UAE T20 League: ಟಿ20 ಕ್ರಿಕೆಟ್ ಅಂಗಳದಲ್ಲಿ ಮತ್ತೊಂದು ಲೀಗ್ ಸೇರ್ಪಡೆಯಾಗುತ್ತಿದೆ. ಶೀಘ್ರದಲ್ಲೇ ಎಮಿರೇಟ್ಸ್ ಕ್ರಿಕೆಟ್ ಮಂಡಳಿ (ECB) ಹೊಸ ಲೀಗ್ ಅನ್ನು ಶುರು ಮಾಡಲಿದೆ. ಯುಎಇ ಟಿ20 ಲೀಗ್ (UAE T20 League) ಹೆಸರಿನಲ್ಲಿ ನಡೆಯಲಿರುವ ಈ ಟೂರ್ನಿಗೆ ಬೇಕಾದ ಸಿದ್ಧತೆಗಳು ಆರಂಭವಾಗಿದೆ. ಅದರ ಮೊದಲ ಹೆಜ್ಜೆ ಎಂಬಂತೆ ಇದೀಗ ಪಂದ್ಯಗಳ ನೇರ ಪ್ರಸಾರ ಹಕ್ಕುಗಳನ್ನು ಮಾರಾಟಲಾಗಿದ್ದು, ಪ್ರಮುಖ ಸಂಸ್ಥೆಗಳನ್ನು ಹಿಂದಿಕ್ಕಿ ದೇಶದ ಪ್ರಮುಖ ಮಾಧ್ಯಮ ಸಂಸ್ಥೆ ZEE ನೆಟ್ವರ್ಕ್ ಟಿ20 ಲೀಗ್‌ನ ಜಾಗತಿಕ ಮಾಧ್ಯಮ ಹಕ್ಕುಗಳನ್ನು ಪಡೆದುಕೊಂಡಿದೆ.
ಯುಎಇಯ ಈ ಟಿ20 ಲೀಗ್‌ನಲ್ಲಿ, ಹಕ್ಕುಗಳ ಒಪ್ಪಂದವನ್ನು ಎಮಿರೇಟ್ಸ್ ಮಂಡಳಿ ಮಂಗಳವಾರ ಪ್ರಕಟಿಸಿದೆ. ಜಾಗತಿಕ ಮಾಧ್ಯಮ ಮತ್ತು ಮನರಂಜನಾ ಶಕ್ತಿ ಕೇಂದ್ರವಾದ ZEE ಯೊಂದಿಗೆ ದೀರ್ಘಾವಧಿಯ ಮಾಧ್ಯಮ ಹಕ್ಕುಗಳ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಲೀಗ್ ಅನ್ನು ZEE ನ ಲೀನಿಯರ್ ಚಾನಲ್‌ಗಳು ಮತ್ತು ಅದರ OTT ಪ್ಲಾಟ್‌ಫಾರ್ಮ್ ZEE5 ನಲ್ಲಿ ಪ್ರಸಾರ ಮಾಡಲಾಗುತ್ತದೆ. ಪಂದ್ಯಗಳನ್ನು ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತ ನೇರ ಪ್ರಸಾರ ಮಾಡಲಾಗುತ್ತದೆ ಎಂದು ತಿಳಿಸಿದೆ.
ಯುಎಇ ಟಿ20 ಲೀಗ್‌ನಲ್ಲಿ 6 ತಂಡಗಳ ನಡುವೆ ಒಟ್ಟು 34 ಪಂದ್ಯಗಳನ್ನು ಆಡಲಾಗುತ್ತದೆ . ಈ ತಂಡಗಳನ್ನು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಅದಾನಿ ಸ್ಪೋರ್ಟ್ಸ್‌ಲೈನ್, ಕೋಲ್ಕತ್ತಾ ನೈಟ್ ರೈಡರ್ಸ್, ಲ್ಯಾನ್ಸರ್ ಕ್ಯಾಪಿಟಲ್, ಜಿಎಂಆರ್ ಗ್ರೂಪ್ ಮತ್ತು ಕ್ಯಾಪ್ರಿ ಗ್ಲೋಬಲ್ ಕಂಪೆನಿಗಳು ಖರೀದಿಸಿರುವುದು ವಿಶೇಷ.
ಯಾವ ಚಾನೆಲ್ನಲ್ಲಿ ನೇರ ಪ್ರಸಾರ?
UAE ಯ T20 ಲೀಗ್ ಪಂದ್ಯಗಳನ್ನು ZEE ಯ 10 ಲೀನಿಯರ್ ಚಾನಲ್‌ಗಳಲ್ಲಿ HSM (ಹಿಂದಿ ಮಾತನಾಡುವ ಮಾರುಕಟ್ಟೆಗಳು), ದಕ್ಷಿಣ ಮತ್ತು ಪೂರ್ವ ಪ್ರದೇಶಗಳಲ್ಲಿ ಇಂಗ್ಲಿಷ್, ಹಿಂದಿ ಮತ್ತು ತಮಿಳು ಭಾಷೆಗಳಲ್ಲಿ ಪ್ರಸಾರ ಮಾಡಲಾಗುತ್ತದೆ. ಇದರೊಂದಿಗೆ, ಲೀಗ್ ZEE5 ನಲ್ಲಿ ಲೈವ್ ಸ್ಟ್ರೀಮಿಂಗ್ ಕೂಡ ಇರಲಿದೆ. ಹಾಗೆಯೇ ಗ್ಲೋಬಲ್ ರೇಡಿಯೊದಲ್ಲಿಯೂ ಪಂದ್ಯಗಳ ಮಾಹಿತಿ ಸಿಗಲಿದೆ. ಪ್ರಪಂಚದಾದ್ಯಂತ T20 ಲೀಗ್ ಕ್ರಿಕೆಟ್‌ನ ಜನಪ್ರಿಯತೆಯ ನಡುವೆ, UAE ನ ಎಮಿರೇಟ್ಸ್ ಕ್ರಿಕೆಟ್ ಮಂಡಳಿಯು ತನ್ನ ಯುಎಇ ಟಿ20 ಲೀಗ್ ಅನ್ನು ಪ್ರಾರಂಭಿಸುವುದಾಗಿ ಘೋಷಿಸಿತ್ತು. ಇದೀಗ ಟೂರ್ನಿಯ 10 ವರ್ಷಗಳ ಪ್ರಸಾರ ಹಕ್ಕುಗಳನ್ನು ಝೀ ನೆಟ್ವರ್ಕ್ ಪಡೆದುಕೊಂಡಿದ್ದು, ಈ ಮೂಲಕ ಭಾರತ ಸೇರಿದಂತೆ ವಿಶ್ವದಾದ್ಯಂತ ಹೊಸ ಲೀಗ್ ಅನ್ನು ಕ್ರಿಕೆಟ್ ಪ್ರೇಮಿಗಳಿಗೆ ತಲುಪಿಸಲು ಮುಂದಾಗಿದೆ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.