WPL 2024: ಆರ್ಸಿಬಿ ಗೆಲುವಿಗೆ ಕಾರಣವಾಯ್ತು ಕನ್ನಡತಿ ಶ್ರೇಯಾಂಕ ಮಾಡಿದ 18ನೇ ಓವರ್.!
WPL 2024: ಪಂದ್ಯದುದ್ದಕ್ಕೂ ಗೆಲುವನ್ನು ತನ್ನ ಬಳಿ ಇಟ್ಟುಕೊಂಡಿದ್ದ ಮುಂಬೈ ಕೊನೆಯ 3 ಓವರ್ಗಳಲ್ಲಿ ಮಾಡಿಕೊಂಡ ಎಡವಟ್ಟಿನಿಂದ ಪಂದ್ಯವನ್ನು ಸೋಲಬೇಕಾಯಿತು. ಇತ್ತ ಗೆಲುವಿಗಾಗಿ ಕೊನೆಯವರೆಗೂ ಹೋರಾಡಿದ ಆರ್ಸಿಬಿ ವನಿತಾ ಪಡೆ ಅರ್ಹ ಗೆಲುವು ಸಂಪಾಧಿಸಿ ಫೈನಲ್ಗೆ ಲಗ್ಗೆ ಇಟ್ಟಿತು. ಅಷ್ಟಕ್ಕೂ ಗೆಲುವಿನ ಫೆವರೇಟ್ ಎನಿಸಿಕೊಂಡಿದ್ದ ಹರ್ಮನ್‌ಪ್ರೀತ್ ಕೌರ್ ಪಡೆ ಎಡವಿದೆಲ್ಲಿ ಎಂಬ ಪ್ರಶ್ನೆಗೆ ಎಲ್ಲರು ನೀಡುವ ಉತ್ತರವೆಂದರೆ ಅದು ಮುಂಬೈ ಇನ್ನಿಂಗ್ಸ್ನ ಕೊನೆಯ 3 ಓವರ್ಗಳು ಎಂಬುದು.

ಕೊನೆಗೂ ಕೋಟ್ಯಾಂತರ ಆರ್ಸಿಬಿ ಅಭಿಮಾನಿಗಳ ಕನಸು ನನಸಾಗಿದೆ. ಊಹೆಗೂ ನಿಲುಕದ ಪ್ರದರ್ಶನ ನೀಡಿದ ಆರ್ಸಿಬಿ ಮಹಿಳಾ ತಂಡ ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ (Women’s Premier League) ಎಲಿಮಿನೇಟರ್ ಪಂದ್ಯದಲ್ಲಿ ಕಳೆದ ಬಾರಿಯ ಚಾಂಪಿಯನ್ ಮುಂಬೈ ಇಂಡಿಯಾನ್ಸ್ (Mumbai Indians vs Royal Challengers Bangalore) ತಂಡವನ್ನು 5 ರನ್ಗಳಿಂದ ಮಣಿಸಿ ಮೊದಲ ಬಾರಿಗೆ ಡಬ್ಲ್ಯುಪಿಎಲ್ ಫೈನಲ್ಗೇರಿದೆ. ಪಂದ್ಯದುದ್ದಕ್ಕೂ ಗೆಲುವನ್ನು ತನ್ನ ಬಳಿ ಇಟ್ಟುಕೊಂಡಿದ್ದ ಮುಂಬೈ ಕೊನೆಯ 3 ಓವರ್ಗಳಲ್ಲಿ ಮಾಡಿಕೊಂಡ ಎಡವಟ್ಟಿನಿಂದ ಪಂದ್ಯವನ್ನು ಸೋಲಬೇಕಾಯಿತು. ಇತ್ತ ಗೆಲುವಿಗಾಗಿ ಕೊನೆಯವರೆಗೂ ಹೋರಾಡಿದ ಆರ್ಸಿಬಿ ವನಿತಾ ಪಡೆ ಅರ್ಹ ಗೆಲುವು ಸಂಪಾಧಿಸಿ ಫೈನಲ್ಗೆ ಲಗ್ಗೆ ಇಟ್ಟಿತು. ಅಷ್ಟಕ್ಕೂ ಗೆಲುವಿನ ಫೆವರೇಟ್ ಎನಿಸಿಕೊಂಡಿದ್ದ ಹರ್ಮನ್‌ಪ್ರೀತ್ ಕೌರ್ ಪಡೆ ಎಡವಿದೆಲ್ಲಿ ಎಂಬ ಪ್ರಶ್ನೆಗೆ ಎಲ್ಲರು ನೀಡುವ ಉತ್ತರವೆಂದರೆ ಅದು ಮುಂಬೈ ಇನ್ನಿಂಗ್ಸ್ನ ಕೊನೆಯ 3 ಓವರ್ಗಳು ಎಂಬುದು. ಅಷ್ಟಕ್ಕೂ ಕೊನೆಯ ಓವರ್ಗಳಲ್ಲಿ ನಡೆದಿದ್ದೇನು? ಆರ್ಸಿಬಿ ಬೌಲರ್ಗಳು ಮಾಡಿದ ಮ್ಯಾಜಿಕ್ ಏನು ಎಂಬುದನ್ನು ನೋಡುವುದಾದರೆ..
