Dinesh Karthik: ಬೇಕಂತಲೇ ದಿನೇಶ್ ಕಾರ್ತಿಕ್​ರನ್ನು ತಂಡದಿಂದ ಕೈ ಬಿಟ್ರಾ?

| Updated By: ಝಾಹಿರ್ ಯೂಸುಫ್

Updated on: Sep 07, 2022 | 6:25 PM

Dinesh Karthik: ಈ ಬಾರಿಯ ಏಷ್ಯಾಕಪ್​ನ​ ಮೊದಲೆರಡು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ದಿನೇಶ್ ಕಾರ್ತಿಕ್ ಎದುರಿಸಿದ್ದು ಕೇವಲ 1 ಎಸೆತ ಮಾತ್ರ. ಅದು ಕೂಡ ಪಾಕಿಸ್ತಾನ್ ವಿರುದ್ದ. ಅಲ್ಲದೆ ಆ ಎಸೆತದಲ್ಲಿ 1 ರನ್​ಗಳಿಸಿ ಅಜೇಯರಾಗಿ ಉಳಿದಿದ್ದರು.

Dinesh Karthik: ಬೇಕಂತಲೇ ದಿನೇಶ್ ಕಾರ್ತಿಕ್​ರನ್ನು ತಂಡದಿಂದ ಕೈ ಬಿಟ್ರಾ?
Dinesh Karthik
Follow us on

Asia Cup 2022: ಏಷ್ಯಾಕಪ್​ನ ಸೂಪರ್-4 ಹಂತದಲ್ಲಿ ಸತತ ಎರಡು ಸೋಲುಂಡಿರುವ ಟೀಮ್ ಇಂಡಿಯಾ (Team India) ಟೂರ್ನಿಯಿಂದ ಬಹುತೇಕ ಹೊರಬಿದ್ದಂತಾಗಿದೆ. ವಿಶೇಷ ಎಂದರೆ ಈ ಎರಡೂ ಪಂದ್ಯಗಳಲ್ಲೂ ದಿನೇಶ್ ಕಾರ್ತಿಕ್ ಆಡಿರಲಿಲ್ಲ. ಇಲ್ಲಿ ಡಿಕೆ ಬದಲಿಗೆ ತಂಡದಲ್ಲಿ ರಿಷಭ್ ಪಂತ್ ಅವರಿಗೆ ಸ್ಥಾನ ನೀಡಲಾಗಿತ್ತು. ಪಂತ್ ಎಡಗೈ ಬ್ಯಾಟ್ಸ್​ಮನ್ ಆಗಿದ್ದ ಕಾರಣ ತಂಡದಲ್ಲಿ ಅವಕಾಶ ನೀಡಲಾಗಿದೆ ಎಂದು ನಾಯಕ ರೋಹಿತ್ ಶರ್ಮಾ ತಿಳಿಸಿದ್ದಾರೆ. ಅಂದರೆ ರವೀಂದ್ರ ಜಡೇಜಾ ತಂಡದಿಂದ ಹೊರಬಿದ್ದ ಬಳಿಕ ಪ್ಲೇಯಿಂಗ್ ಇಲೆವೆನ್​ನಲ್ಲಿ ಮಹತ್ವದ ಬದಲಾವಣೆ ಮಾಡಿಕೊಳ್ಳಲಾಗಿತ್ತು. ಇಲ್ಲಿ ಜಡೇಜಾ ಲೆಫ್ಟ್ ಹ್ಯಾಂಡ್ ಆಗಿದ್ದ ಕಾರಣ ಅವರ ಬದಲಿಗೆ ಎಡಗೈ ಆಟಗಾರನಾಗಿರುವ ರಿಷಭ್ ಪಂತ್​ಗೆ ಸ್ಥಾನ ಕಲ್ಪಿಸಲಾಗಿತ್ತು. ಅದರಂತೆ ದಿನೇಶ್ ಕಾರ್ತಿಕ್ ಬದಲು ರಿಷಭ್ ಪಂತ್ ಅವರನ್ನು ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಲಾಗಿದೆ. ಇದಾಗ್ಯೂ ಪ್ಲೇಯಿಂಗ್ ಇಲೆವೆನ್​ನಲ್ಲಿ ದೀಪಕ್ ಹೂಡಾ ಅವರ ಆಯ್ಕೆಯೇ ಈಗ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಏಕೆಂದರೆ ಪಾಕಿಸ್ತಾನ್ ಹಾಗೂ ಶ್ರೀಲಂಕಾ ವಿರುದ್ದದ ಪಂದ್ಯದಲ್ಲಿ ದೀಪಕ್ ಹೂಡಾ ಅವಕಾಶ ಪಡೆದಿದ್ದರು. ಆಲ್​ರೌಂಡರ್​ ಆಗಿರುವ ಕಾರಣ ಹೂಡಾ ಅವರನ್ನು ಆಯ್ಕೆ ಮಾಡಿದ್ದರೆ, ಅವರನ್ನೇಕೆ ಆಲ್​ರೌಂಡರ್ ಆಗಿ ಬಳಸಿಕೊಂಡಿಲ್ಲ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ಪಾಕ್ ಹಾಗೂ ಶ್ರೀಲಂಕಾ ವಿರುದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಐವರು ಬೌಲರ್​ಗಳನ್ನು ಮಾತ್ರ ಬಳಸಿಕೊಂಡಿದ್ದರು. ಅದರಲ್ಲೂ ಪಾಕ್ ವಿರುದ್ದ ಕೆಲ ಬೌಲರ್​ಗಳು ದುಬಾರಿಯಾದರೂ 6ನೇ ಬೌಲರ್ ಆಗಿ ದೀಪಕ್ ಹೂಡಾರನ್ನು ಬಳಸಿಕೊಳ್ಳಲು ಮುಂದಾಗಲಿಲ್ಲ. ಇನ್ನು ಶ್ರೀಲಂಕಾ ವಿರುದ್ದದ ಪಂದ್ಯದಲ್ಲೂ ಇದೇ ಕಥೆ.

