ಆಶ್ಲೀ ಗಾರ್ಡ್ನರ್ ಮಿಂಚಿಂಗ್: ಗುಜರಾತ್ ಜೈಂಟ್ಸ್ಗೆ ಜಯ
WPL 2025: ವುಮೆನ್ಸ್ ಪ್ರೀಮಿಯರ್ ಲೀಗ್ನ ಮೊದಲ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ 37 ಎಸೆತಗಳಲ್ಲಿ ಅಜೇಯ 79 ರನ್ ಬಾರಿಸಿದ್ದ ಆಶ್ಲೀ ಗಾರ್ಡ್ನರ್ ಇದೀಗ ಮತ್ತೊಮ್ಮೆ ಅರ್ಧಶತಕ ಬಾರಿಸಿದ್ದಾರೆ. ಈ ಅರ್ಧಶತಕದೊಂದಿಗೆ ಗುಜರಾತ್ ಜೈಂಟ್ಸ್ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಆಸ್ಟ್ರೇಲಿಯನ್ ಆಟಗಾರ್ತಿ ಯಶಸ್ವಿಯಾಗಿದ್ದಾರೆ.

ವುಮೆನ್ಸ್ ಪ್ರೀಮಿಯರ್ ಲೀಗ್ನ ಮೂರನೇ ಪಂದ್ಯದ ಮೂಲಕ ಗುಜರಾತ್ ಜೈಂಟ್ಸ್ ತಂಡವು ಗೆಲುವಿನ ಖಾತೆ ತೆರೆದಿದೆ. ವಡೋದರಾದ ಕೋಟಂಬಿ ಸ್ಟೇಡಿಯಂನಲ್ಲಿ ನಡೆದ ಯುಪಿ ವಾರಿಯರ್ಸ್ ವಿರುದ್ಧದ ಈ ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಜೈಂಟ್ಸ್ ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಯುಪಿ ವಾರಿಯರ್ಸ್ ತಂಡದ ಪರ ನಾಯಕಿ ದೀಪ್ತಿ ಶರ್ಮಾ 39 ರನ್ ಬಾರಿಸಿದ್ದು ಗರಿಷ್ಠ ಸ್ಕೋರ್. ಇತ್ತ 4 ಓವರ್ಗಳನ್ನು ಎಸೆದ ಪ್ರಿಯಾ ಮಿಶ್ರಾ ಕೇವಲ 25 ರನ್ ನೀಡಿ 3 ವಿಕೆಟ್ ಕಬಳಿಸಿದರು. ಪರಿಣಾಮ ಯುಪಿ ವಾರಿಯರ್ಸ್ ತಂಡವು 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 143 ರನ್ಗಳಿಸಲಷ್ಟೇ ಶಕ್ತರಾದರು.
144 ರನ್ಗಳ ಸುಲಭ ಗುರಿ ಪಡೆದ ಗುಜರಾತ್ ಜೈಂಟ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ್ತಿ ಬೆತ್ ಮೂನಿ (0) ಹಾಗೂ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ದಯಾಳನ್ ಹೇಮಲತಾ (0) ಶೂನ್ಯಕ್ಕೆ ಔಟಾದರು.
ಈ ಹಂತದಲ್ಲಿ ಕಣಕ್ಕಿಳಿದ ನಾಯಕಿ ಆಶ್ಲೀ ಗಾರ್ಡ್ನರ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಅಲ್ಲದೆ 32 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ 52 ರನ್ ಬಾರಿಸಿದರು. ಆ ಬಳಿಕ ಬಂದ ಹರ್ಲಿನ್ ಡಿಯೋಲ್ 34 ರನ್ ಬಾರಿಸಿದರೆ, ಡಿಯಾಂಡ್ರಾ ಡಾಟಿನ್ 33 ರನ್ ಚಚ್ಚಿದರು. ಈ ಮೂಲಕ ಗುಜರಾತ್ ಜೈಂಟ್ಸ್ ತಂಡವು 18 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 144 ರನ್ ಕಲೆಹಾಕಿ 6 ವಿಕೆಟ್ಗಳ ಜಯ ಸಾಧಿಸಿತು.
Superb with the ball 👌 Clinical with the bat 💪@Giant_Cricket are off the mark in #TATAWPL 2025 with a 6⃣-wicket victory! 🥳
This is also their first successful chase ever in the history of the tournament. 🙌
Scorecard ▶ https://t.co/KpTdz5nl8D#GGvUPW pic.twitter.com/nLSQNYxQO6
— Women’s Premier League (WPL) (@wplt20) February 16, 2025
ಗುಜರಾತ್ ಜೈಂಟ್ಸ್ ಪ್ಲೇಯಿಂಗ್ 11: ಬೆತ್ ಮೂನಿ (ವಿಕೆಟ್ ಕೀಪರ್) , ಲಾರಾ ವೋಲ್ವಾರ್ಡ್ಟ್ , ದಯಾಲನ್ ಹೇಮಲತಾ , ಆಶ್ಲೀ ಗಾರ್ಡ್ನರ್ (ನಾಯಕಿ) , ಡಿಯಾಂಡ್ರಾ ಡಾಟಿನ್ , ಸಿಮ್ರಾನ್ ಶೇಖ್ , ಹರ್ಲೀನ್ ಡಿಯೋಲ್ , ತನುಜಾ ಕನ್ವರ್ , ಸಯಾಲಿ ಸತ್ಘರೆ , ಕಾಶ್ವೀ ಗೌತಮ್ , ಪ್ರಿಯಾ ಮಿಶ್ರಾ.
ಇದನ್ನೂ ಓದಿ: WPL 2025: ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಇತಿಹಾಸ ನಿರ್ಮಿಸಿದ RCB
ಯುಪಿ ವಾರಿಯರ್ಸ್ ಪ್ಲೇಯಿಂಗ್ 11: ಉಮಾ ಚೆಟ್ರಿ (ವಿಕೆಟ್ ಕೀಪರ್) , ವೃಂದಾ ದಿನೇಶ್ , ಗ್ರೇಸ್ ಹ್ಯಾರಿಸ್ , ದೀಪ್ತಿ ಶರ್ಮಾ (ನಾಯಕಿ) , ತಹ್ಲಿಯಾ ಮೆಗ್ರಾತ್ , ಕಿರಣ್ ನವಗಿರೆ , ಶ್ವೇತಾ ಸೆಹ್ರಾವತ್ , ಸೋಫಿ ಎಕ್ಲೆಸ್ಟೋನ್ , ಅಲನಾ ಕಿಂಗ್ , ಸೈಮಾ ಠಾಕೋರ್ , ಕ್ರಾಂತಿ ಗೌಡ್.
