2022 ರ ಇಂಡಿಯನ್ ಪ್ರೀಮಿಯರ್ ಲೀಗ್ (IPL) ನ ಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಕಾಯ್ದಿರಿಸಲು ಕೇವಲ ಎರಡು ದಿನಗಳ ಅಂತರದಲ್ಲಿ ರಾಜಸ್ಥಾನ್ ರಾಯಲ್ಸ್ (Rajasthan Royals) ಅದ್ಭುತ ಪುನರಾಗಮನವನ್ನು ಮಾಡಿತು. ಲೀಗ್ ಹಂತದಲ್ಲಿ ಎರಡನೇ ಸ್ಥಾನ ಪಡೆದ ನಂತರ, ರಾಜಸ್ಥಾನವು ಈ ವಾರದ ಆರಂಭದಲ್ಲಿ ಕೋಲ್ಕತ್ತಾದಲ್ಲಿ ಗುಜರಾತ್ ಟೈಟಾನ್ಸ್ (Gujarat Titans) ವಿರುದ್ಧ ಸೋತಿತು, ಎರಡನೇ ಕ್ವಾಲಿಫೈಯರ್‌ನಲ್ಲಿ ಶುಕ್ರವಾರ ಅಹಮದಾಬಾದ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸುವ ಮೂಲಕ ಫೈನಲ್‌ಗೆ ಎಂಟ್ರಿಕೊಟ್ಟಿದೆ. ಈ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡದ 14 ವರ್ಷಗಳ ಕಾಯುವಿಕೆ ಕೊನೆಗೂ ಅಂತ್ಯಗೊಂಡಿದೆ. ಐಪಿಎಲ್ ಇತಿಹಾಸದಲ್ಲಿ ಮೊದಲ ಚಾಂಪಿಯನ್ ತಂಡವು ತನ್ನ ಪ್ರಶಸ್ತಿ ಯಶಸ್ಸಿನ ನಂತರ ಮತ್ತೊಮ್ಮೆ ಪ್ರಶಸ್ತಿಯ ಸಮೀಪಕ್ಕೆ ಬಂದಿದೆ. ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ಐಪಿಎಲ್ 2022 ರ ಫೈನಲ್‌ನಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ಅಹಮದಾಬಾದ್‌ನಲ್ಲಿ ನಡೆದ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಏಕಪಕ್ಷೀಯ ರೀತಿಯಲ್ಲಿ 7 ವಿಕೆಟ್‌ಗಳ ಅಂತರದಿಂದ ಸೋಲಿಸಿತು.
ಆದರೆ ಪಂದ್ಯವೆಲ್ಲ ಮುಗಿದ ನಂತರ ವಿಶೇಷ ಘಟನೆಯೊಂದು ನಡೆದಿದ್ದು, ಈ ಘಟನೆಯನ್ನು ವಿಡಿಯೋ ಮಾಡಿದ್ದ ರಾಜಸ್ಥಾನ ತಂಡ ತನ್ನ ಟ್ವಿಟರ್ ಹ್ಯಾಂಡಲ್ನಲ್ಲಿ ಹಂಚಿಕೊಂಡಿದೆ. ಆ ವಿಡಿಯೋದಲ್ಲಿರುವುದೆನೇಂದರೆ, ಪಂದ್ಯದ ನಂತರ, ರಾಜಸ್ಥಾನ್ ರಾಯಲ್ಸ್ ತಂಡದ ವೇಗಿ ಟ್ರೆಂಟ್ ಬೌಲ್ಟ್ ಅವರು RCB ಜರ್ಸಿ ಧರಿಸಿದ್ದ ಯುವ ಅಭಿಮಾನಿಗೆ ತಮ್ಮ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಬೌಲ್ಟ್ನಿಂದ ಜರ್ಸಿಯನ್ನು ಉಡುಗೂರೆಯಾಗಿ ಪಡೆದ ಈ ಪುಟ್ಟ ಅಭಿಮಾನಿ ತಾನು ಧರಿಸಿದ್ದ ಆರ್ಸಿಬಿ ಜರ್ಸಿಯನ್ನು ಕಳಚಿ, ಬೌಲ್ಟ್ ನೀಡಿದ ರಾಜಸ್ಥಾನದ ಜರ್ಸಿಯನ್ನು ತೊಟ್ಟುಕೊಂಡಿದ್ದಾನೆ. ಈ ಪೋರ ಮಾಡುವುದೆಲ್ಲವನ್ನು ವಿಡಿಯೋ ಮೂಲಕ ಸೆರೆ ಹಿಡಿದಿದ್ದ ರಾಜಸ್ಥಾನ ತಂಡ ಇಂದು ಈ ವಿಡಿಯೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, ಈಗ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
How can you not love Trent Boult? ?
