50 ಓವರ್ ಪಂದ್ಯ, 53 ರನ್​ಗೆ ಆಲೌಟ್: 7 ವಿಕೆಟ್ ಉರುಳಿಸಿ ಮಿಂಚಿದ 19ರ ವೇಗಿ

| Updated By: ಝಾಹಿರ್ ಯೂಸುಫ್

Updated on: Jan 06, 2022 | 6:34 PM

Womens National Cricket League: ವಿಶೇಷ ಎಂದರೆ ಆಸ್ಟ್ರೇಲಿಯಾ ಕ್ಯಾಪಿಟಲ್ಸ್ ಪರ ಆರಂಭಿಕ ಬ್ಯಾಟರ್ ಕಾರ್ಲಿ ಲೀಸನ್ ಗರಿಷ್ಠ 12 ರನ್ ಗಳಿಸಿದ್ದು ಬಿಟ್ಟರೆ, ಉಳಿದವರ ಸ್ಕೋರ್ ಎರಡಂಕಿ ತಲುಪಿರಲಿಲ್ಲ.

50 ಓವರ್ ಪಂದ್ಯ, 53 ರನ್​ಗೆ ಆಲೌಟ್: 7 ವಿಕೆಟ್ ಉರುಳಿಸಿ ಮಿಂಚಿದ 19ರ ವೇಗಿ
Womens National Cricket League
Follow us on

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ವುಮೆನ್ಸ್​ ನ್ಯಾಷನಲ್ ಕ್ರಿಕೆಟ್ ಲೀಗ್‌ನಲ್ಲಿ 19 ವರ್ಷದ ವೇಗದ ಬೌಲರ್ ಸ್ಟೆಲ್ಲಾ 7 ವಿಕೆಟ್ ಉರುಳಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಕ್ಯಾಪಿಟಲ್ಸ್​ ಹಾಗೂ ನ್ಯೂ ಸೌತ್ ವೇಲ್ಸ್​ ತಂಡಗಳು ಮುಖಾಮುಖಿಯಾಗಿದ್ದವು. ಟಾಸ್ ಗೆದ್ದ ನ್ಯೂ ಸೌತ್ ವೇಲ್ಸ್ ತಂಡವು ಮೊದಲ ಬ್ಯಾಟಿಂಗ್ ಮಾಡಿತು. ನ್ಯೂ ಸೌತ್ ವೇಲ್ಸ್ ಪರ ನಾಯಕಿ ರಾಚೆಲ್ ಹೇನ್ಸ್ ಅದ್ಭುತ ಇನ್ನಿಂಗ್ಸ್ ಆಡಿದರು. 132 ಎಸೆತಗಳನ್ನು ಎದುರಿಸಿದ ರಾಚೆಲ್ 13 ಬೌಂಡರಿ ಹಾಗೂ 1 ಸಿಕ್ಸ್​ನೊಂದಿಗೆ 118 ರನ್‌ಗಳನ್ನು ಬಾರಿಸಿದರು. ಪರಿಣಾಮ ನ್ಯೂ ಸೌತ್ ವೇಲ್ಸ್ ತಂಡವು 49.5 ಓವರ್‌ಗಳಲ್ಲಿ 260 ರನ್‌ಗಳಿಸಿತು.

261 ರನ್​ಗಳ ಟಾರ್ಗೆಟ್ ಪಡೆದ ಆಸ್ಟ್ರೇಲಿಯಾ ಕ್ಯಾಪಿಟಲ್ಸ್ ತಂಡವು 19 ವರ್ಷದ ವೇಗದ ಬೌಲರ್ ಸ್ಟೆಲ್ಲಾ ಬೌಲಿಂಗ್​ಗೆ ತತ್ತರಿಸಿತು. 8 ಓವರ್‌ಗಳಲ್ಲಿ ಕೇವಲ 25 ರನ್ ನೀಡಿ 7 ವಿಕೆಟ್ ಕಬಳಿಸಿದ ಸ್ಟೆಲ್ಲಾ, ಆಸ್ಟ್ರೇಲಿಯಾ ಕ್ಯಾಪಿಟಲ್ಸ್ ತಂಡವನ್ನು ಕೇವಲ 53 ರನ್​ಗಳಿಗೆ ಆಲೌಟ್ ಮಾಡಿದರು. ಇದರೊಂದಿಗೆ ನ್ಯೂ ಸೌತ್ ವೇಲ್ಸ್ ತಂಡವು 207 ರನ್​ಗಳ ಭರ್ಜರಿ ಜಯ ಸಾಧಿಸಿತು.

ವಿಶೇಷ ಎಂದರೆ ಆಸ್ಟ್ರೇಲಿಯಾ ಕ್ಯಾಪಿಟಲ್ಸ್ ಪರ ಆರಂಭಿಕ ಬ್ಯಾಟರ್ ಕಾರ್ಲಿ ಲೀಸನ್ ಗರಿಷ್ಠ 12 ರನ್ ಗಳಿಸಿದ್ದು ಬಿಟ್ಟರೆ, ಉಳಿದವರ ಸ್ಕೋರ್ ಎರಡಂಕಿ ತಲುಪಿರಲಿಲ್ಲ. ಇನ್ನು ಹೆಚ್ಚುವರಿಯಾಗಿ 12 ರನ್ ನೀಡಿರುವುದು ಕೂಡ ಗರಿಷ್ಠ ಸ್ಕೋರ್ ಪಟ್ಟಿಯಲ್ಲಿ ಕಾಣಿಸಿತು. ಇನ್ನು ಈ ಪಂದ್ಯದಲ್ಲಿ ನ್ಯೂ ಸೌತ್ ವೇಲ್ಸ್ ಕೇವಲ 3 ಬೌಲರ್‌ಗಳನ್ನು ಮಾತ್ರ ಬೌಲಿಂಗ್ ಮಾಡಿಸಿದ್ದರು. ಅದರಂತೆ ಸ್ಟೆಲ್ಲಾ 7 ವಿಕೆಟ್ ಪಡೆದರೆ, ಮೆಟ್ಲಾನ್ ಬ್ರೌನ್ 5 ಓವರ್ ಗಳಲ್ಲಿ 18 ರನ್ ನೀಡಿ 2 ವಿಕೆಟ್ ಪಡೆದರು. ಹಾಗೆಯೇ ಸೆಮಿ ಜಾನ್ಸನ್ ಒಂದು ವಿಕೆಟ್ ಕಬಳಿಸಿದರು.

ಇದನ್ನೂ ಓದಿ:  Virat Kohli: ವಿರಾಟ್ ಕೊಹ್ಲಿಯ ಗಾಯ, ರಾಹುಲ್ ದ್ರಾವಿಡ್ ಹೇಳಿಕೆ ಮತ್ತು 100ನೇ ಟೆಸ್ಟ್​..!

ಇದನ್ನೂ ಓದಿ:  Sachin Tendulkar: ಆಲ್‌ ಟೈಮ್ ಬೆಸ್ಟ್‌ 11 ಹೆಸರಿಸಿದ ಸಚಿನ್: ಪ್ರಮುಖ ಆಟಗಾರರಿಗಿಲ್ಲ ಸ್ಥಾನ

ಇದನ್ನೂ ಓದಿ: Rohit Sharma: ಫಿಟ್​ನೆಸ್​ ಅಥವಾ ಇನ್ನೇನಾದರೂ? ರೋಹಿತ್ ಶರ್ಮಾ ಕೈ ಬಿಡಲು ಕಾರಣವೇನು?

ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!

(Womens National Cricket League: Stella Campbell take 7 wickets In 8 ov)

Published On - 6:21 pm, Thu, 6 January 22