WI vs ENG: ಬರೋಬ್ಬರಿ 419 ಎಸೆತ, 27 ಮೇಡನ್ ಓವರ್! 49 ವರ್ಷಗಳ ಹಳೆದ ದಾಖಲೆ ಮುರಿದ ಆಂಗ್ಲ ಸ್ಪಿನ್ನರ್

| Updated By: ಪೃಥ್ವಿಶಂಕರ

Updated on: Mar 20, 2022 | 10:40 AM

WI vs ENG: ವೆಸ್ಟ್ ಇಂಡೀಸ್ ನೆಲದಲ್ಲಿ 49 ವರ್ಷಗಳ ಹಳೆಯ ದಾಖಲೆ ಪುಡಿಪಡಿಯಾಗಿದೆ. ಈ ದಾಖಲೆಯನ್ನು ಇಂಗ್ಲೆಂಡ್ ಸ್ಪಿನ್ನರ್ 419 ಎಸೆತಗಳ ನೆರವಿನಿಂದ ಮುರಿದಿದ್ದಾರೆ.

WI vs ENG: ಬರೋಬ್ಬರಿ 419 ಎಸೆತ, 27 ಮೇಡನ್ ಓವರ್! 49 ವರ್ಷಗಳ ಹಳೆದ ದಾಖಲೆ ಮುರಿದ ಆಂಗ್ಲ ಸ್ಪಿನ್ನರ್
ಇಂಗ್ಲೆಂಡ್ ಆಟಗಾರರು
Follow us on

ಬ್ರಿಡ್ಜ್‌ಟೌನ್‌ನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ (West Indies and England) ನಡುವಿನ ಎರಡನೇ ಟೆಸ್ಟ್ ಪಂದ್ಯ ಡ್ರಾ ಆಗುವ ಸಾಧ್ಯತೆಯತ್ತ ಸಾಗುತ್ತಿದೆ. ಟೆಸ್ಟ್ ಪಂದ್ಯದಲ್ಲಿ 4 ದಿನಗಳ ಆಟ ಅಂತ್ಯಗೊಂಡಿದ್ದು ಇಂಗ್ಲೆಂಡ್ 136 ರನ್​ಗಳ ಮುನ್ನಡೆ ಸಾಧಿಸಿದೆ. ಅಂತಹ ಪರಿಸ್ಥಿತಿಯಲ್ಲಿ, ಕೊನೆಯ ದಿನದ ಫಲಿತಾಂಶವನ್ನು ನಿರೀಕ್ಷಿಸುವುದು ಅನಗತ್ಯವಾಗಿರುತ್ತದೆ. ಆದರೆ, ಇದೆಲ್ಲದರ ನಡುವೆ ವೆಸ್ಟ್ ಇಂಡೀಸ್ ನೆಲದಲ್ಲಿ 49 ವರ್ಷಗಳ ಹಳೆಯ ದಾಖಲೆ (49-year-old record) ಮುರಿದಿದೆ. ಈ ದಾಖಲೆಯನ್ನು ಇಂಗ್ಲೆಂಡ್ ಆಟಗಾರರೊಬ್ಬರು 419 ಎಸೆತಗಳನ್ನು ಬೌಲ್ ಮಾಡುವ ಮೂಲಕ ಮುರಿದಿದ್ದಾರೆ. ಬ್ರಿಡ್ಜ್‌ಟೌನ್‌ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ನ ನಾಲ್ಕನೇ ದಿನದಂದು ವೆಸ್ಟ್ ಇಂಡೀಸ್‌ನ ಮೊದಲ ಇನ್ನಿಂಗ್ಸ್ 411 ರನ್‌ಗಳಿಗೆ ಕೊನೆಗೊಂಡಿತು. ಈ ಮೂಲಕ ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 96 ರನ್‌ಗಳ ಮುನ್ನಡೆ ಸಾಧಿಸಿದೆ. ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 9 ವಿಕೆಟ್‌ಗೆ 507 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು.