Watch him make a young fan's day after #RRvRCB. ? pic.twitter.com/YrWgRsAgsN
— Rajasthan Royals (@rajasthanroyals) May 28, 2022
ಇದನ್ನೂ ಓದಿ:GT vs RR Head to Head Records: ಫೈನಲ್ ಕದನದಲ್ಲಿ ಗೆಲುವು ಯಾರಿಗೆ? ಮುಖಾಮುಖಿ ವರದಿ ಕಥೆ ಹೇಳುವುದೇನು?
ಈ ಐಪಿಎಲ್ನಲ್ಲಿ ಬೌಲ್ಟ್ ಪ್ರದರ್ಶನ ಹೀಗಿತ್ತು
ಬೌಲ್ಟ್ ರಾಯಲ್ಸ್ ಫೈನಲ್‌ಗೆ ಸಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ನ್ಯೂಜಿಲೆಂಡ್ನ ಅಂತರಾಷ್ಟ್ರೀಯ ಆಟಗಾರ 8.24 ರ ಎಕಾನಮಿ ದರದಲ್ಲಿ 15 ವಿಕೆಟ್‌ಗಳನ್ನು ಪಡೆದಿದ್ದಲ್ಲದೆ ಆರಂಭಿಕ ಓವರ್ಗಳಲ್ಲಿ ರನ್ ವೇಗಕ್ಕೆ ಕಡಿವಾಣ ಹಾಕುವುದರಲ್ಲಿ ಯಶಸ್ವಿಯಾಗಿದ್ದರು. 2008 ರ ಉದ್ಘಾಟನಾ ಆವೃತ್ತಿಯ ನಂತರ ಐಪಿಎಲ್ ಋತುವಿನಲ್ಲಿ ರಾಜಸ್ಥಾನವು ಎರಡನೇ ಬಾರಿಗೆ ಫೈನಲ್ ತಲುಪಿದೆ. ಅಂದಿನ ಮೊದಲ ಸೀಸನ್ನಲ್ಲಿ ರಾಜಸ್ಥಾನ ತಂಡದ ನಾಯಕರಾಗಿದ್ದ ಶೇನ್ ವಾರ್ನ್ ಫ್ರಾಂಚೈಸಿಯನ್ನು ಮೊದಲ ಬಾರಿಗೆ ಪ್ರಶಸ್ತಿ ಗೆಲುವಿನತ್ತ ಮುನ್ನಡೆಸಿದ್ದರು.
ಫೈನಲ್ ವಾರ್
ಐಪಿಎಲ್-2022ರ ಫೈನಲ್‌ಗೆ ವೇದಿಕೆ ಸಿದ್ಧವಾಗಿದೆ. ಈ ಸೀಸನ್ನ ಎರಡು ಫೈನಲಿಸ್ಟ್ ತಂಡಗಳನ್ನು ನಿರ್ಧರಿಸಲಾಗಿದೆ. ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ- ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ. ಈ ಸೀಸನ್ನ ಎರಡು ಅಗ್ರ ತಂಡಗಳ ನಡುವೆ ಪ್ರಶಸ್ತಿ ರೇಸ್ ನಡೆಯಲಿದೆ. ಈ ಪಂದ್ಯ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ (GT vs RR) ನಡುವೆ ನಡೆಯಲಿದೆ. ಗುಜರಾತ್ ಮೊದಲ ಸ್ಥಾನದಲ್ಲಿದ್ದರೆ, ರಾಜಸ್ಥಾನ ಎರಡನೇ ಸ್ಥಾನದಲ್ಲಿದೆ. ಕ್ವಾಲಿಫೈಯರ್-1ರಲ್ಲೂ ಈ ಎರಡು ತಂಡಗಳು ಮುಖಾಮುಖಿಯಾಗಿದ್ದು, ಇದರಲ್ಲಿ ಗುಜರಾತ್ ಗೆದ್ದು ನೇರವಾಗಿ ಅಂತಿಮ ಟಿಕೆಟ್ ಕಾಯ್ದಿರಿಸಿತ್ತು. ಅದೇ ಸಮಯದಲ್ಲಿ ರಾಜಸ್ಥಾನ ಎರಡನೇ ಕ್ವಾಲಿಫೈಯರ್ ಪಂದ್ಯವನ್ನು ಆಡಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸಿ ಫೈನಲ್‌ಗೆ ಟಿಕೆಟ್ ಪಡೆಯಿತು. ಇದೀಗ ಈ ಎರಡು ತಂಡಗಳು ಪ್ರಶಸ್ತಿಗಾಗಿ ಹಣಾಹಣಿ ನಡೆಸಲಿವೆ.
Published On - 5:27 pm, Sat, 28 May 22