ಜೋ ರೂಟ್ ಬದಲಿಗೆ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕತ್ವ ಯಾರಿಗೆ ಸಿಗಲಿದೆ? ರೇಸ್​ನಲ್ಲಿರುವವರ ಪಟ್ಟಿ ಇಲ್ಲಿದೆ

| Updated By: ಪೃಥ್ವಿಶಂಕರ

Updated on: Apr 15, 2022 | 4:34 PM

ಬ್ಯಾಟ್ಸ್‌ಮನ್ ಆಗಿ ಜೋ ರೂಟ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ಅವರ ನಾಯಕತ್ವದಲ್ಲಿ, ಇತ್ತೀಚಿನ ಸರಣಿಯಲ್ಲಿ ತಂಡವು ಕಳಪೆ ಪ್ರದರ್ಶನ ನೀಡಿ ಎಲ್ಲರ ಕೆಂಗಣಿಗೆ ಗುರಿಯಾಗಬೇಕಾಯಿತು.

ಜೋ ರೂಟ್ ಬದಲಿಗೆ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕತ್ವ ಯಾರಿಗೆ ಸಿಗಲಿದೆ? ರೇಸ್​ನಲ್ಲಿರುವವರ ಪಟ್ಟಿ ಇಲ್ಲಿದೆ
ಜೋ ರೂಟ್
Follow us on

ಜೋ ರೂಟ್ (Joe Root) ಇಂಗ್ಲೆಂಡ್ ಟೆಸ್ಟ್ ನಾಯಕತ್ವವನ್ನು ತೊರೆದಿದ್ದಾರೆ. ಹೀಗಿರುವಾಗ ಈಗ ತಂಡದಲ್ಲಿ ಅವರ ಸ್ಥಾನ ಯಾರಿಗೆ ಸಿಗಲಿದೆ ಎಂಬ ದೊಡ್ಡ ಪ್ರಶ್ನೆ ಎದ್ದಿದೆ. ರೆಡ್ ಬಾಲ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್‌ನ ನಾಯಕತ್ವವನ್ನು ತೆಗೆದುಕೊಳ್ಳಲು ಹಲವು ಸ್ಪರ್ಧಿಗಳು ಸಿದ್ಧರಾಗಿದ್ದಾರೆ. ECB ಯುವ ಆಟಗಾರನ ಕೈಗೆ ನಾಯಕತ್ವವನ್ನು ನೀಡುತ್ತದೆಯೇ ಅಥವಾ ಜೋ ರೂಟ್ ಬದಲಿಗೆ ಅನುಭವಿ ಆಟಗಾರನನ್ನು ಆಯ್ಕೆ ಮಾಡುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ. ಸದ್ಯ ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆದರೆ ಮುಂದಿನ ದಿನಗಳಲ್ಲಿ ಚಿತ್ರ ಹೊರಬರಬಹುದು.

ಜೋ ರೂಟ್ ನಾಯಕತ್ವವನ್ನು ತೊರೆದ ನಂತರ, ಇಂಗ್ಲೆಂಡ್‌ನ ಟೆಸ್ಟ್ ತಂಡದ ನಾಯಕನಾಗಲು ಅನೇಕ ಸ್ಪರ್ಧಿಗಳು ಇದ್ದಾರೆ. ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು ಟೆಸ್ಟ್ ತಂಡದ ಸಾಮಾನ್ಯ ಭಾಗವಾಗಿರುವ ಆಟಗಾರನಿಗೆ ನಾಯಕತ್ವದ ಅಧಿಕಾರವನ್ನು ಹಸ್ತಾಂತರಿಸಲು ಬಯಸಿದೆ. ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್, ಜಾನಿ ಬೈರ್‌ಸ್ಟೋ ಅವರಂತಹ ಸ್ಟಾರ್​ ಆಟಗಾರರ ಹೆಸರುಗಳನ್ನು ಮುಂಚೂಣಿಯಲ್ಲಿ ಕಾಣಬಹುದು. ಈ ಆಟಗಾರರು ಕೇವಲ ಟೆಸ್ಟ್ ತಂಡದ ಭಾಗವಾಗಿರದೆ ಇಂಗ್ಲೆಂಡ್ ತಂಡದಲ್ಲೂ ಅನುಭವಿಗಳಾಗಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಇಸಿಬಿ ಅವರ ಹೆಸರನ್ನು ಪರಿಗಣಿಸಬಹುದು.

