Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುಜ್ವೇಂದ್ರ ಚಹಲ್-ಧನಶ್ರೀ ವರ್ಮಾ ವಿಚ್ಛೇದನ: ಕೋಟಿ ಮೊತ್ತ ಪರಿಹಾರ?

Yuzvendra Chahal and Dhanashree Verma: ಟೀಮ್ ಇಂಡಿಯಾ ಆಟಗಾರ ಯುಜ್ವೇಂದ್ರ ಚಹಲ್ ಹಾಗೂ ಧನಶ್ರೀ ವರ್ಮಾ 2020ರಲ್ಲಿ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಇದೀಗ ಸೆಲೆಬ್ರಿಟಿ ದಂಪತಿಗಳು ಬೇರೆಯಾಗುತ್ತಿದ್ದಾರೆ ಎಂಬ ಸುದ್ದಿಯೊಂದು ಹುಟ್ಟಿಕೊಂಡಿದೆ. ಈ ಸುದ್ದಿ ಬೆನ್ನಲ್ಲೇ ಇದೀಗ ಚಹಲ್ ಅವರು ಡೈವೋರ್ಸ್​ಗಾಗಿ ಕೋಟಿ ಮೊತ್ತದಲ್ಲಿ ಜೀವನಾಂಶ ನೀಡಲು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಯುಜ್ವೇಂದ್ರ ಚಹಲ್-ಧನಶ್ರೀ ವರ್ಮಾ ವಿಚ್ಛೇದನ: ಕೋಟಿ ಮೊತ್ತ ಪರಿಹಾರ?
Yuzvendra Chahal -Dhanashree Verma
Follow us
ಝಾಹಿರ್ ಯೂಸುಫ್
| Updated By: ವಿವೇಕ ಬಿರಾದಾರ

Updated on: Feb 17, 2025 | 1:03 PM

ಟೀಮ್ ಇಂಡಿಯಾ ಆಟಗಾರ ಯುಜ್ವೇಂದ್ರ ಚಹಲ್ ಕಳೆದ ಕೆಲ ದಿನಗಳಿಂದ ಸುದ್ದಿಯಲ್ಲಿದ್ದಾರೆ. ಚಹಲ್ ಪತ್ನಿ ಧನಶ್ರೀ ವರ್ಮಾ ಅವರಿಂದ ವಿಚ್ಛೇದನ ಪಡೆಯಲು ನಿರ್ಧರಿಸಿದ್ದು, ಶೀಘ್ರದಲ್ಲೇ ಸೆಲೆಬ್ರಿಟಿ ದಂಪತಿಗಳು ಬೇರ್ಪಡಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದೆ. ಇದಾಗ್ಯೂ ಈ ಬಗ್ಗೆ ಚಹಲ್ ಆಗಲಿ, ಧನಶ್ರೀ ವರ್ಮಾ ಅವರಾಗಲಿ ಯಾವುದೇ ಸ್ಪಷ್ಟನೆ ನೀಡಿಲ್ಲ. ಈ ವದಂತಿ ನಡುವೆಯೇ ಧನಶ್ರೀ ವರ್ಮಾ ಅವರಿಂದ ವಿಚ್ಚೇಧನ ಪಡೆಯಲು ಯುಜ್ವೇಂದ್ರ ಚಹಲ್ 60 ಕೋಟಿ ರೂ. ಜೀವನಾಂಶ ನೀಡಲಿದ್ದಾರೆ ಎಂದು ವರದಿಯಾಗಿದೆ.

ಸ್ಟಾರ್ ದಂಪತಿಗಳ ನಡುವೆ ಈಗಾಗಲೇ ಮಾತುಕತೆ ನಡೆದಿದ್ದು, ಅದರಂತೆ ಯುಜ್ವೇಂದ್ರ ಚಹಲ್ ಅವರು ಧನಶ್ರೀ ವರ್ಮಾಗೆ 60 ಕೋಟಿ ರೂ. ಜೀವನಾಂಶ ನೀಡಲು ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದೆ. ಆದರೆ ಈ ಸುದ್ದಿಯನ್ನು ಚಹಲ್ ಈವರೆಗೆ ಖಚಿತಪಡಿಸಿಲ್ಲ. ಅತ್ತ ಇಂತಹದೊಂದು ಸುದ್ದಿಗೆ ಸೋಷಿಯಲ್ ಮೀಡಿಯಾ ಮೂಲಕ ಸ್ಪಷ್ಟನೆಯನ್ನು ಸಹ ನೀಡಿಲ್ಲ.

