AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WPL 2025: ವುಮೆನ್ಸ್ ಪ್ರೀಮಿಯರ್ ಲೀಗ್​ ಹರಾಜು ಪಟ್ಟಿಯಲ್ಲಿ 120 ಆಟಗಾರ್ತಿಯರು

WPL 2025: ವುಮೆನ್ಸ್ ಪ್ರೀಮಿಯರ್ ಲೀಗ್​​ನ ಮೊದಲ ಸೀಸನ್​​ನಲ್ಲಿ ಮುಂಬೈ ಇಂಡಿಯನ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ದ್ವಿತೀಯ ಸೀಸನ್​​ನಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಕಪ್ ಮುಡಿಗೇರಿಸಿಕೊಂಡಿತು. ಇದೀಗ ಮೂರನೇ ಸೀಸನ್​​ಗಾಗಿ ಸಿದ್ಧತೆಗಳು ಶುರುವಾಗಿದೆ.

WPL 2025: ವುಮೆನ್ಸ್ ಪ್ರೀಮಿಯರ್ ಲೀಗ್​ ಹರಾಜು ಪಟ್ಟಿಯಲ್ಲಿ 120 ಆಟಗಾರ್ತಿಯರು
WPL 2025
Follow us
ಝಾಹಿರ್ ಯೂಸುಫ್
|

Updated on:Dec 08, 2024 | 6:54 AM

ವುಮೆನ್ಸ್ ಪ್ರೀಮಿಯರ್ ಲೀಗ್​ನ ಮೂರನೇ ಸೀಸನ್​​ಗೆ ವೇದಿಕೆ ಸಿದ್ಧವಾಗಿದೆ. ಡಿಸೆಂಬರ್ 15 ರಂದು WPL ಮಿನಿ ಹರಾಜು ನಡೆಯಲಿದ್ದು, ಈ ಹರಾಜಿಗಾಗಿ ಒಟ್ಟು 120 ಆಟಗಾರ್ತಿಯರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ 120 ಆಟಗಾರ್ತಿಯರಲ್ಲಿ 91 ಭಾರತೀಯರು ಹಾಗೂ 29 ವಿದೇಶಿ ಆಟಗಾರ್ತಿಯರಿದ್ದಾರೆ.

ಇನ್ನು ಈ ಬಾರಿಯ ಹರಾಜಿನಲ್ಲಿ ಒಟ್ಟು 19 ಆಟಗಾರ್ತಿಯರಿಗೆ ಮಾತ್ರ ಅವಕಾಶ ಲಭಿಸಲಿದ್ದು, ಇದರಲ್ಲಿ ಐವರು ವಿದೇಶಿ ಆಟಗಾರ್ತಿಯರ ಸ್ಲಾಟ್​​ಗಳು ಖಾಲಿಯಿವೆ. ಈ ಸ್ಲಾಟ್​​ಗಳನ್ನು ಭರ್ತಿ ಮಾಡಿಕೊಳ್ಳಲು 5 ಫ್ರಾಂಚೈಸಿಗಳು ಡಿಸೆಂಬರ್ 15 ರಂದು ಬಿಡ್ಡಿಂಗ್ ನಡೆಸಲಿದೆ. ಪ್ರತಿ ತಂಡಗಳಲ್ಲಿ ಖಾಲಿಯಿರುವ ಸ್ಥಾನಗಳ ಪಟ್ಟಿ ಈ ಕೆಳಗಿನಂತಿದೆ…

  • ಡೆಲ್ಲಿ ಕ್ಯಾಪಿಟಲ್ಸ್: 4 ಸ್ಲಾಟ್​ (1 ವಿದೇಶಿ ಆಟಗಾರ್ತಿಯ ಸ್ಲಾಟ್)
  • ಗುಜರಾತ್ ಜೈಂಟ್ಸ್: 4 ಸ್ಲಾಟ್ (2 ವಿದೇಶಿ ಆಟಗಾರ್ತಿಯ ಸ್ಲಾಟ್)
  • ಮುಂಬೈ ಇಂಡಿಯನ್ಸ್: 4 ಸ್ಲಾಟ್ (1 ವಿದೇಶಿ ಆಟಗಾರ್ತಿಯ ಸ್ಲಾಟ್)
  • ರಾಯಲ್ ಚಾಲೆಂಜರ್ಸ್ ಬೆಂಗಳೂರು: 4 ಸ್ಲಾಟ್​ (ವಿದೇಶಿ ಆಟಗಾರ್ತಿಯರ ಸ್ಲಾಟ್ ಭರ್ತಿ)
  • ಯುಪಿ ವಾರಿಯರ್ಸ್​: 3 ಸ್ಲಾಟ್ (1 ವಿದೇಶಿ ಆಟಗಾರ್ತಿಯ ಸ್ಲಾಟ್)

