AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2026: ನಾಮಕಾವಸ್ತೆಗೆ ತಂಡದಲ್ಲಿರುವ ಇವರಿಬ್ಬರೇ ಆರ್​ಸಿಬಿ ಪಾಲಿನ ವಿಲನ್ಸ್

RCB Batting Woes: 2026ರ ಐಪಿಎಲ್‌ನಲ್ಲಿ ಉತ್ತಮ ಆರಂಭ ಕಂಡಿದ್ದ ಆರ್​ಸಿಬಿ, ಬೆಥೆಲ್ ಮತ್ತು ಜಿತೇಶ್ ಶರ್ಮಾ ಅವರ ಕಳಪೆ ಬ್ಯಾಟಿಂಗ್ ಪ್ರದರ್ಶನದಿಂದ ಸಂಕಷ್ಟಕ್ಕೆ ಸಿಲುಕಿದೆ. ಇವರ ವೈಫಲ್ಯ ತಂಡದ ಪಾಯಿಂಟ್ ಪಟ್ಟಿಯಲ್ಲಿನ ಸ್ಥಾನಕ್ಕೆ ಧಕ್ಕೆ ತಂದಿದೆ. ನಿರ್ಣಾಯಕ ಹಂತದಲ್ಲಿ ಪ್ರಮುಖ ಆಟಗಾರರ ಪ್ರದರ್ಶನವಿಲ್ಲದೆ, ಆರ್​ಸಿಬಿ ಪ್ಲೇಆಫ್ ಕನಸು ನುಚ್ಚುನೂರಾಗುವ ಆತಂಕದಲ್ಲಿದೆ.

IPL 2026: ನಾಮಕಾವಸ್ತೆಗೆ ತಂಡದಲ್ಲಿರುವ ಇವರಿಬ್ಬರೇ ಆರ್​ಸಿಬಿ ಪಾಲಿನ ವಿಲನ್ಸ್
Rcb 2026
ಪೃಥ್ವಿಶಂಕರ
|

Updated on:May 08, 2026 | 5:03 PM

Share

2026 ರ ಐಪಿಎಲ್ (IPL 2026) ಅನ್ನು ಅಬ್ಬರದಿಂದ ಆರಂಭಿಸಿದ್ದ ಆರ್​ಸಿಬಿ (RCB) ಮೊದಲಾರ್ಧ ಮುಗಿದ ಬಳಿಕ ಅದ್ಯಾಕೋ ಅಳಿತಪ್ಪಿದಂತೆ ಕಾಣುತ್ತಿದೆ. ಪ್ರಸ್ತುತ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಆರ್​ಸಿಬಿ ಇದೀಗ ಆ ಸ್ಥಾನವನ್ನು ಕಳೆದುಕೊಳ್ಳುವ ಆತಂಕದಲ್ಲಿದೆ. ಇದಕ್ಕೆ ಕಾರಣ ತಂಡದಲ್ಲಿ ಕೆಲವರ ಪ್ರದರ್ಶನ. ನಿರ್ಣಾಯಕ ಹಂತದಲ್ಲಿ ಕೆಲವರಿಂದ ನಿರೀಕ್ಷಿತ ಪ್ರದರ್ಶನ ಬರದಿರುವುದು ತಂಡವನ್ನು ಸಂಕಷ್ಟಕ್ಕೆ ದೂಡಿದೆ. ಅದರಲ್ಲೂ ಬ್ಯಾಟಿಂಗ್‌ ವಿಭಾಗದಲ್ಲಿ ಆರ್​ಸಿಬಿ ಯಾರ ಮೇಲೆ ಹೆಚ್ಚಿನ ಭರವಸೆ ಇಟ್ಟಿತ್ತೋ, ಆ ಆಟಗಾರರೇ ಆರ್​ಸಿಬಿ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದಾರೆ. ಅಂತಹ ಆಟಗಾರರಲ್ಲಿ ಆರ್​ಸಿಬಿಯ ಪ್ರಸ್ತುತ ಆರಂಭಿಕ ಆಟಗಾರ ಜೆಕೋಬ್ ಬೆಥೆಲ್ (Jacob Bethell) ಹಾಗೂ ತಂಡದ ಉಪನಾಯಕ ಜಿತೇಶ್ ಶರ್ಮಾ (Jitesh Sharma).

