ತಂಡವನ್ನು ಮತ್ತೆ ಗೆಲುವಿನ ಟ್ರ್ಯಾಕ್​ಗೆ ತಂದ ಜಯಸೂರ್ಯಗೆ ಬಂಪರ್ ಗಿಫ್ಟ್ ನೀಡಿದ ಲಂಕಾ ಮಂಡಳಿ

Sanath Jayasuriya: ಜಯಸೂರ್ಯ ಆಗಮನದ ನಂತರ, ತಂಡದ ಪ್ರದರ್ಶನವು ಇದ್ದಕ್ಕಿದ್ದಂತೆ ಬದಲಾಗಿದೆ. ಶ್ರೀಲಂಕಾ ತಂಡ, ಭಾರತದ ವಿರುದ್ಧ ಟಿ20 ಸರಣಿಯನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಆದರೆ ಆ ಬಳಿಕ ಏಕದಿನ ಹಾಗೂ ಟೆಸ್ಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದೆ. ಈ ಹಿನ್ನೆಲೆಯಲ್ಲಿ ಜಯಸೂರ್ಯ ಅವರ ಸೇವಾವಧಿಯನ್ನು ಮುಂದುವರಿಸಲು ಆಡಳಿತ ಮಂಡಳಿ ನಿರ್ಧರಿಸಿದೆ.

ತಂಡವನ್ನು ಮತ್ತೆ ಗೆಲುವಿನ ಟ್ರ್ಯಾಕ್​ಗೆ ತಂದ ಜಯಸೂರ್ಯಗೆ ಬಂಪರ್ ಗಿಫ್ಟ್ ನೀಡಿದ ಲಂಕಾ ಮಂಡಳಿ
ಸನತ್ ಜಯಸೂರ್ಯ
Follow us
|

Updated on:Sep 29, 2024 | 9:04 PM

ಸನತ್ ಜಯಸೂರ್ಯ ಶ್ರೀಲಂಕಾ ತಂಡದ ಮುಖ್ಯ ಕೋಚ್ ಆಗಿ ನೇಮಕವಾದ ಬಳಿಕ ಇಡೀ ತಂಡದ ಚಿತ್ರಣವೇ ಬದಲಾಗಿದೆ. ಸತತ ಸೋಲುಗಳಿಂದ ಕಂಗೆಟ್ಟಿದ್ದ ಲಂಕಾ ತಂಡ ಇದೀಗ ಬಲಿಷ್ಠ ತಂಡಗಳನ್ನು ಮಣಿಸುವ ಮಟ್ಟಕ್ಕೆ ಬೆಳೆದು ನಿಂತಿದೆ. ಇದಕ್ಕೆಲ್ಲ ಕಾರಣ ಈ ವರ್ಷದ ಜುಲೈ ತಿಂಗಳಲ್ಲಿ ತಂಡದ ಹಂಗಾಮಿ ತರಬೇತುದಾರರಾಗಿ ಆಯ್ಕೆಯಾದ ಜಯಸೂರ್ಯ. ಜಯಸೂರ್ಯ ಈ ಹುದ್ದೆಯನ್ನು ಅಲಂಕರಿಸಿದಾಗಿನಿಂದ ಶ್ರೀಲಂಕಾ ಅನೇಕ ಸರಣಿಗಳನ್ನು ಗೆದ್ದುಕೊಂಡಿದೆ. ಮೊದಲನೆಯದಾಗಿ, 27 ವರ್ಷಗಳ ನಂತರ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾವನ್ನು 2-0 ಯಿಂದ ಕ್ಲೀನ್ ಸ್ವೀಪ್ ಮಾಡಿತ್ತು. ನಂತರ 10 ವರ್ಷಗಳ ನಂತರ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು. ಇದೀಗ ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್ ತಂಡವನ್ನು 2-0 ಅಂತರದಿಂದ ಸೋಲಿಸಿದೆ.

ಒಪ್ಪಂದ ವಿಸ್ತರಣೆ

ಕಳೆದ ಮೂರು ತಿಂಗಳಲ್ಲಿ ಲಂಕಾ ತಂಡ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿದೆ. ಈ ಪ್ರದರ್ಶನದ ಲಾಭ ಇದೀಗ ಜಯಸೂರ್ಯ ಅವರಿಗೆ ಸಿಕ್ಕಿದೆ. ತಂಡವನ್ನು ಗೆಲುವಿನ ಲಯಕ್ಕೆ ಮರಳಿಸಿರುವ ಜಯಸೂರ್ಯ ಅವರೊಂದಿಂಗಿನ ಒಪ್ಪಂದವನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಮುಂದಿನ ಒಂದು ವರ್ಷಕ್ಕೆ ವಿಸ್ತರಿಸಿದೆ. ಇದೀಗ ಅವರನ್ನು ಮುಂದಿನ ಒಂದು ವರ್ಷಕ್ಕೆ ಹಂಗಾಮಿ ಕೋಚ್‌ನಿಂದ ತಂಡದ ಮುಖ್ಯ ಕೋಚ್‌ ಆಗಿ ನೇಮಿಸಲಾಗಿದೆ.

