86 ಪಿಚ್, 3 ಮೈದಾನ, ಹೈಟೆಕ್ ಸೌಲಭ್ಯ; ಬೆಂಗಳೂರಲ್ಲಿ ನೂತನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಲೋಕಾರ್ಪಣೆ
National Cricket Academy: ನೂತನ ಎನ್‌ಸಿಎಯಲ್ಲಿ ಆಟಗಾರರ ಅಭ್ಯಾಸಕ್ಕೆ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇದು 40 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದ್ದು, ಇಲ್ಲಿ 3 ಮೈದಾನ ಹಾಗೂ ಒಟ್ಟು 86 ಪಿಚ್‌ಗಳನ್ನು ಸಿದ್ಧಪಡಿಸಲಾಗಿದೆ. ಎಲ್ಲಾ ಮೂರು ಮೈದಾನಗಳನ್ನು ಇಂಗ್ಲಿಷ್ ಕೌಂಟಿ ಮೈದಾನದ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಇವುಗಳಲ್ಲಿ 45 ಹೊರಾಂಗಣ ಪಿಚ್‌ಗಳು ಸೇರಿವೆ. ಇಲ್ಲಿ ಅನೇಕ ಆಟಗಾರರು ಒಂದೇ ಸಮಯದಲ್ಲಿ ಅಭ್ಯಾಸ ಮಾಡಬಹುದು.
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಿರ್ಮಾಣಗೊಂಡಿರುವ ನೂತನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯನ್ನು ಇಂದು ಲೋಕಾರ್ಪಣೆ ಮಾಡಲಾಗಿದೆ. ಈ ಉದ್ಘಾಟನಾ ಸಮಾರಂಭದಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಮಂಡಳಿಯ ಅಧ್ಯಕ್ಷ ರೋಜರ್ ಬಿನ್ನಿ, ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ, ಎನ್‌ಸಿಎಸ್ ನಿರ್ದೇಶಕ ವಿವಿಎಸ್ ಲಕ್ಷ್ಮಣ್, ಟೀಂ ಇಂಡಿಯಾ ಆಟಗಾರರಾದ ಹಾರ್ದಿಕ್ ಪಾಂಡ್ಯ ಮತ್ತು ಮೊಹಮ್ಮದ್ ಶಮಿ ಉಪಸ್ಥಿತರಿದ್ದರು. ಹಲವು ವಿಶಿಷ್ಟಗಳಿಂದ ಕೂಡಿರುವ ಈ ಅಕಾಡೆಮಿಗೆ ನೂತನ ಹೆಸರಿಟ್ಟಿದ್ದು, ಸೆಂಟರ್ ಆಫ್ ಎಕ್ಸಲೆನ್ಸ್ ಎಂದು ಮರು ನಾಮಕರಣ ಮಾಡಲಾಗಿದೆ.
ಏನೆಲ್ಲ ವಿಶೇಷತೆಗಳಿವೆ?
ನೂತನ ಎನ್‌ಸಿಎಯಲ್ಲಿ ಆಟಗಾರರ ಅಭ್ಯಾಸಕ್ಕೆ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇದು 40 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದ್ದು, ಇಲ್ಲಿ 3 ಮೈದಾನ ಹಾಗೂ ಒಟ್ಟು 86 ಪಿಚ್‌ಗಳನ್ನು ಸಿದ್ಧಪಡಿಸಲಾಗಿದೆ. ಎಲ್ಲಾ ಮೂರು ಮೈದಾನಗಳನ್ನು ಇಂಗ್ಲಿಷ್ ಕೌಂಟಿ ಮೈದಾನದ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಇವುಗಳಲ್ಲಿ 45 ಹೊರಾಂಗಣ ಪಿಚ್‌ಗಳು ಸೇರಿವೆ. ಇಲ್ಲಿ ಅನೇಕ ಆಟಗಾರರು ಒಂದೇ ಸಮಯದಲ್ಲಿ ಅಭ್ಯಾಸ ಮಾಡಬಹುದು.