ಬೆನ್ ಸ್ಟೋಕ್ಸ್ ಬೆಸ್ಟ್ ಆಪ್ಷನ್
ಅಂದಹಾಗೆ, ಇಂಗ್ಲೆಂಡ್‌ಗೆ ನಾಯಕನಾಗಿ 27 ಟೆಸ್ಟ್‌ಗಳನ್ನು ಗೆದ್ದು ದಾಖಲೆ ನಿರ್ಮಿಸಿದ ಜೋ ರೂಟ್ ಅವರ ಹುದ್ದೆಯನ್ನು ತೊರೆದ ನಂತರ, ಇಸಿಬಿ ಮೊದಲು ಬೆನ್ ಸ್ಟೋಕ್ಸ್ ಕಡೆಗೆ ನೋಡಬಹುದು. ಅದೇನೆಂದರೆ, ಬೆನ್ ಸ್ಟೋಕ್ಸ್ ಟೆಸ್ಟ್ ನಾಯಕನಾಗುವ ರೇಸ್‌ನಲ್ಲಿ ಮುಂಚೂಣಿಯಲ್ಲಿರಬಹುದು. ಅವರನ್ನು ಹೊರತುಪಡಿಸಿ, ಮತ್ತೊಂದು ಹೆಸರು ಜೋಸ್ ಬಟ್ಲರ್ ಆಗಿರಬಹುದು. ಆದಾಗ್ಯೂ, ನಾಯಕತ್ವವನ್ನು ಯಾರ ಕೈಯಲ್ಲಿ ಹಸ್ತಾಂತರಿಸಬೇಕು ಎಂಬ ನಿರ್ಧಾರವನ್ನು ಇಸಿಬಿ ತೆಗೆದುಕೊಳ್ಳಬೇಕು.

ಬ್ಯಾಟ್ಸ್‌ಮನ್ ಆಗಿ ಜೋ ರೂಟ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ಅವರ ನಾಯಕತ್ವದಲ್ಲಿ, ಇತ್ತೀಚಿನ ಸರಣಿಯಲ್ಲಿ ತಂಡವು ಕಳಪೆ ಪ್ರದರ್ಶನ ನೀಡಿ ಎಲ್ಲರ ಕೆಂಗಣಿಗೆ ಗುರಿಯಾಗಬೇಕಾಯಿತು. ಇದು ರೂಟ್ ನಾಯಕತ್ವ ತೊರೆಯಲು ಪ್ರಮುಖ ಕಾರಣವೆಂದು ನಂಬಲಾಗಿದೆ. ಕಳೆದ 18 ಟೆಸ್ಟ್‌ಗಳಲ್ಲಿ 11ರಲ್ಲಿ ಇಂಗ್ಲೆಂಡ್ ಸೋತಿರುವುದು ಇದಕ್ಕೆ ಪುಷ್ಠಿ ನೀಡುತ್ತಿದೆ.

ಟೆಸ್ಟ್‌ನಲ್ಲಿ ಜೋ ರೂಟ್ ಅವರ ನಾಯಕತ್ವ ವೃತ್ತಿಜೀವನ
64 ಟೆಸ್ಟ್‌ಗಳಲ್ಲಿ ಇಂಗ್ಲೆಂಡ್‌ನ ನಾಯಕತ್ವದ ದಾಖಲೆ ಜೋ ರೂಟ್ ಹೆಸರಿನಲ್ಲಿದೆ. ಈ ಅವಧಿಯಲ್ಲಿ ಅವರು 27 ಟೆಸ್ಟ್‌ಗಳನ್ನು ಗೆದ್ದಿದ್ದರೆ, ಇಂಗ್ಲೆಂಡ್ 26 ರಲ್ಲಿ ಸೋತಿದೆ. 11 ಟೆಸ್ಟ್ ಡ್ರಾಗಳಾಗಿವೆ. ನಾಯಕನಾಗಿ ಬ್ಯಾಟಿಂಗ್‌ನಲ್ಲಿಯೂ ಜೋ ರೂಟ್ ಅವರ ಬ್ಯಾಟ್ ಹೆಚ್ಚು ಮಾತನಾಡಿದೆ. ಅವರು 64 ಟೆಸ್ಟ್‌ಗಳಲ್ಲಿ 5295 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರ ರನ್ ಸರಾಸರಿ 46 ಆಗಿದ್ದು, 14 ಶತಕಗಳು ಬ್ಯಾಟ್‌ನಿಂದ ಹೊರಬಂದಿವೆ.

ಇದನ್ನೂ ಓದಿ:IPL 2022 MI vs LSG Live Streaming: ಗೆಲ್ಲಲೇಬೇಕಾದ ಒತ್ತಡದಲ್ಲಿ ಮುಂಬೈ; ಪಂದ್ಯದ ಬಗೆಗಿನ ಪೂರ್ಣ ಮಾಹಿತಿ