
ದುಲೀಪ್ ಟ್ರೋಫಿ ಟೆಸ್ಟ್ ಟೂರ್ನಿಯು ಇಂದಿನಿಂದ ಶುರುವಾಗಿದೆ. ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಪಂದ್ಯದಲ್ಲಿ ಉತ್ತರ ವಲಯ ಹಾಗೂ ಪೂರ್ವ ವಲಯ ತಂಡಗಳು ಮುಖಾಮುಖಿಯಾಗಿದೆ. ಆದರೆ ಈ ಪಂದ್ಯದಿಂದ ಪೂರ್ವ ವಲಯ ತಂಡದ ನಾಯಕ ಅಭಿಮನ್ಯು ಈಶ್ವರನ್ ಹೊರಗುಳಿದಿದ್ದಾರೆ.
ಇದಕ್ಕೂ ಮುನ್ನ ಪೂರ್ವ ವಲಯ ತಂಡದ ನಾಯಕರಾಗಿ ಇಶಾನ್ ಕಿಶನ್ ಆಯ್ಕೆಯಾಗಿದ್ದರು. ಆದರೆ ಗಾಯದ ಸಮಸ್ಯೆಯ ಕಾರಣ ಕಿಶನ್ ಟೂರ್ನಿಯಿಂದ ಹೊರಗುಳಿದಿದ್ದರು. ಹೀಗಾಗಿ ಅಭಿಮನ್ಯು ಈಶ್ವರನ್ ಅವರಿಗೆ ಕ್ಯಾಪ್ಟನ್ ನೀಡಲಾಗಿತ್ತು. ಆದರೆ ಗುರುವಾರ ಬೆಳಿಗ್ಗೆ ಟಾಸ್ ವೇಳೆ ರಿಯಾನ್ ಪರಾಗ್ ನಾಯಕರಾಗಿ ಕಾಣಿಸಿಕೊಂಡಿದ್ದಾರೆ.
ಅಭಿಮನ್ಯು ಈಶ್ವರನ್ ಅವರು ಜ್ವರದಿಂದ ಬಳಲುತ್ತಿದ್ದು, ಹೀಗಾಗಿ ಮೊದಲ ಪಂದ್ಯದಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಈ ಪಂದ್ಯದಲ್ಲಿ ಪೂರ್ವ ವಲಯ ತಂಡದ ನಾಯಕನಾಗಿ ರಿಯಾನ್ ಪರಾಗ್ ಕಾಣಿಸಿಕೊಂಡಿದ್ದಾರೆ.
ಇನ್ನು ರಿಯಾನ್ ಪರಾಗ್ ಮುಂದಾಳತ್ವದಲ್ಲಿ ಟೀಮ್ ಇಂಡಿಯಾ ಆಟಗಾರರಾದ ಮೊಹಮ್ಮದ್ ಶಮಿ, ಮುಖೇಶ್ ಕುಮಾರ್ ಕಣಕ್ಕಿಳಿದಿದ್ದಾರೆ.
ಈ ಬಾರಿಯ ದುಲೀಪ್ ಟ್ರೋಫಿಯಲ್ಲಿ ಭಾರತ ಟೆಸ್ಟ್ ತಂಡದ ನಾಯಕ ಶುಭ್ಮನ್ ಗಿಲ್ ಉತ್ತರ ವಲಯ ಟೀಮ್ನ ಕ್ಯಾಪ್ಟನ್ ಆಗಿ ಕಣಕ್ಕಿಳಿಯಬೇಕಿತ್ತು. ಆದರೆ ಅನಾರೋಗ್ಯದ ಕಾರಣ ಅವರು ಸಹ ಟೂರ್ನಿಯಿಂದ ಹೊರಗುಳಿದಿದ್ದಾರೆ. ಹೀಗಾಗಿ ಉತ್ತರ ವಲಯ ತಂಡವನ್ನು ಅಂಕಿತ್ ಕುಮಾರ್ ಮುನ್ನಡೆಸುತ್ತಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಪೂರ್ವ ವಲಯ ತಂಡದ ನಾಯಕ ರಿಯಾನ್ ಪರಾಗ್ ಬೌಲಿಂಗ್ ಆಯ್ದುಕೊಂಡಿದ್ದಾರೆ. ಅದರಂತೆ ಉತ್ತರ ವಲಯ ತಂಡವು ಮೊದಲು ಬ್ಯಾಟಿಂಗ್ ಆರಂಭಿಸಿದೆ. ಅಲ್ಲದೆ 35 ಓವರ್ಗಳ ಮುಕ್ತಾಯದ ವೇಳೆಗೆ ಉತ್ತರ ವಲಯ ತಂಡವು 3 ವಿಕೆಟ್ ಕಳೆದುಕೊಂಡು 140 ರನ್ ಕಲೆಹಾಕಿದೆ.
ಉತ್ತರ ವಲಯ ಪ್ಲೇಯಿಂಗ್ ಇಲೆವೆನ್: ಶುಭಂ ಖಜುರಿಯಾ , ಅಂಕಿತ್ ಕುಮಾರ್ (ನಾಯಕ) , ಯಶ್ ಧುಲ್ , ಆಯುಷ್ ಬದೋನಿ , ಕನ್ಹಯ್ಯಾ ವಾಧವನ್ (ವಿಕೆಟ್ ಕೀಪರ್ ) , ಸಾಹಿಲ್ ಲೋತ್ರಾ , ನಿಶಾಂತ್ ಸಿಂಧು , ಹರ್ಷಿತ್ ರಾಣಾ , ಔಕಿಬ್ ನಬಿ ದಾರ್ , ಮಯಾಂಕ್ ದಾಗರ್ , ಅರ್ಷದೀಪ್ ಸಿಂಗ್.
ಇದನ್ನೂ ಓದಿ: IPL 2026: ಐಪಿಎಲ್ ನಿಯಮ… RCB ಈ ಇಬ್ಬರನ್ನು ಬಿಡುಗಡೆ ಮಾಡಲೇಬೇಕು!
ಪೂರ್ವ ವಲಯ ಪ್ಲೇಯಿಂಗ್ ಇಲೆವೆನ್: ಉತ್ಕರ್ಷ್ ಸಿಂಗ್ , ಶರಣದೀಪ್ ಸಿಂಗ್ , ವಿರಾಟ್ ಸಿಂಗ್ , ರಿಯಾನ್ ಪರಾಗ್ (ನಾಯಕ) , ಕುಮಾರ್ ಕುಶಾಗ್ರಾ (ವಿಕೆಟ್ ಕೀಪರ್) , ಶ್ರೀದಾಮ್ ಪಾಲ್ , ಸೂರಜ್ ಸಿಂಧು ಜೈಸ್ವಾಲ್ , ಮುಖ್ತಾರ್ ಹುಸೇನ್ , ಮೊಹಮ್ಮದ್ ಶಮಿ , ಮನಿಷಿ , ಮುಖೇಶ್ ಕುಮಾರ್.
Published On - 12:53 pm, Thu, 28 August 25