ಭಾರತದ ಕ್ರಿಕೆಟ್ ಪ್ರೇಮಿಗಳು ಹೆಚ್ಚು ಮಾತನಾಡುವ ಇಂಡಿಯನ್ ಪ್ರೀಮಿಯರ್ ಲೀಗ್ ( IPL) ಮಾರ್ಚ್ 26 ರಂದು ಪ್ರಾರಂಭವಾಗುತ್ತದೆ. ಎರಡು ಹೊಸ ಫ್ರಾಂಚೈಸಿಗಳು ಒಟ್ಟು 10 ತಂಡಗಳಿಗೆ ಕಾರಣವಾಗಿವೆ. ಒಟ್ಟು 74 ಪಂದ್ಯಗಳು ನಡೆಯಲಿವೆ. ಈ ವರ್ಷ, ಎಂಎಸ್ ಧೋನಿ (MS Dhoni) ಐದನೇ ಬಾರಿಗೆ ತನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಚಾಂಪಿಯನ್ ಮಾಡಲು ಹೋರಾಡಲಿದ್ದಾರೆ. ಹಾಲಿ ಚಾಂಪಿಯನ್ ಚೆನ್ನೈ (CSK) ಮತ್ತೊಮ್ಮೆ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಹಂಬಲದಲ್ಲಿದೆ. ಇದು ಧೋನಿಯಿಂದ ಸಾಧ್ಯ. ಏಕೆಂದರೆ ಸಂಖ್ಯೆಗಳು ಅವರ ಬಗ್ಗೆ ಎಲ್ಲವನ್ನೂ ಹೇಳುತ್ತವೆ. ಐಪಿಎಲ್ ಇತಿಹಾಸದಲ್ಲಿ ಧೋನಿಗಿಂತ ಉತ್ತಮ ಫಿನಿಶರ್ ಮತ್ತೊಬ್ಬರಿಲ್ಲ. ಕೊನೆಯ ಐದು ಓವರ್‌ಗಳಲ್ಲಿ ರನ್‌ಗಳ ಅಗತ್ಯವಿದ್ದಲ್ಲಿ ಮತ್ತು ಧೋನಿ ಕ್ರೀಸ್‌ನಲ್ಲಿದ್ದರೆ, ಯಾವ ರನ್ ಇದ್ದರೂ ಅದು ಮಹೀಗೆ ಸಾಧ್ಯವಾಗುತ್ತದೆ. ರೆಕಾರ್ಡರ್‌ಗಳನ್ನು ನೋಡಿದರೆ, ಕೊನೆಯ ಐದು ಓವರ್‌ಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಲ್ಲಿ ಧೋನಿ ನಂ.1 ಆಗಿದ್ದಾರೆ.
15ನೇ ಓವರ್‌ಗಳ ಒಳಗೆ ಬ್ಯಾಟಿಂಗ್ ಮಾಡಿರುವ ಧೋನಿ 442 ರನ್ ಗಳಿಸಿದ್ದಾರೆ. ಅದೇ 16ನೇ ಓವರ್ ತನಕ ಧೋನಿ ಗರಿಷ್ಠ 476 ರನ್ ಗಳಿಸಿದ್ದಾರೆ. ಕೊನೆಯ ಐದು ಓವರ್‌ಗಳಲ್ಲಿ ಯಾವ ಬ್ಯಾಟ್ಸ್‌ಮನ್ ಹೆಚ್ಚು ರನ್ ಗಳಿಸಿದ್ದಾರೆ ಎಂಬುದರ ವಿವರ ಇಲ್ಲಿದೆ.
ಮಹೇಂದ್ರ ಸಿಂಗ್ ಧೋನಿ – 476 ರನ್
ಡಿವಿಲಿಯರ್ಸ್ – 447 ರನ್
ರೋಹಿತ್ ಶರ್ಮಾ – 336 ರನ್
ಕೀರನ್ ಪೊಲಾರ್ಡ್ – 314 ರನ್
ಯುವರಾಜ್ ಸಿಂಗ್ – 305 ರನ್
17 ನೇ ಓವರ್ ತನಕ ಆಡಿದಾಗ
ಮಹೇಂದ್ರ ಸಿಂಗ್ ಧೋನಿ – 572 ರನ್
ಕೀರನ್ ಪೊಲಾರ್ಡ್ – 445 ರನ್
ಎಬಿ ಡಿವಿಲಿಯರ್ಸ್ – 386 ರನ್
ರೋಹಿತ್ ಶರ್ಮಾ – 362 ರನ್
ದಿನೇಶ್ ಕಾರ್ತಿಕ್ – 360 ರನ್
18 ನೇ ಓವರ್ ತನಕ ಆಡಿದಾಗ
ಮಹೇಂದ್ರ ಸಿಂಗ್ ಧೋನಿ – 596 ರನ್
ಪೊಲಾರ್ಡ್ – 433 ರನ್
ಎಬಿ ಡಿವಿಲಿಯರ್ಸ್ – 406 ರನ್
ರೋಹಿತ್ ಶರ್ಮಾ – 293 ರನ್
ವಿರಾಟ್ ಕೊಹ್ಲಿ – 276 ರನ್
19 ನೇ ಓವರ್ ತನಕ ಆಡಿದಾಗ
ಮಹೇಂದ್ರ ಸಿಂಗ್ ಧೋನಿ – 599 ರನ್
ಡಿವಿಲಿಯರ್ಸ್ – 404 ರನ್
ಕೀರನ್ ಪೊಲಾರ್ಡ್ – 362 ರನ್
ರವೀಂದ್ರ ಜಡೇಜಾ – 305 ರನ್
ಹಾರ್ದಿಕ್ ಪಾಂಡ್ಯ – 273 ರನ್
20ನೇ ಓವರ್ ತನಕ ಆಡಿದಾಗ
ಮಹೇಂದ್ರ ಸಿಂಗ್ ಧೋನಿ – 610 ರನ್
ಪೊಲಾರ್ಡ್ – 378 ರನ್
ರವೀಂದ್ರ ಜಡೇಜಾ – 276 ರನ್
ರೋಹಿತ್ ಶರ್ಮಾ – 248 ರನ್
ಹಾರ್ದಿಕ್ ಪಾಂಡ್ಯ – 233 ರನ್
ಇದನ್ನೂ ಓದಿ:ಹೋಳಿ ಹಬ್ಬದ ಆಫರ್; ತನ್ನ ಫಾರ್ಮ್ಹೌಸ್ನಲ್ಲಿ ಬೆಳೆದ ಹಣ್ಣುಗಳನ್ನು ಕೊಳ್ಳುವವರಿಗೆ ವಿಶೇಷ ರಿಯಾಯಿತಿ ಕೊಟ್ಟ ಧೋನಿ!
Published On - 10:36 pm, Fri, 18 March 22