ಇದಕ್ಕೂ ಮುನ್ನ ವಿಚ್ಛೇದನ ವದಂತಿ ನಡುವೆ ಧನಶ್ರೀ ವರ್ಮಾ ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಹೇಳಿಕೆಯನ್ನು ಹಂಚಿಕೊಂಡಿದ್ದರು. ನನಗೆ ಮತ್ತು ನನ್ನ ಕುಟುಂಬಕ್ಕೆ ಕಳೆದ ಕೆಲ ದಿನಗಳು ತುಂಬಾ ಕಠಿಣ ದಿನಗಳಾಗಿವೆ. ಆಧಾರರಹಿತ ಬರವಣಿಗೆ, ಸತ್ಯ-ಪರಿಶೋಧವಿಲ್ಲದ ಬರಹಗಳು ಮತ್ತು ದ್ವೇಷವನ್ನು ಹರಡುವ ಟ್ರೋಲ್‌ಗಳಿಂದ ನನ್ನ ಗೌರವವನ್ನು ಕೊಲ್ಲುವ ಪ್ರಯತ್ನ ಮಾಡುತ್ತಿದ್ದಾರೆ.

ಈ ಹೆಸರುಗಳಿಸಲು ಮತ್ತು ಖ್ಯಾತಿಯನ್ನು ಪಡೆಯಲು ನಾನು ಹಲವು ವರ್ಷಗಳಿಂದ ಶ್ರಮಿಸಿದ್ದೇನೆ. ನನ್ನ ಮೌನ ನನ್ನ ದೌರ್ಬಲ್ಯವಲ್ಲ. ಅದು ನನ್ನ ಶಕ್ತಿ. ನಕಾರಾತ್ಮಕತೆಯು ಆನ್‌ಲೈನ್‌ನಲ್ಲಿ ಸುಲಭವಾಗಿ ಹರಡುತ್ತದೆ. ಇದು ಇತರರನ್ನು ಮೇಲಕ್ಕೆತ್ತಲು ಧೈರ್ಯ ನೀಡುತ್ತದೆ.

ನಾನು ನನ್ನ ಸತ್ಯದ ಮೇಲೆ ಕೇಂದ್ರೀಕರಿಸಲು ಮತ್ತು ನನ್ನ ಮೌಲ್ಯಗಳನ್ನು ಹಿಡಿದಿಟ್ಟುಕೊಂಡು ಮುಂದುವರಿಯುವುದನ್ನು ಆಯ್ಕೆ ಮಾಡುತ್ತೇನೆ. ಯಾವುದೇ ಪುರಾವೆಗಳಿಲ್ಲದಿದ್ದರೂ ಸತ್ಯವು ಅದರ ಸ್ಥಾನದಲ್ಲಿ ದೃಢವಾಗಿ ನಿಂತಿದೆ. ಓಂ ನಮಃ ಶಿವಾಯ… ಎಂದು ಧನಶ್ರೀ ವರ್ಮಾ ಬರೆದುಕೊಂಡಿದ್ದರು.

ಈ ಪೋಸ್ಟ್ ವೈರಲ್ ಬೆನ್ನಲ್ಲೇ ಮತ್ತೆ ಧನಶ್ರೀ ವರ್ಮಾ ಹಾಗೂ ಯುಜ್ವೇಂದ್ರ ಚಹಲ್ ನಡುವಣ ಸಂಬಂಧದ ಬಗ್ಗೆ ಮತ್ತೆ ಪ್ರಶ್ನೆಗಳು ಎದ್ದಿವೆ. ಏಕೆಂದರೆ ಕಳೆದ ಕೆಲ ದಿನಗಳಿಂದ ಡೈವೋರ್ಸ್ ಸುದ್ದಿಗಳು ಹರಿದಾಡುತ್ತಿದ್ದರೂ, ಧನಶ್ರೀ ವರ್ಮಾ ಈ ಬಗ್ಗೆ ತಮ್ಮ ಪೋಸ್ಟ್​ನಲ್ಲಿ ಸ್ಪಷ್ಟನೆ ನೀಡಿಲ್ಲ.