ವಾಸ್ತವವಾಗಿ ಲಕ್ನೋ ಸೂಪರ್‌ಜೈಂಟ್ಸ್ ನೀಡಿದ್ದ 213 ರನ್​ಗಳ ಬೃಹತ್ ಗುರಿ ಬೆನ್ನಟ್ಟಿದ ಆರ್​​ಸಿಬಿ 9 ರನ್‌ಗಳಿಂದ ಸೋತಿತು. ಇದು ಆರ್​​ಸಿಬಿಗೆ ನಾಲ್ಕನೇ ಸೋಲಾದರೆ ಸತತ ಎರಡನೇ ಸೋಲಾಗಿತ್ತು. ಈ ಆವೃತ್ತಿಯಲ್ಲಿ ಆರ್​ಸಿಬಿ ತಂಡವು ಗುರಿ ಬೆನ್ನಟ್ಟುವಾಗ ಸೋತ ಮೊದಲ ಪಂದ್ಯ ಇದಾಗಿದೆ. ಇದಕ್ಕೆ ಕಾರಣ ತಂಡದ ಟಾಪ್ ಆರ್ಡರ್ ಕೈಕೊಟ್ಟಿದ್ದು. ಈ ಪಂದ್ಯದಲ್ಲಿ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟಾದರೆ, ಆರಂಭಿಕ ಜೆಕೋಬ್ ಬೆಥೆಲ್ ಮತ್ತೊಮ್ಮೆ ಉತ್ತಮ ಪ್ರದರ್ಶನ ನೀಡುವಲ್ಲಿ ಎಡವಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಬಂದ ಜಿತೇಶ್ ಶರ್ಮಾ ಎಂದಿನಂತೆ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಇವರಿಬ್ಬರ ಈ ಕಳಪೆ ಪ್ರದರ್ಶನ ತಂಡಕ್ಕೆ ಹೊರಯಾಯಿತು.

ಸಾಲ್ಟ್ ಸ್ಥಾನ ತುಂಬಲು ಬೆಥೆಲ್ ವಿಫಲ

ಮೇಲೆ ಹೇಳಿದಂತೆ ಈ ಆವೃತ್ತಿಯಲ್ಲಿ ಬೆಥೆಲ್ ಹಾಗೂ ಜಿತೇಶ್ ಇಲ್ಲಿಯವರೆಗೆ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಮೊದಲು ಬೆಥೆಲ್ ಬಗ್ಗೆ ನೋಡುವುದಾದರೆ.. ಕಳೆದ ಆವೃತ್ತಿಯಿಂದ ಆರ್​ಸಿಬಿ ತಂಡದಲ್ಲಿರುವ ಬೆಥೆಲ್​ಗೆ, ಫಿಲ್ ಸಾಲ್ಟ್, ಟಿಮ್ ಡೇವಿಡ್ ಮತ್ತು ರೊಮಾರಿಯೊ ಶೆಫರ್ಡ್‌ರಂತಹ ವಿದೇಶಿ ಆಟಗಾರರ ಉಪಸ್ಥಿತಿಯಿಂದಾಗಿ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಈಗ, ಸಾಲ್ಟ್‌ ಗಾಯಗೊಂಡಿರುವುದರಿಂದ, ಬೆಥೆಲ್​ಗೆ ಅವಕಾಶಗಳ ಮೇಲೆ ಅವಕಾಶ ಸಿಗುತ್ತಿದೆ. ಆದರೆ ಭೆಥೆಲ್ ಮಾತ್ರ ಪ್ರಭಾವ ಬೀರಲು ವಿಫಲವಾಗಿದೆ. ಆಡಿರುವ ನಾಲ್ಕು ಪಂದ್ಯಗಳಲ್ಲಿ ಕೇವಲ 43 ರನ್‌ಗಳನ್ನು ಗಳಿಸಿದ್ದಾರೆ, ಕೇವಲ 10.75 ಸರಾಸರಿಯೊಂದಿಗೆ.