ಇದನ್ನೂ ಓದಿ
Team India: ಟೀಮ್ ಇಂಡಿಯಾ ಆಟಗಾರರ ಜೊತೆ ಕಾಣಿಸಿಕೊಂಡ ಸ್ಟಾರ್ ಕ್ರಿಕೆಟಿಗನ ಮಗ..!
RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
Sanju Samson: ಧೋನಿ, ದ್ರಾವಿಡ್​ಗೂ ಸಾಧ್ಯವಾಗದ ದಾಖಲೆ ನಿರ್ಮಿಸಿದ ಸಂಜು ಸ್ಯಾಮ್ಸನ್
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಅಂದರೆ 6ನೇ ಬೌಲರ್​ ಆಯ್ಕೆಯಿದ್ದರೂ ಟೀಮ್ ಇಂಡಿಯಾ ಎರಡೂ ಪಂದ್ಯಗಳಲ್ಲೂ ಐವರು ಬೌಲರ್​ಗಳಿಂದ ಮಾತ್ರ ಓವರ್ ಹಾಕಿಸಿದ್ದಾರೆ. ಈ ಎರಡೂ ಪಂದ್ಯಗಳಲ್ಲೂ ಬೌಲರ್​ಗಳೇ ದುಬಾರಿಯಾಗಿದ್ದರು ಎಂಬುದು ವಿಶೇಷ. ಆದರೆ ತಂಡದಲ್ಲಿ ಸ್ಪಿನ್ ಆಲ್​ರೌಂಡರ್​ ಆಗಿ ದೀಪಕ್ ಹೂಡಾ ಇದ್ದರೂ ಅವರಿಗೆ ಬೌಲಿಂಗ್ ಕೊಡದಿರಲು ಕಾರಣವೇನು ಎಂಬ ಪ್ರಶ್ನೆ ಮೂಡುತ್ತೆ.

