WPL 2026: ಇನ್ನೇರಡು ದಿನಗಳಲ್ಲಿ ಡಬ್ಲ್ಯುಪಿಎಲ್ ಆರಂಭ; ಇಲ್ಲಿದೆ ಪೂರ್ಣ ವೇಳಾಪಟ್ಟಿ

Women's Premier League 2026 schedule: ಮಹಿಳಾ ಪ್ರೀಮಿಯರ್ ಲೀಗ್‌ನ ನಾಲ್ಕನೇ ಸೀಸನ್ ಜನವರಿ 9, 2026 ರಂದು ಆರಂಭಗೊಳ್ಳಲಿದೆ. 28 ದಿನಗಳ ಈ ಪಂದ್ಯಾವಳಿಯಲ್ಲಿ 5 ತಂಡಗಳು 22 ಪಂದ್ಯಗಳನ್ನು ಆಡಲಿವೆ. ಡಿವೈ ಪಾಟೀಲ್ ಮತ್ತು ಬಿಸಿಎ ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆಯುತ್ತವೆ. ಫೈನಲ್ ಫೆಬ್ರವರಿ 5 ರಂದು ನಡೆಯಲಿದೆ. ಜಿಯೋ ಹಾಟ್‌ಸ್ಟಾರ್ ಮತ್ತು ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ನೇರ ಪ್ರಸಾರ ವೀಕ್ಷಿಸಬಹುದು. ಸಂಪೂರ್ಣ ವೇಳಾಪಟ್ಟಿ, ತಂಡಗಳು ಮತ್ತು ಇತರ ವಿವರಗಳು ಇಲ್ಲಿವೆ.

WPL 2026: ಇನ್ನೇರಡು ದಿನಗಳಲ್ಲಿ ಡಬ್ಲ್ಯುಪಿಎಲ್ ಆರಂಭ; ಇಲ್ಲಿದೆ ಪೂರ್ಣ ವೇಳಾಪಟ್ಟಿ
Wpl 2026

Updated on: Jan 07, 2026 | 7:52 PM

ಮಹಿಳಾ ಪ್ರೀಮಿಯರ್ ಲೀಗ್‌ನ (Women’s Premier League) ನಾಲ್ಕನೇ ಸೀಸನ್ ಆರಂಭಕ್ಕೆ ಕೆಲವೇ ಕೆಲವು ದಿನಗಳು ಬಾಕಿ ಉಳಿದಿವೆ. ಐಪಿಎಲ್​ನಂತೆಯೇ (IPL) ಭಾರತದಲ್ಲಿ ಅತಿ ಹೆಚ್ಚು ಜನಪ್ರಿಯತೆಗಳಿಸಿರುವ ಈ ಮಹಿಳಾ ಟಿ20 ಲೀಗ್​ ಜನವರಿ 9, 2026 ರಂದು ಪ್ರಾರಂಭವಾಗಲಿದೆ. ಮೊದಲ ಮೂರು ಆವೃತ್ತಿಗಳು ನಿರೀಕ್ಷೆಗೂ ಮೀರಿದ ರೀತಿಯಲ್ಲಿ ಯಶಸ್ವಿಯಾಗಿದ್ದವು. ಇದೀಗ ನಾಲ್ಕನೇ ಸೀಸನ್ ಕೂಡ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಅದರಲ್ಲೂ ಭಾರತ ಮಹಿಳಾ ಪಡೆ ಏಕದಿನ ವಿಶ್ವಕಪ್ ಗೆದ್ದ ಬಳಿಕ ಮಹಿಳಾ ತಂಡಕ್ಕೂ ಪುರುಷ ತಂಡದಷ್ಟೇ ಮನ್ನಣೆ ಸಿಗುತ್ತಿದೆ. ಹೀಗಾಗಿ ಈ ನಾಲ್ಕನೇ ಸೀಸನ್ ಮತ್ತೊಂದು ದಾಖಲೆ ಬರೆಯಲಿದೆ ಎಂಬುದು ಬಿಸಿಸಿಐ (BCCI) ಲೆಕ್ಕಾಚಾರವಾಗಿದೆ.