ಕೊನೆಯ 18 ಎಸೆತಗಳಲ್ಲಿ 20 ರನ್ ಗುರಿ
ವಾಸ್ತವವಾಗಿ 17 ಓವರ್ ಮುಕ್ತಾಯಕ್ಕೆ 125 ರನ್ ಕಲೆಹಾಕಿ ಕೇವಲ 3 ವಿಕೆಟ್ ಕಳೆದುಕೊಂಡಿದ್ದ ಮುಂಬೈ ತಂಡದ್ದೇ ಗೆಲುವು ಎಂದು ಎಲ್ಲರು ಭಾವಿಸಿದ್ದರು. ಆದರೆ 18ನೇ ಓವರ್ನಿಂದ ವಿಜಯಲಕ್ಷ್ಮಿ ಆರ್ಸಿಬಿ ಪರ ವಾಲಿದಳು. ಕೊನೆಯ 18 ಎಸೆತಗಳಲ್ಲಿ 20 ರನ್ ಗುರಿ ಹೊಂದಿದ್ದ ಮುಂಬೈ ಪರ ನಾಯಕಿ ಹರ್ಮನ್‌ಪ್ರೀತ್ ಸ್ಟ್ರೈಕ್ನಲ್ಲಿದ್ದರು. ಇತ್ತ 18ನೇ ಓವರ್ ಬೌಲ್ ಮಾಡುವ ಜವಬ್ದಾರಿಯನ್ನು ಆರ್ಸಿಬಿ ನಾಯಕಿ ಅನಾನುಭವಿ ಶ್ರೇಯಾಂಕ ಪಾಟೀಲ್ಗೆ ನೀಡಿದರು. ಇದಕ್ಕೂ ಮೊದಲು ಹರ್ಮನ್‌ಪ್ರೀತ್ ಹಾಗೂ ಅಮೆಲಿಯ ಕೇರ್ ನಡುವೆ 50 ರನ್ಗಳ ಜೊತೆಯಾಟ ನಡೆದಿದ್ದರಿಂದ ಮುಂಬೈ ಈ ಓವರ್ನಲ್ಲೇ ಪಂದ್ಯ ಮುಗಿಸುತ್ತದೆ ಎಂದು ಎಲ್ಲರು ನಿರೀಕ್ಷಿಸಿದ್ದರು. ಆದರೆ 18ನೇ ಓವರ್‌ನಲ್ಲಿ ಪಂದ್ಯದ ಗತಿಯೇ ಬದಲಾಯಿತು.
Huge moment of the match!
A big wicket for @RCBTweets 👏 👏@shreyanka_patil scalps her 2⃣nd wicket 👍 👍#MI lose their captain Harmanpreet Kaur!
Follow the match ▶️ https://t.co/QzNEzVGRhA #TATAWPL | #MIvRCB | #Eliminator pic.twitter.com/AgESUuoFa5
— Women’s Premier League (WPL) (@wplt20) March 15, 2024
ಕೇವಲ 4 ರನ್ ನೀಡಿ 1 ವಿಕೆಟ್
18ನೇ ಓವರ್ ಬೌಲ್ ಮಾಡಿದ ಶ್ರೇಯಾಂಕ ಪಾಟೀಲ್, ಕೇವಲ 4 ರನ್ ನೀಡಿದಲ್ಲದೆ ಪ್ರಮುಖವಾಗಿ ನಾಯಕಿ ಹರ್ಮನ್‌ಪ್ರೀತ್ ಕೌರ್ ವಿಕೆಟ್ ಪಡೆದರು. ವಾಸ್ತವವಾಗಿ ಓವರ್ನ ಮೊದಲ ಎಸೆತದಲ್ಲೇ ನಾಯಕಿ ಹರ್ಮನ್ಪ್ರೀತ್ರನ್ನು ಸ್ಟಂಪ್ ಔಟ್ ಮಾಡುವ ಅವಕಾಶವನ್ನು ಕೀಪರ್ ರಿಚಾ ಘೋಷ್ ಕೈಚೆಲ್ಲಿದರು. ಇದು ತಂಡಕ್ಕೆ ದುಬಾರಿಯಾಗುತ್ತದೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಮುಂದಿನ 4 ಎಸೆತಗಳಲ್ಲಿ ಶ್ರೇಯಾಂಕ ಕೇವಲ 4 ರನ್ ನೀಡಿ ಮುಂಬೈ ತಂಡವನ್ನು ಒತ್ತಡಕ್ಕೆ ಸಿಲುಕಿಸಿದರು. ಹೀಗಾಗಿ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸುವ ಚಿಂತನೆಯಲ್ಲಿದ್ದ ಹರ್ಮನ್ ಕೊನೆಯ ಎಸೆತವನ್ನು ಲಾಂಗ್ ಆನ್ ಕಡೆಗೆ ಬಿಗ್ ಶಾಟ್ ಆಡಿದರು. ಆದರೆ ಚೆಂಡು ಸಿಕ್ಸರ್ಗೆ ಹೋಗುವ ಬದಲು ಅಲ್ಲೆ ನಿಂತಿದ್ದ ಸೋಫಿ ಡಿವೈನ್ ಕೈಸೇರಿತು. ಹೀಗಾಗಿ ತಂಡವನ್ನು ಗೆಲುವಿನತ್ತ ಮುನ್ನಡೆಸುತ್ತಿದ್ದ ಹರ್ಮನ್ ಪೆವಿಲಿಯನತ್ತ ಹೆಜ್ಜೆಹಾಕಬೇಕಾಯಿತು. ಈ ಓವರ್‌ನಲ್ಲಿ ಕೇವಲ 4 ರನ್ ಬಂದಿದ್ದರಿಂದ ಕೊನೆಯ 2 ಓವರ್ಗಳಲ್ಲಿ ಮುಂಬೈ ಗೆಲುವಿಗೆ 16 ರನ್ ಅವಶ್ಯಕತೆ ಇತ್ತು.
