹಿದ್ ಅಫ್ರಿದಿ
- 37 – ಕುಮಾರ ಸಂಗಕ್ಕಾರ
- 31 – ಮಹೇಲ ಜಯವರ್ಧನೆ
- 25 – ರಾಹುಲ್ ದ್ರಾವಿಡ್
- 23 – ಮಹೇಂದ್ರ ಸಿಂಗ್ ಧೋನಿ
ಕಿಂಗ್ ಕೊಹ್ಲಿಯೇ ನಂಬರ್ ಒನ್:
500 ಪಂದ್ಯಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್ಗಳಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇನ್ನು ಶತಕ ಸರದಾರರ ಪಟ್ಟಿಯಲ್ಲೂ ಕಿಂಗ್ ಕೊಹ್ಲಿಯೇ ಮೊದಲ ಸ್ಥಾನದಲ್ಲಿದ್ದಾರೆ. ಹಾಗೆಯೆ 500 ಪಂದ್ಯಗಳಲ್ಲಿ ಅತೀ ಹೆಚ್ಚು ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರರ ಪಟ್ಟಿಯಲ್ಲೂ ವಿರಾಟ್ ಕೊಹ್ಲಿಯೇ ನಂಬರ್ ಒನ್.
ಇದನ್ನೂ ಓದಿ: Team India: ಹೀಗಾದಲ್ಲಿ ಟೀಮ್ ಇಂಡಿಯಾ ಸೆಮಿಫೈನಲ್ಗೇರುವುದು ಖಚಿತ
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 500 ಪಂದ್ಯಗಳನ್ನಾಡಿದ ಆಟಗಾರರು:
- ಸಚಿನ್ ತೆಂಡೂಲ್ಕರ್ (664 ಪಂದ್ಯಗಳು)
- ಮಹೇಲ ಜಯವರ್ಧನೆ (652 ಪಂದ್ಯಗಳು)
- ಕುಮಾರ ಸಂಗಾಕ್ಕರ (594 ಪಂದ್ಯಗಳು)
- ಸನತ್ ಜಯಸೂರ್ಯ (586 ಪಂದ್ಯಗಳು)
- ರಿಕಿ ಪಾಂಟಿಂಗ್ (560 ಪಂದ್ಯಗಳು)
- ವಿರಾಟ್ ಕೊಹ್ಲಿ (551 ಪಂದ್ಯಗಳು)
- ಮಹೇಂದ್ರ ಸಿಂಗ್ ಧೋನಿ (538 ಪಂದ್ಯಗಳು)
- ಶಾಹಿದ್ ಅಫ್ರಿದಿ (524 ಪಂದ್ಯಗಳು)
- ಜಾಕ್ಸ್ ಕಾಲಿಸ್ (519 ಪಂದ್ಯಗಳು)
- ರಾಹುಲ್ ದ್ರಾವಿಡ್ (509 ಪಂದ್ಯಗಳು)
- ರೋಹಿತ್ ಶರ್ಮಾ (500 ಪಂದ್ಯಗಳು)
