ಮಹಿಳಾ ಟಿ20 ವಿಶ್ವಕಪ್ ಮುಂದಿನ ತಿಂಗಳು ಅಕ್ಟೋಬರ್ 3 ರಿಂದ ಯುಎಇನಲ್ಲಿ ಆರಂಭವಾಗಲಿದೆ. ಆದರೆ ಅದಕ್ಕೂ ಮುನ್ನ ಅಭ್ಯಾಸ ಪಂದ್ಯಗಳು ನಡೆಯುತ್ತಿವೆ. ಅದರಂತೆ ನಡೆದ ಅಭ್ಯಾಸ ಪಂದ್ಯದಲ್ಲಿ ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡ, ಕ್ರಿಕೆಟ್ ಶಿಶು ಸ್ಕಾಟ್ಲೆಂಡ್ ಮಹಿಳಾ ತಂಡದ ವಿರುದ್ಧ ಹೀನಾಯ ಸೋಲನ್ನು ಅನುಭವಿಸಿದೆ. ಟಿ20 ವಿಶ್ವಕಪ್‌ಗೂ ಮುನ್ನ ಪಾಕಿಸ್ತಾನ ತಂಡ ಸ್ಕಾಟ್ಲೆಂಡ್‌ನಂತಹ ದುರ್ಬಲ ತಂಡದ ವಿರುದ್ಧ ಸೋತಿರುವುದು ತಂಡಕ್ಕೆ ಆರಂಭಿಕ ಆಘಾತ ನೀಡಿದೆ.
ಈ ಅಭ್ಯಾಸ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 132 ರನ್ ಗಳಿಸಿತು. ತಂಡದ ಪರ ಅಗ್ರ ಕ್ರಮಾಂಕ ರನ್ ಕಲೆಹಾಕುವಲ್ಲಿ ಎಡವಿತು. ಇದರಿಂದಾಗಿ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ತಂಡದ ಪರ ಹೋರಾಟದ ಇನ್ನಿಂಗ್ಸ್ ಕಟ್ಟಿದ ಮುನಿಬಾ ಮತ್ತು ಒಮೈಮಾ ತಂಡಕ್ಕೆ ಉತ್ತಮ ಜೊತೆಯಾಟ ನೀಡಿದರು. ಈ ಪಂದ್ಯದಲ್ಲಿ ಒಮೈಮಾ 30 ರನ್ ಮತ್ತು ಮುನಿಬಾ 27 ರನ್ ಗಳಿಸಿದರು.
133 ರನ್ಗಳ ಗುರಿ ಬೆನ್ನಟ್ಟಿದ ಸ್ಕಾಟ್ಲೆಂಡ್ ತಂಡ ಕೇವಲ 2 ವಿಕೆಟ್ ಕಳೆದುಕೊಂಡು 18 ಓವರ್ಗಳಲ್ಲೇ ಸುಲಭವಾಗಿ ಜಯದ ನಗೆ ಬೀರಿತು. ಸ್ಕಾಟ್ಲೆಂಡ್ ಪರ ಅದ್ಭುತ ಬ್ಯಾಟಿಂಗ್ ಮಾಡಿದ ಸಾರಾ 52 ಎಸೆತಗಳಲ್ಲಿ 60 ರನ್ಗಳ ಅತ್ಯಧಿಕ ಇನ್ನಿಂಗ್ಸ್ ಆಡಿದರೆ, ಹೋರ್ಲಿ ಕೂಡ 48 ರನ್ಗಳ ಗೆಲುವಿನ ಕಾಣಿಕೆ ನೀಡಿದರು.
Warm-up match – ICC Women’s T20 World Cup 2024
Scotland Women beat Pakistan Women by 8 wickets.
Pakistan 🇵🇰: 132-9 (20 overs)
Scotland 🏴: 133-2 (18 overs)#T20WorldCup | #BackOurGirls pic.twitter.com/aPMY7rP0G8— Pakistan Cricket (@TheRealPCB) September 28, 2024
ಈ ಪಂದ್ಯದಲ್ಲಿ ಪಾಕಿಸ್ತಾನ ತಂಡ 8 ಬೌಲರ್‌ಗಳನ್ನು ಬಳಸಿತು. ಆದರೆ, ಅದರಲ್ಲಿ ಒಬ್ಬರಿಗೆ ಮಾತ್ರ ಏಕೈಕ ವಿಕೆಟ್ ಪಡೆಯಲು ಸಾಧ್ಯವಾಯಿತು. ಉಳಿದ ಇನ್ನೊಂದು ವಿಕೆಟ್ ರನೌಟ್‌ನಿಂದ ಸಿಕ್ಕಿತು. ಒಟ್ಟಿನಲ್ಲಿ ಸ್ಕಾಟ್ಲೆಂಡ್ ವಿರುದ್ಧ ಆಡಿದ ಅಭ್ಯಾಸ ಪಂದ್ಯದಲ್ಲಿ ಪಾಕಿಸ್ತಾನದ ಬ್ಯಾಟಿಂಗ್ ಮಾತ್ರವಲ್ಲದೆ ಬೌಲಿಂಗ್ ಕೂಡ ವಿಫಲವಾಗಿದೆ.
ಭಾರತ ಮಹಿಳಾ ಕ್ರಿಕೆಟ್ ತಂಡ ಇಂದು ತನ್ನ ಏಕೈಕ ಅಭ್ಯಾಸ ಪಂದ್ಯವನ್ನು ಆಡಲಿದೆ. ಹರ್ಮನ್‌ಪ್ರೀತ್ ಕೌರ್ ಪಡೆ ಇಂದು ವೆಸ್ಟ್ ಇಂಡೀಸ್ ವಿರುದ್ಧ ಸೆಣಸಲಿದೆ. ಈ ಅಭ್ಯಾಸ ಪಂದ್ಯವನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ ಟಿ20 ವಿಶ್ವಕಪ್‌ಗೆ ತನ್ನ ಸಿದ್ಧತೆಯನ್ನು ಮತ್ತಷ್ಟು ಬಲಪಡಿಸಲು ಬಯಸುತ್ತದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