Vaibhav Arora: U19 ಕ್ರಿಕೆಟ್​ಗೆ 3 ಬಾರಿ ರಿಜೆಕ್ಟ್; ಮನೆಗಾಗಿ ಕ್ರಿಕೆಟ್ ಬಿಡಲು ಸಿದ್ದನಾಗಿದ್ದವ ಈಗ ಐಪಿಎಲ್​ನ ಸೂಪರ್​ಸ್ಟಾರ್!

| Updated By: ಪೃಥ್ವಿಶಂಕರ

Updated on: Apr 04, 2022 | 6:21 PM

Vaibhav Arora Punjab Kings: ಆ ವೇಳೆ ವೈಭವ್ ಕುಟುಂಬದ ಆರ್ಥಿಕ ಸ್ಥಿತಿಯೂ ಹದಗೆಟ್ಟಿತ್ತು. ವೈಭವ್ ಅವರ ತಂದೆಯ ಡೈರಿ ವ್ಯಾಪಾರ ಮುಳುಗಿತು. ವೈಭವ್ ಮನೆಯ ಹಿರಿಯ ಮಗನಾದ ಕಾರಣ ಅವರ ಹೆಗಲಿಗೆ ಜವಬ್ದಾರಿಯ ಹೊರೆಬಿದ್ದಿತು.

Vaibhav Arora: U19 ಕ್ರಿಕೆಟ್​ಗೆ 3 ಬಾರಿ ರಿಜೆಕ್ಟ್; ಮನೆಗಾಗಿ ಕ್ರಿಕೆಟ್ ಬಿಡಲು ಸಿದ್ದನಾಗಿದ್ದವ ಈಗ ಐಪಿಎಲ್​ನ ಸೂಪರ್​ಸ್ಟಾರ್!
ಪಂಜಾಬ್ ತಂಡ
Follow us on

ಐಪಿಎಲ್ 2022 (IPL 2022)ರ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ವಿರುದ್ಧದ ಪಂದ್ಯದಲ್ಲಿ, ಪಂಜಾಬ್ ಕಿಂಗ್ಸ್ (Punjab Kings) ವೇಗದ ಬೌಲರ್ ವೈಭವ್ ಅರೋರಾ ತಮ್ಮ ಅದ್ಭುತ ಪ್ರದರ್ಶನದಿಂದ ಎಲ್ಲರ ಗಮನ ಸೆಳೆದರು. ಈ ಬೌಲರ್ 4 ಓವರ್ ಬೌಲ್ ಮಾಡಿ 21 ರನ್ಗೆ ಎರಡು ವಿಕೆಟ್ ಪಡೆದು ಪಂಜಾಬ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ವೈಭವ್ ಪ್ರಮುಖವಾಗಿ ರಾಬಿನ್ ಉತ್ತಪ್ಪ ಮತ್ತು ಮೊಯಿನ್ ಅಲಿಯಂತಹ ಅಪಾಯಕಾರಿ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದರು. ಆದರೆ ಐಪಿಎಲ್ 2022 ರಲ್ಲಿ ಮಿಂಚುವ ಮೊದಲು ವೈಭವ್ ಅರೋರಾ ಬದುಕು ನೋವಿನಿಂದ ಕೂಡಿತ್ತು ಎಂಬ ಸಂಗತಿ ತಿಳಿದರೆ ಎಲ್ಲರ ಕಣ್ಣಲ್ಲೂ ನೀರು ತುಂಬುವುದಂತ್ತೂ ಖಂಡಿತ. ವಾಸ್ತವವಾಗಿ ವೈಭವ್, ಪಂಜಾಬ್‌ ತಂಡದ ಮತ್ತೊಬ್ಬ ಎಡಗೈ ಬೌಲರ್ ಅರ್ಷದೀಪ್ ಸಿಂಗ್ ಅವರ ಸಹಪಾಠಿಯಾಗಿದ್ದಾರೆ. ಕಾಲೇಜಿನಲ್ಲಿ ಇಬ್ಬರೂ ಒಟ್ಟಿಗೆ ಆಡುತ್ತಿದ್ದರು. ಆದರೆ ಅಲ್ಲಿ ಅರ್ಷದೀಪ್ ಸಿಂಗ್ ಅವರಿಗೆ ಮೊದಲ ಅವಕಾಶ ಸಿಕ್ಕಿತು. ಆದರೆ ವೈಭವ್​ ಅವಕಾಶ ವಂಚಿತರಾದರು. ಹೀಗಾಗಿ ವೈಭವ್ ಕ್ರಿಕೆಟ್ ಆಡಲು ಪಂಜಾಬ್ ತೊರೆದು ಹಿಮಾಚಲ ಪ್ರದೇಶಕ್ಕೆ ಹೋಗಬೇಕಾಯಿತು. ಅಲ್ಲಿಂದ ವೈಭವ್ ಅದೃಷ್ಟ ಖುಲಾಯಿಸಿತು.

