ICC ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ICC World Test Championship)ನ ಫೈನಲ್‌ನಲ್ಲಿ ಸ್ಥಾನಕ್ಕಾಗಿ ವಿಶ್ವದ ಅತ್ಯುತ್ತಮ ಟೆಸ್ಟ್ ತಂಡಗಳ ನಡುವಿನ ಪೈಪೋಟಿ ಮುಂದುವರೆದಿದೆ. ಪ್ರತಿ ಟೆಸ್ಟ್ ಪಂದ್ಯದ ಫಲಿತಾಂಶದೊಂದಿಗೆ ಪರಿಸ್ಥಿತಿ ಬದಲಾಗುತ್ತಿದೆ. ಇತ್ತೀಚಿನ ಬದಲಾವಣೆಯು ಪಾಕಿಸ್ತಾನ-ಆಸ್ಟ್ರೇಲಿಯಾ ಟೆಸ್ಟ್ ಸರಣಿ (Pakistan -Australia Test series)ಯ ಅಂತ್ಯದೊಂದಿಗೆ ಸಂಭವಿಸಿದೆ. ಇದು ಭಾರತೀಯ ಕ್ರಿಕೆಟ್ ತಂಡ ಮತ್ತು ಅದರ ಅಭಿಮಾನಿಗಳಿಗೆ ಸ್ವಲ್ಪ ಸಂತೋಷ ಮತ್ತು ಭರವಸೆಯನ್ನು ನೀಡುತ್ತದೆ. ಮಾರ್ಚ್ 25 ರಂದು, ಲಾಹೋರ್‌ನಲ್ಲಿ ನಡೆದ ಮೂರನೇ ಟೆಸ್ಟ್‌ನ ಕೊನೆಯ ದಿನವಾದ ಶುಕ್ರವಾರ, ಆಸ್ಟ್ರೇಲಿಯಾ ಆತಿಥೇಯ ಪಾಕಿಸ್ತಾನವನ್ನು 115 ರನ್‌ಗಳಿಂದ ಸೋಲಿಸಿತು ಮತ್ತು ಪಂದ್ಯದ ಜೊತೆಗೆ ಸರಣಿಯನ್ನು ಗೆದ್ದುಕೊಂಡಿತು. ಆಸ್ಟ್ರೇಲಿಯಾ ಕೇವಲ ಪಂದ್ಯ ಅಥವಾ ಸರಣಿಯನ್ನು ಗೆಲ್ಲಲಿಲ್ಲ, ಆದರೆ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಮುಖ ಅಂಕಗಳನ್ನು ಗಳಿಸಿತು. ಜೊತೆಗೆ WTC ಪಾಯಿಂಟ್ ಪಟ್ಟಿ (WTC Points Table)ಯಲ್ಲಿ ಮೊದಲ ಸ್ಥಾನವನ್ನು ಬಲಪಡಿಸಿಕೊಂಡಿತು. ಅದೇ ವೇಳೆ ಭಾರತವೂ ಇದರಿಂದ ಲಾಭ ಪಡೆದಿದೆ.
ಮೊದಲ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಿಂದ ಹೊರಗುಳಿದಿರುವ ಆಸ್ಟ್ರೇಲಿಯಾ ತಂಡ ಈ ಬಾರಿ ಪ್ಯಾಟ್ ಕಮಿನ್ಸ್ ನಾಯಕತ್ವದಲ್ಲಿ ಪ್ರಬಲ ಹೆಜ್ಜೆ ಇಡುತ್ತಿದೆ. ಲಾಹೋರ್ ಟೆಸ್ಟ್ ಪಂದ್ಯದ ಗೆಲುವಿನೊಂದಿಗೆ, ಆಸ್ಟ್ರೇಲಿಯಾವು 12 ಅಂಕಗಳನ್ನು ಗಳಿಸುವ ಮೂಲಕ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಅಗ್ರಸ್ಥಾನದಲ್ಲಿ ತನ್ನ ಹಿಡಿತವನ್ನು ಬಲಪಡಿಸಿದೆ. ಆಸ್ಟ್ರೇಲಿಯ ತಂಡ ಎರಡು ಟೆಸ್ಟ್ ಸರಣಿಗಳ ನಂತರ ಮೊದಲ ಸ್ಥಾನದಲ್ಲಿ ಉಳಿದಿದೆ. ಇದಕ್ಕೂ ಮುನ್ನ ಆಶಸ್‌ನಲ್ಲಿ ಇಂಗ್ಲೆಂಡ್ ತಂಡವನ್ನು 4-0 ಅಂತರದಿಂದ ಸೋಲಿಸುವ ಮೂಲಕ ಬಲಿಷ್ಠ ಆರಂಭ ಕಂಡಿದ್ದರು.
