ಮಹಿಳಾ ಏಷ್ಯಾಕಪ್ನ 19ನೇ ಪಂದ್ಯದಲ್ಲಿ ಥಾಯ್ಲೆಂಡ್ ವಿರುದ್ಧ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಸೆಮಿಫೈನಲ್ಗೇರುವುರನ್ನು ಭಾರತೀಯ ವನಿತೆಯರು ಖಚಿತಪಡಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ಹಂಗಾಮಿ ನಾಯಕಿ ಸ್ಮೃತಿ ಮಂಧನಾ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಥಾಯ್ಲೆಂಡ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಮೂರನೇ ಓವರ್ನಲ್ಲಿ 6 ರನ್ಗಳಿಸಿದ್ದ ಸ್ಟಾರ್ ಆಟಗಾರ್ತಿ ನತ್ತಕಾನ್ ಚಂತಮ್ ಅವರ ವಿಕೆಟ್ ಪಡೆಯುವ ಮೂಲಕ ಟೀಮ್ ಇಂಡಿಯಾ ಬೌಲರ್ ದೀಪ್ತಿ ಶರ್ಮಾ ಶುಭಾರಂಭ ಮಾಡಿದ್ದರು.
ಇದರ ಬೆನ್ನಲ್ಲೇ ನಾಯಕಿ ಚೈವಾಯಿ (3) ರನೌಟ್ ಆದರು. ಈ ಹಂತದಲ್ಲಿ ದಾಳಿಗಿಳಿದ ಸ್ನೇಹಾ ರಾಣಾ ಬ್ಯಾಕ್ ಟು ಬ್ಯಾಕ್ ಆಘಾತ ನೀಡಿದರು. ಪರಿಣಾಮ 24 ರನ್ಗಳಿಸುವಷ್ಟರಲ್ಲಿ ಥಾಯ್ಲೆಂಡ್ ತಂಡವು ಪ್ರಮುಖ 6 ವಿಕೆಟ್ ಕಳೆದುಕೊಂಡಿತು.
ಆ ಬಳಿಕ ರಾಜೇಶ್ವರಿ ಗಾಯಕ್ವಾಡ್ 2 ವಿಕೆಟ್ ಕಬಳಿಸಿದರೆ, ಮೇಘನಾ ಸಿಂಗ್ 1 ವಿಕೆಟ್ ಪಡೆದರು.
ಅಂತಿಮವಾಗಿ ಥಾಯ್ಲೆಂಡ್ ತಂಡವು 15.1 ಓವರ್ಗಳಲ್ಲಿ ಕೇವಲ 37 ರನ್ಗಳಿಗೆ ಸರ್ವಪತನ ಕಂಡಿತು. ಟೀಮ್ ಇಂಡಿಯಾ ಪರ ಸ್ನೇಹಾ ರಾಣಾ 4 ಓವರ್ಗಳಲ್ಲಿ 9 ರನ್ ನೀಡಿ 3 ವಿಕೆಟ್ ಕಬಳಿಸಿ ಮಿಂಚಿದರು.
Sneh Rana bags the Player of the Match Award for her impressive three-wicket haul against Thailand as #TeamIndia register a clinical 9-wicket victory. ??
Scorecard ▶️ https://t.co/1AVHjyOrSL…#AsiaCup2022 | #INDvTHAI pic.twitter.com/tBT0qD4g2f
— BCCI Women (@BCCIWomen) October 10, 2022
38 ರನ್ಗಳ ಸುಲಭ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ 3ನೇ ಓವರ್ನಲ್ಲಿ ಸ್ಪೋಟಕ ಆಟಗಾರ್ತಿ ಶಫಾಲಿ ವರ್ಯಾ (8) ಕಳೆದುಕೊಂಡಿತು. ಇದಾಗ್ಯೂ ಪವರ್ಪ್ಲೇನಲ್ಲಿ 40 ರನ್ ಬಾರಿಸುವ ಮೂಲಕ ಭಾರತ ವನಿತೆಯರು 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ವಿಶೇಷ ಎಂದರೆ ಈ ಬಾರಿ ಟೀಮ್ ಇಂಡಿಯಾ ಪಾಕಿಸ್ತಾನ್ ವಿರುದ್ಧ ಸೋಲನುಭವಿಸಿತು. ಅದೇ ಪಾಕಿಸ್ತಾನ್ ತಂಡವು ಥಾಯ್ಲೆಂಡ್ ವಿರುದ್ಧ ಸೋತು ಭಾರೀ ಮುಖಭಂಗಕ್ಕೆ ಒಳಗಾಗಿತ್ತು. ಇದೀಗ ಪಾಕ್ ತಂಡವನ್ನು ಮಣಿಸಿದ ಥಾಯ್ಲೆಂಡ್ ಅನ್ನು ಸುಲಭವಾಗಿ ಸೋಲಿಸಿ ಟೀಮ್ ಇಂಡಿಯಾ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಈ ಗೆಲುವಿನೊಂದಿಗೆ ಏಷ್ಯಾಕಪ್ ಸೆಮಿಫೈನಲ್ ಆಡುವುದನ್ನು ಖಚಿತಪಡಿಸಿಕೊಂಡಿದೆ.
ಭಾರತ ಪ್ಲೇಯಿಂಗ್ ಇಲೆವೆನ್: ಶಫಾಲಿ ವರ್ಮಾ , ಸ್ಮೃತಿ ಮಂಧನಾ (ನಾಯಕಿ) , ಸಬ್ಬಿನೇನಿ ಮೇಘನಾ , ಜೆಮಿಮಾ ರೊಡ್ರಿಗಸ್ , ರಿಚಾ ಘೋಷ್ ( ವಿಕೆಟ್ ಕೀಪರ್ ) , ಕಿರಣ್ ನವಗಿರೆ , ದೀಪ್ತಿ ಶರ್ಮಾ , ಪೂಜಾ ವಸ್ತ್ರಾಕರ್ , ಸ್ನೇಹ ರಾಣಾ , ಮೇಘನಾ ಸಿಂಗ್ , ರಾಜೇಶ್ವರಿ ಗಾಯಕ್ವಾಡ್
ಥಾಯ್ಲೆಂಡ್ ಪ್ಲೇಯಿಂಗ್ ಇಲೆವೆನ್: ನನ್ನಪತ್ ಕೊಂಚರೊಯೆಂಕೈ, ನತ್ತಕನ್ ಚಂತಮ್ , ನರುಯೆಮೊಲ್ ಚೈವಾಯಿ (ನಾಯಕಿ) , ಸೊರ್ನರಿನ್ ಟಿಪ್ಪೊಚ್ , ಚನಿಡಾ ಸುತ್ತಿರುಯಾಂಗ್ , ರೋಸೆನನ್ ಕಾನೊಹ್ , ಫನ್ನಿತಾ ಮಾಯಾ , ನಟ್ಟಾಯ ಬೂಚತಮ್ , ಒನ್ನಿಚಾ ಕಮ್ಚೊಂಫು , ತಿಪಟಚಾ ನನ್ತಿ ಬೂತವಾಂಗ್ಸ್