ಪ್ರತಿ ಫ್ರಾಂಚೈಸಿಗಳ ಬಳಿಯಿರುವ ಹರಾಜು ಮೊತ್ತ:

  • ಡೆಲ್ಲಿ ಕ್ಯಾಪಿಟಲ್ಸ್: 2.5 ಕೋಟಿ ರೂ.
  • ಗುಜರಾತ್ ಜೈಂಟ್ಸ್: 4.4 ಕೋಟಿ ರೂ.
  • ಮುಂಬೈ ಇಂಡಿಯನ್ಸ್: 2.65 ಕೋಟಿ ರೂ.
  • ರಾಯಲ್ ಚಾಲೆಂಜರ್ಸ್ ಬೆಂಗಳೂರು: 3.25 ಕೋಟಿ ರೂ.
  • ಯುಪಿ ವಾರಿಯರ್ಸ್: 3.9 ಕೋಟಿ ರೂ.

ಹರಾಜು ಪಟ್ಟಿಯಲ್ಲಿರುವ ಸ್ಟಾರ್ ಆಟಗಾರ್ತಿಯರು:

  • ಡಿಯಾಂಡ್ರಾ ಡಾಟಿನ್ (ವೆಸ್ಟ್ ಇಂಡೀಸ್)
  • ಹೀದರ್ ನೈಟ್ (ಇಂಗ್ಲೆಂಡ್)
  • ಲಿಝೆಲ್ಲೆ ಲೀ (ಸೌತ್ ಆಫ್ರಿಕಾ)
  • ಲಾರೆನ್ ಬೆಲ್ (ಇಂಗ್ಲೆಂಡ್)
  • ಸೋಫಿಯಾ ಡಂಕ್ಲಿ (ಇಂಗ್ಲೆಂಡ್)
  • ನಡಿನ್ ಡಿ ಕ್ಲರ್ಕ್ (ಸೌತ್ ಆಫ್ರಿಕಾ)
  • ಸ್ನೇಹ್ ರಾಣಾ (ಭಾರತ)
  • ಪೂನಂ ಯಾದವ್ (ಭಾರತ).

ಇದನ್ನೂ ಓದಿ: ಶರ ವೇಗದ ಸೆಂಚುರಿ ಸಿಡಿಸಿ ವಿಶ್ವ ದಾಖಲೆ ಬರೆದ ಅಭಿಷೇಕ್ ಶರ್ಮಾ

ವುಮೆನ್ಸ್ ಪ್ರೀಮಿಯರ್ ಲೀಗ್​​ನ ಹರಾಜಿಗಾಗಿ ಹೆಸರು ನೋಂದಾಯಿಸಿಕೊಂಡಿರುವ ಆಟಗಾರ್ತಿಯರ ಸಂಪೂರ್ಣ ಪಟ್ಟಿಯನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.