28 ದಿನ, 22 ಪಂದ್ಯಗಳು

ಈ ಆವೃತ್ತಿಯಲ್ಲೂ ಎಂದಿನಂತೆ ಐದು ತಂಡಗಳು ಕಣಕ್ಕಿಳಿಯುತ್ತಿದ್ದು, 28 ದಿನಗಳ ಕಾಲ ನಡೆಯಲಿರುವ ಈ ಪಂದ್ಯಾವಳಿಯಲ್ಲಿ ಒಟ್ಟು 22 ಪಂದ್ಯಗಳಳು ನಡೆಯಲಿವೆ. ಎಲಿಮಿನೇಟರ್ ಪಂದ್ಯ ಫೆಬ್ರವರಿ 3 ರಂದು ವಡೋದರಾದಲ್ಲಿ ನಡೆದರೆ, ಫೈನಲ್ ಪಂದ್ಯ ಫೆಬ್ರವರಿ 5 ರಂದು ನಡೆಯಲಿದೆ. ಈ 22 ಪಂದ್ಯಗಳು ಎರಡು ಸ್ಥಳಗಳಲ್ಲಿ ನಡೆಯಲಿದ್ದು, ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣ ಹಾಗೂ ವಡೋದರಾದ ಬಿಸಿಎ ಕ್ರೀಡಾಂಗಣ ಈ ಪಂದ್ಯಗಳಿಗೆ ಆತಿಥ್ಯ ನೀಡಲಿವೆ.

5 ತಂಡಗಳು ಹೀಗಿವೆ

  1. ಮುಂಬೈ ಇಂಡಿಯನ್ಸ್
  2. ರಾಯಲ್ ಚಾಲೆಂಜರ್ಸ್ ಬೆಂಗಳೂರು
  3. ದೆಹಲಿ ಕ್ಯಾಪಿಟಲ್ಸ್
  4. ಯುಪಿ ವಾರಿಯರ್ಸ್
  5. ಗುಜರಾತ್ ಜೈಂಟ್ಸ್

ಈ ಲೀಗ್​ನ ಸ್ವರೂಪ ಹೇಗಿರಲಿದೆ?

ಎಂದಿನಂತೆ ಐದು ತಂಡಗಳಲ್ಲಿ ಪ್ರತಿಯೊಂದೂ ತಂಡವು ಪರಸ್ಪರ ಎರಡು ಪಂದ್ಯಗಳನ್ನು ಆಡುತ್ತವೆ. ಅಂದರೆ ಪ್ರತಿ ತಂಡವು ಪಂದ್ಯಾವಳಿಯಲ್ಲಿ ಎಂಟು ಪಂದ್ಯಗಳನ್ನು ಆಡುತ್ತದೆ. ಲೀಗ್ ಹಂತ ಮುಗಿದ ನಂತರ, ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ತಂಡವು ನೇರವಾಗಿ ಫೈನಲ್‌ಗೆ ಮುನ್ನಡೆದರೆ, 2 ನೇ ಮತ್ತು 3 ನೇ ಸ್ಥಾನದಲ್ಲಿರುವ ತಂಡಗಳು ಎಲಿಮಿನೇಟರ್‌ನಲ್ಲಿ ಆಡುತ್ತವೆ. ಇಲ್ಲಿ ಗೆದ್ದ ತಂಡವು ಫೈನಲ್‌ಗೆ ಅರ್ಹತೆ ಪಡೆಯುತ್ತದೆ.

ಎಷ್ಟು ಡಬಲ್ ಹೆಡರ್ ಪಂದ್ಯಗಳು ನಡೆಯಲಿವೆ?

ಈ ಬಾರಿ ಎರಡು ಡಬಲ್ ಹೆಡರ್‌ ಪಂದ್ಯಗಳು ಅಂದರೆ ಒಂದೇ ದಿನದಲ್ಲಿ ಎರಡು ಪಂದ್ಯಗಳು ನಡೆಯಲಿವೆ. ಮೊದಲ ಡಬಲ್ ಹೆಡರ್ ಜನವರಿ 10 ರಂದು ನಡೆದರೆ, ಎರಡನೇ ಜನವರಿ 17 ರಂದು ಎರಡನೇ ಡಬಲ್ ಹೆಡರ್ ನಡೆಯಲಿದೆ.

ನೇರ ಪ್ರಸಾರ ಮತ್ತು ಲೈವ್ ಸ್ಟ್ರೀಮಿಂಗ್ ಎಲ್ಲಿ ವೀಕ್ಷಿಸಬಹುದು?

ಅಭಿಮಾನಿಗಳು ಈ ಲೀಗ್​ನ ಪಂದ್ಯಗಳ ನೇರ ಪ್ರಸಾರವನ್ನು ಜಿಯೋ ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿ ಮತ್ತು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಟಿವಿಯಲ್ಲಿ ವೀಕ್ಷಿಸಬಹುದು.