ಅರ್ಷದೀಪ್ ಸಿಂಗ್ ಭಾರತದ ಅಂಡರ್-19 ತಂಡದಲ್ಲಿ ಆಡಿದ್ದಾರೆ. ಜೊತೆಗೆ ಬಹಳ ವರ್ಷಗಳಿಂದ ಐಪಿಎಲ್​ನಲ್ಲಿ ಆಡುತ್ತಿದ್ದಾರೆ. ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಪ್ರಕಾರ, ವೈಭವ್ ಅರೋರಾ ಅವರು ಪಂಜಾಬ್ ಅಂಡರ್ 19 ಶಿಬಿರಕ್ಕೆ ಮೂರು ಬಾರಿ ಆಯ್ಕೆಯಾದರು ಆದರೆ ಅವರಿಗೆ ತಂಡದಲ್ಲಿ ಆಡುವ ಅವಕಾಶ ಸಿಗಲಿಲ್ಲ. ನಿರಾಕರಣೆಯಿಂದಾಗಿ, ಅವರು ಕ್ರಿಕೆಟ್ ತೊರೆದು ಖಾಸಗಿ ಉದ್ಯೋಗವನ್ನು ಹುಡುಕಲು ಯೋಚಿಸಿದರು. ಈ ಬಗ್ಗೆ ತಮ್ಮ ಕೋಚ್ ಜೊತೆಯೂ ಮಾತನಾಡಿದ್ದರು.

ಆ ವೇಳೆ ವೈಭವ್ ಕುಟುಂಬದ ಆರ್ಥಿಕ ಸ್ಥಿತಿಯೂ ಹದಗೆಟ್ಟಿತ್ತು. ವೈಭವ್ ಅವರ ತಂದೆಯ ಡೈರಿ ವ್ಯಾಪಾರ ಮುಳುಗಿತು. ವೈಭವ್ ಮನೆಯ ಹಿರಿಯ ಮಗನಾದ ಕಾರಣ ಅವರ ಹೆಗಲಿಗೆ ಜವಬ್ದಾರಿಯ ಹೊರೆಬಿದ್ದಿತು. ಈ ವೇಳೆ ವೈಭವ್ ನೆರವಿಗೆ ಕೋಚ್ ರವಿ ವರ್ಮಾ ಮುಂದಾದರು. ವೈಭವ್‌ಗಾಗಿ ಅವರ ಕುಟುಂಬದ ಬಳಿ ಎರಡು ವರ್ಷಗಳ ಕಾಲಾವಕಾಶ ಕೇಳಿದ ಅವರ ಕೋಚ್, ಇದರೊಂದಿಗೆ ಅವರ ಕುಟುಂಬದ ನಿರ್ವಾಹಣೆಯ ಜವಬ್ದಾರಿಯನ್ನು ಅವರೇ ವಹಿಸಿಕೊಂಡರು.

ಪಂದ್ಯದಲ್ಲಿ ಏಳು ಕ್ಯಾಚ್‌ ಡ್ರಾಪ್
2018 ರಲ್ಲಿ, ವೈಭವ್ ಅರೋರಾ ಕೋಚ್ ರವಿ ವರ್ಮಾ ಅವರ ಸಹಾಯದಿಂದ ಪಂಜಾಬ್ ಬದಲಿಗೆ ಹಿಮಾಚಲ ಪ್ರದೇಶದಿಂದ ಆಡಲು ಹೋಗಿದ್ದರು. ಇಲ್ಲಿ ಜಿಲ್ಲಾ ಮಟ್ಟದ ಪಂದ್ಯವೊಂದರಲ್ಲಿ ಅವರ ಬೌಲಿಂಗ್‌ನಲ್ಲಿ ಏಳು ಕ್ಯಾಚ್‌ಗಳನ್ನು ಕೈಬಿಡಲಾಯಿತು. ಇದರಿಂದ ವಿಚಲಿತರಾದ ವೈಭವ್ ಮತ್ತೆ ಕೋಚ್​ಗೆ ಕರೆ ಮಾಡಿ ಯಾವುದಾದರೂ ಖಾಸಗಿ ಕೆಲಸ ನೋಡಿ ಎಂದು ಹೇಳಿದ್ದಾರೆ. ಇದನ್ನು ಕೇಳಿದ ಕೋಚ್‌ಗೆ ಎಲ್ಲಿದ ಕೋಪ ಬಂದಿದೆ. ನಿಮ್ಮ ಹಣೆಯ ಮೇಲೆ ಪಾಸಿಟಿವ್ ಎಂಬ ಪದ ಬರೆದುಕೊಂಡುಬಿಡಿ, ಮತ್ತೆ ನನಗೆ ಕರೆ ಮಾಡಬೇಡಿ ಎಂದು ಹೇಳಿ ಆಕ್ರೋಶದಿಂದ ಫೋನ್ ಕಟ್ ಮಾಡಿದ್ದರಂತೆ. ಕೋಚ್‌ನಿಂದ ನಿಂದಿಸಲ್ಪಟ್ಟ ನಂತರ ವೈಭವ್ ಮತ್ತೆ ಕ್ರಿಕೆಟ್‌ನತ್ತ ಗಮನ ಹರಿಸಿದರು. ಮುಂದಿನ ಪಂದ್ಯದಲ್ಲಿ ಅವರು ಐದು ವಿಕೆಟ್ ಪಡೆದು ಮಿಂಚಿದಲ್ಲದೆ, ಹಿಮಾಚಲ ಪ್ರದೇಶ ಅಂಡರ್ 23 ತಂಡಕ್ಕೆ ಆಯ್ಕೆಯಾದರು.

