AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: ಆರ್​ಸಿಬಿಗೆ ಸಂಕಷ್ಟ: LSG vs RCB ಪಂದ್ಯದ ವೇಳೆ ಮಳೆಯಾಗುವ ಸಾಧ್ಯತೆ

LSG vs RCB: ಆರ್​ಸಿಬಿ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ನಡುವಣ ಪಂದ್ಯದ ವೇಳೆ ಮಳೆ ಬಂದು, ಅಂತಿಮವಾಗಿ ಸೂಪರ್ ಓವರ್​ ಕೂಡ ಆಡಲು ಸಾಧ್ಯವಾಗದಿದ್ದರೆ, ಪಾಯಿಂಟ್ಸ್​ ಟೇಬಲ್​ನಲ್ಲಿ ಮೇಲಿರುವ ತಂಡ ಮುಂದಿನ ಹಂತಕ್ಕೇರಲಿದೆ.

IPL 2022: ಆರ್​ಸಿಬಿಗೆ ಸಂಕಷ್ಟ: LSG vs RCB ಪಂದ್ಯದ ವೇಳೆ ಮಳೆಯಾಗುವ ಸಾಧ್ಯತೆ
RCB
Follow us
TV9 Web
| Updated By: ಝಾಹಿರ್ ಯೂಸುಫ್

Updated on: May 24, 2022 | 6:24 PM

IPL 2022: ಐಪಿಎಲ್​ ಸೀಸನ್ 15 ಪ್ಲೇಆಫ್ ಪಂದ್ಯಗಳಿಗೆ ಮಳೆಯ ಭೀತಿ ಎದುರಾಗಿದೆ. ಪ್ಲೇಆಫ್ ಹಂತದ ಮೊದಲ ಕ್ವಾಲಿಫೈಯರ್ ಹಾಗೂ ಎಲಿಮಿನೇಟರ್ ಪಂದ್ಯಗಳು ಕೊಲ್ಕತ್ತಾ ಈಡನ್ ಗಾರ್ಡನ್ಸ್​ ಮೈದಾನದಲ್ಲಿ ನಡೆಯಲಿದೆ. ಆದರೆ ಅತ್ತ ಈಡನ್ ಗಾರ್ಡನ್ಸ್​ ಮೈದಾನದ ಸುತ್ತು ಮುತ್ತ ಮೋಡ ಮುಸುಕಿದ ವಾತಾವರಣ ಕಂಡು ಬಂದಿದೆ. ಇದಾಗ್ಯೂ ಈ ಪಂದ್ಯದ ವೇಳೆ ಮಳೆ ಬರುವ ಸಾಧ್ಯತೆ ಕಡಿಮೆ ಎಂದು ಹವಾಮಾನ ಇಲಾಖೆಯ ವರದಿಗಳು ಹೇಳಿವೆ. ಒಂದು ವೇಳೆ ಮಳೆ ಬಂದರೂ ಪಂದ್ಯವನ್ನು ಪೂರ್ಣಗೊಳಿಸಲು ಸಮಯವಕಾಶ ದೊರೆಯಲಿದೆ. ಆದರೆ ನಾಳೆ ಕೊಲ್ಕತ್ತಾದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಯಿದೆ.

ಅಂದರೆ ಆರ್​ಸಿಬಿ ಹಾಗೂ ಲಕ್ನೋ ಸೂಪರ್ ಜೈಂಟ್ಸ್​ ನಡುವಣ ಪಂದ್ಯವು ವರುಣನ ಅವಕೃಪೆಗೆ ಒಳಗಾಗುವ ಸಾಧ್ಯತೆ ಹೆಚ್ಚು. ವೆದರ್​.ಕಾಮ್ ವರದಿ ಪ್ರಕಾರ ನಾಳೆ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 8 ಗಂಟೆಯವರೆಗೂ ಮಳೆಯಾಗುವ ಸಾಧ್ಯತೆಯಿದೆ. ಒಂದು ವೇಳೆ ನಿರಂತರ ಮಳೆಯಾದರೆ ಅದು ಆರ್​ಸಿಬಿ ಪಾಲಿಗೆ ಕಂಟಕವಾಗಲಿದೆ.

ಏಕೆಂದರೆ ಪ್ಲೇಆಫ್​ ಹಂತದ ಪಂದ್ಯಗಳಿಗೆ ಬಿಸಿಸಿಐ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಇದರಲ್ಲಿ ಮೊದಲ ಮೂರು ಪಂದ್ಯಗಳಿಗೆ, ಅಂದರೆ ಮೊದಲ ಕ್ವಾಲಿಫೈಯರ್, ಎಲಿಮಿನೇಟರ್ ಹಾಗೂ 2ನೇ ಕ್ವಾಲಿಫೈಯರ್ ಪಂದ್ಯಗಳಿಗೆ ಮೀಸಲು ದಿನದಾಟ ನೀಡಲಾಗಿಲ್ಲ. ಬದಲಾಗಿ ಆಯಾ ದಿನವೇ ಪಂದ್ಯದ ಫಲಿತಾಂಶವನ್ನು ನಿರ್ಧರಿಸಲಾಗುತ್ತದೆ. ಇದಕ್ಕಾಗಿ ಹೆಚ್ಚುವರಿ ಸಮಯವಕಾಶ ನೀಡಲಾಗಿದೆ.