WPL 2026 ರ ಪೂರ್ಣ ವೇಳಾಪಟ್ಟಿ

ದಿನಾಂಕ ಮುಖಾಮುಖಿ ಸ್ಥಳ
09-01-2026 ಮುಂಬೈ ಇಂಡಿಯನ್ಸ್ vs ಆರ್​ಸಿಬಿ ನವಿ ಮುಂಬೈ
10-01-2026 ಯುಪಿ ವಾರಿಯರ್ಸ್ vs ಗುಜರಾತ್ ಜೈಂಟ್ಸ್ ನವಿ ಮುಂಬೈ
10-01-2026 ಮುಂಬೈ ಇಂಡಿಯನ್ಸ್ vs ದೆಹಲಿ ಕ್ಯಾಪಿಟಲ್ಸ್ ನವಿ ಮುಂಬೈ
11-01-2026 ದೆಹಲಿ ಕ್ಯಾಪಿಟಲ್ಸ್ vs ಗುಜರಾತ್ ಜೈಂಟ್ಸ್ ನವಿ ಮುಂಬೈ
12-01-2026 ಆರ್​ಸಿಬಿ vs ಯುಪಿ ವಾರಿಯರ್ಸ್ ನವಿ ಮುಂಬೈ
13-01-2026 ಮುಂಬೈ ಇಂಡಿಯನ್ಸ್ vs ಗುಜರಾತ್ ಜೈಂಟ್ಸ್ ನವಿ ಮುಂಬೈ
14-01-2026 ಯುಪಿ ವಾರಿಯರ್ಸ್ vs ದೆಹಲಿ ಕ್ಯಾಪಿಟಲ್ಸ್ ನವಿ ಮುಂಬೈ
15-01-2026 ಮುಂಬೈ ಇಂಡಿಯನ್ಸ್ vs ಯುಪಿ ವಾರಿಯರ್ಸ್ ನವಿ ಮುಂಬೈ
16-01-2026 ಆರ್​ಸಿಬಿ vs ಗುಜರಾತ್ ಜೈಂಟ್ಸ್ ನವಿ ಮುಂಬೈ
17-01-2026 ಯುಪಿ ವಾರಿಯರ್ಸ್ vs ಮುಂಬೈ ಇಂಡಿಯನ್ಸ್ ನವಿ ಮುಂಬೈ
17-01-2026 ದೆಹಲಿ ಕ್ಯಾಪಿಟಲ್ಸ್ vs ಆರ್​ಸಿಬಿ ನವಿ ಮುಂಬೈ
19-01-2026 ಗುಜರಾತ್ ಜೈಂಟ್ಸ್ vs ಆರ್​ಸಿಬಿ ವಡೋದರಾ
20-01-2026 ದೆಹಲಿ ಕ್ಯಾಪಿಟಲ್ಸ್ vs ಮುಂಬೈ ಇಂಡಿಯನ್ಸ್ ವಡೋದರಾ
22-01-2026 ಗುಜರಾತ್ ಜೈಂಟ್ಸ್ vs ಯುಪಿ ವಾರಿಯರ್ಸ್ ವಡೋದರಾ
24-01-2026 ಆರ್​ಸಿಬಿ vs ದೆಹಲಿ ಕ್ಯಾಪಿಟಲ್ಸ್ ವಡೋದರಾ
26-01-2026 ಆರ್​ಸಿಬಿ vs ಮುಂಬೈ ಇಂಡಿಯನ್ಸ್ ವಡೋದರಾ
27-01-2026 ಗುಜರಾತ್ ಜೈಂಟ್ಸ್ vs ದೆಹಲಿ ಕ್ಯಾಪಿಟಲ್ಸ್ ವಡೋದರಾ
29-01-2026 ಯುಪಿ ವಾರಿಯರ್ಸ್ vs ಆರ್​ಸಿಬಿ ವಡೋದರಾ
30-01-2026 ಗುಜರಾತ್ ಜೈಂಟ್ಸ್ vs ಮುಂಬೈ ಇಂಡಿಯನ್ಸ್ ವಡೋದರಾ
01-02-2026 ಡೆಲ್ಲಿ ಕ್ಯಾಪಿಟಲ್ಸ್ vs ಯುಪಿ ವಾರಿಯರ್ಸ್ ವಡೋದರಾ
03-02-2026 ಎಲಿಮಿನೇಟರ್ ವಡೋದರಾ
05-02-2026 ಫೈನಲ್ ವಡೋದರಾ

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:49 pm, Wed, 7 January 26