ಚೊಚ್ಚಲ ರಣಜಿಯಲ್ಲಿ ಪೂಜಾರ ವಿಕೆಟ್
ಅಂಡರ್-23 ODIಗಳಲ್ಲಿ, ಅವರು ಒಂಬತ್ತು ಪಂದ್ಯಗಳಲ್ಲಿ 26 ವಿಕೆಟ್‌ಗಳನ್ನು ಪಡೆದು, ಪಂದ್ಯಾವಳಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ನಂತರ ಅವರಿಗೆ ಹಿಮಾಚಲ ಪ್ರದೇಶ ರಣಜಿ ತಂಡಕ್ಕೆ ಬುಲಾವ್ ಬಂತು. ಇಲ್ಲಿ ಸೌರಾಷ್ಟ್ರ ವಿರುದ್ಧದ ಮೊದಲ ಪಂದ್ಯದಲ್ಲಿ 105 ರನ್‌ ನೀಡಿ ಒಂಬತ್ತು ವಿಕೆಟ್‌ಗಳನ್ನು ಕಬಳಿಸಿದರು. ಈ ಪಂದ್ಯದಲ್ಲಿ ಅವರು ಚೇತೇಶ್ವರ ಪೂಜಾರ ಅವರನ್ನು ಬೌಲ್ಡ್ ಮಾಡಿದರು. ಆದರೆ ಅವರನ್ನು IPL 2020 ಹರಾಜಿನಲ್ಲಿ ಯಾವ ತಂಡವೂ ಖರೀದಿ ಮಾಡಿರಲಿಲ್ಲ. ನಂತರ ಅರ್ಷದೀಪ್ ಸಿಂಗ್ ಅವರಿಗೆ ಸಹಾಯ ಮಾಡಿ, ಪಂಜಾಬ್ ಕಿಂಗ್ಸ್ ತಂಡಕ್ಕೆ ಅವರನ್ನು ನೆಟ್ ಬೌಲರ್ ಆಗಿ ತೆಗೆದುಕೊಳ್ಳುವಂತೆ ಮಾಡಿದರು.

IPL 2021 ರಲ್ಲಿ KKR ಬೆಂಬಲ
2021 ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ, ಅವರು ಆರು ಪಂದ್ಯಗಳಲ್ಲಿ 10 ವಿಕೆಟ್ಗಳನ್ನು ಪಡೆದರು. ಇದರೊಂದಿಗೆ ತಂಡ ಕ್ವಾರ್ಟರ್ ಫೈನಲ್ ತಲುಪಿತು. ನಂತರ ಐಪಿಎಲ್ 2021 ರಲ್ಲಿ, ಕೆಕೆಆರ್ ವೈಭವ್ ಅರೋರಾ ಅವರನ್ನು 20 ಲಕ್ಷ ರೂಪಾಯಿಗಳಿಗೆ ಖರೀದಿಸಿತು. ಈಗ ಐಪಿಎಲ್ 2022 ರ ಮೊದಲು ಹರಾಜಿನಲ್ಲಿ, ಪಂಜಾಬ್ ಕಿಂಗ್ಸ್ ಅವರಿಗೆ ಎರಡು ಕೋಟಿ ಖರ್ಚು ಮಾಡಿದೆ.

ಇದನ್ನೂ ಓದಿ:RR vs RCB: ಐಪಿಎಲ್​ನ ಬಲಿಷ್ಠ ತಂಡಗಳ ಮುಖಾಮುಖಿ; ಎರಡೂ ತಂಡಗಳ ಸಂಭಾವ್ಯ ಪ್ಲೇಯಿಂಗ್-11