ಜಿತೇಶ್ ಆಟ ಸಪ್ಪೆ

ಮತ್ತೊಂದೆಡೆ, ಜಿತೇಶ್ ಶರ್ಮಾ ಒಬ್ಬ ಅದ್ಭುತ ವಿಕೆಟ್ ಕೀಪರ್ ಎಂದು ಸಾಬೀತಾಗಿದ್ದರೂ, ಈ ಆವೃತ್ತಿಯಲ್ಲಿ ಬ್ಯಾಟಿಂಗ್‌ನಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಕಳೆದ ಆವೃತ್ತಿಯಲ್ಲಿ ಕೆಲವು ಪ್ರಬಲ ಇನ್ನಿಂಗ್ಸ್‌ಗಳನ್ನು ಆಡುವ ಮೂಲಕ ಜಿತೇಶ್ ಆರ್‌ಸಿಬಿಯ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಆದಾಗ್ಯೂ, ಈ ಸೀಸನ್​ನಲ್ಲಿ, ಜಿತೇಶ್ ಅವರ ಬ್ಯಾಟಿಂಗ್ ದುರಂತವಾಗಿದೆ. ಆಡಿರುವ ಎಂಟು ಇನ್ನಿಂಗ್ಸ್‌ಗಳಲ್ಲಿ 8.00 ಸರಾಸರಿಯಲ್ಲಿ ಕೇವಲ 64 ರನ್‌ಗಳಿಸಿದ್ದಾರೆ. ಈ ಐಪಿಎಲ್‌ನಲ್ಲಿ ಆಡುವ ಎಲ್ಲಾ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್‌ಗಳಲ್ಲಿ ಇದು ಅತ್ಯಂತ ಕೆಟ್ಟ ಸರಾಸರಿಯಾಗಿದೆ. ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಆರ್‌ಸಿಬಿಗೆ ಗಮನಾರ್ಹ ಕೊಡುಗೆ ನೀಡುವಲ್ಲಿ ವಿಫಲರಾಗಿದ್ದು ತಂಡವನ್ನು ಸೋಲಿನ ದವಡೆಗೆ ತಳ್ಳಿದೆ. ಇವರಿಬ್ಬರು ಫಾರ್ಮ್​ ಕಂಡುಕೊಳ್ಳದಿದ್ದರೆ, ಸತತ 2ನೇ ಬಾರಿಗೆ ಟ್ರೋಫಿ ಗೆಲ್ಲಬೇಕೆನ್ನುವ ಆರ್​ಸಿಬಿ ಕನಸು ಕನಸಾಗೇ ಉಳಿಯಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:58 pm, Fri, 8 May 26

Follow Us
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ
ಅಂಜನಾದ್ರಿ ಹನುಮನಿಗೆ 2.5 ಕೋಟಿ ರೂ. ಮೌಲ್ಯದ ಚಿನ್ನದ ಕಿರೀಟ!
ಅಂಜನಾದ್ರಿ ಹನುಮನಿಗೆ 2.5 ಕೋಟಿ ರೂ. ಮೌಲ್ಯದ ಚಿನ್ನದ ಕಿರೀಟ!
ಸಲೂನ್‌ನಲ್ಲಿ ಶಿಸ್ತಿನಿಂದ ಕೇಶ ವಿನ್ಯಾಸ ಮಾಡಿಸಿಕೊಂಡ ಮಂಗ!
ಸಲೂನ್‌ನಲ್ಲಿ ಶಿಸ್ತಿನಿಂದ ಕೇಶ ವಿನ್ಯಾಸ ಮಾಡಿಸಿಕೊಂಡ ಮಂಗ!
ಲಕ್ಷಾಂತರ ರೂ. ಮೌಲ್ಯದ ಚಿನ್ನ, ನಗದು ಕದ್ದು ಮನೆಗೆ ಬೆಂಕಿ ಹಚ್ಚಿದ ಕಳ್ಳರು!
ಲಕ್ಷಾಂತರ ರೂ. ಮೌಲ್ಯದ ಚಿನ್ನ, ನಗದು ಕದ್ದು ಮನೆಗೆ ಬೆಂಕಿ ಹಚ್ಚಿದ ಕಳ್ಳರು!