Women’s Asia Cup 2024: ಏಷ್ಯಾಕಪ್​ನಲ್ಲಿ ಇತಿಹಾಸ ಸೃಷ್ಟಿಸಿದ ನೇಪಾಳ ವನಿತಾ ಪಡೆ

Women’s Asia Cup 2024: ಮಹಿಳಾ ಏಷ್ಯಾಕಪ್ ಇತಿಹಾಸದಲ್ಲಿ ನೇಪಾಳದ ಮೊದಲ ಗೆಲುವು ಇದಾಗಿದೆ. ಕಳೆದ ಒಂಬತ್ತು ಪ್ರಯತ್ನಗಳಲ್ಲಿ ನೇಪಾಳ ಮೊದಲ ಗೆಲುವಿನ ರುಚಿ ಕಂಡಿದೆ. ಈ ಪಂದ್ಯದಲ್ಲಿ ನೇಪಾಳ ಪರ ಅದ್ಭುತ ಪ್ರದರ್ಶನ ನೀಡಿದ ಖಡ್ಕ ಎದುರಾಳಿ ತಂಡದ ವಿರುದ್ಧ 45 ಎಸೆತಗಳನ್ನು ಎದುರಿಸಿ 72 ರನ್‌ಗಳ ಅಜೇಯ ಇನ್ನಿಂಗ್ಸ್‌ ಆಡಿದರು.

Women’s Asia Cup 2024: ಏಷ್ಯಾಕಪ್​ನಲ್ಲಿ ಇತಿಹಾಸ ಸೃಷ್ಟಿಸಿದ ನೇಪಾಳ ವನಿತಾ ಪಡೆ
ನೇಪಾಳ ತಂಡ
Follow us
ಪೃಥ್ವಿಶಂಕರ
|

Updated on: Jul 19, 2024 | 8:49 PM

2024 ರ ಮಹಿಳೆಯರ ಏಷ್ಯಾಕಪ್ ಇಂದಿನಿಂದ ಅಂದರೆ ಶುಕ್ರವಾರದಿಂದ ಶ್ರೀಲಂಕಾದ ಆತಿಥ್ಯದಲ್ಲಿ ಆರಂಭವಾಗಿದೆ. ಟೂರ್ನಿಯ ಮೊದಲ ಪಂದ್ಯ ಎ ಗುಂಪಿನ ನೇಪಾಳ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಡುವೆ ನಡೆಯಿತು. ಈ ಪಂದ್ಯದಲ್ಲಿ ನೇಪಾಳ ತಂಡ ಯುಎಇ ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸಿ ಇತಿಹಾಸ ನಿರ್ಮಿಸಿದೆ. ವಾಸ್ತವವಾಗಿ ಮಹಿಳೆಯರ ಏಷ್ಯಾಕಪ್ ಇತಿಹಾಸದಲ್ಲಿ ಇದು ನೇಪಾಳ ತಂಡದ ಮೊದಲ ಗೆಲುವಾಗಿದೆ.

ದಂಬುಲಾದ ರಂಗಿರಿ ದಂಬುಲ್ಲಾ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ನೇಪಾಳ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಯುಎಇ 20 ಓವರ್‌ಗಳಲ್ಲಿ ಎಂಟು ವಿಕೆಟ್‌ಗೆ 115 ರನ್ ಗಳಿಸಿತು. ಉತ್ತರವಾಗಿ ನೇಪಾಳ 16.1 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡು 118 ರನ್ ಬಾರಿಸಿ ಆರು ವಿಕೆಟ್‌ಗಳ ಜಯ ಸಾಧಿಸಿತು.