ಬಿಸಿಸಿಐ ಪ್ರಕಟಿಸಿರುವ ಹೊಸ ಮಾರ್ಗಸೂಚಿ ಹೀಗಿದೆ: – ಪ್ಲೇಆಫ್​ ಹಂತದ ಮೊದಲ ಮೂರು ಪಂದ್ಯಗಳಿಗೆ ಹೆಚ್ಚುವರಿ 2 ಗಂಟೆಗಳ ಸಮಯವಕಾಶ. ಅಂದರೆ ಮೊದಲ 3 ಪಂದ್ಯಗಳು ಮಳೆಯಿಂದ ವಿಳಂಬವಾದರೆ ಓವರ್​ ಕಡಿತಗೊಳಿಸದೇ ರಾತ್ರಿ 9.40 ಕ್ಕೆ ಪಂದ್ಯವನ್ನು ಆಯೋಜಿಸಲಾಗುತ್ತದೆ.

– ಈ ವೇಳೆಯೂ ಮಳೆಯಿಂದ ಅಡಚಣೆ ಉಂಟಾದರೆ 5 ಓವರ್​ಗಳ ಪಂದ್ಯಗಳನ್ನು ಆಡಿಸಲಾಗುತ್ತದೆ. ಅಂದರೆ ಒಂದು ತಂಡಕ್ಕೆ 5 ಓವರ್​ಗಳ ಇನಿಂಗ್ಸ್​ ಇರಲಿದೆ. ಈ ಪಂದ್ಯವನ್ನು ಆಯೋಜಿಸಲು ರಾತ್ರಿ 11.56 ರವರೆಗೆ ಸಮಯ ನಿಗದಿ ಮಾಡಲಾಗಿದೆ.

– 5 ಓವರ್​ಗಳ ಪಂದ್ಯ ನಡೆಸಲು ನಿರ್ಧರಿಸಿದರೆ ಟೈಮ್ ಔಟ್ ಇರುವುದಿಲ್ಲ. ಹಾಗೆಯೇ ರಾತ್ರಿ 12.50 ರೊಳಗೆ ಪಂದ್ಯ ಮುಗಿಯಬೇಕು ಎಂದು ತಿಳಿಸಲಾಗಿದೆ.

– ರಾತ್ರಿ 12.50 ರೊಳಗೆ ಪಂದ್ಯ ಮುಗಿಸಲು ಸಾಧ್ಯವಾಗದ ಪರಿಸ್ಥಿತಿಯಿದ್ದರೆ, ಸೂಪರ್ ಓವರ್ ಆಡಿಸಲಾಗುತ್ತದೆ.

– ಇನ್ನು ಸೂಪರ್ ಓವರ್ ಕೂಡ ಆಡುವಂತಹ ಪರಿಸ್ಥಿತಿ ಇರದಿದ್ದರೆ, ಆ ಪಂದ್ಯವನ್ನು ರದ್ದು ಮಾಡಲಾಗುತ್ತದೆ. ಅಲ್ಲದೆ ಇಲ್ಲಿ ಪಾಯಿಂಟ್ಸ್​ ಟೇಬಲ್​ ಲೆಕ್ಕಚಾರ ಬರಲಿದೆ. ಅಂದರೆ ಲೀಗ್ ಹಂತದಲ್ಲಿ ಅತೀ ಹೆಚ್ಚು ಪಾಯಿಂಟ್ಸ್​ ಪಡೆದಿರುವ ತಂಡವು ಕ್ವಾಲಿಫೈಯರ್ ಆಗಲಿದೆ.

