Women’s Asia Cup 2024: ನೇಪಾಳ ವಿರುದ್ಧ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ
Women’s Asia Cup 2024: ಮಹಿಳಾ ಏಷ್ಯಾಕಪ್‌ನ ಎ ಗುಂಪಿನ ಪಂದ್ಯದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ ಇಂದು ನೇಪಾಳ ಕ್ರಿಕೆಟ್ ತಂಡವನ್ನು ಎದುರಿಸುತ್ತಿದೆ. ಈ ಪಂದ್ಯದ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕಿ ಸ್ಮೃತಿ ಮಂದಾನ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ. ಇದರ ಜೊತೆಗೆ ಉಭಯ ತಂಡಗಳ ಪ್ಲೇಯಿಂಗ್ 11 ಕೂಡ ಹೊರಬಿದ್ದಿದೆ.
ಮಹಿಳಾ ಏಷ್ಯಾಕಪ್‌ನ ಎ ಗುಂಪಿನ ಪಂದ್ಯದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ ಇಂದು ನೇಪಾಳ ಕ್ರಿಕೆಟ್ ತಂಡವನ್ನು ಎದುರಿಸುತ್ತಿದೆ. ಟೂರ್ನಿಯಲ್ಲಿ ಭಾರತ ಇದುವರೆಗೆ ಅಜೇಯವಾಗಿ ಉಳಿದಿದ್ದು, ಇದೀಗ ನೇಪಾಳ ವಿರುದ್ಧ ಹ್ಯಾಟ್ರಿಕ್ ಗೆಲುವನ್ನು ಪೂರ್ಣಗೊಳಿಸುವ ಪ್ರಯತ್ನದಲ್ಲಿದೆ. ಹರ್ಮನ್ ಬ್ರಿಗೇಡ್ ಈಗಾಗಲೇ ಸೆಮಿಫೈನಲ್ ತಲುಪಿದೆ. ಇದರ ಹೊರತಾಗಿಯೂ ದುರ್ಬಲವಾಗಿ ಕಾಣುತ್ತಿರುವ ನೇಪಾಳವನ್ನು ಲಘುವಾಗಿ ಪರಿಗಣಿಸುವ ತಪ್ಪನ್ನು ತಂಡ ಮಾಡುವಂತಿಲ್ಲ. ಇನ್ನು ಈ ಪಂದ್ಯದ ಟಾಸ್ ಕೂಡ ಮುಗಿದಿದ್ದು, ಟಾಸ್ ಗೆದ್ದ ಟೀಂ ಇಂಡಿಯಾ ನಾಯಕಿ ಸ್ಮೃತಿ ಮಂದಾನ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ. ಇದರ ಜೊತೆಗೆ ಉಭಯ ತಂಡಗಳ ಪ್ಲೇಯಿಂಗ್ 11 ಕೂಡ ಹೊರಬಿದ್ದಿದೆ.
ಭಾರತ ತಂಡದಲ್ಲಿ 2 ಬದಲಾವಣೆ
ಈ ಪಂದ್ಯದಿಂದ ಭಾರತ ತಂಡದ ನಿಯಮಿತ ನಾಯಕಿ ಹರ್ಮನ್‌ಪ್ರೀತ್ ಕೌರ್ ವಿಶ್ರಾಂತಿ ಪಡೆದಿದ್ದಾರೆ. ಅವರ ಜೊತೆಗೆ ವೇಗದ ಬೌಲರ್ ಪೂಜಾ ವಸ್ತ್ರಾಕರ್ ಅವರಿಗೂ ವಿಶ್ರಾಂತಿ ನೀಡಲಾಗಿದೆ. ಈ ಇಬ್ಬರ ಸ್ಥಾನದಲ್ಲಿ ಆಲ್ರೌಂಡರ್ ಸಜೀವನ್ ಸಜನಾ ಹಾಗೂ ವೇಗದ ಬೌಲರ್ ಅರುಂಧತಿ ರೆಡ್ಡಿ ಸ್ಥಾನ ಪಡೆದಿದ್ದಾರೆ.