ಪಾಕಿಸ್ತಾನಕ್ಕೆ ನಷ್ಟ, ಭಾರತಕ್ಕೆ ಲಾಭ
ಪಾಕಿಸ್ತಾನದ ಮಟ್ಟಿಗೆ ಹೇಳುವುದಾದರೆ, ಈ ಸರಣಿಯ ಆರಂಭದ ಮೊದಲು ಅವರು ಎರಡನೇ ಸ್ಥಾನದಲ್ಲಿದ್ದರು. ಆದರೆ ಒಂದೇ ಒಂದು ಪಂದ್ಯವನ್ನು ಗೆಲ್ಲಲು ವಿಫಲರಾಗಿದ್ದಾರೆ. ತವರಿನ ಸರಣಿಯ ಮೊದಲೆರಡು ಟೆಸ್ಟ್‌ಗಳು ಡ್ರಾಗೊಂಡಾಗ ಪಾಯಿಂಟ್‌ಗಳನ್ನು ವಿತರಿಸಿದ್ದ ಅವರು ಇದೀಗ ಕೊನೆಯ ಟೆಸ್ಟ್‌ನಲ್ಲಿ ಸೋತಿದ್ದರಿಂದ ಒಂದೇ ಒಂದು ಅಂಕವನ್ನು ಪಡೆಯದೆ ತಂಡವು ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಮೂರು ಟೆಸ್ಟ್ ಸರಣಿಯ ಬಳಿಕ ಶೇ.52.38 ಅಂಕ ಗಳಿಸಿದ್ದಾರೆ.
ಪಾಕಿಸ್ತಾನದ ಈ ಪರಿಸ್ಥಿತಿಯ ಲಾಭ ಪಡೆದ ಟೀಂ ಇಂಡಿಯಾ ಇದೀಗ ಮೂರನೇ ಸ್ಥಾನಕ್ಕೆ ಬಂದಿದೆ. ಈ ತಿಂಗಳು ನಡೆದ ಟೆಸ್ಟ್ ಸರಣಿಯಲ್ಲಿ ಶ್ರೀಲಂಕಾವನ್ನು 2-0 ಅಂತರದಿಂದ ಸೋಲಿಸಿದ ಭಾರತ ತಂಡ ನಾಲ್ಕನೇ ಸ್ಥಾನಕ್ಕೆ ತಲುಪಿತ್ತು. ಇದೀಗ ಪಾಕಿಸ್ತಾನದ ಸೋಲು ಇನ್ನಷ್ಟು ಪ್ರಯೋಜನವನ್ನು ನೀಡಿದೆ. 4 ಸರಣಿಗಳಲ್ಲಿ ಟೀಂ ಇಂಡಿಯಾ 58.33 ಅಂಕ ಹೊಂದಿದೆ. ಅಂದಹಾಗೆ, ಭಾರತ ತಂಡದ ನಾಲ್ಕು ಟೆಸ್ಟ್ ಸರಣಿಯ ಇನ್ನೂ ಒಂದು ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ ವಿರುದ್ಧ ಆಡಬೇಕಿದೆ. ಶೇ.60 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾವಿದೆ.
ಭಾರತ-ಆಸ್ಟ್ರೇಲಿಯಾ ಸರಣಿ ನಿರ್ಧರಿಸುತ್ತದೆಯೇ?
ಈ ಬಾರಿಯ ಫೈನಲ್‌ನ ಓಟ ಹಿಂದಿಗಿಂತ ಹೆಚ್ಚು ರೋಚಕವಾಗಿರಬಹುದು. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸರಣಿಯಲ್ಲಿ ಫೈನಲ್ಗೇರುವ ತಂಡಗಳನ್ನು ನಿರ್ಧರಿಸಬಹುದು. ಆಸ್ಟ್ರೇಲಿಯಾ ತಂಡ ಮುಂದಿನ ವರ್ಷ ಭಾರತ ಪ್ರವಾಸ ಮಾಡಲಿದ್ದು, ಎರಡೂ ತಂಡಗಳ ಚಾಂಪಿಯನ್‌ಶಿಪ್‌ನಲ್ಲಿ ಇದು ಕೊನೆಯ ಸರಣಿಯಾಗಿದೆ. ಒಂದು ವೇಳೆ ಟೀಂ ಇಂಡಿಯಾ ಗೆದ್ದರೆ ಸತತ ಎರಡನೇ ಫೈನಲ್ ಪ್ರವೇಶಿಸುವ ಅವಕಾಶ ಬಲವಾಗಿರುತ್ತದೆ. ಇದರೊಂದಿಗೆ ಚೊಚ್ಚಲ ಟೆಸ್ಟ್ ಚಾಂಪಿಯನ್ ಪಟ್ಟವನ್ನು ಗಳಿಸಲಿದೆ.
ಇದನ್ನೂ ಓದಿ:IPL 2022: ವಿವಿಧ ಕಾರಣಗಳಿಂದ ಐಪಿಎಲ್ ಆರಂಭಿಕ ಪಂದ್ಯಗಳಿಗೆ ಗೈರಾಗುತ್ತಿರುವ ಎಲ್ಲಾ ತಂಡಗಳ ಆಟಗಾರರಿವರು..!
Published On - 7:51 pm, Fri, 25 March 22