Hardik Pandya attended the inauguration ceremony of the New National Cricket Academy in Bangalore today. pic.twitter.com/JccniU7KIy
— Rohan Gangta (@rohan_gangta) September 28, 2024
ಈ ಪಿಚ್‌ಗಳ ತಯಾರಿಕೆಯಲ್ಲಿ ಭಾರತದ ಪರಿಸ್ಥಿತಿಗಳ ಜೊತೆಗೆ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್‌ನಂತಹ ಪರಿಸ್ಥಿತಿಗಳನ್ನೂ ಗಮನದಲ್ಲಿಟ್ಟುಕೊಳ್ಳಲಾಗಿದೆ. ಇದರೊಂದಿಗೆ ಭಾರತೀಯ ಆಟಗಾರರು ವಿದೇಶಿ ಪ್ರವಾಸಕ್ಕೆ ತೆರಳುವ ಮುನ್ನ ಭಾರತದಲ್ಲಿ ಅಭ್ಯಾಸ ನಡೆಸಲು ಸಾಧ್ಯವಾಗುತ್ತದೆ. ಹೊಸ ಎನ್‌ಸಿಎಯಲ್ಲಿ ಒಳಾಂಗಣ ಅಭ್ಯಾಸ ಸೌಲಭ್ಯವನ್ನು ಏರ್ಪಡಿಸಲಾಗಿದ್ದು, ಇದರಿಂದ ಮಳೆಯ ಸಂದರ್ಭದಲ್ಲಿ ಅಭ್ಯಾಸಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲ.
.@BCCI inaugurates the National Cricket Academy in Bengaluru.
🔸The world-class facility is called the BCCI Centre of Excellence (CoE).
🔸Spanning over 40 acres of land in Bengaluru, the BCCI Centre of Excellence features 3 world-class grounds and 86 pitches, including both… pic.twitter.com/khNFWlPN65
— All India Radio News (@airnewsalerts) September 29, 2024
ಆಧುನಿಕ ಪುನರ್ವಸತಿ ಸೌಲಭ್ಯ
ಅಭ್ಯಾಸದ ಜೊತೆಗೆ ಆಟಗಾರರಿಗೆ ರಿಫ್ರೆಶ್‌ಮೆಂಟ್, ರಿಹ್ಯಾಬ್ ಮತ್ತು ತರಬೇತಿಗಾಗಿ ಹಲವು ಸೌಲಭ್ಯಗಳನ್ನು ಸಹ ಸಿದ್ಧಪಡಿಸಲಾಗಿದೆ. ವಾಸ್ತವವಾಗಿ, ಬಿಸಿಸಿಐ ಒಲಿಂಪಿಕ್ ಗಾತ್ರದ ಈಜುಕೊಳವನ್ನು ನಿರ್ಮಿಸಿದೆ, ಇದರಲ್ಲಿ ಆಟಗಾರರು ತಮ್ಮನ್ನು ತಾವು ರಿಫ್ರೆಶ್ ಮಾಡಿಕೊಳ್ಳಬಹುದು. ಇದಲ್ಲದೇ ಆಟಗಾರರ ರಿಹ್ಯಾಬ್ಗಾಗಿ ಕ್ರೀಡಾ ವಿಜ್ಞಾನ ಸೌಲಭ್ಯ ಮತ್ತು ಆಧುನಿಕ ತರಬೇತಿ ಸೌಲಭ್ಯಗಳಿದ್ದು, ಗಾಯ ನಿರ್ವಹಣೆಗೆ ನೆರವಾಗಲಿದೆ. ಎನ್‌ಸಿಎಯಲ್ಲಿ ಆಟಗಾರರು ಉಳಿದುಕೊಳ್ಳಲು ಉತ್ತಮ ಸೌಲಭ್ಯಗಳಿರುವ 70 ಕೊಠಡಿಗಳನ್ನೂ ಸಿದ್ಧಪಡಿಸಲಾಗಿದೆ. ಕ್ರಿಕೆಟ್ ಅಲ್ಲದೆ ಇತರೆ ಕ್ರೀಡೆಗಳಿಗೂ ತರಬೇತಿ ನೀಡುವ ಸೌಲಭ್ಯಗಳಿವೆ. ಅಂದರೆ ಒಲಿಂಪಿಕ್ಸ್ ಮತ್ತು ಏಷ್ಯನ್ ಗೇಮ್ಸ್‌ನಂತಹ ದೊಡ್ಡ ಕಾರ್ಯಕ್ರಮಗಳಿಗೂ ಸಿದ್ಧತೆಗಳನ್ನು ಮಾಡಬಹುದು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:33 pm, Sun, 29 September 24