ಮುಂಬೈ ಇಂಡಿಯನ್ಸ್ (Mumbai Indians) ಐಪಿಎಲ್‌ನ ಅತ್ಯಂತ ಯಶಸ್ವಿ ತಂಡವಾಗಿದೆ. ಅತ್ಯಂತ ಯಶಸ್ವಿ ಆಟಗಾರ ಎಂದರೆ ತಂಡದ ನಾಯಕ, ಅಂದರೆ ರೋಹಿತ್ ಶರ್ಮಾ (Rohit Sharma). ಆದರೆ 15 ನೇ ಆವೃತ್ತಿಯಲ್ಲಿ ಈ ತಂಡದ ಹಣೆಬರಹ ಕೆಟ್ಟದೆ ಎಂದು ತೊರುತ್ತದೆ. ಅದರ ವೈಭವ ಕುಂದಿದೆ. ಸೋಲು ಬಿಟ್ಟುಕೊಡುತಿಲ್ಲ ಮತ್ತು ಗೆಲುವು ಹತ್ತಿರ ಬರಲು ಸಿದ್ಧವಿಲ್ಲ. ಈಗ ಅಂತಹ ಪರಿಸ್ಥಿತಿಯಲ್ಲಿ ಮುಂಬೈ ತಂಡ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಜೊತೆ ಸೆಣಸಾಡಲು ಸಿದ್ದವಾಗಿದೆ. ಇತಿಹಾಸವನ್ನು ಅವಲೋಕಿಸಿದರೆ ಮುಂಬೈ ಅಬ್ಬರದ ಮುಂದೆ ಬೆಂಗಳೂರು ಕೊಂಚ ಮಂಕಾಗಿದೆ. ಆದರೆ, ಈ ಸೀಸನ್ ಅಂದರೆ ಐಪಿಎಲ್ 15ನೇ ಸೀಸನ್ ಬಗ್ಗೆ ಮಾತನಾಡುವುದಾದರೆ ರಾಯಲ್ ಚಾಲೆಂಜರ್ಸ್ ವಿಭಿನ್ನ ತಂಡವಾಗಿ ಕಾಣುತ್ತಿದೆ. ಜೊತೆಗೆ ತಂಡದ ಆಟ ಹಿಂದಿನ ಸೀಸನ್‌ಗಳಿಗಿಂತ ಭಿನ್ನವಾಗಿದೆ.
IPL 2022 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಲ್ಲಿಯವರೆಗೆ 3 ಪಂದ್ಯಗಳನ್ನು ಆಡಿದೆ. ಅದರಲ್ಲಿ 2 ಪಂದ್ಯಗಳಲ್ಲಿ ಗೆದ್ದಿದ್ದರೆ ಒಂದೇ ಒಂದು ಪಂದ್ಯದಲ್ಲಿ ಸೋತಿದ್ದಾರೆ. ಮುಂಬೈ ಇಂಡಿಯನ್ಸ್ ಕೂಡ ಇದುವರೆಗೆ ಕೇವಲ 3 ಪಂದ್ಯಗಳನ್ನಾಡಿದೆ. ಆದರೆ ಒಂದರಲ್ಲಿಯೂ ಗೆಲುವು ಸಾಧಿಸಿಲ್ಲ. ಅದೇನೆಂದರೆ ಆಡಿದ ಮೂರೂ ಪಂದ್ಯಗಳಲ್ಲಿ ಸೋತಿದೆ.
ಆರ್‌ಸಿಬಿಯನ್ನು ಸೋಲಿಸಲು ಮುಂಬೈ ಇಂಡಿಯನ್ಸ್ ಏನು ಮಾಡಬೇಕು?
