ICC Rankings: ಮೊದಲೆರಡು ಸ್ಥಾನದಲ್ಲಿ ಜಡೇಜಾ- ಅಶ್ವಿನ್​! ರ‍್ಯಾಂಕಿಂಗ್​ನಲ್ಲಿ ಕುಸಿದ ಕೊಹ್ಲಿ- ರೋಹಿತ್ ಸ್ಥಾನ

ICC Rankings: ವಿರಾಟ್ ಕೊಹ್ಲಿ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಅಗ್ರ 10 ರಿಂದ ಮತ್ತಷ್ಟು ಕುಸಿತ ಕಂಡಿದ್ದಾರೆ. ಸದ್ಯ ವಿರಾಟ್ ಕೊಹ್ಲಿ 9ನೇ ಸ್ಥಾನದಿಂದ 10ನೇ ಸ್ಥಾನಕ್ಕೆ ಕುಸಿದಿದ್ದಾರೆ. ರೋಹಿತ್ ಶರ್ಮಾ ಕೂಡ ಒಂದು ಸ್ಥಾನ ಕುಸಿದು 8ನೇ ಸ್ಥಾನಕ್ಕೆ ತಲುಪಿದ್ದಾರೆ.

ICC Rankings: ಮೊದಲೆರಡು ಸ್ಥಾನದಲ್ಲಿ ಜಡೇಜಾ- ಅಶ್ವಿನ್​! ರ‍್ಯಾಂಕಿಂಗ್​ನಲ್ಲಿ ಕುಸಿದ ಕೊಹ್ಲಿ- ರೋಹಿತ್ ಸ್ಥಾನ
Rohit Sharma and Virat Kohli
Follow us
TV9 Web
| Updated By: ಪೃಥ್ವಿಶಂಕರ

Updated on: Mar 30, 2022 | 6:21 PM

ICC ಬಿಡುಗಡೆ ಮಾಡಿದ ಟೆಸ್ಟ್ ಮತ್ತು ODI ಶ್ರೇಯಾಂಕಗಳಲ್ಲಿ (Test and ODI rankings) ಹಲವು ಪ್ರಮುಖ ಬದಲಾವಣೆಗಳಾಗಿವೆ. ಐಸಿಸಿ ಶ್ರೇಯಾಂಕದಲ್ಲಿ ಉಸ್ಮಾನ್ ಖವಾಜಾ ಆರು ಸ್ಥಾನ ಮೇಲೇರಿ ಟಾಪ್ 10ರಲ್ಲಿ ಸ್ಥಾನ ಪಡೆದಿದ್ದಾರೆ. ಉಸ್ಮಾನ್ ಖವಾಜಾ 757 ರೇಟಿಂಗ್ ಅಂಕಗಳೊಂದಿಗೆ 7ನೇ ಸ್ಥಾನ ಪಡೆದಿದ್ದಾರೆ. ಪಾಕಿಸ್ತಾನದ ವಿರುದ್ಧ ಆಸ್ಟ್ರೇಲಿಯಾದ ಪ್ರಭಾವಶಾಲಿ ಟೆಸ್ಟ್ ಸರಣಿಯ ಗೆಲುವಿನಲ್ಲಿ ಉಸ್ಮಾನ್ ಖವಾಜಾ ಅವರ ಅದ್ಭುತ ಪ್ರದರ್ಶನವು ಇತ್ತೀಚಿನ ICC ಟೆಸ್ಟ್ ಶ್ರೇಯಾಂಕದಲ್ಲಿ 7 ನೇ ಸ್ಥಾನಕ್ಕೆ ಏರಲು ಸಹಾಯ ಮಾಡಿದೆ. ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಖವಾಜಾ ಅವರು ಐದು ಇನ್ನಿಂಗ್ಸ್‌ಗಳಿಂದ 165.33 ರಂತೆ ಒಟ್ಟು 496 ರನ್‌ಗಳನ್ನು ಗಳಿಸುವ ಮೂಲಕ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಸರಣಿಯಲ್ಲಿನ ಅವರ ಸ್ಕೋರ್‌ಗಳು 97, 160, 44 ನಾಟೌಟ್, 91 ಮತ್ತು 104 ನಾಟೌಟ್ ಆಗಿತ್ತು. ಈ ಮೂಲಕ ಉಸ್ಮಾನ್ ಖವಾಜಾ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ (Virat Kohli and Rohit Sharma) ಅವರಂತಹ ದಿಗ್ಗಜರನ್ನು ಹಿಂದಿಕ್ಕಿದ್ದಾರೆ.

