IPL 2022: ಫಿಟ್ನೆಸ್ ಸಮಸ್ಯೆಯಿಂದ ರಾಷ್ಟ್ರೀಯ ತಂಡಗಳಿಂದ ಗೇಟ್​ಪಾಸ್ ಪಡೆದವರು ಐಪಿಎಲ್​ನಲ್ಲಿ ಸೂಪರ್​ಸ್ಟಾರ್..!

IPL 2022: ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿರುವ ಹೆಟ್ಮೆಯರ್ ತಮ್ಮ ಹಿಟ್ಟಿಂಗ್ ಶಕ್ತಿಯಿಂದ ಸನ್ ರೈಸರ್ಸ್ ಹೈದರಾಬಾದ್ ಬೌಲರ್​ಗಳನ್ನು ಹೊಡೆದುರುಳಿಸಿದರು. ಪಂಜಾಬ್ ಕಿಂಗ್ಸ್​ನ ಭಾನುಕಾ ರಾಜಪಕ್ಸೆ ಕೂಡ ತಮ್ಮ ಚುರುಕಿನ ಬ್ಯಾಟಿಂಗ್ ಮೂಲಕ ಬೆಂಗಳೂರು ಬೌಲಿಂಗ್ ದಾಳಿಯನ್ನು ಛಿದ್ರಗೊಳಿಸಿದರು.

IPL 2022: ಫಿಟ್ನೆಸ್ ಸಮಸ್ಯೆಯಿಂದ ರಾಷ್ಟ್ರೀಯ ತಂಡಗಳಿಂದ ಗೇಟ್​ಪಾಸ್ ಪಡೆದವರು ಐಪಿಎಲ್​ನಲ್ಲಿ ಸೂಪರ್​ಸ್ಟಾರ್..!
ಭಾನುಕಾ ರಾಜಪಕ್ಸೆ, ಶಿಮ್ರಾನ್ ಹೆಟ್ಮೆಯರ್
Follow us
ಪೃಥ್ವಿಶಂಕರ
|