ಮೊದಲ ಜಯ

ಮೇಲೆ ಹೇಳಿದಂತೆ ಮಹಿಳಾ ಏಷ್ಯಾಕಪ್ ಇತಿಹಾಸದಲ್ಲಿ ನೇಪಾಳದ ಮೊದಲ ಗೆಲುವು ಇದಾಗಿದೆ. ಕಳೆದ ಒಂಬತ್ತು ಪ್ರಯತ್ನಗಳಲ್ಲಿ ನೇಪಾಳ ಮೊದಲ ಗೆಲುವಿನ ರುಚಿ ಕಂಡಿದೆ. ಈ ಪಂದ್ಯದಲ್ಲಿ ನೇಪಾಳ ಪರ ಅದ್ಭುತ ಪ್ರದರ್ಶನ ನೀಡಿದ ಖಡ್ಕ ಎದುರಾಳಿ ತಂಡದ ವಿರುದ್ಧ 45 ಎಸೆತಗಳನ್ನು ಎದುರಿಸಿ 72 ರನ್‌ಗಳ ಅಜೇಯ ಇನ್ನಿಂಗ್ಸ್‌ ಆಡಿದರು. ಇದು ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ನೇಪಾಳದ ಮಹಿಳಾ ಬ್ಯಾಟರ್ ಬಾರಿಸಿದ ಮೂರನೇ ಗರಿಷ್ಠ ಸ್ಕೋರ್ ಆಗಿದೆ. ತಮ್ಮ ಇನ್ನಿಂಗ್ಸ್​ನಲ್ಲಿ 11 ಬೌಂಡರಿ ಬಾರಿಸಿದ ಖಡ್ಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ನೇಪಾಳದ ಇನ್ನಿಂಗ್ಸ್

116 ರನ್‌ಗಳ ಗುರಿ ಬೆನ್ನತ್ತಿದ ನೇಪಾಳಕ್ಕೆ ಸಮನಾ ಖಡ್ಕ ಸ್ಫೋಟಕ ಪ್ರದರ್ಶನ ನೀಡಿ,ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಪಂದ್ಯದಲ್ಲಿ ಸೀತಾ ರಾಣಾ ಮಗರ್ ಏಳು ರನ್, ಕಬಿತಾ ಕುನ್ವರ್ ಎರಡು ರನ್, ಇಂದು ಬರ್ಮಾ ಆರು ರನ್, ರುಬಿನಾ ಛೆಟ್ರಿ 10 ರನ್, ಪೂಜಾ ಮಹತೋ ಏಳು (ಔಟಾಗದೆ) ಬಾರಿಸಿದರು. ಯುಎಇ ಪರ ಕವಿಶಾ ಮೂರು ವಿಕೆಟ್ ಪಡೆದರೆ, ಲಾವಣ್ಯ ಒಂದು ವಿಕೆಟ್ ಪಡೆದರು.

ಯುಎಇ ಇನ್ನಿಂಗ್ಸ್

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಯುಎಇ ತಂಡಕ್ಕೆ ವಿಶೇಷ ಆರಂಭ ಸಿಗಲಿಲ್ಲ. ಇಶಾ ಓಜಾ ಮತ್ತು ತೀರ್ಥ ಸತೀಶ್ ನಡುವೆ ಮೊದಲ ವಿಕೆಟ್‌ಗೆ ಕೇವಲ 11 ರನ್‌ಗಳ ಜೊತೆಯಾಟವಿತ್ತು. ಓಜಾ 10 ರನ್ ಗಳಿಸಿ ಔಟಾದರೆ, ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ರಿನಿತಾ ರಜಿತ್ ಆರು ರನ್ ಗಳಿಸಲಷ್ಟೇ ಶಕ್ತರಾದರು. ಈ ಪಂದ್ಯದಲ್ಲಿ ಖುಷಿ ಶರ್ಮಾ ಯುಎಇ ಪರ ಗರಿಷ್ಠ 36 ರನ್‌ಗಳ ಇನ್ನಿಂಗ್ಸ್‌ ಆಡಿದರು. ಇವರಲ್ಲದೆ ಕವಿಶಾ 22 ರನ್ ಹಾಗೂ ಸಮೀರ 13 ರನ್ ಗಳಿಸಿದರು. ಉಳಿದಂತೆ ತಂಡದ ಯಾರಿಂದಲೂ ಎರಡಂಕಿ ಮೊತ್ತದ ಇನ್ನಿಂಗ್ಸ್ ಬರಲಿಲ್ಲ. ನೇಪಾಳದ ಪರ ಇಂದು ಬರ್ಮಾ ಮೂರು ವಿಕೆಟ್ ಪಡೆದರೆ, ಸಬ್ನಮ್ ರೈ ಮತ್ತು ಕೃತಿಕಾ ತಲಾ ಒಂದು ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