🚨 Toss 🚨#TeamIndia win the toss and elect to bat against Nepal
Follow the match ▶️ https://t.co/PeRykFLdTV#INDvNEP | #WomensAsiaCup2024 | #ACC pic.twitter.com/zm020nlvxw
— BCCI Women (@BCCIWomen) July 23, 2024
ಉಭಯ ತಂಡಗಳು
ಭಾರತ ತಂಡ: ಶಫಾಲಿ ವರ್ಮಾ, ಸ್ಮೃತಿ ಮಂಧಾನ (ನಾಯಕಿ), ದಯಾಳನ್ ಹೇಮಲತಾ, ರಿಚಾ ಘೋಷ್ (ವಿಕೆಟ್ ಕೀಪರ್), ಜೆಮಿಮಾ ರಾಡ್ರಿಗಸ್, ಸಜೀವನ್ ಸಜನಾ (ಹರ್ಮನ್‌ಪ್ರೀತ್ ಕೌರ್ ಬದಲು), ದೀಪ್ತಿ ಶರ್ಮಾ, ರಾಧಾ ಯಾದವ್, ತನುಜಾ ಕನ್ವರ್, ರೇಣುಕಾ ಸಿಂಗ್, ಅರುಂಧತಿ ರೆಡ್ಡಿ (ಪೂಜಾ ವಸ್ತ್ರಾಕರ್ ಬದಲು) .
🚨 Playing XI 🚨@mandhana_smriti leads the side tonight 🙌
Sajana Sajeevan comes in for Harmanpreet Kaur
Follow the match ▶️ https://t.co/PeRykFLdTV#TeamIndia | #INDvNEP | #WomensAsiaCup2024 | #ACC pic.twitter.com/ckCcy9hrb0
— BCCI Women (@BCCIWomen) July 23, 2024
ನೇಪಾಳ ತಂಡ: ಸಮ್ಜನಾ ಖಡ್ಕಾ, ಸೀತಾ ಮಗರ್, ಕಬಿತಾ ಕುನ್ವರ್, ಇಂದು ಬರ್ಮಾ (ನಾಯಕಿ), ಡಾಲಿ ಭಟ್ಟ (ರೋಮಾ ಥಾಪಾ ಬದಲು), ರುಬಿನಾ ಛೆಟ್ರಿ, ಪೂಜಾ ಮಹತೋ, ಕಬಿತಾ ಜೋಷಿ, ಕಾಜಲ್ ಶ್ರೇಷ್ಠಾ (ವಿಕೆಟ್ ಕೀಪರ್), ಬಿಂದು ರಾವಲ್, ಸಬ್ನಮ್ ರೈ (ಕೃತಿಕಾ ಮರಸಿನಿ ಬದಲು) .
ಭಾರತದ ಅಜೇಯ ಓಟ
ಟೂರ್ನಿಯಲ್ಲಿ ಹರ್ಮನ್ ಬ್ರಿಗೇಡ್ ಬಗ್ಗೆ ಮಾತನಾಡುವುದಾದರೆ, ಈ ಬಾರಿಯ ಏಷ್ಯಾಕಪ್‌ನಲ್ಲಿ ತಂಡ ವಿಭಿನ್ನ ಮಟ್ಟದ ಕ್ರಿಕೆಟ್ ಆಡುತ್ತಿದೆ. ಭಾರತ ತಂಡ ಸತತ ಎರಡು ಪಂದ್ಯಗಳನ್ನು ಗೆದ್ದಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು 7 ವಿಕೆಟ್‌ಗಳಿಂದ ಸೋಲಿಸಿದರೆ, ಎರಡನೇ ಪಂದ್ಯದಲ್ಲಿ ಯುಎಇಯನ್ನು 78 ರನ್‌ಗಳಿಂದ ಸೋಲಿಸಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:38 pm, Tue, 23 July 24