ಇನ್ನು ದೀಪಕ್ ಹೂಡಾರನ್ನು ಕೇವಲ ಬ್ಯಾಟರ್ ಆಯ್ಕೆ ಮಾಡಿದ್ದರೆ ದಿನೇಶ್ ಕಾರ್ತಿಕ್ ಅವರನ್ನೇ ತಂಡದಲ್ಲಿ ಮುಂದುವರೆಸಬಹುದಿತ್ತಲ್ವಾ ಎಂಬ ಪ್ರಶ್ನೆಯೊಂದು  ಹುಟ್ಟಿಕೊಳ್ಳುತ್ತದೆ. ಏಕೆಂದರೆ ಹೂಡಾಗಿಂತ ದಿನೇಶ್ ಕಾರ್ತಿಕ್ ಅತ್ಯುತ್ತಮ ಆಯ್ಕೆಯಾಗಿತ್ತು. ಏಕೆಂದರೆ ಡಿಕೆ ಯಾವುದೇ ಕ್ರಮಾಂಕದಲ್ಲೂ ಬ್ಯಾಟ್ ಬೀಸಬಲ್ಲ ಆಟಗಾರ.

ಹೀಗಾಗಿ ರಿಷಭ್ ಪಂತ್ ಅವರ ಆಯ್ಕೆಯೊಂದಿಗೆ ದಿನೇಶ್ ಕಾರ್ತಿಕ್ ಅವರನ್ನು ಕೂಡ ಪ್ಲೇಯಿಂಗ್ ಇಲೆವೆನ್​ನಲ್ಲೇ ಉಳಿಸಿಕೊಳ್ಳುವ ಉತ್ತಮ ಅವಕಾಶ ಟೀಮ್ ಇಂಡಿಯಾ ಮುಂದಿತ್ತು. ಇದಾಗ್ಯೂ ಡಿಕೆಯನ್ನು ಕೈ ಬಿಟ್ಟು ಎರಡೂ ಪಂದ್ಯಗಳಲ್ಲೂ ಕೇವಲ ಬ್ಯಾಟ್ಸ್​ಮನ್​ ಆಗಿ ದೀಪಕ್ ಹೂಡಾರನ್ನು ಕಣಕ್ಕಿಳಿಸಿದ್ದೇಕೆ ಎಂಬುದೇ ದೊಡ್ಡ ಪ್ರಶ್ನೆ.

ವಿಶೇಷ ಎಂದರೆ ಈ ಬಾರಿಯ ಏಷ್ಯಾಕಪ್​ನ​ ಮೊದಲೆರಡು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ದಿನೇಶ್ ಕಾರ್ತಿಕ್ ಎದುರಿಸಿದ್ದು ಕೇವಲ 1 ಎಸೆತ ಮಾತ್ರ. ಅದು ಕೂಡ ಪಾಕಿಸ್ತಾನ್ ವಿರುದ್ದ. ಅಲ್ಲದೆ ಆ ಎಸೆತದಲ್ಲಿ 1 ರನ್​ಗಳಿಸಿ ಅಜೇಯರಾಗಿ ಉಳಿದಿದ್ದರು. ಆದರೆ ಸೂಪರ್-4 ಹಂತದ ಮೊದಲೆರಡು ಪಂದ್ಯಗಳಿಂದ ಕೈ ಬಿಡಲಾಗಿತ್ತು. ಇಲ್ಲಿ ಕಳಪೆ ಪ್ರದರ್ಶನ ನೀಡಿದ್ದರೆ ತಂಡದಿಂದ ಕೈ ಬಿಡುವ ಆಯ್ಕೆ ಟೀಮ್ ಇಂಡಿಯಾ ಮುಂದಿತ್ತು ಎನ್ನಬಹುದು.

ಆದರೆ ಕೇವಲ 1 ಎಸೆತ ಎದುರಿಸಿದ ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ಅವರನ್ನು ಕೈಬಿಟ್ಟು, ಟೀಮ್ ಇಂಡಿಯಾದ ನಿರ್ಣಾಯಕ ಪಂದ್ಯಗಳಲ್ಲಿ ಕೇವಲ ಬ್ಯಾಟ್ಸ್​ಮನ್ ಆಗಿ ದೀಪಕ್ ಹೂಡಾರನ್ನು ಆಯ್ಕೆ ಮಾಡಿದ್ದೇಕೆ ಎಂಬುದೇ ಈಗ ಯಕ್ಷ ಪ್ರಶ್ನೆಯಾಗಿ ಉಳಿದಿದೆ.