Breaking: ಮುಂಬೈ ಮಣಿಸಿ ಮೊದಲ ಬಾರಿಗೆ ಫೈನಲ್ಗೇರಿದ ಆರ್ಸಿಬಿ..!
2 ಓವರ್ಗಳಲ್ಲಿ ಮುಂಬೈ ಗೆಲುವಿಗೆ 16 ರನ್
ಈ ವೇಳೆ 19ನೇ ಓವರ್ ಬೌಲ್ ಮಾಡುವ ಜವಬ್ದಾರಿ ಸೋಫಿ ಮೊಲಿನೆಕ್ಸ್ ಹೆಗಲೇರಿತು. ಈ ಓವರ್ನ ಮೊದಲ ಎಸೆತದಲ್ಲಿ 1 ರನ್ ಬಂದರೆ, ಎರಡನೇ ಎಸೆತದಲ್ಲಿ 0, ಮೂರನೇ ಎಸೆತದಲ್ಲಿ 1 ಹಾಗೂ 4ನೇ ಎಸೆತದಲ್ಲೂ ಒಂದು ರನ್ ಬಂತು. ಐದನೆ ಎಸೆತದಲ್ಲಿ ಸಜೀವನ್ ಬಿಗ್ ಶಾಟ್ ಆಡುವ ಯತ್ನದಲ್ಲಿ ಸ್ಟಂಪ್ ಔಟ್ ಆದರು. ಕೊನೆಯ ಎಸೆತದಲ್ಲಿ 1 ರನ್ ಬಂತು. ಹೀಗಾಗಿ ಈ ಓವರ್‌ನಲ್ಲಿ ಕೇವಲ 4 ರನ್ ಬಂದರೆ ಒಂದು ವಿಕೆಟ್ ಕೂಡ ಪತನವಾಯಿತು. ಅಂತಿಮವಾಗಿ ಕೊನೆಯ 6 ಎಸೆತಗಳಲ್ಲಿ ಮುಂಬೈ ಗೆಲುವಿಗೆ 12 ರನ್ ಬೇಕಿತ್ತು. ಕೊನೆಯ ಓವರ್ ಬೌಲ್ ಮಾಡಲು ಬಂದ ಆಶಾ ಶೋಭನಾ ಈ ಓವರ್‌ನಲ್ಲಿ ಕೇವಲ 6 ರನ್ ಬಿಟ್ಟುಕೊಟ್ಟು 1 ವಿಕೆಟ್ ಕೂಡ ಉರುಳಿಸಿದರು. ಅಂತಿಮವಾಗಿ ಮುಂಬೈ ತಂಡ 5 ರನ್ಗಳಿಂದ ಸೋಲನುಭವಿಸಿತು.
𝗠𝗮𝗶𝗱𝗲𝗻 #𝗧𝗔𝗧𝗔𝗪𝗣𝗟 𝗙𝗶𝗻𝗮𝗹 𝗳𝗼𝗿 𝗥𝗖𝗕 👏@RCBTweets secure a 5-run win over #MI in an edge of the seat thriller in Delhi 📍🤝
They will now play @DelhiCapitals on 17th March! ⌛️
Scorecard ▶️https://t.co/QzNEzVGRhA#MIvRCB | #Eliminator pic.twitter.com/0t2hZeGXNj
— Women’s Premier League (WPL) (@wplt20) March 15, 2024
ಪಂದ್ಯ ಹೀಗಿತ್ತು
ರಾಯಲ್ ಚಾಲೆಂಜರ್ಸ್ ಬೆಂಗಳೂರು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ನಿಗದಿತ 20 ಓವರ್ಗಳಲ್ಲಿ ಆರ್ಸಿಬಿ ತಂಡ 6 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿ ಗೆಲುವಿಗೆ 136 ರನ್ಗಳ ಸವಾಲನ್ನು ನೀಡಿತು. ಈ ಗುರಿ ಬೆನ್ನಟ್ಟಿದ ಮುಂಬೈ ತಂಡ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 130 ರನ್ ಕಲೆಹಾಕಲಷ್ಟೇ ಶಕ್ತವಾಗಿ 5 ರನ್ಗಳ ಸೋಲು ಅನುಭವಿಸಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