ಕಳೆದ ಕೆಲವು ವರ್ಷಗಳಿಂದ ಶ್ರೀಲಂಕಾ ತಂಡ ಉತ್ತಮ ಪ್ರದರ್ಶನ ನೀಡಲು ಹೆಣಗಾಡುತ್ತಿದೆ. 2024 ರ ಟಿ20 ವಿಶ್ವಕಪ್‌ನಲ್ಲಿ ತಂಡ ಗುಂಪು ಹಂತದಿಂದ ಹೊರಬಿದ್ದಿತ್ತು. ಇದರ ನಂತರ ಮುಖ್ಯ ಕೋಚ್ ಕ್ರಿಸ್ ಸಿಲ್ವರ್‌ವುಡ್ ಮತ್ತು ಸಲಹೆಗಾರ ಕೋಚ್ ಮಹೇಲಾ ಜಯವರ್ಧನೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಎರಡು ಪ್ರಮುಖ ಹುದ್ದೆಗಳು ಹಠಾತ್ ಖಾಲಿಯಾದ ಕಾರಣ, ಜುಲೈನಲ್ಲಿ ಶ್ರೀಲಂಕಾ ಸನತ್ ಜಯಸೂರ್ಯ ಅವರನ್ನು ಹಂಗಾಮಿ ಕೋಚ್ ಆಗಿ ಮಾಡಿ ತಂಡದ ಜವಾಬ್ದಾರಿಯನ್ನು ನೀಡಲಾಗಿತ್ತು.

ಜಯಸೂರ್ಯ ಆಗಮನದ ನಂತರ, ತಂಡದ ಪ್ರದರ್ಶನವು ಇದ್ದಕ್ಕಿದ್ದಂತೆ ಬದಲಾಗಿದೆ. ಶ್ರೀಲಂಕಾ ತಂಡ, ಭಾರತದ ವಿರುದ್ಧ ಟಿ20 ಸರಣಿಯನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಆದರೆ ಆ ಬಳಿಕ ಏಕದಿನ ಹಾಗೂ ಟೆಸ್ಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದೆ. ಈ ಹಿನ್ನೆಲೆಯಲ್ಲಿ ಜಯಸೂರ್ಯ ಅವರ ಸೇವಾವಧಿಯನ್ನು ಮುಂದುವರಿಸಲು ಆಡಳಿತ ಮಂಡಳಿ ನಿರ್ಧರಿಸಿದ್ದು, ಬಡ್ತಿ ನೀಡುವ ಮೂಲಕ ಒಂದು ವರ್ಷ ತಂಡದ ಮುಖ್ಯ ಕೋಚ್ ಆಗಿ ನೇಮಕ ಮಾಡಿದೆ. ಡಿಸೆಂಬರ್‌ನಲ್ಲಿ ಜಯಸೂರ್ಯ ಅವರಿಗೆ ಮೊದಲ ಬಾರಿಗೆ ಕ್ರಿಕೆಟ್ ಸಲಹೆಗಾರರಾಗಿ ಒಂದು ವರ್ಷದ ಜವಾಬ್ದಾರಿಯನ್ನು ನೀಡಲಾಯಿತು.

15 ವರ್ಷಗಳ ನಂತರ ಸರಣಿ ಗೆದ್ದ ಲಂಕಾ

ಶ್ರೀಲಂಕಾ ತಂಡ ಗಾಲೆ ಟೆಸ್ಟ್‌ನಲ್ಲಿ ಇನ್ನಿಂಗ್ಸ್ ಮತ್ತು 154 ರನ್‌ಗಳಿಂದ ಪ್ರಬಲ ಜಯ ಸಾಧಿಸಿದೆ. ಇದರೊಂದಿಗೆ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿದೆ. ಶ್ರೀಲಂಕಾ ಕಳೆದ 15 ವರ್ಷಗಳಲ್ಲಿ ಮೊದಲ ಬಾರಿಗೆ ನ್ಯೂಜಿಲೆಂಡ್ ತಂಡವನ್ನು ಸೋಲಿಸಿದೆ. ಆಟಗಾರರ ಪ್ರತಿಕ್ರಿಯೆಯ ನಂತರ ಜಯಸೂರ್ಯ ಅವರ ಅಧಿಕಾರಾವಧಿಯನ್ನು ಮುಂದುವರಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ತಿಳಿಸಿದೆ. ತಂಡದ ಪ್ರಮುಖ ಹಾಗೂ ಹಿರಿಯ ಆಟಗಾರ ಏಂಜೆಲೊ ಮ್ಯಾಥ್ಯೂಸ್ ಜಯಸೂರ್ಯ ಅವರನ್ನು ಸಾಕಷ್ಟು ಹೊಗಳಿದ್ದು, ಅವರು ಮುಖ್ಯ ಕೋಚ್ ಆಗಿರುವುದು ತಂಡಕ್ಕೆ ಒಂದು ಮಹತ್ವದ ತಿರುವು ಎಂದು ಬಣ್ಣಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:01 pm, Sun, 29 September 24

