RR vs RCB: ಔಟಾದ ಕೋಪದಲ್ಲಿ ಮೈದಾನ ತೊರೆಯುವಾಗ ಯಶಸ್ವಿ ಜೈಸ್ವಾಲ್ ಏನೆಲ್ಲ ಅವಾಂತರ ಮಾಡಿದರು ನೋಡಿ

Yashasvi Jaiswal Angry: ಯಶಸ್ವಿ ಜೈಸ್ವಾಲ್ ಆರ್​ಸಿಬಿ ವಿರುದ್ಧದ ಐಪಿಎಲ್ 2024ರ ಎಲಿಮಿನೇಟರ್ ಪಂದ್ಯದಲ್ಲಿ 10 ನೇ ಓವರ್‌ನ ಎರಡನೇ ಎಸೆತದಲ್ಲಿ ಕ್ಯಾಮರೂನ್ ಗ್ರೀನ್ ಬೌಲಿಂಗ್​ನಲ್ಲಿ ಔಟಾದರು. ಸ್ವೀಪ್ ಶಾಟ್ ಆಡುವ ಪ್ರಯತ್ನದಲ್ಲಿ ವಿಕೆಟ್ ಹಿಂದೆ ದಿನೇಶ್ ಕಾರ್ತಿಕ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಔಟಾದ ಸಂದರ್ಭ ಜೈಸ್ವಾಲ್ ಏನು ಮಾಡಿದರು ನೋಡಿ.

RR vs RCB: ಔಟಾದ ಕೋಪದಲ್ಲಿ ಮೈದಾನ ತೊರೆಯುವಾಗ ಯಶಸ್ವಿ ಜೈಸ್ವಾಲ್ ಏನೆಲ್ಲ ಅವಾಂತರ ಮಾಡಿದರು ನೋಡಿ
Yashasvi Jaiswal Angry
Follow us
Vinay Bhat
|

Updated on: May 23, 2024 | 10:08 AM

ಬುಧವಾರ (ಮೇ 22) ಅಹ್ಮದಾಬಾದ್​ನಲ್ಲಿ ನಡೆದ ಐಪಿಎಲ್ 2024 ರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ (RCB vs RR) ಪರ ಯಶಸ್ವಿ ಜೈಸ್ವಾಲ್ ಅವರು 30 ಎಸೆತಗಳಲ್ಲಿ 45 ರನ್ ಗಳಿಸುವ ಮೂಲಕ ಸಂಜು ಸ್ಯಾಮ್ಸನ್ ನೇತೃತ್ವದ ತಂಡ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದರು. ಜೊತೆಗೆ ಗರಿಷ್ಠ ಸ್ಕೋರರ್ ಎನಿಸಿಕೊಂಡರು. 22ರ ಹರೆಯದ ಎಡಗೈ ಬ್ಯಾಟರ್ ಎಂಟು ಬೌಂಡರಿ ಸಿಡಿಸಿವುದರ ಜೊತೆಗೆ ಟಾಮ್ ಕೊಹ್ಲರ್-ಕ್ಯಾಡ್ಮೋರ್ (20) ಅವರೊಂದಿಗೆ ಮೊದಲ ವಿಕೆಟ್‌ಗೆ 46 ರನ್ ಮತ್ತು ಸಂಜು ಸ್ಯಾಮ್ಸನ್ (17) ಜೊತೆ ಎರಡನೇ ವಿಕೆಟ್‌ಗೆ 35 ರನ್ ಸೇರಿಸಿದರು.

2024 ರ ಟಿ 20 ವಿಶ್ವಕಪ್‌ನಲ್ಲಿ ಭಾರತ ತಂಡದ ಪರ ಸ್ಥಾನ ಪಡೆದುಕೊಂಡಿರುವ ಜೈಸ್ವಾಲ್, 10 ನೇ ಓವರ್‌ನ ಎರಡನೇ ಎಸೆತದಲ್ಲಿ ಕ್ಯಾಮರೂನ್ ಗ್ರೀನ್ ಬೌಲಿಂಗ್​ನಲ್ಲಿ ಔಟಾದರು. ಸ್ವೀಪ್ ಶಾಟ್ ಆಡುವ ಪ್ರಯತ್ನದಲ್ಲಿ ವಿಕೆಟ್ ಹಿಂದೆ ದಿನೇಶ್ ಕಾರ್ತಿಕ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಈ ವರ್ಷ ಆಡಿದ 15 ಪಂದ್ಯಗಳಲ್ಲಿ 393 ರನ್ ಗಳಿಸಿರುವ ಎಡಗೈ ಬ್ಯಾಟರ್, ಔಟಾದ ನಂತರ, ಪೆವಿಲಿಯನ್‌ಗೆ ಹಿಂದಿರುಗುವಾಗ ತಾಳ್ಮೆ ಕಳೆದುಕೊಂಡರು. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸೈಡ್ ರೇಲಿಂಗ್‌ಗೆ ಬಡಿದು ಕೋಪದಲ್ಲಿ ಡ್ರೆಸ್ಸಿಂಗ್ ರೂಮ್​ಗೆ ತೆರಳುವುದು ಕಂಡುಬಂತು.

ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆದ ಆರ್​ಸಿಬಿ: ಇಲ್ಲಿದೆ ಎಕ್ಸ್ ರಿಯಾಕ್ಷನ್

ಯಶಸ್ವಿ ಜೈಸ್ವಾಲ್ ಕೋಪದ ಪ್ರತಿಕ್ರಿಯೆಯ ವಿಡಿಯೋ ಇಲ್ಲಿದೆ:

ಐಪಿಎಲ್ 2023 ರಲ್ಲಿ 14 ಪಂದ್ಯಗಳಲ್ಲಿ 625 ರನ್ ಗಳಿಸುವ ಮೂಲಕ ಆರ್‌ಆರ್‌ಗಾಗಿ ಗರಿಷ್ಠ ಸ್ಕೋರ್ ಮಾಡಿದ ಜೈಸ್ವಾಲ್, ಈ ವರ್ಷ ಸ್ಥಿರ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. ಅವರು ಮುಂಬೈ ಇಂಡಿಯನ್ಸ್ ವಿರುದ್ಧ ಅಜೇಯ ಶತಕ ಮತ್ತು ಮೇ 2 ರಂದು ಹೈದರಾಬಾದ್ ವಿರುದ್ಧ 67 ರನ್ ಗಳಿಸಿದ್ದರು, ಅದನ್ನು ಹೊರತುಪಡಿಸಿ, ಹೆಚ್ಚಿನ ಪಂದ್ಯಗಳಲ್ಲಿ ಮಿಂಚಲು ವಿಫಲರಾಗಿದ್ದಾರೆ.

ಪೋಸ್ಟ್ ಮ್ಯಾಚ್​ನಲ್ಲಿ ಆರ್​ಸಿಬಿ ಸೋಲಿಗೆ ನಾಯಕ ಡುಪ್ಲೆಸಿಸ್ ದೂರಿದ್ದು ಯಾರನ್ನ?

ರಾಜಸ್ಥಾನಕ್ಕೆ 4 ವಿಕೆಟ್‌ಗಳ ಜಯ

ಬುಧವಾರ ನಡೆದ ಐಪಿಎಲ್ 2024 ರ ಎಲಿಮಿನೇಟರ್ ಪಂದ್ಯದಲ್ಲಿ ಆರ್‌ಆರ್ ಆರ್‌ಸಿಬಿಯನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿತು. ಚೊಚ್ಚಲ ಆವೃತ್ತಿಯ ವಿಜೇತರು 173 ರನ್‌ಗಳ ಗುರಿಯನ್ನು 19 ಓವರ್‌ಗಳಲ್ಲಿ ಆರು ವಿಕೆಟ್‌ಗಳ ನಷ್ಟಕ್ಕೆ ಬೆನ್ನಟ್ಟಿದರು. ವೆಸ್ಟ್ ಇಂಡೀಸ್ ಟಿ20I ನಾಯಕ ರೋವ್‌ಮನ್ ಪೊವೆಲ್ ಅಂತಿಮ ಹಂತದಲ್ಲಿ ಬ್ಯಾಟಿಂಗ್​ಗೆ ಬಂದು ತಂಡಕ್ಕೆ ಜಯ ತಂದುಕೊಟ್ಟರು. ಆರ್​ಸಿಬಿಗೆ ಸೋಲುಣಿಸಿ ರಾಜಸ್ಥಾನ್ ತಂಡ 2ನೇ ಕ್ವಾಲಿಫೈಯರ್​ಗೆ ಅರ್ಹತೆ ಪಡೆದುಕೊಂಡಿದೆ. ಮೇ 24 ರಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಹೈದರಾಬಾದ್ ಅನ್ನು ಎದುರಿಸಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!