ಈಗ ಐಪಿಎಲ್ 2022 ರ ಪಿಚ್‌ನಲ್ಲಿ ಮುಂಬೈ ಇಂಡಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಹೇಗೆ ಎದುರಿಸಲಿದೆ? ಎಂಬುದನ್ನು ಕಾದುನೋಡಬೇಕಿದೆ. ಮುಂಬೈ ಇಂಡಿಯನ್ಸ್‌ನಲ್ಲಿ ಯಾವುದೇ ವಿಭಾಗವಿದೆ ಎಂದಲ್ಲ. ತಂಡವಾಗಿ ಪ್ರದರ್ಶನದ ಮೂಲಕ, ಒಬ್ಬ ಅಥವಾ ಇಬ್ಬರು ಆಟಗಾರರ ಪ್ರದರ್ಶನವನ್ನು ಅವಲಂಬಿಸುವ ಬದಲು ಇಡೀ ತಂಡವು ಅವರ ಆಟಕ್ಕೆ ಜೀವ ತುಂಬಬೇಕಾಗಿದೆ. ಆಗ ಮಾತ್ರ ಮುಂಬೈ ಇಂಡಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿನ ಬಾಗಿಲನ್ನು ಮುಚ್ಚಬಹುದು.
ಒಟ್ಟಾರೆ ಅಂಕಿಅಂಶಗಳ ಪ್ರಕಾರ, ಮುಂಬೈ ಇಂಡಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರುಗಿಂತ ಮುಂದಿದೆ. ಉಭಯ ತಂಡಗಳ ನಡುವೆ ಐಪಿಎಲ್ ಪಿಚ್‌ನಲ್ಲಿ ಇದುವರೆಗೆ 31 ಪಂದ್ಯಗಳು ನಡೆದಿದ್ದು, ಇದರಲ್ಲಿ 19 ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ಗೆದ್ದಿದ್ದರೆ, 12 ಪಂದ್ಯಗಳಲ್ಲಿ ಬೆಂಗಳೂರಿನ ಗೆಲುವಿನ ಸದ್ದು ಕೇಳಿ ಬಂದಿದೆ.
RCB ಜೊತೆಗೆ ಮುಂಬೈ ಇತ್ತೀಚಿನ ಅಂಕಿಅಂಶಗಳು
ಆದರೆ, ನಾವು ಕಳೆದ 5 ಮುಖಾಮುಖಿಗಳನ್ನು ನೋಡಿದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಅದರಲ್ಲಿ 3 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಈ ಸಂದರ್ಭದಲ್ಲಿ, ಒಂದು ಪಂದ್ಯವನ್ನು ಸೂಪರ್ ಓವರ್‌ನಲ್ಲಿ RCB ಗೆದ್ದುಕೊಂಡಿತು. ಅಂದರೆ, ಇತ್ತೀಚಿನ ಅಂಕಿಅಂಶಗಳು ಬೆಂಗಳೂರಿನ ಪರವಾಗಿದ್ದು ಇದು ಮುಂದುವರಿದರೆ, ಮುಂಬೈಗೆ ಕಷ್ಟವಾಗಬಹುದು. ಅದನ್ನು ತಪ್ಪಿಸಲು ಇಡೀ ತಂಡವು ಪ್ರದರ್ಶನ ನೀಡಬೇಕಾದ ಏಕೈಕ ಮಾರ್ಗವಾಗಿದೆ.
ಐಪಿಎಲ್ 2022 ರ ಮೊದಲ ಮೂರು ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್‌ನ ನ್ಯೂನತೆಗಳು ಜಗಜ್ಜಾಹಿರಾಗಿವೆ. ರೋಹಿತ್ ಬಳಗ ಎಲ್ಲ ವಿಭಾಗದಲ್ಲೂ ಫ್ಲಾಪ್ ಆಗಿ ಕಾಣಿಸಿಕೊಂಡಿದೆ. RCB ವಿರುದ್ಧ, ಅವರು ತಮ್ಮ ಹಿಂದಿನ ಎಲ್ಲಾ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕು. ಆಗ ಮಾತ್ರ ಗೆಲುವು ಸಾಧಿಸಲು ಸಾಧ್ಯ.
ಇದನ್ನೂ ಓದಿ:IPL 2022: ಆರ್ಸಿಬಿ ಎದುರು ಸೋತ ರಾಜಸ್ಥಾನ್ಗೆ ಮತ್ತೊಂದು ಆಘಾತ; ಐಪಿಎಲ್ನಿಂದ ತಂಡದ ವೇಗದ ಬೌಲರ್ ಔಟ್..!