Updated on: Mar 30, 2022 | 5:46 PM

ಕ್ರಿಕೆಟ್‌ನಲ್ಲಿ ಫಿಟ್‌ನೆಸ್‌ ಬಹಳ ಮುಖ್ಯ. ಈ ಫಿಟ್‌ನೆಸ್ ಸಂಸ್ಕೃತಿ ಕೇವಲ ಆಸ್ಟ್ರೇಲಿಯನ್ ಮತ್ತು ಇಂಗ್ಲಿಷ್ ತಂಡಗಳಲ್ಲಿ ಮಾತ್ರವಲ್ಲದೆ ಈಗ ಪ್ರತಿಯೊಂದು ಕ್ರಿಕೆಟ್ ತಂಡದಲ್ಲೂ ಇದೆ. ಆಟಗಾರರ ಫಿಟ್ನೆಸ್​ನಿಂದಾಗಿ ಟೀಂ ಇಂಡಿಯಾ ಪ್ರದರ್ಶನ ಸುಧಾರಿಸಿದೆ. ಆದರೆ, ಪ್ರಶ್ನೆಯೆಂದರೆ, ಫಿಟ್‌ನೆಸ್‌ನ ನಿಜವಾದ ಅಳತೆ ಯಾವುದು? ಎಂಬ ಪ್ರಶ್ನೆಗೆ ಬೌಲಿಂಗ್, ಫೀಲ್ಡಿಂಗ್, ರನ್ನಿಗ್ ಬಿಟ್ವಿನ್​ ದಿ ವಿಕೆಟ್, ಬೌಲರ್​ಗಳು ತಮ್ಮ ಕೋಟಾದ ಪೂರ್ಣ ಓವರ್‌ಗಳನ್ನು ಯಾವುದೇ ಇಂಜುರಿಯಿಲ್ಲದೆ ಹಾಕುವುದು ಮತ್ತು ಬ್ಯಾಟರ್​ ಯಾವುದೇ ಇಂಜುರಿಯಿಲ್ಲದೆ ಬ್ಯಾಟಿಂಗ್ ಮಾಡುವುದನ್ನು ಆಟಗಾರರು ಫಿಟ್ ಆಗಿದ್ದಾರೆ ಎಂದು ಹೇಳುತ್ತೇವೆ. ಆದರೆ, ಬಹುಶಃ ಕೆಲವು ತಂಡಗಳು ಫಿಟ್‌ನೆಸ್‌ನಿಂದಾಗಿ ತಮ್ಮ ಪಂದ್ಯ-ವಿಜೇತ ಆಟಗಾರರಿಂದ ದೂರವಾಗುತ್ತಿವೆ. ಇದಕ್ಕೆ ಉದಾಹರಣೆ ಎಂದರೆ, ವೆಸ್ಟ್ ಇಂಡೀಸ್‌ನ ಶಿಮ್ರಾನ್ ಹೆಟ್ಮೆಯರ್ ಮತ್ತು ಶ್ರೀಲಂಕಾದ ಭಾನುಕಾ ರಾಜಪಕ್ಸೆ ವಿಷಯದಲ್ಲೂ ಅದೇ ಸಂಭವಿಸಿದೆ. ಫಿಟ್ನೆಸ್ ಕೊರತೆಯಿಂದಾಗಿ ರಾಜಪಕ್ಸೆ ಮತ್ತು ಹೆಟ್ಮೆಯರ್ ಇಬ್ಬರನ್ನೂ ತಂಡದಿಂದ ಕೈಬಿಡಲಾಗಿತ್ತು. ಆದಾಗ್ಯೂ ಈ ಇಬ್ಬರು ಆಟಗಾರರು ಐಪಿಎಲ್ 2022 (IPL 2022) ಆರಂಭಿಕ ಪಂದ್ಯಗಳಲ್ಲಿ ಅಬ್ಬರದ ಬ್ಯಾಟಿಂಗ್ ಮಾಡಿ ಮಿಂಚಿದ್ದಾರೆ.

ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿರುವ ಹೆಟ್ಮೆಯರ್ ತಮ್ಮ ಹಿಟ್ಟಿಂಗ್ ಶಕ್ತಿಯಿಂದ ಸನ್ ರೈಸರ್ಸ್ ಹೈದರಾಬಾದ್ ಬೌಲರ್​ಗಳನ್ನು ಹೊಡೆದುರುಳಿಸಿದರು. ಪಂಜಾಬ್ ಕಿಂಗ್ಸ್​ನ ಭಾನುಕಾ ರಾಜಪಕ್ಸೆ ಕೂಡ ತಮ್ಮ ಚುರುಕಿನ ಬ್ಯಾಟಿಂಗ್ ಮೂಲಕ ಬೆಂಗಳೂರು ಬೌಲಿಂಗ್ ದಾಳಿಯನ್ನು ಛಿದ್ರಗೊಳಿಸಿದರು.