ಉದಾಹರಣೆಗೆ: ಆರ್​ಸಿಬಿ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ನಡುವಣ ಪಂದ್ಯದ ವೇಳೆ ಮಳೆ ಬಂದು, ಅಂತಿಮವಾಗಿ ಸೂಪರ್ ಓವರ್​ ಕೂಡ ಆಡಲು ಸಾಧ್ಯವಾಗದಿದ್ದರೆ, ಪಾಯಿಂಟ್ಸ್​ ಟೇಬಲ್​ನಲ್ಲಿ ಮೇಲಿರುವ ತಂಡ ಮುಂದಿನ ಹಂತಕ್ಕೇರಲಿದೆ. ಅಂದರೆ ಇಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವು ಪಾಯಿಂಟ್ಸ್​ ಟೇಬಲ್​ನಲ್ಲಿ 3ನೇ ಸ್ಥಾನದಲ್ಲಿದೆ. ಹಾಗೆಯೇ ಆರ್​ಸಿಬಿ 4ನೇ ಸ್ಥಾನದಲ್ಲಿದೆ. ಇಲ್ಲಿ ಆರ್​ಸಿಬಿಗಿಂತ ಹೆಚ್ಚಿನ ಪಾಯಿಂಟ್ಸ್​ (18) ಲಕ್ನೋ ತಂಡಕ್ಕಿದ್ದು, ಹೀಗಾಗಿ ಲಕ್ನೋ ಸೂಪರ್ ಜೈಂಟ್ಸ್​ 2ನೇ ಕ್ವಾಲಿಫೈಯರ್​ಗೆ ಏರಲಿದೆ. ಹಾಗೆಯೇ ಆರ್​ಸಿಬಿ ತಂಡವು ಪಂದ್ಯವಾಡದೆ ಐಪಿಎಲ್​ನಿಂದ ಹೊರಬೀಳಲಿದೆ.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ಶಿವರಾಜ್ ಕುಮಾರ್​ಗಾಗಿ ಸಿನಿಮಾ ನಿರ್ಮಿಸುವಾಸೆ ವ್ಯಕ್ತಪಡಿಸಿದ ಯಶ್ ತಾಯಿ
ಶಿವರಾಜ್ ಕುಮಾರ್​ಗಾಗಿ ಸಿನಿಮಾ ನಿರ್ಮಿಸುವಾಸೆ ವ್ಯಕ್ತಪಡಿಸಿದ ಯಶ್ ತಾಯಿ
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ
ಟಿವಿ9 ವರದಿಗಾರ ಪ್ರಶ್ನಿಸುತ್ತಿದ್ದಂತೆಯೇ ರೆಡ್ ಕಾರ್ಪೆಟ್ ಮಂಗಮಾಯ
ಟಿವಿ9 ವರದಿಗಾರ ಪ್ರಶ್ನಿಸುತ್ತಿದ್ದಂತೆಯೇ ರೆಡ್ ಕಾರ್ಪೆಟ್ ಮಂಗಮಾಯ
ವಕ್ಫ್​ ಆಸ್ತಿ ಕಬಳಿಕೆ ತೆರವು: ವಕ್ಫ್ ನಮ್ಮ ದುಷ್ಮನ್ ಎಂದ ಮುಸ್ಲಿಂ ಮಹಿಳೆ
ವಕ್ಫ್​ ಆಸ್ತಿ ಕಬಳಿಕೆ ತೆರವು: ವಕ್ಫ್ ನಮ್ಮ ದುಷ್ಮನ್ ಎಂದ ಮುಸ್ಲಿಂ ಮಹಿಳೆ
ಜನಸಾಮಾನ್ಯರಿಗೆ ಕಷ್ಟ ತಪ್ಪಿದ್ದಲ್ಲ ಅಂತ ಉಡಾಫೆ ಮಾತಾಡಿದ ಕಾರ್ಯಕರ್ತೆ
ಜನಸಾಮಾನ್ಯರಿಗೆ ಕಷ್ಟ ತಪ್ಪಿದ್ದಲ್ಲ ಅಂತ ಉಡಾಫೆ ಮಾತಾಡಿದ ಕಾರ್ಯಕರ್ತೆ
ಸೋಮನಹಳ್ಳಿ ಟೋಲ್ ವಿರುದ್ಧ ರೈತರು, ಸ್ಥಳೀಯರಿಂದ ಹೋರಾಟ
ಸೋಮನಹಳ್ಳಿ ಟೋಲ್ ವಿರುದ್ಧ ರೈತರು, ಸ್ಥಳೀಯರಿಂದ ಹೋರಾಟ
ತಮ್ಮ ಭಾಷಣದಲ್ಲಿ ಶಿವಕುಮಾರ್​ರನ್ನು ಡೈನಾಮಿಕ್ ಲೀಡರ್ ಎಂದ ಪವನ್ ಕಲ್ಯಾಣ್
ತಮ್ಮ ಭಾಷಣದಲ್ಲಿ ಶಿವಕುಮಾರ್​ರನ್ನು ಡೈನಾಮಿಕ್ ಲೀಡರ್ ಎಂದ ಪವನ್ ಕಲ್ಯಾಣ್
‘ಜಯಹೇ ಕರ್ನಾಟಕ ಮಾತೆ’ ಎಂದು ಕನ್ನಡದಲ್ಲೇ ಮಾತು ಆರಂಭಿಸಿದ ಪವನ್ ಕಲ್ಯಾಣ್
‘ಜಯಹೇ ಕರ್ನಾಟಕ ಮಾತೆ’ ಎಂದು ಕನ್ನಡದಲ್ಲೇ ಮಾತು ಆರಂಭಿಸಿದ ಪವನ್ ಕಲ್ಯಾಣ್
ಕುಮಾರಸ್ವಾಮಿ ಒಬ್ಬ ಹಿಟ್ ಅಂಡ್ ರನ್ ಗಿರಾಕಿ: ಡಿಕೆ ಸುರೇಶ್
ಕುಮಾರಸ್ವಾಮಿ ಒಬ್ಬ ಹಿಟ್ ಅಂಡ್ ರನ್ ಗಿರಾಕಿ: ಡಿಕೆ ಸುರೇಶ್