ಅಲ್ಲದೆ ಯುಜ್ವೇಂದ್ರ ಚಹಲ್ ಅವರ ಹೆಸರನ್ನು ಸಹ ಪ್ರಸ್ತಾಪಿಸಿಲ್ಲ. ಹೀಗಾಗಿಯೇ ಸೆಲೆಬ್ರಿಟಿ ದಂಪತಿಗಳ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿಗಳು ಮತ್ತೆ ಮುನ್ನಲೆಗೆ ಬಂದಿತ್ತು. ಇದೀಗ ಮತ್ತೆ ವಿಚ್ಛೇದನದ ಪರಿಹಾರವಾಗಿ ಯುಜ್ವೇಂದ್ರ ಚಹಲ್ ಧನಶ್ರೀ ವರ್ಮಾಗೆ 60 ಕೋಟಿ ರೂ. ನೀಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಜನರಿಗೆ ಮೋಸ ಮಾಡುವ ಕೆಲಸಕ್ಕೆ ಯಾರೂ ಮುಂದಾಗಬಾರದು: ಕುಲಕರ್ಣಿ
ಜನರಿಗೆ ಮೋಸ ಮಾಡುವ ಕೆಲಸಕ್ಕೆ ಯಾರೂ ಮುಂದಾಗಬಾರದು: ಕುಲಕರ್ಣಿ
ಪಹಲ್ಗಾಮ್​ನಲ್ಲಿ ದಾಳಿಯ ನಡುವೆಯೇ ಉಗ್ರನ ಫೋಟೊ ಕ್ಲಿಕ್ಕಿಸಿದ ಮಹಿಳೆ
ಪಹಲ್ಗಾಮ್​ನಲ್ಲಿ ದಾಳಿಯ ನಡುವೆಯೇ ಉಗ್ರನ ಫೋಟೊ ಕ್ಲಿಕ್ಕಿಸಿದ ಮಹಿಳೆ
ಇದು ದೋಷಾರೋಪಣೆ ಮಾಡುವ ಸಮಯ ಅಲ್ಲ: ಶಿವಕುಮಾರ್
ಇದು ದೋಷಾರೋಪಣೆ ಮಾಡುವ ಸಮಯ ಅಲ್ಲ: ಶಿವಕುಮಾರ್
ಸುತ್ತೂರು ಮಠದಲ್ಲಿ ಮಗುವಿಗೆ ನಾಮಕರಣ ಮಾಡಿದ ಸಿದ್ದರಾಮಯ್ಯ
ಸುತ್ತೂರು ಮಠದಲ್ಲಿ ಮಗುವಿಗೆ ನಾಮಕರಣ ಮಾಡಿದ ಸಿದ್ದರಾಮಯ್ಯ
‘ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋ ಫಿನಾಲೆ; ಗೆಲ್ಲೋದು ಯಾರು?
‘ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋ ಫಿನಾಲೆ; ಗೆಲ್ಲೋದು ಯಾರು?
ಮೌಢ್ಯಗಳನ್ನು ಅನುಸರಿಸಲ್ಲ ಅಂತ ಮತ್ತೊಮ್ಮೆ ಸಾಬೀತು ಮಾಡಿದ ಸಿದ್ದರಾಮಯ್ಯ
ಮೌಢ್ಯಗಳನ್ನು ಅನುಸರಿಸಲ್ಲ ಅಂತ ಮತ್ತೊಮ್ಮೆ ಸಾಬೀತು ಮಾಡಿದ ಸಿದ್ದರಾಮಯ್ಯ
ಮಂತ್ರಾಲಯ ರಾಯರ ಮಠದ ಹುಂಡಿಯಲ್ಲಿ 4 ಕೋಟಿ ರೂಪಾಯಿಗೂ ಅಧಿಕ ಹಣ ಸಂಗ್ರಹ
ಮಂತ್ರಾಲಯ ರಾಯರ ಮಠದ ಹುಂಡಿಯಲ್ಲಿ 4 ಕೋಟಿ ರೂಪಾಯಿಗೂ ಅಧಿಕ ಹಣ ಸಂಗ್ರಹ
ಪಹಲ್ಗಾಮ್ ದಾಳಿಕೋರ ಆಸಿಫ್ ಶೇಖ್ ಮನೆಯಲ್ಲಿ ಸ್ಫೋಟ, ಬೆಂಕಿ, ನೆಲಸಮ
ಪಹಲ್ಗಾಮ್ ದಾಳಿಕೋರ ಆಸಿಫ್ ಶೇಖ್ ಮನೆಯಲ್ಲಿ ಸ್ಫೋಟ, ಬೆಂಕಿ, ನೆಲಸಮ
ಮೈಸೂರು: ಶತಮಾನದಷ್ಟು ಹಳೆಯದಾದ ಕಟ್ಟಡದ ಮೇಲೆ ವಕ್ಫ್​ ಕಣ್ಣು, ನೋಟೀಸ್
ಮೈಸೂರು: ಶತಮಾನದಷ್ಟು ಹಳೆಯದಾದ ಕಟ್ಟಡದ ಮೇಲೆ ವಕ್ಫ್​ ಕಣ್ಣು, ನೋಟೀಸ್
ನಿಮ್ಮಲ್ಲಿನ ದುಶ್ಚಟಗಳನ್ನು ಇನ್ನೊಬ್ಬರಿಗೆ ಕಲಿಸಿದರೆ ಉಂಟಾಗುವ ಪರಿಣಾಮವೇನು?
ನಿಮ್ಮಲ್ಲಿನ ದುಶ್ಚಟಗಳನ್ನು ಇನ್ನೊಬ್ಬರಿಗೆ ಕಲಿಸಿದರೆ ಉಂಟಾಗುವ ಪರಿಣಾಮವೇನು?