ರಾಜಸ್ಥಾನಕ್ಕೆ ಜಯ ತಂದುಕೊಟ್ಟ ಹೆಟ್ಮೆಯರ್.. ಶಿಮ್ರಾನ್ ಹೆಟ್ಮೆಯರ್ ಅವರನ್ನು ರಾಜಸ್ಥಾನ್ ರಾಯಲ್ಸ್ 8.5 ಕೋಟಿ ರೂ.ಗೆ ಖರೀದಿಸಿತು. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಹೆಟ್ಮೆಯರ್ ಕೇವಲ 13 ಎಸೆತಗಳನ್ನು ಆಡಿದ್ದರು. ಅಂತಹ ಕಡಿಮೆ ಎಸೆತಗಳಲ್ಲಿ ಅವರು 32 ರನ್ ಗಳಿಸಿ ರಾಜಸ್ಥಾನವನ್ನು 210 ರನ್‌ಗಳ ಬೃಹತ್ ಮೊತ್ತಕ್ಕೆ ಕೊಂಡೊಯ್ದರು. ಹೆಟ್ಮೆಯರ್ ಬ್ಯಾಟ್‌ನಲ್ಲಿ 3 ಸಿಕ್ಸರ್ ಮತ್ತು 2 ಬೌಂಡರಿಗಳನ್ನು ಹೊಡೆದರು. ಆ ಸಮಯದಲ್ಲಿ ಸ್ಟ್ರೈಕ್ ರೇಟ್ 246 ಆಗಿತ್ತು. ಇದರಿಂದ ಹೆಟ್ಮೆಯರ್ ಅವರ ಫಿಟ್ನೆಸ್ ಬಗ್ಗೆ ಪ್ರಶ್ನೆ ಕೇಳಿಬರುತ್ತಿದೆ. ಆಟಗಾರ ಇಷ್ಟು ಅದ್ಭುತವಾಗಿ ಬ್ಯಾಟ್ ಮಾಡುವಾಗ ಆತ ಅನ್​ಫಿಟ್ ಎಂದು ಹೇಳುವುದು ಸರಿಯಲ್ಲ ಎಂಬ ಚರ್ಚೆ ಆರಂಭವಾಗಿದೆ.

ವಿಧ್ವಂಸ ಸೃಷ್ಟಿಸಿದ ಭಾನುಕಾ ರಾಜಪಕ್ಸೆ.. ಫಿಟ್‌ನೆಸ್ ಸಮಸ್ಯೆಯಿಂದಾಗಿ ಭಾನುಕಾ ರಾಜಪಕ್ಸೆ ಅವರನ್ನು ಶ್ರೀಲಂಕಾ ತಂಡದಿಂದ ಕೈಬಿಡಲಾಗಿದೆ. ಆದರೆ, ಪಂಜಾಬ್ ಕಿಂಗ್ಸ್ ಎಡಗೈ ಆಟಗಾರನಿಗೆ ಪ್ಲೇಯಿಂಗ್ XI ನಲ್ಲಿ ಸ್ಥಾನ ನೀಡಿತ್ತು. ಭಾನುಕ ತನ್ನ IPL ಚೊಚ್ಚಲ ಪಂದ್ಯದಲ್ಲಿ RCB ಬೌಲರ್‌ಗಳನ್ನು ಬೆಂಡೆತ್ತಿದ್ದರು. ಅವರು 22 ಎಸೆತಗಳಲ್ಲಿ 4 ಸಿಕ್ಸರ್‌ಗಳೊಂದಿಗೆ 43 ರನ್ ಗಳಿಸಿದರು. ಈ ಬಿರುಸಿನ ಇನ್ನಿಂಗ್ಸ್‌ನೊಂದಿಗೆ ಆರ್​ಸಿಬಿ ನೀಡಿದ 206 ರನ್‌ಗಳ ಗುರಿಯನ್ನು ರಾಜಪಕ್ಸೆ ಆಟದಿಂದ ಪಂಜಾಬ್ ಸುಲಭವಾಗಿ ಬೆನ್ನಟ್ಟಿತು. ರಾಜಪಕ್ಸೆ ಮತ್ತು ಹೆಟ್ಮೆಯರ್ ಅವರ ಪ್ರದರ್ಶನವನ್ನು ನೋಡಿದರೆ, ಅವರು ಐಪಿಎಲ್ 2022 ರಲ್ಲಿ ಪ್ರಮುಖ ಆಟಗಾರರಾಗುವ ಸಾಧ್ಯತೆಯಿದೆ.

ಇದನ್ನೂ ಓದಿ:IPL 2022: ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಕಳಪೆ ದಾಖಲೆ ನಿರ್ಮಿಸಿದ RCB ಮತ್ತು PBKS