ಜಾಕ್ ಲೀಚ್ ದಾಖಲೆ
ವೆಸ್ಟ್ ಇಂಡೀಸ್​ನ 3 ವಿಕೆಟ್ ಕಬಳಿಸಿ ಇಂಗ್ಲೆಂಡ್​ಗೆ ಮೊದಲ ಇನ್ನಿಂಗ್ಸ್ ಮುನ್ನಡೆ ತಂದುಕೊಡುವಲ್ಲಿ ಸ್ಪಿನ್ನರ್ ಜಾಕ್ ಲೀಚ್ ಪ್ರಮುಖ ಪಾತ್ರ ವಹಿಸಿದ್ದರು. ಈ 3 ವಿಕೆಟ್ ಗಳಲ್ಲಿ 160 ರನ್​ಗಳ ಮ್ಯಾರಥಾನ್ ಇನ್ನಿಂಗ್ಸ್ ಆಡಿದ ಕೆರಿಬಿಯನ್ ನಾಯಕ ಕ್ರೇಗ್ ಬ್ರಾಥ್ ವೈಟ್ ಹೆಸರೂ ಇದೆ. ಇವರಲ್ಲದೆ, ಅವರು ಬ್ರೂಕ್ಸ್ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜೋಶುವಾ ಡಿ ಸಿಲ್ವಾ ಅವರನ್ನು ಬೇಟೆಯಾಡಿದರು. ಆದರೆ, ಇಂಗ್ಲೆಂಡ್ ಸ್ಪಿನ್ನರ್ ಜಾಕ್ ಲೀಚ್ ಮುರಿದ 49 ವರ್ಷಗಳ ಹಳೆಯ ದಾಖಲೆ ಈ 3 ವಿಕೆಟ್‌ಗಳಿಂದಲ್ಲ.

49 ವರ್ಷಗಳ ಹಳೆಯ ದಾಖಲೆ ಪುಡಿಪುಡಿ
ಜಾಕ್ ಲೀಚ್ ತಮ್ಮ ಮ್ಯಾರಥಾನ್ ಬೌಲಿಂಗ್ ಮೂಲಕ ವೆಸ್ಟ್ ಇಂಡೀಸ್​ನಲ್ಲಿ 49 ವರ್ಷಗಳ ಹಳೆಯ ದಾಖಲೆಯನ್ನು ಮುರಿದರು. ಲೀಚ್ ಮೊದಲ ಇನ್ನಿಂಗ್ಸ್‌ನಲ್ಲಿ ಕೆರಿಬಿಯನ್ ಬ್ಯಾಟ್ಸ್‌ಮನ್‌ಗಳಿಗೆ ಬರೋಬ್ಬರಿ 419 ಎಸೆತಗಳನ್ನು ಬೌಲ್​ ಮಾಡುವ ಮೂಲಕ ಈ ದಾಖಲೆ ಮುರಿದಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಬ್ರಿಡ್ಜ್‌ಟೌನ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ, ಜಾಕ್ ಲೀಚ್ 69.5 ಓವರ್‌ಗಳನ್ನು ಬೌಲ್ ಮಾಡಿದರು ಮತ್ತು 27 ಮೇಡನ್‌ ಓವರ್​ಗಳನ್ನು ಎಸೆಯುವ ಮೂಲಕ 118 ರನ್‌ಗಳನ್ನು ಬಿಟ್ಟುಕೊಟ್ಟರು, ಪ್ರತಿಯಾಗಿ 3 ವಿಕೆಟ್‌ಗಳನ್ನು ಪಡೆದರು.

69.5 ಓವರ್‌ಗಳು ಅಂದರೆ 419 ಎಸೆತಗಳು…
ವೆಸ್ಟ್ ಇಂಡೀಸ್‌ನಲ್ಲಿ ಕಳೆದ 49 ವರ್ಷಗಳಲ್ಲಿ, ಟೆಸ್ಟ್ ಪಂದ್ಯದ ಇನ್ನಿಂಗ್ಸ್‌ನಲ್ಲಿ ಬೇರೆ ಯಾವುದೇ ಬೌಲರ್ ಇಷ್ಟು ಓವರ್‌ಗಳನ್ನು ಬೌಲ್ ಮಾಡಿಲ್ಲ. ಈ ಮೂಲಕ ಜಾಕ್ ಲೀಚ್ ಹೊಸ ದಾಖಲೆ ಬರೆದಿದ್ದಾರೆ. ಈ ದಾಖಲೆಯೊಂದಿಗೆ ಮತ್ತೊಂದು ಸಾಧನೆ ಮಾಡಿದ್ದಾರೆ. ಅವರು ಕಳೆದ 30 ವರ್ಷಗಳಲ್ಲಿ ಟೆಸ್ಟ್ ಕ್ರಿಕೆಟ್‌ನ ಇನ್ನಿಂಗ್ಸ್‌ನಲ್ಲಿ 60 ಅಥವಾ ಅದಕ್ಕಿಂತ ಹೆಚ್ಚು ಓವರ್‌ಗಳನ್ನು ಬೌಲ್ ಮಾಡಿದ ಮೂರನೇ ಇಂಗ್ಲೆಂಡ್ ಬೌಲರ್ ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ:IND vs SL: ಹಳೆಯ ದಾಖಲೆಗಳಿಗೆ ಬೆಂಕಿ ಹಚ್ಚಿದ ಬುಮ್ರಾ! ಪಿಂಕ್ ಬಾಲ್ ಟೆಸ್ಟ್​ನಲ್ಲಿ ಮೊದಲ ಬಾರಿಗೆ 5 ವಿಕೆಟ್