ಬೆಂಗಳೂರಿನಲ್ಲಿ ಮಳೆ ಆರ್ಭಟ; ಮಾನ್ಯತಾ ಟೆಕ್​ಪಾರ್ಕ್​ ವಿಡಿಯೋ ವೈರಲ್!
ಬೆಂಗಳೂರಿನಲ್ಲಿ ಮಳೆ ಆರ್ಭಟ; ಮಾನ್ಯತಾ ಟೆಕ್​ಪಾರ್ಕ್​ ವಿಡಿಯೋ ವೈರಲ್!
ವಿಡಿಯೋ: ಸಣ್ಣ ವಿಷಯಕ್ಕೆ ಜಗದೀಶ್​-ಸುರೇಶ್ ನಡುವೆ ಜಟಾಪಟಿ
ವಿಡಿಯೋ: ಸಣ್ಣ ವಿಷಯಕ್ಕೆ ಜಗದೀಶ್​-ಸುರೇಶ್ ನಡುವೆ ಜಟಾಪಟಿ
ದರ್ಶನ್ ವಿರುದ್ಧದ ಕೊಲೆ ಪ್ರಕರಣದ ಬಗ್ಗೆ ಕೋಡಿಶ್ರೀ ಸ್ಫೋಟಕ ಮಾತು
ದರ್ಶನ್ ವಿರುದ್ಧದ ಕೊಲೆ ಪ್ರಕರಣದ ಬಗ್ಗೆ ಕೋಡಿಶ್ರೀ ಸ್ಫೋಟಕ ಮಾತು
ದೇವಸ್ಥಾನದಲ್ಲಿ ಭಜನೆ ಮಾಡುತ್ತಿದ್ದ ಮಹಿಳೆಯ ಮಾಂಗಲ್ಯ ಎಗರಿಸಿದ ಕಳ್ಳ
ದೇವಸ್ಥಾನದಲ್ಲಿ ಭಜನೆ ಮಾಡುತ್ತಿದ್ದ ಮಹಿಳೆಯ ಮಾಂಗಲ್ಯ ಎಗರಿಸಿದ ಕಳ್ಳ
ಬೆಂಗಳೂರು ಮಳೆ: ನಡು ರಸ್ತೆಯಲ್ಲೇ ಸಿಲುಕಿದ ಶಾಲಾ ವಾಹನ; ಮಕ್ಕಳು ಕಂಗಾಲು
ಬೆಂಗಳೂರು ಮಳೆ: ನಡು ರಸ್ತೆಯಲ್ಲೇ ಸಿಲುಕಿದ ಶಾಲಾ ವಾಹನ; ಮಕ್ಕಳು ಕಂಗಾಲು
ಮಳೆಯನ್ನು ಸ್ವಾಗತಿಸುತ್ತಾ ಬಿಬಿಎಂಪಿಯ ವಾರ್ ರೂಂ ಕಡೆ ತೆರಳಿದ ಶಿವಕುಮಾರ್!
ಮಳೆಯನ್ನು ಸ್ವಾಗತಿಸುತ್ತಾ ಬಿಬಿಎಂಪಿಯ ವಾರ್ ರೂಂ ಕಡೆ ತೆರಳಿದ ಶಿವಕುಮಾರ್!
ಇವರ ಅಪ್ಪನಿಗೆ ಹೊಡೆದು ಕೇಸ್ ಹಾಕಿಸಿಕೊಂಡಿಲ್ಲ: ಜಗದೀಶ್​ಗೆ ಚೈತ್ರಾ ಕ್ಲಾಸ್
ಇವರ ಅಪ್ಪನಿಗೆ ಹೊಡೆದು ಕೇಸ್ ಹಾಕಿಸಿಕೊಂಡಿಲ್ಲ: ಜಗದೀಶ್​ಗೆ ಚೈತ್ರಾ ಕ್ಲಾಸ್
ಕಾರ್ಪೊರೇಟರ್​ಗಳಿಲ್ಲದ ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳೇ ದೊರೆಗಳು!
ಕಾರ್ಪೊರೇಟರ್​ಗಳಿಲ್ಲದ ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳೇ ದೊರೆಗಳು!
ತಾಕತ್ತಿದ್ದರೆ ಜಮೀರ್ ವಿಜಯಪುರದಿಂದ ನನ್ನ ವಿರುದ್ಧ ಸ್ಪರ್ಧಿಸಲಿ: ಯತ್ನಾಳ್
ತಾಕತ್ತಿದ್ದರೆ ಜಮೀರ್ ವಿಜಯಪುರದಿಂದ ನನ್ನ ವಿರುದ್ಧ ಸ್ಪರ್ಧಿಸಲಿ: ಯತ್ನಾಳ್
ಕಾವೇರಿ ನೀರಾವರಿ ನಿಗಮವನ್ನೂ ಸಿಎಂ ತನಿಖೆಗೊಪ್ಪಿಸುವರೇ? ದೇವರಾಜೇಗೌಡ
ಕಾವೇರಿ ನೀರಾವರಿ ನಿಗಮವನ್ನೂ ಸಿಎಂ ತನಿಖೆಗೊಪ್ಪಿಸುವರೇ? ದೇವರಾಜೇಗೌಡ