Published On - 6:48 am, Sun, 8 December 24

ದೆಹಲಿಯ ಅಕ್ಷರಧಾಮದಲ್ಲಿ ಮಾಕ್ ಡ್ರಿಲ್; ಮತ್ತೆ ಹೊತ್ತಿದ ದೀಪಗಳು
ದೆಹಲಿಯ ಅಕ್ಷರಧಾಮದಲ್ಲಿ ಮಾಕ್ ಡ್ರಿಲ್; ಮತ್ತೆ ಹೊತ್ತಿದ ದೀಪಗಳು
ನಗರದ ಹಲವಾರು ಏರಿಯಾಗಳ ನಿವಾಸಿಗಳಿಗೆ ಸೈರನ್ ಕೇಳಿಸಿಲ್ಲ
ನಗರದ ಹಲವಾರು ಏರಿಯಾಗಳ ನಿವಾಸಿಗಳಿಗೆ ಸೈರನ್ ಕೇಳಿಸಿಲ್ಲ
ಮಗಳ ಸಿನಿಮಾ ಪಯಣಕ್ಕೆ ದರ್ಶನ್, ಸುದೀಪ್ ಬೆಂಬಲ ನೆನೆದ ನಟ ಪ್ರೇಮ್
ಮಗಳ ಸಿನಿಮಾ ಪಯಣಕ್ಕೆ ದರ್ಶನ್, ಸುದೀಪ್ ಬೆಂಬಲ ನೆನೆದ ನಟ ಪ್ರೇಮ್
ಭಾರತದ ದಾಳಿಗೆ ಬಲಿಯಾದ ಉಗ್ರರಿಗೆ ಪಾಕಿಸ್ತಾನದ ಧ್ವಜ ಹೊದಿಸಿ ಅಂತ್ಯಕ್ರಿಯೆ
ಭಾರತದ ದಾಳಿಗೆ ಬಲಿಯಾದ ಉಗ್ರರಿಗೆ ಪಾಕಿಸ್ತಾನದ ಧ್ವಜ ಹೊದಿಸಿ ಅಂತ್ಯಕ್ರಿಯೆ
ರಾಜತಾಂತ್ರಿಕವಾಗಿಯೂ ಭಾರತ ಪಾಕಿಸ್ತಾನದ ವಿರುದ್ಧ ಗೆದ್ದಿದೆ: ಡಾ ಮಂಜುನಾಥ್
ರಾಜತಾಂತ್ರಿಕವಾಗಿಯೂ ಭಾರತ ಪಾಕಿಸ್ತಾನದ ವಿರುದ್ಧ ಗೆದ್ದಿದೆ: ಡಾ ಮಂಜುನಾಥ್
ಬೆಂಗಳೂರಿನಲ್ಲಿ ಬ್ಲ್ಯಾಕ್ ಔಟ್: ಕಗ್ಗತ್ತಲಾದ ರಾಜಧಾನಿ, ವಿಡಿಯೋ ನೋಡಿ
ಬೆಂಗಳೂರಿನಲ್ಲಿ ಬ್ಲ್ಯಾಕ್ ಔಟ್: ಕಗ್ಗತ್ತಲಾದ ರಾಜಧಾನಿ, ವಿಡಿಯೋ ನೋಡಿ
ಆಪರೇಷನ್​ ಸಿಂಧೂರ್: ಭಾರತ ವಿವೇಕಯುತದಿಂದ ಹೆಜ್ಜೆ ಇಟ್ಟಿದೆ, ​ಗುರೂಜಿ
ಆಪರೇಷನ್​ ಸಿಂಧೂರ್: ಭಾರತ ವಿವೇಕಯುತದಿಂದ ಹೆಜ್ಜೆ ಇಟ್ಟಿದೆ, ​ಗುರೂಜಿ
ಆಪರೇಷನ್ ಸಿಂಧೂರ್: ಮೋದಿಯ ನಾಯಕತ್ವವ ಕೊಂಡಾಡಿದ ತಾರಾ
ಆಪರೇಷನ್ ಸಿಂಧೂರ್: ಮೋದಿಯ ನಾಯಕತ್ವವ ಕೊಂಡಾಡಿದ ತಾರಾ
ಸರ್ಕಾರದ ನಿರ್ಧಾರ ಸರಿ ಇದೆ: ಆಪರೇಷನ್ ಸಿಂಧೂರ್ ಬಗ್ಗೆ ಶಿವಣ್ಣ ಪ್ರತಿಕ್ರಿಯೆ
ಸರ್ಕಾರದ ನಿರ್ಧಾರ ಸರಿ ಇದೆ: ಆಪರೇಷನ್ ಸಿಂಧೂರ್ ಬಗ್ಗೆ ಶಿವಣ್ಣ ಪ್ರತಿಕ್ರಿಯೆ
ಸೇನೆ ಮತ್ತು ಪ್ರಧಾನಿ ಮೋದಿಯವರಿಗೆ ಅಭಿನಂದನೆಗಳು: ಮುತಾಲಿಕ್
ಸೇನೆ ಮತ್ತು ಪ್ರಧಾನಿ ಮೋದಿಯವರಿಗೆ ಅಭಿನಂದನೆಗಳು: ಮುತಾಲಿಕ್