ವಿರಾಟ್ ಕೊಹ್ಲಿ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಅಗ್ರ 10 ರಿಂದ ಮತ್ತಷ್ಟು ಕುಸಿತ ಕಂಡಿದ್ದಾರೆ. ಸದ್ಯ ವಿರಾಟ್ ಕೊಹ್ಲಿ 9ನೇ ಸ್ಥಾನದಿಂದ 10ನೇ ಸ್ಥಾನಕ್ಕೆ ಕುಸಿದಿದ್ದಾರೆ. ರೋಹಿತ್ ಶರ್ಮಾ ಕೂಡ ಒಂದು ಸ್ಥಾನ ಕುಸಿದು 8ನೇ ಸ್ಥಾನಕ್ಕೆ ತಲುಪಿದ್ದಾರೆ.

ಐಸಿಸಿ ಟೆಸ್ಟ್ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ರವೀಂದ್ರ ಜಡೇಜಾ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಸದ್ಯ ಆರ್.ಅಶ್ವಿನ್ ಎರಡನೇ ಸ್ಥಾನದಲ್ಲಿದ್ದಾರೆ. ಬೌಲರ್‌ಗಳ ಪಟ್ಟಿಯಲ್ಲಿ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಮಾತ್ರ ಬದಲಾವಣೆಯಾಗಿದೆ. ಎಡಗೈ ವೇಗದ ಬೌಲರ್ ಶಾಹೀನ್ ಅಫ್ರಿದಿ ಆರನೇ ಸ್ಥಾನದಿಂದ ಐದನೇ ಸ್ಥಾನಕ್ಕೆ ಏರಿದ್ದಾರೆ. ಅದೇ ವೇಳೆ ಕೈಲ್ ಜೇಮ್ಸನ್ ಆರನೇ ಸ್ಥಾನಕ್ಕೆ ಕುಸಿದಿದ್ದಾರೆ.

ಬಾಬರ್ ಅಜಮ್ ಏಕದಿನ ರ್ಯಾಂಕಿಂಗ್‌ನಲ್ಲಿ ಅಗ್ರ ಬ್ಯಾಟ್ಸ್‌ಮನ್ ಆಗಿದ್ದು, ವಿರಾಟ್ ಕೊಹ್ಲಿ ನಂತರದ ಸ್ಥಾನದಲ್ಲಿದ್ದಾರೆ. ಆದರೆ, ರೋಹಿತ್ ಶರ್ಮಾ ಐದನೇ ಕ್ರಮಾಂಕದಿಂದ ನಾಲ್ಕನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ. ಬೈರ್‌ಸ್ಟೋವ್ ಎರಡು ಸ್ಥಾನ ಮೇಲೇರಿ ಆರನೇ ಸ್ಥಾನಕ್ಕೆ ತಲುಪಿದ್ದಾರೆ. ಇಮಾಮ್ ಉಲ್ ಹಕ್ ಎರಡು ಸ್ಥಾನ ಮೇಲೇರಿ 10ನೇ ಸ್ಥಾನಕ್ಕೆ ತಲುಪಿದ್ದಾರೆ.

ಬೌಲರ್‌ಗಳ ಏಕದಿನ ರ‍್ಯಾಂಕಿಂಗ್‌ನಲ್ಲಿ ಶಕೀಬ್ ಅಲ್ ಹಸನ್ ನಾಲ್ಕು ಸ್ಥಾನ ಮೇಲೇರಿ ಅಗ್ರ 10ರಲ್ಲಿ ಸ್ಥಾನ ಪಡೆದಿದ್ದಾರೆ. ಅವರಿಗೆ 8 ನೇ ಸ್ಥಾನಕ್ಕೆ ತಲುಪಿದ್ದಾರೆ. ಅದೇ ವೇಳೆ ಆಡಮ್ ಜಂಪಾ 6 ಸ್ಥಾನ ಜಿಗಿದು 10ನೇ ಸ್ಥಾನ ತಲುಪಿದ್ದಾರೆ.

ಇದನ್ನೂ ಓದಿ:IPL: ಮುಂದಿನ 5 ವರ್ಷಗಳ ಐಪಿಎಲ್ ಮಾಧ್ಯಮ ಹಕ್ಕು ಹರಾಜಿಗೆ ಟೆಂಡರ್ ಕರೆದ ಬಿಸಿಸಿಐ; ಮೇ 10 ಕೊನೆಯ ದಿನಾಂಕ